ಜನಪರ ರಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಇತಿಹಾಸ ಜ್ಜಾನಪರ ರಂಗವು (ಪ್ಲೆ ಬ್ಯಾಕ್ ಥಿಯೆಟರ್) ೧೯೭೫ರಲ್ಲಿ ಜನನ ಕಂಡಿತು. ಇದರ ಕರ್ಯಕರ್ತರು ಜೊನಥನ್ ಫ಼ಾಕ್ಸ್ ಹಾಗು ಜೊ ಸಾಲಸ್. ಫ಼ಾಕ್ಸ್ ಇಂಪ್ರೊವೈಜ಼ೆಶನಲ್ ರಂಗದ, ವಾಚ್ಯ ರೂಪದ ಕಥೆಗಾರಿಕೆಯ, ಪಾಲ್ ಫ಼್ರಯರ್ ಅವರ ಸೈಕೊ ಡ್ರಮಾದ ವಿದ್ಯಾರ್ಥಿ ಆಗಿದರು. ಸಾಲಸ್ ಅವರು ಸಂಗೀತಗಾರರು ಹಾಗು ಹೊರಾಟಗಾರರು ಆಗಿದ್ದರು.ಇಬ್ಬರು ಕೂಡ ಅಭಿವ್ರಿದ್ದಿ ಶೀಲ ಬೆಳವನಿಗೆ ಹೊಂದುವ ದೇಶಗಳಲ್ಲಿ ಸೇವೆ ಸಲ್ಲಿಸ್ಸಿದ್ದಾರೆ.ಫಕ್ಸ್ ಅವರು ಪೀಸ್ರ್ಪ್ಸ ನಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸ್ಸಿದ್ದಾರೆ.ಸಲಾಸ್ ಅವರು ನ್ಯುಜಿಲ್ಯಾಂಡಿನ ಸ್ವಯಂಸೇವಾ ಸಂಸ್ಥೆಯ ಮೂಲಕ ಮಲೀಶಿಯದಲ್ಲಿ ಸೇವೆ ಸಲ್ಲಿಸಿದ್ದರು.ಜನಪರರಂಗದ ಮೂಲ ರೂಪ ಮೂದಲು ಶುರುವಾಗಿದ್ದು ನ್ಯು ಯರ್ಕಿನ ಡಚ್ಚಸ್ ಹಾಗು ಉಲ್ಸ ಟರ್ ಕೌಂಟಿಗಳಲ್ಲಿ .ಇದು ಹೀಗೆ ಶಾಲೆಗಳಲ್ಲಿ , ಖಾಸಗಿ ಕ್ಷೇತ್ರದ ಸಂಘಟನೆಗಳಲ್ಲಿ , ಲಾಭರಹಿತ ಸಂಘಟನೆಗಳಲ್ಲಿ, ಕಾರಗ್ರುಹಗಳಲ್ಲಿ ,ವಿಶ್ರಾಂತಿ ಕೇಂದ್ರಗಳಲ್ಲಿ, ಸಮ್ಮೆಳನಗಳಲ್ಲಿ ,ಹಬ್ಬಗಳಲ್ಲಿ , ಹಿರಿಯರಿಗೆ ಆಶ್ರಯ ನೀಡುವ ಸ್ಥಳಗಳಲ್ಲಿ ಹಾಗು ಇನ್ನಿತರ ಜಾಗಗಳಲ್ಲಿ ಕಥೆಗಳನ್ನು ಹಂಚಿಕೊಳ್ಳುವ ಒಂದು ರಂಗ ನಿರ್ಮಾಣವಾಯಿತು.ತಿಂಗಳಿಗೊಮ್ಮೆ ಸಾರ್ವಜನಿಕ ಪ್ರದರ್ಶನಗಳನ್ನು ನೀಡುತ್ತಾ ಬಂದರು.ಜನಪರ ರಂಗ ಹಲವಾರು ಜನರನ್ನು ಪ್ರೇರಿತಗೊಳಿಸಿದೆ.ಇದಕ್ಕೆ ಅನುಗುಣವಾಗಿ ೧೯೮೦ಲ್ಲಿ ಜನಪರರಂಗವನ್ನು ಆಸ್ತ್ರೆಲಿಯಾದ ತಂಡಗಳಿಗೆ ಕಳಿಸಲಾಯಿತು.ಇಲ್ಲಿ ಸಿಡ್ನಿ,,ಮೆಲ್ಬೊರ್ನ್,ಪರ್ಥ್ ಹಾಗು ವೆಲ್ಲಿಂಗ್ಟ್ಂನ್ನಲ್ಲಿ ಸಂಸ್ಥೆ ಗಳು ಸ್ಥಾಪನೆಗೊಂಡವು.ನಂತರ ಇದು ಅಮೆರಿಕ ಹಾಗು ಯುರೊಪ್ನಲ್ಲಿ ಹರಡಿತು. ಇಂದು ಜನಪರ ರಂಗವು ೬ ದೇಶಗಳಲ್ಲಿ ಪಸರಿಸಿತು. ೧೯೯೦ಲಿ ಐಪಿಟಿಎನ್ ( ಇಂಟರ್ ನ್ಯಾಶನಲ್ ಪ್ಲೆಬ್ಯಾಕ್ ಥಿಯೆಟರ್ ನೆಟ್ವರ್ಕ್) ಸ್ಥಾಪನೆಗೊಂಡಿತು. ಈ ಸಂಸ್ಥೆಯು ಜನಪರ ರನ್ಗ ಎಲ್ಲೆಡೆ ಹರಡಲು ಸಹಕಾರ ನೀಡಿದೆ. ೨೦೧೦ರ ಪ್ರಕಾರ ಐಪಿಟಿಎನ್ ೧೦೦ ಸಂಘಗಳನ್ನು ಮತ್ತು ೩೦೦ ಇತರ ಸದಸ್ಯರನ್ನು ೪೦ ದೇಶಗಳಲ್ಲಿ ಹೂಂದಿದೆ.ಅಂತರಾಷ್ಟ್ರೀಯ ಜನಪರ ರಂಗದ ಸಮ್ಮೆಳನಗಳು ಆಸ್ತ್ರೆಲಿಯ, ಫ಼ಿನ್ ಲ್ಯಂಡ್, ಭಾರತ, ಬ್ರಜ಼ಿಲ್, ಅಮೆರಿಕದಲ್ಲಿ ನಡೆದಿದೆ.೧೯೯೩ಲಿ ಫ಼ಾಕ್ಸ್ ಅವರು ಜನಪರ ರಂಗದ ಏರುತ್ತಿರುವ ಆಸಕ್ತಿಯನ್ನು ಕಂಡು 'ಸ್ಕೂಲ್ ಒಫ಼್ ಪ್ಲ ಬ್ಯಾಕ್ ಅನ್ನು ಸ್ಥಾಪಿಸಿದರು.ಇಂದು ಇದು ಜಗತ್ತಿನ ಎಲ್ಲೆಡೆ ಬೆಳಕು ಕಂಡಿದೆ. ಇದರ ಇತರ ಶಾಲೆಗಳೂ ಇಟಲಿ, ಭಾರತ, ಬ್ರಜ಼ಿಲ್, ಜಪಾನ್, ಜೆರ್ಮನಿ, ಹ್ಂಗರಿ, ಸ್ವೆಡನ್, ಇಸ್ರಎಲ್, ಯು.ಕೆಸ್ವೊ ಪಲೊಗಳಲ್ಲಿ ತೆರೆ ಕಂಡಿದೆ.

ಜನಪರ ರಂಗದ ವಿನ್ಯಾಸ ಜನಪರ ರಂಗದ ಆಕರವು ಫಾಕ್ಸ್ ಮತ್ತು ಸಲಾಸ್ ಅವರು ರಂಗ ಕಲೆಯ ತುಣುಕುಗಲನ್ನು ಸೇರಿಸಿ ಸ್ರಷ್ತಿಸಿದ್ದು .ಇದರಲ್ಲಿ ವಿವರಣಾತ್ಮಕ ಹಾಗು ವಿವರಣೆ ರಹಿತ ಕಥೆಗಳನ್ನು ದ್ರವ ರೂಪದ ಶಿಲೆಗಳು, ಜೋಡಿಗಳು , ಸಾಮೂಹಿಕ ರಂಗ ಪರಿಕರಗಳನ್ನು ಅಭಿನಯಿಸಲಾಗುತ್ತದೆ. ದ್ರವ ರೂಪದ ಶಿಲೆಗಳು ಯವುದಾದರು ಒಂದು ಭಾವನೆಯನ್ನು ಅಥವಾ ವಿಷಯವನ್ನು ರೂಪಕಗಲ ಮೂಲಕ ತೊರಿಸುತ್ತದೆ. ಜೋಡಿಗಳು ಮನುಷ್ಯ ಮನಸ್ಸಿನ ದ್ವಂದ್ವನ್ನು ಪ್ರತಿಪಾದಿಸುತ್ತದೆ.ಸಾಮೂಹಿಕ ರಂಗ ಅಮುರ್ಥ ಸ್ವರೂಪದ ಕಲೆಯನ್ನು ಪ್ರದರ್ಶಿಸುತ್ತದೆ.ಜನಪರ ರಂಗದಲ್ಲಿ , ಯಾರದರು ಒಬ್ಬ ವೀಕ್ಷಕರು ಅವರ ಜೀವನದ ಯಾವುದಾದರು ಒಂದು ಘಟನೆಯನ್ನು , ಕಥೆಯನ್ನೊ ಅಭಿನಯಿಸಲು ಅವರೇ ನಟ /ನಟಿಯರನ್ನು ಆರಿಸುತ್ತಾರೆ. ಇದರಿಂದ ಕಥೆಗೆ ಜೀವ ಬಂದಂತೆ ಆಗುತ್ತದೆ. ನಟರು ಒಮ್ಮೊಮ್ಮೆ ಯಥಾರ್ಥವಾಗಿರದ ಸಂಕಣ್ರಆಗಳನ್ನು ಉಪಯೊಗಿಸುತ್ತಾರೆ.ರೂಪಕ ಮತ್ತು ಹಾಡು ಇದಕ್ಕೆ ಉದಾರಹಣೆಗಳು.ಈ ವೀಕ್ಷಕರ ಕಥೆಯೂ ಅವರ ಬಾಲ್ಯದ ಒಂದು ಸಣ್ಣ ನೆನಪು ಆಗಿರಬೊಹುದು,ಅವರ ಇಂದಿನ ಜೀವನದ ತಳಮಳಗಳಾಗಿರಬೊಹುದು ,ಅವರ ಮುಂಬರಲಿರುವ ಕನಸಾಗಿರಬೊಹುದು... ಅದ್ದನ್ನು ನಟರು ಪುನರಾವರ್ತಿಸುವ ರೀತಿಯಲ್ಲಿ ಅಭಿನಯಿಸುತ್ತಾರೆ.(ಪ್ಲೆ ಬ್ಯಾಕ್) ಪರಿಣಿತ ಜನಪರ ರಂಗ ಕಲೆಗಾರರು ಹಲವಾರು ಪರಿಕಾರಗಳಲ್ಲಿ ಪರಿಣಿತಿ ಹೊಂದಿರುತ್ತಾರೆ. ಅವರು ನಿರ್ವಾಹಕರಾಗಿಯೊ, ನಟರಾಗಿಯೊ ಅಥವಾ ಹಾಡುಗಾರರಾಗಿಯೊ ಕಾರ್ಯ ನಿರ್ವಹಿಸುತ್ತಾರೆ.ಇಲ್ಲಿ ನಟರ ತಯಾರಿಗಿಂತ ಅವರು ವೀಕ್ಷಕರ ನುಡಿಗಳ ಭಾವರ್ಥವನ್ನು ಮತ್ತು ಅವರ ಹ್ರುದಯದ ತಲ್ಲಣಗಳನ್ನು ತಿಳಿಯುವುದು ಮುಖ್ಯ. ಇಲ್ಲಿ ನಟರು ಸ್ಥಳದಲ್ಲೆ ವೀಕ್ಷಕರ ಕಥೆಯನ್ನು ಅಂತರಿಕಗೊಳಿಸಿಕೊಂಡು ಅಭಿನಯಿಸುತ್ತಾರೆ.ಇದೆ ಈ ರಂಗ ರೂಪದ ವಿಶೀಷ.ನಿರ್ವಾಹಕರು ಕೆಲಸ ಸುಲಭವಾಗಿ ಭಾಸವಾದರು ಅದು ಎಲ್ಲರಿಗಿಂತ ಸಂಕೀರ್ಣ ಜವಾಬ್ದಾರಿ. ನಿರ್ವಾಹಕರು ವೀಕ್ಷಕರೊಂದಿಗೆ ಹಾಗು ನಟರೊಂದಿಗೆ ಒಂದು ಸಂಬಧವನ್ನು ಮೂಡಿಸುವ ಅತ್ಯಂತ ನಾಜುಕಿನ ಕಾರ್ಯವನ್ನು ಹೂಂದಿರುತ್ತಾರೆ.ಜನಪರ ರಂಗದ ಅಭಿನಯಕ್ಕೆ ಯವುದೇ ಹಿನಲೇ ಇರುವ ಕೈ ಬರಹ ಇರುವುದಿಲ್ಲ. ಆದರ ಅದು ಮುನ್ನಡೆಯವುದಕ್ಕೆ ತನ್ನದೆ ಆದ ತಳ ಹಾಗು ಲಯ ಹೊಂದಿರುತ್ತದೆ. ವೀಕ್ಷಕರ ಜೊತೆಗೆ ನಟರು ಚಿರಪರಿಚಿತರದ ನಂತರ ಒಬ್ಬ ವೀಕ್ಷಕ ತನ್ನ ಕಥೆಯನ್ನು ಹಂಚಿಕೊಳೂತ್ತಾನೆ.ಇದನ್ನು ೩ರಿಂದ ೫ ನಟರು ಅಭಿನಯಿಸಬಹುದು.ಕಾರ್ಯಕ್ರಮದ ಕೊನೆಯಲ್ಲಿ ನಿರ್ವಹಾಕರು ಈ ಪ್ರಕ್ರಿಯೆಗೆ ಒಂದು ಒಳ ನೋಟವನ್ನು ನೀಡಬಹುದು ಹಾಗು ಇಡೀ ಗುಂಪು ಈ ಪ್ರಸ್ತುತಿಗೆ ಒಂದು ಇತ್ಯಂತರ ನೀಡಬಹುದು. ಜನಪರರಂಗದ ನಟನಿಗೆ ಸ್ವಾಭಾವಿಕತೆ ಹಾಗು ನೈಜ್ಯತೆ ಮುಖ್ಯ..ಇಲ್ಲಿ 'ನಾಗರೀಕ ನಟ ' ಎಂಬ ಕಲ್ಪನೆ ವಿಶ್ವದಲ್ಲಿ ಸರ್ವೆಸಾಮಾನ್ಯವಾಗಿ ಬಿಟ್ಟಿದೆ.ಆದ್ದರಿನ್ದ ಜನಪರ ರಂಗದಲ್ಲಿ ಪಲ್ಗೊಳ್ಳಲು ಒಬ್ಬ ಸಾಮಾನ್ಯ ವ್ಯಕ್ತಿಯು ಮುಂದಾಗಬಹುದು.ಇದು ಸಾಕ್ಶತ್ಕಾರ ಹಾಗು ಸ್ಪೂತಿ ಉದ್ಭವಿಸುವ ಅವಕಾಶ , ನಂಬಿಕೆ ,ಪರಸ್ಪರ ಬೆಂಬಲ ಹಾಗು ಸಹಜ ವೈಯಕ್ತಿಕ ಅರಿವು, ಅನುಭವವನ್ನು ನಟರು ಹೂಂದಿರುತ್ತರೆ.ಹೀಗೆ ಜನಪರ ರಂಗವು ನಾಟಕದ ಕೌಶಲ್ಯದೊಂದಿಗೆ ಹೆಚ್ಚೆನ ವೈಯಕ್ತಿಕ ಅಭಿವ್ರುದ್ದಿಯನ್ನು ಹಾಗು ಅರಿವನ್ನು ಮೂಡಿಸುತ್ತದೆ . ಸಾರ್ವಜನಿಕ ಕಾರ್ಯಕರ್ತರು ನಿರ್ವಾಹಕರು ಹಾಗು ಶಿಕ್ಷಕರು ಹೀಗೆ ಹತ್ತುಹಲವಾರು ಕ್ಷೇತ್ರಗಳಿಂದ ,ವಿವಿಧ ಹಿನ್ನಲೆಗಳಿಂದ ಬರುವ ವ್ರುತ್ತಿಪರರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಐಪಿಟಿಎನ್ ( ಇಂಟರ್ ನ್ಯಾಶನಲ್ ಪ್ಲೆಬ್ಯಾಕ್ ಥಿಯೆಟರ್ ನೆಟ್ವರ್ಕ್) ಈ ಸಂಸ್ಥೆಯು ಜನಪರ ರಂಗದ ಎಲ್ಲಾ ಕಾರ್ಯಕ್ರಮಗಳಿಗೆ ಪೂರಕವಾಗಗಿ ಕೆಲಸ ಮಾಡುತ್ತಿದೆ.ಇದು ೧೯೯೦ರಲ್ಲಿ ಸ್ಥಾಪನೆಗೊಂಡಿತು .ಇದರ ದ್ಯೇಯ ಜನಪರ ರಂಗವನ್ನು ಬಲಿಷ್ಟಗೊಳಿಸಿ ಅದರ ಸಂಪರ್ಕ ಹಾಗು ಪರಸ್ಪರ ಸಂಭಂದಗಳಿಗೆ ಒಂದು ಜಾಗತೀಕ ವೇದಿಕೆ ನೀಡುವುದು.ಇದರಲ್ಲಿ ಗುಂಪು ಸದಸ್ಯತ್ವ , ವ್ರುತ್ತಿಪರ ಸದಸ್ಯತ್ವ ಅಥವಾ ನಿಯಮಿತ ಸದಸ್ಯತ್ವ ಪಡೆಯಬಹುದು.ಇದು ದೇಶವಿದೇಶಗಳಲ್ಲಿ ಸಮ್ಮೇಳನಗಳನ್ನು ಹಾಗು ಹಬ್ಬಗಳನ್ನು ಯೋಜಿಸುತ್ತದೆ.ಹಲವಾರು ದೇಶದ ಜನರು ಒಗ್ಗೂಡಿ ಜನಪರ ರಂಗದಲ್ಲಿ ಸೇರಿ ನಲಿಯುವುದೆ ಇದರ ವಿಶೇಷ. ಬಳಕೆಗಳು ಜನಪರ ರಂಗವು ಬಹಳಷ್ಟು ಕ್ಷೇತ್ರದಲ್ಲಿ ಬಳಕೆಗೊಳ್ಳುತದೆ.ಇದನ್ನು ರಂಗ ಸ್ಥಳಗಳಲ್ಲಿ ಹಾಗು ಸಮುದಾಯ ಕೇಂದ್ರಗಳಲ್ಲಿ ಬಳಕೆ ಮಾಡಲಾಗುತ್ತದೆ.ಇದರೊಂದಿಗೆ ಶಾಲೆಗಳಲ್ಲಿ , ಖಾಸಗಿ ಕ್ಷೇತ್ರದ ಸಂಘಟನೆಗಳಲ್ಲಿ , ಲಾಭರಹಿತ ಸಂಘಟನೆಗಳಲ್ಲಿ, ಕಾರಗ್ರುಹಗಳಲ್ಲಿ ,ವಿಶ್ರಾಂತಿ ಕೇಂದ್ರಗಳಲ್ಲಿ ಮತ್ತು ಇನ್ನಿತರ ಜಾಗಗಳಲ್ಲಿ ಅಭಿನಯಿಸಲಾಗುತ್ತದೆ.ಇದನ್ನು ಪರಿವರ್ತನೆ ನ್ಯಾಯ ಸಮುದಾಯಗಳಲ್ಲಿ ,ಮಾನವ ಹಕ್ಕುಗಳಿಗಾಗಿ, ವಿಪ್ಪತ್ತಿನಿಂದ ಚೇತರಿಸಿಕೊಳ್ಳುವ ಸ್ಥಳಗಳಲ್ಲಿ ,ಮಧುವೆಗಳಲ್ಲಿ , ಹುಟ್ಟು ಹಬ್ಬಗಳಲ್ಲಿಯೂ ಬಳಕೆಯಾಗುತ್ತದೆ.ಶಿಕ್ಶಣ ಜನಪರಗದ ಸದಸ್ಯರು ಈ ಪರಿಕಾರದ ಶಾಲೆಗಳಲ್ಲಿ, ಅವರ ಪಟ್ಯಕ್ರಮಗಳಲ್ಲಿ, ಅವರಿಗೆ ವಿದ್ಯೆಯಲ್ಲಿ ಆಸಕ್ತಿಯನ್ನು ಬಿತ್ತಲ್ಲು ಹಾಗು ಅವರಲ್ಲಿ ಸಾಮಾಜಿಕ ತೊಂದೆರೆಗಳ ಬಗ್ಗೆ ಸಾಹಾನುಬೂತಿಯನ್ನು ಮೂಡಿಸಲು ಉಪಯೊಗಿಸುತ್ತಾರೆ. ಹಡ್ಸ್ ನ್ ರಿವರ್ ಜನಪರ ರಂಗದ ಗುಂಪು ಇದರಲ್ಲಿ ಪರಿಣಿತಿ ಹೊಂದಿದೆ. ಸಾಮಾಜಿಕ ಬದಲಾವಣೆ ಜನಪರ ರಂಗವು ಹಲವಾರು ಅನುಭವಗಳಿಗೆ ಒಂದು ಸಾರ್ವಜನಿಕ ಸಭಸ್ಥಾನವನ್ನು ಸ್ರುತ್ಷ್ಟಿಸಿದೆ. ಸುಂಟರಗಾಳಿ ಕಟ್ರಿನ, ಮಾರ್ಟಿನ್ ಲುಥೆರ್ ಕಿಂಗ್ ಅವರ ಹುತ್ತು ಹಬ್ಬ,ಜನಾಂಗಿಯ ಸಂಗರ್ಶಗಳು ಹೀಗೆ ಹತ್ತು ಹಲವಾರು ಸಂದರ್ಭಗಳಲ್ಲಿ ಇದು ಉಪಯುಕ್ತವಾಗಿದೆ. ಜನಪರ ರಂಗವು ತನ್ನ ಮಾನವೀಯ ನೋಟದಿಂದ ತ್ತತರಿಸುದವರಿಗೆ ಧ್ವನಿ ಕೋಡುವ ಮೂಲಕ ಹಲವಾರು ಮನಸ್ಸುಗಳನ್ನು ಗೆದ್ದಿದೆ.. ನೊರ್ಥ್ ಅಮೆರಿಕ, ಆಸ್ತ್ರೆಲಿಯ, ಅಫ಼್ಘನಿಸಾನ್, ಜಪಾನ್ ಇನ್ನು ಹಲವಾರು ದೇಶಗಳಲ್ಲಿ ಶಾಂತಿ ಸಮಾಧನಾಗಳನ್ನು ಉಂಟು ಮಾಡಿದೆ. ವ್ಯವಹಾರ ವ್ಯವಹಾರ ತಾಣದಲ್ಲಿ ಜನಪರ ರಂಗದ ಪ್ರಮುಖ್ಯತೆ ಹಾಗು ಜನಪ್ರಿಯತೆ ಹೆಚ್ಚಾಗುತ್ತಿದೆ. ೧೯೯೦ರ ದಶಕ ಮಧ್ಯದಿಂದ ಇದನ್ನು ಕೆಲಸದ ತರಬೇತಿಗಾಗಿ, ಸಂವಹನೆಯ ಮಧ್ಯಮವಾಗಿ ,ವಿಶ್ರಾಂತಿ ಪೂರಕ ಸಾಧನವಾಗಿ ಉಪಯೋಗಿಸಲಗುತ್ತಿದೆ. ಇದು ಕೆಲಸಗಾರರ ದಕ್ಷತೆಯನ್ನು ಹೆಚ್ಛಿಸುವುದರಲ್ಲಿ ಯಶಸ್ವಿಯಾಗಿದೆ ಎಂದು ಸಂಶೋಧನ ಪ್ರಭಂದಗಳು ಸೂಚಿಸುತ್ತವೆ. ಚಿಕಿತ್ಸೆ ಜನಪರ ರಂಗದ ಮೂಲಕ ವೀಕ್ಷಕರು ಮಾನಸಿಕ ಚಿಕಿತ್ಸೆಯನ್ನು ಪಡೆಯುವ ಸಾದ್ಯತೆ ಇದೆ. ಅವರು ತಮ್ಮ ಬಗ್ಗೆ ಒಂದು ಒಲನೋಟವನ್ನು ,ತಮ್ಮ ಅಸ್ತಿತ್ವದ ಅಭಿಲಾಶೆಯನ್ನು , ವಿರೇಚನೆಯನ್ನು ತಮ್ಮ ಅನುಭವಗಳ್ಳನ್ನು ತೆರದ ಮನಸ್ಸಿನಿಂದ ಹಂಚಿಕೊಳ್ಳುವ ಮೂಲಕ ,ತಾವೆ ಮತ್ತೊಬ್ಬರ ಕಥೆಯಲ್ಲಿ ನಟಿಸಿವ ಮೂಲಕ ಅನುಭವಿಸುತ್ತಾರೆ.ಇದು ವೈಯಕ್ತಿಕ ಬೆಳವಣಿಗೆಗೆ, ಊರ್ಜಿತಗೊಳಿಸುವಿಕೆಗೆ,ಕ್ರಿಯಾತ್ಮಕ ಮನೋಭಾವ ಹಾಗು ಸ್ವಾಭಾವಿಕತೆಯನ್ನು ಬೆಳಸಿಕೊಳ್ಳಲು ಒಂದು ಅವಕಾಶ ನೀಡಿದೆ.ಇದು ಯೆಲ್ಲಾ ವಯಿಸ್ಸಿನವರಿಗೂ ಹೊಂದುವ ಒಂದು ಕಲಾ ಮಧ್ಯಮವಾಗಿದೆ. ಹಬ್ಬಗಳು ಒಮ್ಮೊಮೆ ಜನಪರ ರಂಗದ ಸ್ವಾತಂತ್ರ ತಂಡಗಳಿಂದ , ಕೆಲೊವೊಮ್ಮೆ ಐಪಿಟಿಎನ್ ( ಇಂಟರ್ ನ್ಯಾಶನಲ್ ಪ್ಲೆಬ್ಯಾಕ್ ಥಿಯೆಟರ್ ನೆಟ್ವರ್ಕ್)ನ ಸಹಯೋಗದೊಂದಿಗೆ ಜಗತ್ತಿನ ಎಲ್ಲೆಡೆ ಜನಪರ ರಂಗದ ಹಬ್ಬಗಳು ನಡೆಯುತ್ತವೆ.೨೦೧೨ರಲ್ಲಿ ನೊರ್ಥ್ ಅಮೇರಿಕ ,ಯೂರೊಪ್ನ ಡಾರಿಂಗ್ ಟನ್ ಎಸ್ಟೆಟ್, ಅಮೆಸ್ಟರ್ ಡ್ಯಾಮ್ ನಲ್ಲಿ ನಡೆಯಿತು.೨೦೧೩ರಲ್ಲಿ ಐರ್ಲ್ ಲ್ಯಾಂಡ್ ನ ಕ್ಲಾರೆಟ್ ಸೆಂಟರ್ ನಲ್ಲಿ ಮತ್ತು ಇತರೆ ಜಾಗಗಳಲ್ಲಿ ನಡೆದಿದೆ. ೨೦೧೪ರಲ್ಲಿ ಹೊಲ್ಂಡ್ , ಮಿಡ್ ಟೌನ್ ಹಾಗು ಎಡಿನ್ ವ್ರಾದಲ್ಲಿ ನಡೆಯಲಿದೆ. ಭಾರತದಲ್ಲಿ ಜನಪರ ರಂಗ ಭಾರತದಲ್ಲಿ ಜನಪರ ರಂಗವು ಇತ್ತೀಚೆಗಷ್ಟೇ ಜನಪ್ರಿಯತೆ ಪಡೆಯುತಿದ್ದೆ. ಸ್ಚ್ರಿಪ್ತ್ ಪಿಪಲ್ಸ್ ಥಿಯೆಟರ್ ಹಾಗು ಸ್ಟೆರ್ಲಿನ್ಗ್ ಪ್ಲೆ ಬ್ಯಕ್ ಥಿಯೆಟರ್ ಸದ್ಯ ಐಪಿಟಿಎನ್ ನ ಸದಸ್ಯರು.ಅವರು ಇಂದು ವಿದ್ಯರ್ಥಿಗಳಿಗೆ ಹಾಗು ಇತರೆ ವ್ರುತ್ತಿಪರರಿಗೆ ಕಮ್ಮಟಗಳನ್ನು ಆಯೋಜಿಸುತಿದ್ದಾರೆ.

ಹೊರಗಿನ ಕೊಂಡಿಗಳು[ಬದಲಾಯಿಸಿ]

http://www.playbacknet.org/drupal/http://en.wikipedia.org/wiki/Playback_Theatre[ಶಾಶ್ವತವಾಗಿ ಮಡಿದ ಕೊಂಡಿ]