ವಿಷಯಕ್ಕೆ ಹೋಗು

ಚರ್ಚೆಪುಟ:ಸ್ವಾಮಿ ಹರ್ಷಾನಂದ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದುಡಿದಿದ್ದಾರೆ ಅನ್ನುವ ಬದಲು ಸೇವೆಸಲ್ಲಿಸಿದ್ದಾರೆ ಅಂದರೆ ಚೆನ್ನ ಅನ್ನಿಸುತ್ತದೆ ಅವರ ಪೂರ್ವಾಶ್ರಮದ (ಬ್ರಹ್ಮಚರ್ಯ ಮತ್ತು ಹೆತ್ತಬ್ಬೆ ಇಟ್ಟ ಹೆಸರು) ಹೆಸರಾಗಲಿ ತಂದೆ-ತಾಯಿಯ ಹೆಸರಾಗಲೀ ಇಲ್ಲಿ ಹಾಕಿಲ್ಲ, ಹಾಕುವುದು ಸೂಕ್ತವೇ ಎಂಬ ಪ್ರಶ್ನೆ ಇದ್ದರೆ ನೀವು ಶಾರದಾ ದೇವಿ ಮತ್ತು ವಿವೇಕಾನಂದರ ಬಗ್ಗೆ ಸ್ವಲ್ಪ ಓದಬೇಕು. ಅಬ್ದುಲ್ ಕಲಾಂ ಜೊತೆಗಿನ ಚಿತ್ರ ನನಗೆ ಸೂಕ್ತ ಅನಿಸುತ್ತಿಲ್ಲ, ಅವರಿಗೆ ಅವರದ್ದೇ ಆದ ಗುರುರತರ ಗುರುತು ಇದೆ. ಅವರು ಬರೆದ ಪುಸ್ತಕದ ಹೆಸರುಗಳನ್ನು ಹಾಕುವ ಬದಲು ಇನ್ನಾವುದೋ ಪುಸ್ತಕದ ಮೇಲಿನ ಅವರ ಅಭಿಪ್ರಾಯ ಹಾಕಿರುವುದು ಹಾಸ್ಯಾಸ್ಪದ. ದುರ್ಗಾ ಸಪ್ತಶತೀ ಸವಿವರ ಅನುವಾದ (ಮಂಗಳೂರು ಆಶ್ರಮದಲ್ಲಿದ್ದಾಗ ಬರೆದದ್ದು) ಇವೆಲ್ಲ ನೀವು ಓದಿಲ್ಲವೇ? ಅವರೊಬ್ಬ ಅದ್ಬುತ ವಾಗ್ಮಿ ಅದೂ ಮರೆತಿರಾ? ಆ ಎಳೆಯ ಬಾಲಕ ಆಶ್ರಮಕ್ಕೆ ಬಂದದ್ದಾದರು ಏಕೆ? ಆತ ಆಶ್ರಮ ಸೇರಿದಾಗ ಅಧ್ಯಕ್ಷರಾಗಿದ್ದವರು ಯಾರು? ಅವರು ಯಾವ್ಯಾವ ಹಿರಿಯ ಸಂತರ ಜೊತೆಗಿದ್ದರು? ಪ್ರಭು ಮಹರಾಜರು ಮಂಗಳೂರಿಗೆ ಭೇಟಿ ನೀಡಿದ ಫೊಟೋದಲ್ಲಿ ಅವರ ಗಡ್ಡಬಿಟ್ಟ ಫೊಟೋ ಇದೆ ನೋಡಿ! . . ಅವರ ಗುರುವಿನ ಹೆಸರೇ ಇಲ್ಲದ ಈ ಮಾಹಿತಿ ನನಗೆ ಇಷ್ಟ ಆಗಲಿಲ್ಲ, ಅಪರಿಪೂರ್ಣ. - ಉಲ್ಲಾಸ

Start a discussion about ಸ್ವಾಮಿ ಹರ್ಷಾನಂದ

Start a discussion