ಚೆಲ್ಸೀ ಎಫ಼್. ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಚೆಲ್ಸೀ ಫ಼ುಟ್ ಬಾಲ್ ಕ್ಲಬ್ ಇಂಗ್ಲೆಂಡಿನ ಫ಼ುಲ್ಹ್ಯಾಮಿನಲ್ಲಿರುವ ಫ಼ುಟ್ ಬಾಲ್ ಕೂಟ. ಇದು ೧೯೦೫ರಲ್ಲಿ ಸ್ಥಾಪಿತವಾಯಿತು. ಇದು ಸ್ಥಾಪನೆಗೊಂಡಾಗಿನಿಂದಲೂ ತಮ್ಮ ತವರು ಕ್ರೀಡಾಂಗಣವಾದ ಸ್ಟ್ಯಾಮ್ ಫ಼ರ್ಡ್ ಬ್ರಿಡ್ಜ್ ಸ್ಟೇಡಿಯಂನಲ್ಲಿಯೆ ಆಡುತ್ತ್ತಾ ಬಂದಿದ್ದಾರೆ.

ಈ ಕೂಟವು ಇದುವರೆಗೂ ೪ ಲೀಗ್ ಟೈಟಲುಗಳು, ೭ ಎಫ಼್.ಎ ಕಪ್ ಗಳು, ೪ ಲೀಗ್ ಕಪ್ ಗಳು ಹಾಗೂ ೪ ಕಮ್ಯೂನಿಟಿ ಶೀಲ್ಡುಗಳನ್ನು ತನ್ನದಾಗಿಸಿಕೊಂಡಿದೆ. ಅಲ್ಲದೆ ಎರಡು ಬಾರಿ ಯು.ಇ.ಎಫ಼್.ಎ ಕಪ್ ವಿನ್ನರ್ಸ'ಸ್ ಕಪ್ ಹಾಗೂ ಒಂದು ಯು.ಇ.ಎಫ಼್.ಎ ಸೂಪರ್ ಕಪ್ ಗೆದ್ದಿದೆ. ೧೯-೫-೨೦೧೨ ರಂದು ಯು.ಇ.ಎಫ಼್.ಎ ಚ್ಯಾಂಪಿಯನ್ಸ್ ಲೀಗ್ ಗೆದ್ದುದು ಲಂಡನ್ನಿನ ಮೊದಲ ಕ್ಲಬ್ ಇದನ್ನು ಸಾಧಿಸಿದಂತಾಯಿತು.

ಇತಿಹಾಸ[ಬದಲಾಯಿಸಿ]

೧೯೦೫ರ ಚೊಚ್ಚಲ ತಂಡ

೧೯೦೪ರಲ್ಲಿ ಗಸ್ ಮೀರಸ್ ಸ್ಟ್ಯಾಮ್ಫ಼ರ್ಡ್ ಬ್ರಿಡ್ಜ್ ಕ್ರೀಡಾಂಗಣವನ್ನು ಫ಼ುಟ್ಬಾಲ್ ಮೈದಾನವನ್ನಾಗಿಸಲು ಪಡೆದುಕೊಂಡನು. ನೆರೆಯಲ್ಲಿದ್ದ ಫ಼ುಲ್ಹ್ಯಾಮ್ ಗೆ ಭೊಗ್ಯಕ್ಕೆ ಕೊಡಲು ಮಾಡಿದ ಕೊಡುಗೆಯು ತಿರಸ್ಕಾರಗೊಳ್ಳಲು ತನ್ನದೆ ಆದ ಕ್ಲಬ್ಬೊಂದನ್ನು ಹೊಂದುವ ನಿರ್ಧಾರ ಮಾಡಿದನು. ೧೦ ಮಾರ್ಚ್ ‍೧೯೦೫ ರಂದು ಚೆಲ್ಸೀ ಕ್ಲಬ್ ಸ್ಥಾಪಿತವಾಗಿ ಅಲ್ಪಾವಧಿಯಲ್ಲೇ ಫ಼ುಟ್ಬಾಲ್ ಲೀಗ್ ಗೆ ಆಯ್ಕೆಯಾಯಿತು.

ಬಾಹ್ಯ ಕೊಂಡಿಗಳು[ಬದಲಾಯಿಸಿ]