ಚೂರಿಮುಳ್ಳು
ಚೂರಿಮುಳ್ಳು, ತೂರಿಮುಳ್ಳು, ಸೂರಿಮುಳ್ಳು ಎಂಬುದು ಭಾರೀ ರುಚಿಕರವಾದ ಕಾಡು ಹಣ್ಣು. ಇದು ಏಷ್ಯಾ ಹಾಗೂ ಆಸ್ಥ್ರೇಲಿಯಾದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.
ವಿವರ
[ಬದಲಾಯಿಸಿ]ಇದು ಹರಡಿದಂತೆ ಇರುವ, ಮುಳ್ಳುಗಳಿಂದ ಕೂಡಿದ ಪೊದೆಯಂತಿರುವ ಸಸ್ಯ. ಈ ಗಿಡ ಸುಮಾರು ೧-೨ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಹಸಿರು ದೊರಗಾಗಿರುವ ಎಲೆಯನ್ನು ಹೊಂದಿರುವ ಈ ಗಿಡದ ಹೂ ಕೂಡಾ ಹಸಿರು ಬಣ್ಣದ್ದಾಗಿದೆ. ಗಿಡದ ತುಂಬಾ ಆಗುವ ಹಸಿರು ಕಾಯಿಗಳು ಹಣ್ಣಾದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ತೆಳುವಾದ ಸಿಪ್ಪೆ ಸಮೇತವಾಗಿ ತಿನ್ನಬಹುದಾದ ಈ ಹಣ್ಣಿನ ಒಳಗಡೆ ಒಂದು ಬೀಜ ಇರುತ್ತದೆ.
ಉಪಯೋಗ
[ಬದಲಾಯಿಸಿ]ಈ ಗಿಡದ ಎಲೆ, ಕಾಯಿ, ಗೆಲ್ಲು ಹಾಗೂ ಬೇರನ್ನು ಮನೆಮದ್ದಿನಲ್ಲಿ ಉಪಯೋಗಿಸುತ್ತಾರೆ. ಬರ್ಮಾ ದೇಶದಲ್ಲಿ ಇದರ ಕಾಂಡದ ಸಿಪ್ಪೆಯನ್ನು ಗಂಟಲು ನೋವಿಗೆ ಬಾಯಿ ಮುಕ್ಕಳಿಸಲು ಮಾತ್ರವಲ್ಲದೆ ಗರ್ಭಕೋಶದ ತೊಂದರೆಗೆ ಕೊಡುತ್ತಾರೆ.[೧]. ಇದರ ಬೇರನ್ನು ಆಯುರ್ವೇದಿಕ್ ಮದ್ದಿನಲ್ಲಿ ಉಪಯೋಗಿಸುತ್ತಾರೆ. [೨] ಮಹಾರಾಷ‍್ಠ್ರದ ಕೊಂಕಣಿ ಜನರು ಬಾಯಿ ಹುಣ್ಣಿಗೆ ಇದರ ಎಲೆಯನ್ನು ಅಗಿಯಲು ಕೊಡುತ್ತಾರೆ.[೩] ದಕ್ಷಿಣ ಕನ್ನಡದಲ್ಲಿ ಚಿಕ್ಕ ಮಕ್ಕಳಿಗೆ ಈ ಗಿಡದ ಚಿಗುರಿನ ರಸವನ್ನು ಕೊಡುತ್ತಾರೆ.
ಚಿತ್ರ ಸಂಪುಟ
[ಬದಲಾಯಿಸಿ]-
ಚೂರಿಮುಳ್ಳು
-
ಹೂವಿನಿಂದ ಕೂಡಿದ ಚೂರಿಮುಳ್ಳಿನ ಗಿಡ
-
ಚೂರಿಮುಳ್ಳಿನ ಕಾಯಿ
-
ಚೂರಿಮುಳ್ಳು ಹಣ್ಣು