ವಿಷಯಕ್ಕೆ ಹೋಗು

ಚರ್ಚೆಪುಟ:ಶಾಂತವೇರಿ ಗೋಪಾಲಗೌಡ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೊದಲನೆಯದಾಗಿ ಈ ಲೇಖನದ ಹೆಸರನ್ನು "ಶಾಂತವೇರಿ ಗೋಪಾಲ ಗೌಡ" ಎಂದು ಬದಲಿಸ ಬೇಕಿದೆ ಏಕೆಂದರೆ ಆ ಹೆಸರಿನಲ್ಲಿಯೇ ಅವರು ಹೆಚ್ಚು ಪ್ರಖ್ಯಾತರು.

ಎರಡನೆಯದಾಗಿ ಇಲ್ಲಿಯ ಬರೆವಣಿಗೆಯನ್ನು ಹಿ. ಮ. ನಾಗಯ್ಯನವರು ಬರೆವಣಿಗೆಯಿಂದ ನೇರವಾಗಿ ಎತ್ತಿಕೊಳ್ಳಲಾಗಿದೆ (ಆದರೆ ಕೃತಿಚೌರ್ಯ ಅಲ್ಲ ಏಕೆಂದರೆ ಮೂಲವನ್ನು ಉಲ್ಲೇಖಿಸಲಾಗಿದೆ). ಆದರೆ ಇದು ಹಕ್ಕುಸ್ವಾಮ್ಯದ ಉಲ್ಲಂಘನೆ ಮತ್ತು "ಮೂಲ ಆಕರಗಳಿಂದ ಪಡೆದ ಮಾಹಿತಿಯನ್ನು" ಸಂಪಾದಕರು ತಮ್ಮದೇ ಪದಗಳಲ್ಲಿ ವ್ಯಕ್ತಪಡಿಸುವ ವಿಕಿಪೀಡಿಯ ಬರೆವಣಿಗೆ ನೀತಿಯ ವಿರುದ್ಧವಾಗಿದೆ. ಈ ಬರೆವಣಿಗೆಯು ಶ್ರೀಯುತರ ಜೀವನ ಘಟ್ಟದ ಹಲವು ಮಾಹಿತಿಗಳನ್ನು ನೀಡುತ್ತವೆ. ಅವುಗಳನ್ನು ಬಳಸಿಕೊಳ್ಳ ಬಹುದು. ಆದರೆ, ಒಬ್ಬ ರಾಜಕೀಯ ನೇತಾರನಾಗಿ, ಸ್ವತಹ ಕಾಗೋಡು ಹೋರಾಟದಲ್ಲಿ ಭಾಗಿಯಾಗಿ, ಮೂರು ಸಲ ವಿಧಾನಸಭೆಯ ಸದಸ್ಯರಾಗಿ, ಹಲವು ನಂತರದ ಮುಖಂಡರ ಮೇಲೆ (ದೇವರಾಜ ಅರಸು, ಜೆ. ಹೆಚ್. ಪಟೇಲ್, ಎಸ್, ಬಂಗಾರಪ್ಪ, ಎಸ್. ಎಂ. ಕೃಷ್ಣ, ಚಂದ್ರೇ ಗೌಡ ಮುಂತಾದ ರಾಜಕಾರಣಿಗಳು/ಮಾಜಿ ಮುಖ್ಯ ಮಂತ್ರಿಗಳು) ಮತ್ತು ಸಾಂಸ್ಕೃತಿಕ ವಲಯದ ಮೇಲೆ (ಯು ಆರ್ ಅನಂತ ಮೂರ್ತಿ, ಲಂಕೇಶ್, ತೇಜಸ್ವಿ, ಕೆ. ವಿ. ಸುಬ್ಬಣ್ಣ ಮುಂತಾದವರ ಮೇಲೆ) ಪ್ರಭಾವ ಬೀರುವ ಮೂಲಕ ಭವಿಷ್ಯದ ಮೇಲೆಯೂ ಪ್ರಭಾವ ಬೀರಿದ (ಉದಾಹರಣೆಗೆ ದೇವರಾಜ ಅರಸು ಅವರು ತಂದ ಭೂಸುಧಾರಣೆಗಳು ಈ ಪ್ರಭಾವದಿಂದಲೇ ಎನ್ನಲಾಗಿದೆ) ಬಗೆಗೆ ಸಶಕ್ತವಾಗಿ ಬಿಂಬಿಸಲು ಸಾಧ್ಯವಾಗಿಲ್ಲ. ಇಂಗ್ಲೀಶ್ ವಿಕಿಪೀಡಿಯದ ಮಾಹಿತಿ ಮತ್ತು ಹಲವು ಇತರ ಆಕರಗಳನ್ನು ಬಳಸಿ ಈ ಲೇಖನವನ್ನು ಮರುರೂಪಿಸ ಬೇಕು ಎಂದು ನನ್ನ ಅನಿಸಿಕೆ.

ಇದನ್ನು ಮೂಲ ಲೇಖಕರೇ ಮಾಡಿದರೆ (ಅವರಿನ್ನೂ ವಿಕಿಪೀಡಿಯದಲ್ಲಿ ಸಕ್ರಿಯವಿಗಿದ್ದರೆ) ಚೆನ್ನಾಗಿರುತ್ತದೆ. ಪ್ರದೀಪ್ ಬೆಳಗಲ್ (ಚರ್ಚೆ) ೧೫:೨೧, ೨ ಡಿಸೆಂಬರ್ ೨೦೧೬ (UTC)

Start a discussion about ಶಾಂತವೇರಿ ಗೋಪಾಲಗೌಡ

Start a discussion