ವಿಷಯಕ್ಕೆ ಹೋಗು

ಚರ್ಚೆಪುಟ:ನಾಗ್ರಾಜ್ ಮಂಜುಳೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮರಾಠಿಯಲ್ಲಿ नागराज ಎಂದು ಇರುವ ಹೆಸರು ಕನ್ನಡದಲ್ಲಿ ನಾಗ್ರಾಜ್ ಏಕೆ ಆಗಿದೆ? --Vikas Hegde (ಚರ್ಚೆ) ೧೧:೪೪, ೧೬ ಜೂನ್ ೨೦೧೬ (UTC) (suMkadavar ೧೬:೨೫, ೧೬ ಜೂನ್ ೨೦೧೬ (UTC)) ಹೌದು. ಇದನ್ನು ನಾನು ಗಮನಿಸಿದ್ದೇನೆ. ನೀವು ಗಮನಿಸಿದ್ದು ಸರಿ. ಮರಾಠಿ ವಿಕಿಪೀಡಿಯದಲ್ಲಿ ನಾಗರಾಜ್ (नागराज) ಅಂತ ಇದೆ. ಇಂಗ್ಲೀಷ್ ನಲ್ಲಿ Nagraj ಎಂದು ಬರೆಯಲಾಗಿದೆ.ನಾನು ಇಂಗ್ಲೀಷ್ ವಿಕಿಪೀಡಿಯವನ್ನು ಆಧರಿಸಿ ಬರೆದದ್ದು. ಇದನ್ನು ಹಲವು ಮರಾಠಿ/ಇಂಗ್ಲೀಷ್ ಭಾಷೆಗಳ ಮಿಶ್ರಿತ ಲೇಖನಗಳಲ್ಲಿ ಈ ಎರಡು ಬಳಕೆಗಳನ್ನೂ ವೀಕ್ಷಿಸಬಹುದು. (ಇಂಗ್ಲೀಷ್ ವಾಕ್ಯ Nagraj ಎಂದೇ ಇದೆ) ಇನ್ನು ಮರಾಠಿ ಸಂದರ್ಶನದಲ್ಲಿ ಅವರೆಲ್ಲಾ ನಾಗ್ರಾಜ್ ಎಂದೇ ಸಂಬೋಧಿಸುವುದನ್ನು ಕಾಣಬಹುದು. ಮುಂಬೈ, ಮುಂಬಯಿ,ಬಂಬಯಿ, ಬೊಂಬಾಯಿ ಇರುವ ಹಾಗೆ.

ನಾನು ವಿಕೀಪೀಡಿಯಾಕ್ಕೆ ಬರೆದ ಲೇಖನ, ಸತ್ಯ ನಾದೆಳ್ಲ ಎಂದು ತೆಲುಗು ಭಾಷೆಯಲ್ಲಿದೆ. ಆದರೆ ಇಂಗ್ಲೀಷ್ ನಲ್ಲಿ 'ಸತ್ಯ ನಾಡೆಲ್ಲಾ' (Satya Nadella) ಎಂದು ಎಲ್ಲರೂ ಅವರನ್ನು ಸಂಬೋಧಿಸುತ್ತಾರೆ. ಕನ್ನಡದವರಿಗೆ ನಾಲಿಗೆ ಚೆನ್ನಾಗಿ ತಿರುಗುತ್ತದೆ. ಯಾವ ಶಬ್ದವನ್ನಾದರೂ ಸಂಸ್ಕೃತ ಭಾಷೆಬಲ್ಲವರ ತರಹ, ಸರಿಯಾಗಿ ಉಚ್ಚರಿಸಬಲ್ಲರು. ಇಂಗ್ಲೀಷ್ ಜನಕ್ಕೆ ಕೇವಲ ೨೬ ಅಕ್ಷರಗಳ ಕಾರಣದಿಂದ ತೊಂದರೆ.ನಮ್ಮ ತಮಿಳು ಬಾಂಧವರೂ ಇದೇ ಸಮಸ್ಯೆಗೆ ಗುರಿಯಾಗಿದ್ದಾರೆ. ಉದಾಹರಣೆಗೆ, ಶಂಕರನಿಗೆ ಸಂಕರ, ನಾಥನಿಗೆ, ಸ್ವಾಮಿನಾದನ್, ಶೋವಾ, (ಶೋಭಗೆ), ವೆಂಗಡೇಸನ್, ಸರವಣಬವ,ತ್ರಿಪಾಠಿಗೆ ತ್ರಿಪಾತಿ,ಇತ್ಯಾದಿಗಳನ್ನು ಮತ್ತು ಇನ್ನೂ ಹಲವಾರು ಭಾಷಾ ಸಮಸ್ಯೆಗಳನ್ನು ನಾನು ಎದುರಿಸುತ್ತಿದ್ದೇನೆ. ಮುಂಬಯಿನಲ್ಲಿ ನನಗೆ ಬೆಂಗಳೂರಿಗಿಂತ ಹೆಚ್ಚು ಜನರ ಒಡನಾಟ ಸಿಕ್ಕಿದೆ. ನಾನೂ ಹೆಚ್ಚುಹೆಚ್ಚು ಪುಸ್ತಕಗಳನ್ನು ಓದುವ ಸ್ವಾಭಾವದವನು. ವಿದೇಶಗಳಿಗೆ ಹೋಗಿ ಅಲ್ಲಿ ಕನ್ನಡದಲ್ಲಿ ವಿಕಿಪೀಡಿಯಾ ಲೇಖನಗಳನ್ನು ಬರೆದುಬಂದಿದ್ದೇನೆ. ಉದಾ : ೧. ಗೋಲ್ಡನ್ ಬ್ರಿಡ್ಜ್ ಸೇತುವೆ, ಸ್ಯಾನ್ ಫ್ರಾನ್ಸಿಸ್ಕೊ, ೨. ಸ್ಯಾನ್ ಬಾರ್ನ್ ಮೆಕ್ಕೆಜೋಳದ ಪ್ರಾಯೋಗಿಕ ಹೊಲ(೧೮೮೫) ೩. ಗೋಲ್ಡನ್ ಗೇಟ್ ಮಹಾದ್ವಾರ-ಅಮೆರಿಕದ ಪಶ್ಚಿಮ ದ್ವಾರ, ಸೇಂಟ್ ಲೂಯಿಸ್, ೪. ಹೈಪಾರ್ಕ್ ಪುಸ್ತಕ ಸಂಗ್ರಹಾಲಯ, ಡುಂಡಾ ಸ್ಟ್ರೀಟ್, ಟೊರಾಂಟೋ ನಗರ. ೫. ಡುಂಡಾ ಸ್ಟ್ರೀಟ್ ರೈಲ್ವೆ ನಿಲ್ದಾಣ. ೬. ಸ್ವಾಮಿನಾರಾಯಣ ದೇವಸ್ಥಾನ, ಟೊರಾಂಟೋ. ೭. ಒನ್ ಡಾಲರ್ ವ್ಯಾಪಾರ ಮಳಿಗೆ. ಬಹುಮಹಡಿ ಹೌಸಿಂಗ್ ಕಾಂಪ್ಲೆಕ್ಸ್,ಟೊರಾಂಟೊ. ೮. ಪ್ರಾರ್ಥನಾ ಸಮಾಜ್ ಮಂದಿರ, ಟೊರಾಂಟೋ. ಇತ್ಯಾದಿ. ಮುಂಬಯಿ ನಗರದ ವಸ್ತ್ರೋದ್ಯಮದ ಬಗ್ಗೆ, ಮುಂಬೈ ನಗರದ ಇತಿಯಾಸವನ್ನು ಆಳವಾಗಿ ಅಭ್ಯಾಸಮಾಡಿದ್ದೇನೆ,ಮತ್ತು ಮುಂಬೈನ ಕಟ್ಟಡಗಳ ಬಗ್ಗೆ ಬಹಳ ಓದಿಕೊಂಡಿದ್ದೇನೆ.

ಕರ್ಣಾಟಕ ಸಂಗೀತಕಾರರ ತಪ್ಪು ಉಚ್ಛಾರಣೆಗಳನ್ನು 'ಫೇಸ್ಬುಕ್' ನಲ್ಲಿ ಸಮಯಬಂದಾಗ ಒತ್ತಿ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದೇನೆ. ಡಾ. ಬಾಲಮುರುಳಿ ಕೃಷ್ಣ, ಪಟ್ಟಮ್ಮಾಳ್, ಮುಂತಾದ ಮಹಾನ್ ಸಂಗೀತಗಾರರೂ ಸಂಸ್ಕೃತ ಮತ್ತು ಬೇರೆ ಭಾಷೆಗಳ ಪದಗಳನ್ನು ಬಹಳ ಕೆಟ್ಟದಾಗಿ ಬಳಸಿದ್ದಾರೆ. ಡಾ.ಎಮ್.ಎಸ್.ಸುಬ್ಬುಲಕ್ಷ್ಮಿಯವರೊಬ್ಬರು ಅದಕ್ಕೆ ಅಪವಾದ. ಅವುಗಳನ್ನು ಮುಕ್ತವಾಗಿ ನಾನು ಫೇಸ್ಬುಕ್ ನಲ್ಲಿ ಟೀಕೆಮಾಡಿದ್ದೇನೆ.

'ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯೇಮ್' ಎಂದು ಇದ್ದ ಹೆಸರನ್ನು ಮರಾಠಿಗರು 'ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯ್' ಎಂದು ಬದಲಾಯಿಸಿದರು. ನಾನು ಮೊದಲೇ ಇಂಗ್ಲೀಷ್ ವಿಕಿಪೀಡಿಯದ ನಿರ್ವಾಹಕರಿಗೆ ಬದಲಾಯಿಸಿ ಎಂದು ಬರೆದೆ. ಆದರೆ ಅವರು, ಇಲ್ಲ. ವಿಶ್ವದಾದ್ಯಂತ ಪ್ರಿನ್ಸ್ ಆಫ್ ವೇಲ್ಸ್ ಅಂತಲೇ ಇದೆ. ಸಾಧ್ಯವಿಲ್ಲ. ಎಂದು ನನಗೆ ಸೂಚಿಸಿದರು. ಆದರೆ ನಂತರ, ಸ್ವಲ್ಪ ಸಮಯದ ಬಳಿಕೆ ಅವರೇ ಬದಲಾಯಿಸಿದರು. ಇನ್ನು ಚಕ್ರವರ್ತಿ ಜಾರ್ಜ್ ೫ ರ ಪುಥಳಿಯ ಫೋಟೋವನ್ನು ವಿಕಿಪೀಡಿಯದಲ್ಲಿ ಇರದಂತೆ ತೆಗೆದರು. ಶಿವಾಜಿ ಫೋಟೋ ಕಟ್ಟಡದ ಮುಂದೆಯೇ ಹಾಕಿದ್ದಾರೆ. ಶಿವಾಜಿ ಕಾಲ ಯಾವಾಗ  ? ಮತ್ತು ಬ್ರಿಟಿಷರ ಕಾಲ ಯಾವುದು ? ಒಟ್ಟಿನಲ್ಲಿ ಮರಾಠಿ ಪ್ರಭುತ್ವವನ್ನು ಮುಂಬಯಿ ದ್ವೀಪದ ಮೇಲೆ ಹೇರಲು ಹೊಡೆದಾಡಿ, ಎಲ್ಲಜಾಗಗಳಿಗೂ ಶಿವಾಜಿ ಇಲ್ಲವೇ ಜೀಜಾಬಾಯಿ(ವಿಕ್ಟೋರಿಯ ಮತ್ತು ಆಲ್ಬರ್ಟ್ ಮ್ಯೂಸಿಯಂ ಗೆ,'ರಾಣಿಬಾಗ್' ಅಂತ ನಾಮಕರಣ ಮಾಡಿದ್ದಾರೆ. ಅಲ್ಲಿ ಬಾಲಕ ಶಿವಾಜಿಯನ್ನು ತಾಯಿ ಜೀಜಾಬಾಯಿ ಎತ್ತಿಕೊಂಡಿರುವ ವಿಗ್ರಹವಿದೆ) ನಾನು ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯ ಪುಟದಲ್ಲಿ ಚಕ್ರವರ್ತಿ-೫ ನೆಯವರ ಪುಥಳಿಯ ಫೋಟೋ ಕ್ಲಿಕ್ಕಿಸಿ ಹಾಕಿದ್ದೇ ಅಲ್ಲದೆ, ಅದಕ್ಕೆ ಕಾರಣವನ್ನು ತಿಳಿಸಿ ನೋಟ್ ಬರೆದಿದ್ದೇನೆ. ಕೆಲವು ತೃಟಿಗಳನ್ನೂ ಸರಿಪಡಿಸಿದ್ದೇನೆ. ನಾನು ಬರೆದ ಕಾಲಘೋಡ ಲೇಖನ ಇವತ್ತಿಗೂ ಮಾಹಿತಿಪೂರ್ಣವಾಗಿದೆ. ಧನ್ಯವಾದಗಳು.

Start a discussion about ನಾಗ್ರಾಜ್ ಮಂಜುಳೆ

Start a discussion