ವಿಷಯಕ್ಕೆ ಹೋಗು

ಚುಂಚುಪಾತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಲವಾರು ಗಾತ್ರಗಳ ಚುಂಚುಪಾತ್ರೆಗಳು

ಚುಂಚುಪಾತ್ರೆಯು ಸಾಮಾನ್ಯವಾಗಿ ಹಲವು ಪ್ರಯೋಗಾಲಯಗಳಲ್ಲಿ ದ್ರವಗಳನ್ನು ಕಲಕಲು, ಬೆರೆಸಲು ಮತ್ತು ಕಾಯಿಸಲು ಬಳಸಲಾಗುವ ಒಂದು ಸಾಮಾನ್ಯ ಪಾತ್ರೆ. ಚುಂಚುಪಾತ್ರೆಗಳು ಸಾಮಾನ್ಯವಾಗಿ ಸ್ತಂಭಾಕಾರದ್ದಾಗಿದ್ದು, ಚಪ್ಪಟೆ ತಳ ಮತ್ತು ಸುರಿಯಲು ಒಂದು ಏಣನ್ನು ಹೊಂದಿರುತ್ತವೆ. ಹಲವು ಚುಂಚುಪಾತ್ರೆಗಳು, ಚಿತ್ರದಲ್ಲಿ ತೋರಿಸಿದಂತೆ, ಸುರಿಯಲು ನೆರವಾಗಲು ಒಂದು ಸಣ್ಣದಾದ ಮುಖನಾಳವನ್ನೂ ಹೊಂದಿರುತ್ತವೆ.