ಚಳ್ಳೆ ಹಣ್ಣು
ಚಳ್ಳೆ ಹಣ್ಣು | |
---|---|
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | C. myxa
|
Binomial name | |
Cordia myxa | |
Synonyms | |
Cordia obliqua |
ಚಳ್ಳೆಹಣ್ಣು (ಇಂಗ್ಲೀಷ್ Bird lime) ಪಶ್ಚಿಮ ಘಟ್ಟದ ಕಾಡು ಹಣ್ಣುಗಳಲ್ಲಿ ಒಂದು.[೧]
ಕನ್ನಡದಲ್ಲಿ
[ಬದಲಾಯಿಸಿ]ಸೊಳ್ಳೆ, ಬೊಟ್ಟೆ, ಚೆಡ್ಲು, ಕೆಂದಲ್, ಮಣ್ಣಡಿಕೆ, ಚಳ್ಳಂಟು,ಗೊಣ್ಣೆ ಹಣ್ಣು.
ಇತರ ಭಾಷೆಯಲ್ಲಿ
[ಬದಲಾಯಿಸಿ](ಹಿಂದಿ) ಲಸುರ, (ಇಂ) ಅಸ್ಸಿರಿಯನ್ ಪ್ಲಮ್, ಬರ್ಡ್ ಲೈಮ್, (ಸಂ) ಉದ್ದಾಲಕ, ಬೌವರಕ, (ತ) ನರುವಿಲಿ, (ತೆ) ಬಂಕನೆಕ್ಕೆರ[೨].
ಸಸ್ಯಶಾಸ್ತ್ರೀಯ ವಿಂಗಡಣೆ
[ಬದಲಾಯಿಸಿ]ಕಾರ್ಡೀಯ ಮಿಕ್ಸ (Cordia myxa L.C. obliqua)[೩]
ಕುಟುಂಬ
[ಬದಲಾಯಿಸಿ]ಬೊರಾಗಿನೇಸಿ (Boraginaceae)
ಹಣ್ಣಾಗುವ ಕಾಲ
[ಬದಲಾಯಿಸಿ]ಮೇ- ಜುಲೈ
ಪೌಷ್ಟಿಕಾಂಶಗಳು
[ಬದಲಾಯಿಸಿ]ಪ್ರೋಟೀನ್, ಶರ್ಕರಪಿಷ್ಟ, ಕಬ್ಬಿಣ, ಪೊಟಾಶಿಯಮ್, ಮೆಗ್ನಿಶಿಯಮ್, ಸುಣ್ಣ.
ಆಹಾರ ಪದಾರ್ಥಗಳು
[ಬದಲಾಯಿಸಿ]ಹಣ್ಣಿನಿಂದ ಮದ್ಯ, ಕಾಯಿಗಳಿಂದ ಉಪ್ಪಿನಕಾಯಿ, ಸಾಂಬಾರ್.
ಔಷಧೀಯ ಗುಣ
[ಬದಲಾಯಿಸಿ]- ಹಣ್ಣು ವಿರೇಚಕ, ಮೂತ್ರವರ್ಧಕ, ಶಾಮಕ ಕಫ ಮತ್ತು ಕೆಮ್ಮು ನಿವಾರಕ.
- ಚರ್ಮ ರೋಗ ಮತ್ತು ತುರಿಕೆ ನಿವಾರಣೆಗೆ, ತಲೆಗೂದಲು ಬೆಳೆಯಲು ಉತ್ತಮ.
- ಗರ್ಭಕೋಶದ ಹಾಗೂ ಯಕೃತ್ ತೊಂದರೆಗೆ ಹಣ್ಣಿನ ಔಷಧಿ.
- ಚಳ್ಳೆ ಬೀಜದ ಪುಡಿಯಿಂದ ಹುಳಕಡ್ಡಿಯ ಶಮನ.
- ತೊಗಟೆಯ ಕಷಾಯದಿಂದ ಅತಿಸಾರ ಹೊಟ್ಟೆನೋವು ಗುಣಮುಖ.
- ಗಾಯಕ್ಕೆ ತೊಗಟೆಯ ಗಂಧ ಲೇಪನ.
ಸಸ್ಯ ಮೂಲ, ಸ್ವರೂಪ
[ಬದಲಾಯಿಸಿ]ಏಷ್ಯಾ ಮೂಲದ ಚಳ್ಳೆಗಿಡ ೮-೧೦ ಮೀ ಎತ್ತರಕ್ಕೆ ಬೆಳೆಯಬಲ್ಲದು.ಇದು ಹಳ‍್ಳದ ಬದಿಯಲ್ಲಿ, ಪೊದೆ ಗಿಡ ಗಂಟಿಗಳು ಇರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ತೆಳ್ಳನೆಯ ಇಳಿ ಬಿದ್ದ ರೆಂಬೆಗಳಲ್ಲಿ ಅಂಡಾಕಾರದ ಚೂಪು ತುದಿಯ ದಟ್ಟ ಹಸಿರು ಎಲೆಗಳು. ಚಿಕ್ಕ ಬಿಳಿ ಹೂಗೂಂಚಲು ಹಸಿರು ಕಾಯಿಗಳಿಗೆ ರೂಪಾಂತರ. ಹಳದಿ ಮಿಶ್ರಿತ ತಿಳಿ ಗುಲಾಬಿ ವರ್ಣದ ಹಣ್ಣಿನಲ್ಲಿ ಸುತ್ತುವರೆದ ಪಾರದರ್ಶಕ ಸಿಹಿ ಅಂಟಿನ ತಿರುಳು.ಒಗರು ಮಿಶ್ರಿತ ಸಾಧಾರಣ ಸಿಹಿಯನ್ನು ಹೊಂದಿದೆ.ಇದರ ಬೀಜವು ಗಟ್ಟಿಯಾಗಿರುತ್ತದೆ.
ಸಸ್ಯ ಪಾಲನೆ
[ಬದಲಾಯಿಸಿ]ಉಷ್ಣವಲಯದಲ್ಲಿ, ಸಮುದ್ರಮಟ್ಟದಿಂದ ೨೦೦-೧೫೦೦ ಮೀ ಎತ್ತರದಲ್ಲಿ ಬೆಳೆಯುವ ಮರ. ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ. ಬೀಜ ಮತ್ತು ದಂಟುಸಸಿಗಳಿಂದ ಸಸ್ಯಾಭಿವೃದ್ಧಿ. ಹಕ್ಕಿ ಕೋತಿಗಳಿಂದ ಬೀಜಪ್ರಸಾರ.
ವಿಶಿಷ್ಟತೆ
[ಬದಲಾಯಿಸಿ]- ಇದು ಕೋತಿ,ಅಳಿಲು ಮತ್ತು ಹಲವು ಪಕ್ಷಿಗಳಿಗೆ ಅತ್ಯಂತ ಪ್ರಿಯವಾದ ಹಣ್ಣು.
- ಹಣ್ಣಿನ ಅರೆಪಾರದರ್ಶಕ ತಿರುಳು ಉತ್ತಮ ಅಂಟು.
- ಸೊಪ್ಪು ಪಶುಗಳಿಗೆ ಮೇವು.
- ದೋಣಿ, ಆಟಿಕೆ, ಕೃಷಿ ಉಪಕರಣಗಳು ಮತ್ತು ಕೆತ್ತನೆ ಕಲಸಕ್ಕೆ ಮರದ ಬಳಕೆ
- ಕನ್ನಡ ಸಾಹಿತ್ಯದಲ್ಲಿ 'ಚಳ್ಳೆ ಹಣ್ಣು ತಿನ್ನಿಸು' ಎಂಬ ನುಡಿಗಟ್ಟಿನ ಪ್ರಯೋಗ ಸಾಮಾನ್ಯ.
- ಇದನ್ನು ಪುಸ್ತಕಗಳ ಹಾಳೆಗಳನ್ನು ಅಂಟಿಸಲು ಉಪಯೋಗಿಸುತ್ತಿದ್ದರು.
- ಇದರ ಮಿಡಿಯ ಉಪ್ಪಿನಕಾಯಿಯನ್ನು ತಯಾರಿಸುತ್ತಾರೆ.
- ಇದರಲ್ಲಿ ಪ್ರೋಟಿನ್, ಕಬ್ಬಿಣ, ಮೆಗ್ನೀಶಿಯಂ, ಪೊಟಾಶಿಯಂ ಹಾಗೂ ಸುಣ್ಣದ ಅಂಶಗಳು ಹೇರಳವಾಗಿರುತ್ತದೆ.
- ಮರದ ತೊಗಟೆ,ಎಲೆಗಳು, ಮತ್ತು ಹಣ್ಣುಗಳು ಔಷಧೀಯ ಗುಣಗಳನ್ನು ಹೊಂದಿವೆ.
- ಹಣ್ಣಿನ ಲೋಳೆಯು ಮೂತ್ರವರ್ಧಕವಾಗಿದೆ.
ಉಲ್ಲೇಖ
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2015-12-28. Retrieved 2016-02-29.
- ↑ http://theindianvegan.blogspot.in/2013/03/all-about-lasura-cordia-myxa-cordia.html
- ↑ "ಆರ್ಕೈವ್ ನಕಲು". Archived from the original on 2016-04-09. Retrieved 2016-03-11.