ವಿಷಯಕ್ಕೆ ಹೋಗು

ಛೇನಾ ಪೋಡಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಛೇನಾ ಪೋಡಾ (ಅನುವಾದ: ಸುಟ್ಟ ಗಿಣ್ಣು) ಗಿಣ್ಣಿನಿಂದ ತಯಾರಿಸಲಾದ ಭಾರತದ ಒಡಿಶಾ ರಾಜ್ಯದ ಒಂದು ಡಿಜ಼ರ್ಟ್. ಒಡಿಯಾದಲ್ಲಿ ಛೇನಾ ಪೋಡಾದ ಅರ್ಥ ಅಕ್ಷರಶಃ ಸುಟ್ಟು ಬೇಯಿಸಿದ ಗಿಣ್ಣು.[] ಇದನ್ನು ಮನೆಯಲ್ಲಿ ತಯಾರಿಸಿದ, ಚೆನ್ನಾಗಿ ನಾದಿದ ತಾಜಾ ಗಿಣ್ಣು ಛೇನಾದಿಂದ ತಯಾರಿಸಲಾಗುತ್ತದೆ. ಛೇನಾದೊಂದಿಗೆ ಸಕ್ಕರೆಯನ್ನು ಹಲವಾರು ಗಂಟೆಗಳವರೆಗೆ ಕಂದಾಗುವವರೆಗೆ ಬೇಯಿಸಲಾಗುತ್ತದೆ.[] ಛೇನಾ ಪೋಡಾ ತನ್ನ ರುಚಿಯನ್ನು ಮುಖ್ಯವಾಗಿ ಸಕ್ಕರೆಯ ಕ್ಯಾರಾಮಲೀಕರಣದಿಂದ ಪಡೆದುಕೊಳ್ಳುವ ಏಕೈಕ ಸುಪರಿಚಿತ ಭಾರತೀಯ ಡಿಜ಼ರ್ಟ್ ಆಗಿದೆ.

ತಯಾರಿಕೆ

[ಬದಲಾಯಿಸಿ]

ಛೇನಾ ಪೋಡಾವನ್ನು ಸಾಮಾನ್ಯವಾಗಿ ಒಡಿಶಾದ ಮನೆಗಳಲ್ಲಿ ದುರ್ಗಾ ಪೂಜಾದಂತಹ ಸಾಂಪ್ರದಾಯಿಕ ಹಬ್ಬಗಳ ವೇಳೆ ತಯಾರಿಸಲಾಗುತ್ತದೆ. ಇದನ್ನು ರಾಜ್ಯಾದ್ಯಂತ ಚಿಕ್ಕ ಸಾಂಪ್ರದಾಯಿಕ ರಸ್ತೆಬದಿಯ ಅಂಗಡಿಗಳು ಮತ್ತು ಸಿಹಿಖಾದ್ಯಗಳ ಅಂಗಡಿಗಳಲ್ಲಿಯೂ ರಸಗುಲ್ಲದಂತಹ ಇತರ ಖಾದ್ಯಗಳೊಂದಿಗೆ ಬಡಿಸಲಾಗುತ್ತದೆ. ೧೯೮೦ರ ದಶಕದ ಮಧ್ಯದಿಂದ, ಇದು ಒಡಿಶಾದಾದ್ಯಂತ ಹೊಟೆಲುಗಳ ಖಾದ್ಯಪಟ್ಟಿಗಳಲ್ಲಿ ಕ್ರಮೇಣವಾಗಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಒಡಿಶಾ ಹಾಲು ಒಕ್ಕೂಟವು ಈ ಖಾದ್ಯದ ರಾಶಿ ತಯಾರಿಕೆ ಮತ್ತು ಇದನ್ನು ಜನಪ್ರಿಯಗೊಳಿಸಲು ಬಹಳವಾಗಿ ಹೂಡಿಕೆ ಮಾಡುತ್ತಿದೆ.[][][][]

ಉಲ್ಲೇಖಗಳು

[ಬದಲಾಯಿಸಿ]
  1. Sahu, Deepika (2012). "Discover Odisha's 'sweet' magic - The Times of India". indiatimes.com. Archived from the original on 2013-01-03. Retrieved 3 July 2012. This mouth-watering sweet from Odisha literally means burnt cheese.
  2. "The Sweet Bypass On NH5". UpperCrust.
  3. just-food.com editorial team (August 2002). "Orissa invests in marketing traditional confectionery product".
  4. Rajaram Satpathy (15 August 2002). "Sweet wars: Chhenapoda vs rasagolla". Times of India. Archived from the original on 2012-10-19. Retrieved 2020-05-04.
  5. "Chhena poda". The Hindu. 11 April 2009. Archived from the original on 5 ಅಕ್ಟೋಬರ್ 2009. Retrieved 4 ಮೇ 2020.
  6. "Chhena poda". The Hindu. 11 April 2009. Archived from the original on 4 ನವೆಂಬರ್ 2012. Retrieved 4 ಮೇ 2020.