ವಿಷಯಕ್ಕೆ ಹೋಗು

ಚರ್ಚೆಪುಟ:ಬಿ.ಎಸ್ ಚಂದ್ರಶೇಖರ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚರ್ಚ ಪುಟ-ಸಹಿ

[ಬದಲಾಯಿಸಿ]

ಬಿ.ಎಸ್ ಚಂದ್ರಶೇಖರ ರವರೆ.ನಮಸ್ಕಾರ,. ಚರ್ಚಪುಟದಲ್ಲಿ ನಾವು ವ್ಯಾಸದಬಗ್ಗೆ ಸಂದೇಹ ಇಲ್ಲಾ ಏದೇನು ಅಭ್ಯಂತರ ಇದ್ದರೆ ಕೇಳೋದಕ್ಕೆ ಮತ್ತು ಸಂದೇಶ ಕೊಡುವದ್ದಕ್ಕೆ.ಅಂತಾ ಸಂದರ್ಭದಲ್ಲಿ ಸಹಿ ಇರಬೇಕು.ಆದರೆ ವ್ಯಾಸದ ಚರ್ಚಪುಟ ದಲ್ಲಿ ವ್ಯಾಸದಬಗ್ಗೆ ಮಾತ್ರ ಚರ್ಚ ನಡೆಯಬೇಕು.ನೀವು ಸಲಹ ಕೋಡವದಕ್ಕೆ ಸೂಚನ ಕೊಟ್ಟಿದ್ದಿರಿ.ಅದು ಚರ್ಚಪುಟದಲ್ಲಿ ಬರಿಯುವ ಅವಸರವಿಲ್ಲ.ಅದನ್ನು ತೆಗದಿದೆ.ವಿಕಿಪೀಡಿಯ ವಿಶ್ವದಲ್ಲಿ ೩೦೦ಭಾಷಗಳಲ್ಲಿ,೩೦ಭಾರತಭಾಷಹಳಲ್ಲಿ ಬರುತ್ತದೆ.ಇಂದಿನ ತನಕ ಏರು ಚರ್ಚಪುಟದಲ್ಲಿ ಸೂಚನ ಮಾಡೋದಕ್ಕೆ ಅದುಮಾಡಿ,ಇದುಮಾಡಿ,ಅದುವತ್ತಿರಿ ಅಂತಾ ಬರೆಯಲಿಲ್ಲ.ಕೇವಲ ವ್ಯಾಸದಬೆಗ್ಗೆ ಸಲಹ,ಸಂದೇಶ,ಇದ್ದರೆ ಕೊಟ್ಟಿ ಸಹಿ ಮಾಡೆದರು.ಅದರಿಂದ ನೀವು ಬರೆದ ಆಸಲಹಯನ್ನು delete ಮಾಡಿದೆ..ಇದರಬಗ್ಗೆ ನಿಮಕು ಇನ್ನೂ ಸಂದೇಹ ವಿದ್ದರೆ ಅರಳಿಕಟ್ಟೆ ಅಥವಾ ಸಮುದಾಯ ಪುಟ ದಲ್ಲಿ ಕೇಳಿರಿ.ಪಾಲಗಿರಿ (talk) ೧೧:೧೦, ೩೦ ಸೆಪ್ಟೆಂಬರ್ ೨೦೧೩ (UTC)

ಸಂದೇಶ

[ಬದಲಾಯಿಸಿ]

ಬಿ.ಎಸ್ ಚಂದ್ರಶೇಖರ ಯವರೆ,ನನಗೆ ಸಂದೇಶಕೊಡುವಾಗ ನಿಮ್ಮ ಪುಟ ಜೊತೇ ನನ್ನಪುಟ ದಲ್ಲಿ ಬರಯಬೇಕು.ನಿಮ್ಮ ಪುಟದಲ್ಲಿ ಇದ್ದ ಸಂದೇಶ ನಮಗೆ ತಿಳಿಯುವದಿಲ್ಲ ,ಪ್ರತ್ಯೇಕ ವಾಗಿ ನೋಡಿದರೆ ಗೊತ್ತಾಗುತ್ತದೆ.ನನ್ನ ಚರ್ಚಪುಟ ದಲ್ಲಿ ಬರೆದರೆ,ನನಗೆ ಇ-ಮೈಲ್ ಮತ್ತು ವಿಕಿ ಒಪನ್ ಮಾದಿದಮೇಲೆ ಸಂದೇಶ ಇದೇ ಅಂತ ಸಂಕೇತ ಬರುತ್ತದೆ.ಪಾಲಗಿರಿ (talk) ೧೯:೨೦, ೭ ಅಕ್ಟೋಬರ್ ೨೦೧೩ (UTC)

ಬಿಜಾಪುರ ಜಿಲ್ಲೆ ಗ್ರಾಮಗಳ ಇತಿಹಾಸ

[ಬದಲಾಯಿಸಿ]

ಬಿ.ಎಸ್ ಚಂದ್ರಶೇಖರ ರವರೆ,ಸಮಸ್ತೇ,

ಅರಳಿ ಕಟ್ಟೆ ಪುಟದಲ್ಲಿ ಬಿಜಾಪುರ ಜಿಲ್ಲಿಯ ಗ್ರಾಮಗಳ ಇತಿಹಾಸ ಲೇಖನಗಳಲ್ಲಿ ಇದ್ದ ತಪ್ಪುಗಳ ಬಗ್ಗೆ ಒಂದು ಸಂದೇಶ ಇದೆ.ದಯವಿಟ್ಟು ಅದರೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿರಿ.ಪಾಲಗಿರಿ (talk) ೦೩:೦೧, ೧೦ ಫೆಬ್ರುವರಿ ೨೦೧೪ (UTC)

ಬಿ.ಎಸ್. ಚಂದ್ರಶೇಖರ

[ಬದಲಾಯಿಸಿ]

ಬಿ.ಎಸ್. ಚಂದ್ರಶೇಖರ (೨೮-೨-೧೯೩೪) ಇವರು ಸಾಗರದಲ್ಲಿ ವಾಸಿಸುತ್ತಿದ್ದಾರೆ. ತಂದೆ ಬಿ. ಸೂರ್ಯನಾರಾಯಣ ಭಟ್ ಮತ್ತು ತಾಯಿ ಶ್ರೀಮತಿ ಸರಸತ್ವಮ್ಮ.. ಇವರು ಸಾಗರದಲ್ಲಿಯೇ ಪ್ರೌಢಶಾಲೆಯ ವಿದ್ಯಾಭ್ಯಾಸ ಮುಗಿಸಿ ನಂತರ ಬಿ. ಎ., ಬಿ.ಎಡ್. ಪದವಿ ಪಡೆದು ಸರ್ಕಾರಿ ಪ್ರೌಢಶಾಲೆಯ ಉಪಾಧ್ಯಾಯರಾಗಿ ನಂತರ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿರುತ್ತಾರೆ.

ಸೇವೆ;

ಇವರು ಬೇರೆ ಬೇರೆ ಕಡೆ ಸೇವೆ ಸಲ್ಲಿಸಿ ಸಾಗರಕ್ಕೆ ಬಂದ ನಂತರ ೧೯೭೦-೧೯೮೦ ದಶಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ನಂತರ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗು ಶಿಕ್ಷಕರ ಸಂಘಟನೆಯಲ್ಲಿ ತೊಡಗಿದರು. ಅಲ್ಲದೆ ಅದೇ ಸಮಯದಲ್ಲಿ ಸಾಗರ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯಾಗಿ ಐದು ವರ್ಷ ಸಂಘದ ಸಂಘಟನೆ ಮಾಡಿದರು. ಸಾಗರದ ನೌಕರರ ಸಹಕಾರಿ ಸಂಘದ ಅಧ್ಯಕ್ಷರಾಗಿ ನಷ್ಟದಲ್ಲಿದ್ದ ಆ ಸಂಘವನ್ನು ಲಾಭಕರ ಸಂಘವಾಗಿ ಪರಿವರ್ತಿಸಿದರು. ಸಾಗರ ತಾಲ್ಲೂಕಿನ ಸ್ಕೌಟ್ ಮತ್ತ ಗೈಡ್ಸ್ ಸಂಸ್ಥೆಯ ಕಾಯ‍ದರ್ಶಿಯಾಗಿ ಜೊತೆಯವರ ಸಹಕಾರದೊಂದಿಗೆ ತಾಲ್ಲೂಕಿನಲ್ಲಿ ಉತ್ತಮ ಸ್ಕೌಟ್ ಗೈಡ್ ಚಳುವಳಿಯನ್ನು ಸಂಘಟಿಸಿ ಅನೇಕರಿಗೆ ತರಬೇತಿ ಕೊಟ್ಟು ಭಾರತದ ಅಧ್ಯಕ್ಷರ ಬ್ಯಾಡ್ಜ್ ಪಡೆಯುವಂತೆ ಮಾಡಿದರು; ತಾಲ್ಲೂಕು ಮಟ್ಟದ ಸ್ಕೌಟ್ ಮತ್ತು ಗೈಡ್ಜ್ ಸಮ್ಮೇಳನಗಳನ್ನು ನಡೆಸಿದರು.

ಸಾಹಿತ್ಯ ಸೇವೆ;

ಸಾಗರದ ಮಲೆನಾಡು ಗಮಕ ಕಲಾ ಸಂಘದಲ್ಲಿ ಕಲಾ ಸಂಘದಲ್ಲಿ ೧೯೮೨ ರಿಂದಲೂ ಕಾರ್ಯಕಾರಿ ಸಮಿತಿ ಸದಸ್ಯನಾಗಿದ್ದು ೧೯೯೩ ರಿಂದ ೨೦೦೭ರವರೆಗೂ ಆ ಸಂಘದ ಕಾರ್ಯದರ್ಶಿಗಳಾಗಿ ಕೆಲಸ ಮಾಡಿರುತ್ತಾರೆ. ಸಾಗರದ ಜನತೆಗೂ, ಸಾಗರದ ಬೇರೆ ಬೇರೆ ಬಡಾವಣೆಗಳಲ್ಲಿ ಮತ್ತು ಸಾಗರದ ಗ್ರಾಮಾಂತರಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ. ಇತರರ ಸಹಯೋಗದೊಡನೆ, ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮಗಳನ್ನು ಏರ್ಪಡಿಸುವ ಗದುಗಿನ ಭಾರತ / ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಮೊದಲಾದ ಕನ್ನಡದ ಪ್ರಾಚೀನ ಕಾವ್ಯಗಳನ್ನು ತಲುಪಿಸಿರುತ್ತಾರೆ. ಈಗ ಅದೇ ಸಂಘದ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಎರಡು ವರ್ಷದಿಂದ (೨೦೧೧-೧೨ರಿಂದ) ಕನ್ನಡ ವಿಕಿಪೀಡಿಯಾಕ್ಕೆ ಅದರ ಸದಸ್ಯರಾಗಿ ಮಾಹಿತಿಗಳನ್ನೂ ಮಾಹಿತಿಗಳುಳ್ಳ ಲೇಖನಗಳನ್ನೂ ತುಂಬುತ್ತಿದ್ದಾರೆ.

ಆಧಾರ;

"ಗಮಕ ಸಾಗರ, ಸ್ಮರಣ ಸಂಚಿಕೆ" ಸಂದರ್ಶನ

ಬಿ.ಎಸ್ ಚಂದ್ರಶೇಖರ

[ಬದಲಾಯಿಸಿ]

ವಿಕಿಪೀಡಿಯ ಕಾರ್ಯನೀತಿಗಳ ಪ್ರಕಾರ ಈ ಪುಟವನ್ನು ತೆಗೆಯ ಬೇಕಿದೆ. ವಿಕಿಪೀಡಿಯ ಸಂಪಾದಕರು ಅವರ ಖಾತೆಯ ಪುಟದಲ್ಲಿ ಮಾತ್ರ ಮಾಹಿತಿಯನ್ನು ಸೇರಿಸತಕ್ಕದ್ದು. ನೀವು ಪ್ರಖ್ಯಾತರೇ ಆಗಿದ್ದರೂ, ಅದನ್ನು ಉಲ್ಲೇಖಿಸುವ ಮೂಲಗಳನ್ನು ಬಳಸಿ ಇತರರು ಮಾತ್ರ ಲೇಖನ ಸೇರಿಸಬಲ್ಲರು. ನಿಮ್ಮ ಮಾಹಿತಿಯನ್ನು ನೀವೇ ವಿಕಿಪುಟವಾಗಿ ಸೇರಿಸುವಂತಿಲ್ಲ. ಇದು ವಿಕಿಪೀಡಿಯದ ಮೂಲ ಕಾರ್ಯನೀತಿಗಳಲ್ಲಿ ಒಂದು. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೮:೦೩, ೩ ಮಾರ್ಚ್ ೨೦೧೫ (UTC)