ಚಿಂಚ್ ಪೊಕ್ಲಿ
(Marathi: चिंचपोकळी), ಮುಂಬಯಿನ ಒಂದು ಉಪನಗರಿ. ಸಿ.ಎಸ್.ಟಿ. ಕಡೆಗೆ ಹೋಗುವದಾರಿಯಲ್ಲಿ ಇರುವ ಸೆಂಟ್ರಲ್ ರೈಲ್ವೆಯ ಒಂದು ಪ್ರುಟ್ಟ ರೈಲ್ವೆನಿಲ್ದಾಣ. ಹಿಂದೆ ಬ್ರಿಟಿಷರು ಇದನ್ನು 'ಚಿಂಚ್ ಪುಗ್ಲಿ' ಅಥವಾ 'ಚಿಂಚ್ ಪೂಘ್ಲಿ' [೧] ಎಂದು ಕರೆಯುತ್ತಿದ್ದರು.
ಪುರಾತನ ಶಾಲೆ
[ಬದಲಾಯಿಸಿ]ಸುಮಾರು ೯೦ ವರ್ಷಗಳ ಹಿಂದಿನ 'ವೇಲ್ಜಿ ಲಖನ್ ಶಿ ನಪ್ಪೂ ಹೈಸ್ಕೂಲ್' ಒಂದು ಶಾಲೆಯಿದೆ. ಈಗ ಇದೇ ಶಾಲೆಯಲ್ಲಿ, ೩-೫ ಸಾವಿರ ವಿದ್ಯಾರ್ಥಿಗಳು ಗುಜರಾಥಿ ಮತ್ತು ಇಂಗ್ಲೀಷ್ ಮಾಧ್ಯಮಗಳಲ್ಲಿ ಓದುತ್ತಿದ್ದಾರೆ.'ಕಸ್ತುರ್ ಬಾ ಗಾಂಧಿ ಮುನಿಸಿಪಲ್ ಹೈಸ್ಕೂಲ್' ನ್ನು 'ಬೃಹನ್ ಮುಂಬಯಿ ಮುನಿಸಿಪಲ್ ಕಾರ್ಪೊರೇಷನ್' ನಡೆಸುತ್ತಿದೆ. ಸಾಂಕ್ರಾಮಿಕ ರೋಗಗಳನ್ನು ಗುಣಪಡಿಸುವುದರಲ್ಲಿ ಇದು ಎತ್ತಿದ ಕೈ.
'ಚಿಂಚ್ ಪೊಕ್ಲಿಯ,' 'ಚಿಂತಾಮಣಿ ಗಣಪತಿ'
[ಬದಲಾಯಿಸಿ]'ಚಿಂಚ್ ಪೊಕ್ಲಿ ರೈಲ್ವೆ-ನಿಲ್ದಾಣ'ದ ಬಳಿಯಲ್ಲಿಯೇ ಅತಿ-ಪುರಾತನ ಹಾಗೂ ಸುಪ್ರಸಿದ್ಧ ಗಣಪತಿ ಇದೆ.[೨] ಗಣೇಶನ ಹಬ್ಬದ ಸಮಯದಲ್ಲಿ, ಈ ಸ್ಥಳದಲ್ಲಿ ಕೂಡಿಸಿ ಅರ್ಚಿಸುವ ಗಣಪತಿ, 'ಅತಿ ಪ್ರಸಿದ್ಧ ಗಣಪತಿ'ಯೆಂದು ಹೆಸರುಗಳಿಸಿದೆ. ಈ ಗಣಪತಿಯನ್ನು, ಚಿಂಚ್ ಪೊಕ್ಲಿ ಚಿಂತಾಮಣಿ ಅಥವಾ ಚ-ಚಿಂತಾಮಣಿ ಎನ್ನುತ್ತಾರೆ. 'ಚಿಂಚ್ ಪೊಕ್ಲಿ' ಯಲ್ಲಿ ಅನೇಕ ದೇವಾಲಯಗಳಿವೆ. ಹಿಂದು ದೇವಸ್ಥಾಗಳಿವೆ. ಜೈನ್ ದೇವಸ್ಥಾನಗಳು, ಜೈನ್ ಸ್ಥಾನಕ್ ಗಳು ಮತ್ತು ಮಸೀದಿಗಳು, ಇವೆ. ಜೈನ್ ಧರ್ಮದ ಸ್ಥಾನಕ್,ಡಿ.ಎಲ್.ಜೈನ್ ಚಾಲ್ ಹತ್ತಿರವಿದೆ.ಅತಿ ಹಳೆಯ ಮನೆಯಂತಿರುವ ಈ ಮಂದಿರದ 'ಪ್ರಾರ್ಥನಾ ಹಾಲ್', ಮುಂಬಯಿನಲ್ಲೇ ಅತಿ ದೊಡ್ಡದೆಂದು ಹೆಸರುವಾಸಿಯಾಗಿದೆ. ಕಲ್ಯಾನ್ ದಾಸ್ ವಾಡಿಯಲ್ಲಿ ಸಾಯಿಬಾಬ ಮಂದಿರವಿದೆ. ರೈಲ್ವೆ ಸೇತುವೆಯ ಕೆಳಗೆ ಹನುಮಾನ್ ದೇವಾಲಯ, 'ಬಾವಲಾ ಕಾಂಪೌಂಡ್' ಒಳಗೆ, ದತ್ತಮಂದಿರವಿದೆ. ಚಿಂಚ್ ಪೊಕ್ಲಿಯ ಪಶ್ಚಿಮದಲ್ಲಿ, 'ಸಂತೋಷಿಮಾತಾ ದೇವಸ್ಥಾನ' ವಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ http://mumbaichamahaganpati.blogspot.in/2013/08/chinchpokli-cha-chintamani.html
- ↑ "ಆರ್ಕೈವ್ ನಕಲು". Archived from the original on 2010-07-10. Retrieved 2010-06-17.
<References >/