ಚೆಂಬೂರ್ ಕರ್ನಾಟಕ ಸಂಘ, ಮುಂಬೈ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಚೆಂಬೂರು ಕರ್ನಾಟಕ ಸಂಘ ಮುಂಬಯಿ ಸುಮಾರು ೬ ದಶಕಗಳ ಇತಿಹಾಸ ಹೊಂದಿರುವ ಮುಂಬಯಿನ ಹಿರಿಯ ಕನ್ನಡ ಸಂಘಗಳಲ್ಲೊಂದು. ಇದು ಮುಂಬಯಿನ ಉಪನಗರ ಗಳಲ್ಲೊಂದಾದ ಚೆಂಬೂರ್ ನಲ್ಲಿ ಇದೆ. ತನ್ನದೇ ಆದ ವಿಶಾಲವಾದ ಕಟ್ಟಡ ಸಮುಚ್ಚಯವನ್ನು ಹೊಂದಿದೆ. ಈ ಸಂಘ, ಹೈಸ್ಕೂಲ್ ಮತ್ತು ಕಾಲೇಜ್ ಗಳನ್ನು ಯಶಸ್ವಿಯಾಗಿ ನ ಡೆಸಿಕೊಂಡು ಬರುತ್ತಿದೆ. ಸುಮಾರು ೪,೫೦೦ ಮಕ್ಕಳು, ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮಗಳಲ್ಲಿ ಇದರ ಲಾಭವನ್ನು ಪಡೆಯುತ್ತಿದ್ದಾರೆ. ಸಂಸ್ಥೆಯ ಮುಂದಿನ ಯೋಜನೆ, 'ಕಾನೂನು ವ್ಯಾಸಂಗ ವಿಭಾಗ'ವನ್ನು ಆರಂಭಿಸುವ ಯೋಜನೆ' ಇದೆ. ಸಂಸ್ಥೆಯ ಅಧ್ಯಕ್ಷ, ಶ್ರೀ. ಪ್ರಭಾಕರ್ ಬೋಳಾರ್ ರವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಆಡಳಿತ ಸಮಿತಿ, ಶಿಕ್ಷಣ, ಸಂಸ್ಕೃತಿ, ಸಾಹಿತ್ಯ ಮೊದಲಾದ ವಿಭಾಗಗಳನ್ನು ಮಹಾರಾಷ್ಟ್ರದ ಮಣ್ಣಿನಲ್ಲಿ ಕಟ್ಟುವ ಮಹದಾಶೆಯಿಂದ ದುಡಿಯುತ್ತಿದೆ.

'ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ಸಮಾರಂಭ'[ಬದಲಾಯಿಸಿ]

ಕನ್ನಡ ಸಂಘದ ಬಂಗಾರಹಬ್ಬ ದ ಸವಿನೆನಪಿಗೆ, 'ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ' ಪ್ರದಾನಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಂಡಿದೆ. ಅಧ್ಯಕ್ಷ ,ಪ್ರಭಾಕರ್ ಶೆಟ್ಟಿ ಬೋಳಾರ್, ಕಾರ್ಯದರ್ಶಿ, ರಂಜನ್ ಕುಮಾರ್ ಅಮೀನ್, ಕೋಶಾಧಿಕಾರಿ, ದೇವದಾಸ್ ಶೆಟ್ಟಿಗಾರ್ ಪ್ರಯತ್ನ ಶೀಲರಾಗಿ ದುಡಿಯುತ್ತಿದ್ದಾರೆ. ಸಾಹಿತ್ಯ ಸಹವಾಸ-೨೦೧೨, ಹಾಗೂ 'ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ' ಫೆಬ್ರವರಿ, ೫,ರವಿವಾರ ಸಂಜೆ, ಚೆಂಬೂರಿನ ಫಾಟ್ಲಾ ವಿಲೇಜ್ ನಲ್ಲಿರುವ 'ಚೆಂಬೂರ್ ಕರ್ನಾಟಕ ಹೈಸ್ಕೂಲ್, ನ, ಸಭಾಗೃಹದಲ್ಲಿ ನೆರೆವೇರಲಿದೆ.