ಚೀಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Salvia hispanica (10461546364).jpg

ಚೀಯಾ (ಸ್ಯಾಲ್ವಿಯಾ ಹಿಸ್ಪ್ಯಾನಿಕಾ) ಪುದೀನ ಕುಟುಂಬವಾದ ಲೇಮಿಯೇಸಿಯಿಯಲ್ಲಿನ ಹೂಬಿಡುವ ಸಸ್ಯದ ಒಂದು ಪ್ರಜಾತಿ, ಮತ್ತು ಮಧ್ಯ ಹಾಗೂ ದಕ್ಷಿಣ ಮೆಕ್ಸಿಕೊ ಹಾಗೂ ಗ್ವಾಟೆಮಾಲಾಕ್ಕೆ ಸ್ಥಳೀಯವಾಗಿದೆ. ಚೀಯಾ ೧.೭೫ ಮಿ. ನಷ್ಟು ಎತ್ತರಕ್ಕೆ ಬೆಳೆಯುವ ಒಂದು ವಾರ್ಷಿಕ ಮೂಲಿಕೆ ಮತ್ತು ೪-೮ ಸೆ.ಮಿ. ಉದ್ದ ಹಾಗೂ ೩-೫ ಸೆ.ಮಿ. ಅಗಲವಾದ ಅಭಿಮುಖ ಎಲೆಗಳನ್ನು ಹೊಂದಿರುತ್ತದೆ. ಚೀಯಾವನ್ನು ವಾಣಿಜ್ಯಿಕವಾಗಿ ಒಮೇಗಾ-೩ ಮೇದಾಮ್ಲಗಳಿಗೆ ಸಮೃದ್ಧವಾಗಿರುವ ಒಂದು ಆಹಾರವಾದ ಅದರ ಬೀಜಕ್ಕಾಗಿ ಬೆಳೆಯಲಾಗುತ್ತದೆ, ಏಕೆಂದರೆ ಅದರ ಬೀಜಗಳು ಶೇಕಡ ೨೫-೩೦ ಹಿಂಡಿತೆಗೆಯಬಲ್ಲ ಎಣ್ಣೆಯನ್ನು ನೀಡುತ್ತವೆ.

ಹದಿನಾರನೇ ಶತಮಾನದ ಕೋಡೆಕ್ಸ್ ಮೆಂಡೋಜ ಒದಗಿಸಿದ ಸಾಕ್ಷ್ಯ ಪ್ರಕಾರ ಪೂರ್ವ ಕೊಲಂಬಿಯನ್ ಕಾಲದಲ್ಲಿ ಅಜ್ಟೆಕ್ ನು ಕೃಷಿಯನ್ನು ಮಾಡಲಾಗಿತ್ತು. ಮತ್ತು ಆರ್ಥಿಕ ಇತಿಹಾಸಕಾರರು 'ಚೀಯಾ' ಕೂಡ ಮೆಕ್ಕೆ ಜೋಳದಷ್ಟೆ ಪ್ರಮುಖ ಆಹಾರ ಪದಾರ್ಥ ಎಂದು ಹೇಳಿದ್ದಾರೆ. ಇದು ೩೮ ಅಜ್ಟೆಕ್ ಪ್ರಾಂತೀಯ ರಾಜ್ಯಗಳಲ್ಲಿ ೨೧ ಜನರು ವಾರ್ಷಿಕ ಗೌರವವನ್ನು ದೊರೆಗಳಿಗೆ ನೀಡಲಾಯಿತು ಎಂಬ ಮಾಹಿತಿ ಇದೆ. ಇನ್ನಷ್ಟು ರೈತರಿಗೆ ಇದರ ಬಗ್ಗೆ ಬೆಳೆಯುವ ವಿಧಾನ ಮಾರುಕಟ್ಟೆ ಬಗ್ಗೆ ಮಾಹಿತಿ ಕೊರತೆ ಇದೆ .

"https://kn.wikipedia.org/w/index.php?title=ಚೀಯಾ&oldid=1008948" ಇಂದ ಪಡೆಯಲ್ಪಟ್ಟಿದೆ