ಜನಲೋಕಪಾಲ ವಿಧೇಯಕ ಆ‌ಂದೋಲನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಜನಲೋಕಪಾಲ ವಿಧೇಯಕ ಆಂದೋಲನ ೨೦೧೧ ಜನಲೋಕಪಾಲ ವಿಧೇಯಕ (ನಾಗರಿಕ ಲೋಕಪಾಲ ವಿಧೇಯಕ) ರಚನೆಗಾಗಿ ಈ ಆಂದೋಲನವು ಅಖಿಲ ಭಾರತ ಮಟ್ಟದಲ್ಲಿ ಪ್ರಾರಂಭವಾಯಿತು. ಈ ಚಳುವಳಿಯ ಮುಂಚೂಣಿ ನಾಯಕರೆಂದರೆ ಅಣ್ಣಾ ಹಜಾರೆ ಮತ್ತು ತಂಡ. ಈ ಚಳುವಳಿಯು ಜಂತರ್ ಮಂತರ್ ನಲ್ಲಿ ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹದೊಡನೆ ಪ್ರಾರಂಭವಾಯಿತು. ಇದರಲ್ಲಿ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರಾದ ಅರವಿಂದ ಕೇಜಿರಿವಾಲಾ, ಭಾರತದ ಮೊದಲ ಮಹಿಳಾ ಐ.ಪಿ.ಎಸ್. ಅಧಿಕಾರಿಯಾದ ಕಿರಣ್ ಬೇಡಿ, ಪ್ರಸಿದ್ಧ ವಕೀಲರಾದ ಪ್ರಶಾಂತ್ ಭೂಷಣ್, ಪತಂಜಲಿ ಯೋಗಪೀಠದ ಸಂಸ್ಥಾಪಕರಾದ ಬಾಬಾ ರಾಮ್ ದೇವ್ ಮೊದಲಾದವರು ಇದರಲ್ಲಿ ಭಾಗವಹಿಸಿದ್ದರು. ಸಮೂಹ ಮಾಧ್ಯಮಗಳ ಪ್ರಭಾವದಿಂದ ಈ ಚಳುವಳಿಯ ಪ್ರಭಾವವು ಇಡೀ ಭಾರತ ದೇಶವನ್ನೆಲ್ಲಾ ಆವರಿಸಿತು. ದೇಶದುದ್ದಕ್ಕೂ ಈ ಚಳುವಳಿಯನ್ನು ಸಮರ್ಥಿಸಿ ಬೀದಿಗಿಳಿದರು. ಈ ಆಂದೋಲನಕಾರರು ಒಂದು ಭ್ರಷ್ಟಾಚಾರ ವಿರೋಧಿ ಸಶಕ್ತ ಲೋಕಪಾಲ ವಿಧೇಯಕ ರಚನೆಯ ಬೇಡಿಕೆಯನ್ನು ಭಾರತ ಸರ್ಕಾರದ ಮುಂದಿಟ್ಟಿದ್ದರು.