ಚ.ಸರ್ವಮಂಗಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿ.ನ.ಸರ್ವಮಂಗಳ ಅವರ ಕೆಲವು ಕೃತಿಗಳು:

  • ಅಮ್ಮನ ಗುಡ್ಡ


ಚ ಸರ್ವಮಂಗಳ ಅವರು ಏಪ್ರಿಲ್ ೬, ೧೯೪೮ ರಂದು ಶಿವಮೊಗ್ಗದಲ್ಲಿ ಜನಿಸಿದರು. ತಂದೆ ಭುಜಂಗರಾವ್, ತಾಯಿ ಮಹಾಲಕ್ಮಿ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಈಗ ಮೈಸೂರಿನಲ್ಲಿ ನೆಲೆಸಿದ್ದಾರೆ. ಅಮ್ಮನಗುಡ್ಡ(೧೯೮೮) ಅವರ ಪ್ರಸಿದ್ದ ಕವನ ಸಂಕಲನ. ಜ್ಞಾನಶ್ರೀ, ಎರಡು ದಶಕಗಳ ಕಾವ್ಯ ಮತ್ತು ಚದುರಂಗ ವಾಚಿಕೆ ಅವರ ಸಂಪಾದಿತ ಕೃತಿಗಳು. ಅವರ ‘ಅಮ್ಮನಗುಡ್ಡ’ ಸಂಕಲನಕ್ಕೆ ಅವರ ಅಪ್ರಕಟಿತ ಕವಿತೆಗಳನ್ನು ಸೇರಿಸಿ ಇತ್ತೀಚೆಗೆ ‘ಅಮ್ಮನಗುಡ್ಡ-ಅಂತರಾಳ’ ಕೃತಿಯನ್ನು ಪ್ರಕಟಿಸಿದ್ದಾರೆ. ಅಂದರೆ ಇದು ಅವರ ಸಮಗ್ರ ಕಾವ್ಯ ಸಂಗ್ರಹವಾಗಿದೆ. ಅವರ ‘ಅಮ್ಮನ ಗುಡ್ಡ’ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ದಿನಕರ ದೇಸಾಯಿ ಪ್ರಶಸ್ತಿಗಳು ದೊರೆತಿವೆ. ‘ಅಮ್ಮನಗುಡ್ಡ’ ಕೃತಿಯು ಒಂಬತ್ತು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ‘ಮಾಧ್ಯಮ’ ಎಂಬ ಮುಕ್ತವೇದಿಕೆಯ ಸಂಚಾಲಕಿಯಾಗಿ, ಭಾರತ-ಚೀನಾ ಮೈತ್ರಿ ಸಂಘದ ಅಧ್ಯಕ್ಷೆಯಾಗಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯದ ವಿಚಾರಣಾ ಸಮಿತಿಯ ಅಧ್ಯಕ್ಷೆಯಾಗಿ ಕರ‍್ಯ ನಿರ್ವಹಿಸಿದ್ದಾರೆ.