ಚರ್ಚೆಪುಟ:ರಮ್ಯ ಕಾವ್ಯ
ಗೋಚರ
ಇಂಗ್ಲಿಷ್` ಕವನದ ಸೊಬಗು
[ಬದಲಾಯಿಸಿ]ಉದಾಹರಣೆಗಾಗಿ:
- ಒಂದು ಬಯಕೆ
- ಸಲಿಲ ಕಲರವದಿಂದ ಸನಿಹದಲೊಂದು ತೊರೆಯು ತಾ ಹರಿಯಲಿ
- (ಸನಿಹದಲೊಂದು ತೊರೆಯು ತಾ ಗಿರಣಿಯೊಂದನು ನೆಡಸಲಿ)
- ಬಳಿಯ ಮಲೆಯಲಿ ನೀರಬೀಳದು ನೂರು ಸಾವಿರ ದುಮುಕಲಿ.
-
- ಅಲ್ಲೆ ಬಳಿಯಲಿ ಬಿಟ್ಟು ಬಿಡದೆಯೆ ಕಲ್ಲು ಪೊಟರೆಯ ಗೂಡಲಿ,
- ಪಂಚವರ್ಣದ ಶಕವು ತಾ-ನಿಂಪುದನಿಯಲಿ ಗಳಪಲಿ,
- ದೂರ ಪಯ ಣದ ಹಸಿದ ಯಾತ್ರಿಕ ಇಲ್ಲಿ ಬೀಡನು ಮಾಡಲಿ,
- ಎನಗೆ ಆದರದತಿಥಿ ಜೊತೆಯಲಿ ಸುಖದ ಭೋಜನವಾಗಲಿ.
-
- ಎನ್ನ ಗುಡಿಸಲ ದಾರಿಚಪ್ಪರ ಹೂವು ಮಲ್ಲಿಗೆ ಬಳ್ಳಿಯಾಗಲಿ,
- ಮಂಜು ಹನಿಗಳ ಕುಡಿದ ಹೂಗಳು ಸುತ್ತ ಕಂಪನು ಸೂಸಲಿ,
- ಎನ್ನ ನಲ್ಲೆಯು ಚರಕ-ನೂಲುತ ತುಂಬು ಹೃ ದಯದಿ ಹಾಡಲಿ,
- ಹಸಿರು ನೀಲಿಯ ಬಣ್ಣಬಣ್ಣದ ಕಣ್ಣು ತಣಿಸುವ ಉಡುಪಲಿ.
-
- ಹಸಿರು ಮಾಮರ ಸುತ್ತುವರಿದಿಹ ಎನ್ನ ಊರಿನ ಗುಡಿಯಲಿ,
- ಎಮ್ಮ ಮದುವೆಯ ಮೊಟ್ಟ ಮೊದಲಿನ ವಚನದೀಕ್ಷೆಯು ನಡೆಯಿತೊ
- ಅಲ್ಲಿ ಸತತವು ಮಂದಮಾರುತ ಕಂಪು ಬೀರುತ ಬೀಸಲಿ;
- ಎಮ್ಮ ನಲುಮೆಯ ಸಗ್ಗ ಸುಖವನು ಅಮರ ನಾಡಿಗು ಉಲಿಯಲಿ.
- ಮೂಲ:
- A W I S H
- Mine be a cot beside the hill;
- A bee hive’s hum shall soothe my ear ;
- A willowy brook that turns mill,
- With many a fall shall linger near.
-
- The swallow oft , beneath my thatch
- Shall twitter from her clay-built nest;
- Oft shall a pilgrim lift the latch,
- And share my meal, a welcome guest.
-
- Around my ivied porch shall spring
- Each fragrant flower that drinks the dew:
- And Lucy, at her wheel, shall sing
- In russet-gown and apron blue.
-
- The village-church among the trees,
- Where first our marriage-vows were given,
- With merry peals shall swell the breeze,
- And point with taper spire to Heaven.
-
- S.Rogers
- (18th C. Poet)
- (Golden Treasury: 1874 Edition.Edited
- by Mr. F.T. Palgrave. Poem: A W I S H
- 145 (cxlv)
- Page:140. )
-
- (ಹದಿನೆಂಟನೆಯ ಶತಮಾನದ ಕವಿ ಎಸ್. ರೋಜರ‍್ಸ್ ನ ಕವಿತೆಯ ಭಾವಾನುವಾದ)
- ಅನುವಾದಕ: ಬಿ. ಎಸ್. ಚಂದ್ರಶೇಖರ ಸಾಗರ ನೋಡಿ
- Bschandrasgr ೦೪:೨೮, ೧೮ ಜುಲೈ ೨೦೧೪ (UTC)
ಇನ್ನೊಂದು ಕವನ -ಉದಾಹರಣೆಗೆ
[ಬದಲಾಯಿಸಿ]- ಸೀ ಲಿ ಯಾ ಳಿ ಗೆ
- ಮಧುವನೀಂಟೆಲೆ ಸಖಿಯೆ
- (ನನಗಾಗಿ) ನಯನಗಳಲೇ,
- ಮುದದೆ ನಾ ಸ್ಪರ್ಧಿಸುವೆ
- ನನ್ನ ಕ್ಷಿಗಳಲೇ ;
- ಮತ್ತೆ ನಿನ್ನಧರ ಮಧುವನು
- ನೀ ನೀಡಲೆನಗೆ
- ಅದನುಳಿದು ಮದಿರೆಯನು
- ನಾ ನೋಡೆನೆಲಗೆ;
- ಹೃ ದಯದಲುದಿಸಿದೀ(ಈ)
- ದಾಹ ವೆಲೆ ಚಲುವೆ,
- ಬಯಸುತಿದೆ ತಾ ಸ್ವರ್ಗಸೀಮೆಯ
- ಮಧುವ ಸಖಿಯೇ,
- ಸವಿದಿರಲಿ ಸೋಮವನು (ಅಮೃತ)
- ಈ ಮುನ್ನ ರನ್ನೆ ,
- ಸೇವಿಸೆನದನು ನಿನ್ನುಳಿದು
- ನಾನಿನ್ನು ಚನ್ನೆ .
- -
- ಕಳುಹಿದೆನು ರೋಜ ಗುಚ್ಛವನೊಂದ
- ನಾ ನಿನ್ನ ಬಳಿಗೆ,
- ತಿಳಿದಿರುವೆ ದೋಷವನು ಅಲ್ಲವೆಂದದು
- ತ ಕ್ಕ ಸನ್ಮಾನ ನಿನಗೆ
- ಎನ್ನೊಲವು ನಿನ್ನ ಬಳಿ ಬಾಡದಿರಲೆಂಬಾಸೆ
- ಯಿಂದ ಸದಯೆ,
- ಕಳುಹಿದೆನು ಎನ್ನ ಪ್ರೇಮದ ಗುಚ್ಛ
- ಬೆಳೆಯಲೆಂದಲ್ಲಿ ಸಖಿಯೆ,
- ಆದರದಿ ಅದನೊಮ್ಮೆ ನೀನಾಘ್ರಾಣಿಸಿ
- ಕಳುಹಿರಲೆನಗೆ ಮುಗುದೆ
- ಅಂದಿನಿಂದದು ಬೆಳೆಯುವುದು
- ಬೀರುವುದು ಗಂಧವನೆನ್ನಹೃದಯೇ
- ಆ ಪರಿಮಳವು ಅಲ್ಲವದರದು ನುಡಿವೆ
- -ನೆನ್ನಾಣೆ ಸದಯೇ,
- ಸತ್ಯವಿದು ; ಅಂದಿನಿಂದದು ನಿಜದೆ
- ನಿನ್ನದೇ ಪ್ರಾಣ ಪ್ರಿಯಳೇ!
-
- (೧೭ ನೇ ಶತಮಾನದ ಕವಿ ಬಿ..ಜಾನ್ಸನ್ ತನ್ನ ಪ್ರಿ ಯತಮೆ
- ಸೀಲಿಯಾಳಿಗೆ ಬರೆದ ಕವನ; ಭಾವಾನುವಾದ
- ಬಿ. ಎಸ್ . ಚಂದ್ರಶೇಖರ ಸಾಗರ
- ಟಿಪ್ಪಣಿ: ಅದನುಳಿದು ; ಅದನು + ಉಳಿದು (ಬಿಟ್ಟು)
ಮೂಲ
[ಬದಲಾಯಿಸಿ]- TO CELIA
- Drink to me only with thine eyes,
- And I will pledge with mine;
- Or leave a kiss but in the cup
- And I ‘ll not look for wine.
- The thirst that from the soul doth rise
- Doth ask a drink divine;
- But might I of Jove’s necter sup,
- I would not change for thine.
- I sent thee late a rosy wreath,
- Not so much honouring thee
- As giving it a hope that there
- It could not wither’d be ;
- But thou thereon didst only breathe
- And sent’st it back to me;
- Since when it grows, and smells; I sware,
- Not of itself but thee!
- B. Jonson
- (A 17th c. poet )
- (Golden Treasury 1874 Edition, poem 140(xc) pg 75)
- (Edited by FRANCIS TURNER PALGRAVE)
- Bschandrasgr ೦೪:೩೦, ೧೮ ಜುಲೈ ೨೦೧೪ (UTC)ಸದಸ್ಯ:Bschandrasgr/ಪರಿಚಯ-ನೋಡಿ