ಚರ್ಚೆಪುಟ:ತೆಲಂಗಾಣ
- ತೆಲಂಗಾಣ ಹೊಸ ಶಕೆ ಬಿಡುಗಡೆ ಸಂಭ್ರಮ
- 1947ರ ಆಗಸ್ಟ್ ೧೫ರಂದು ಭಾರತದ ಜನ ದಾಸ್ಯದಿಂದ ಬಿಡುಗಡೆಗೊಂಡು ಯಾವ ಸಂಭ್ರಮ, ಸಂತಸ ಅನುಭವಿಸಿದ್ದರೋ ಅದೇ ಭಾವದಲ್ಲಿ ತೆಲಂ¬ಗಾಣದ ಜನ ಸಹ ತೇಲುತ್ತಿದ್ದಾರೆ. ಆದರೆ, ವ್ಯತ್ಯಾಸ ಇಷ್ಟೆ. ಭಾರತವನ್ನು ಬ್ರಿಟಿಷ್ ವಸಾಹತುಶಾಹಿಗಳು ಆಳಿದ್ದರೆ, ತೆಲಂಗಾಣದ ಜನ ತಮ್ಮದೇ ಜನರಿಂದ ಶೋಷಣೆಗೆ ಒಳಗಾಗಿದ್ದರು.
ಹಕ್ಕುಬದ್ಧವಾಗಿ ಅವರಿಗೆ ಸಿಗಬೇಕಿದ್ದ ಸವಲತ್ತು¬ಗಳನ್ನು ನಿರಾಕರಿಸಲಾಗಿತ್ತು. ಆ ಜನರ ಗುರುತನ್ನು ಅಳಿಸಿಹಾಕಲಾಗಿತ್ತು. ಅವರ ಪರಂಪರೆ, ಸಂಪ್ರದಾಯ¬ವನ್ನು ಅವಮಾನಿಸಲಾಗುತ್ತಿತ್ತು. ಅವರ ಸಂಸ್ಕೃತಿ¬ಯನ್ನು ಉಪೇಕ್ಷಿಸಲಾಗಿತ್ತು. ಅವರ ಭಾಷೆಯನ್ನು ದಮನಿಸಲಾಗಿತ್ತು. ಅವರೊಂದಿಗೆ ನೆಲ, ಜಲ ಹಂಚಿ¬ಕೊಂಡಿದ್ದ ತೆಲುಗು ಜನರೇ ಈ ಅನ್ಯಾ¬ಯಕ್ಕೆ ಕಾರಣ¬ರಾಗಿದ್ದರು. ಪ್ರಜಾ¬ಪ್ರಭುತ್ವ¬ದಲ್ಲಿ ಪ್ರತಿಯೊಬ್ಬರಿಗೂ ಘನತೆ ಹಾಗೂ ಆತ್ಮವಿಶ್ವಾಸದಿಂದ ಬದುಕುವ ಹಕ್ಕಿದೆ ಎಂಬ ನಂಬಿಕೆ ಹೊಂದಿದವರೆಲ್ಲ ತೆಲಂಗಾಣ ಜನರಿಗಾದ ಈ ಅನ್ಯಾಯವನ್ನು ಖಂಡಿಸಲೇಬೇಕು.
- ಆಂಧ್ರದ ಆಳುವ ವರ್ಗ ಹಾಗೂ ಆಂಧ್ರದ ಜನರಿಂದಲೇ ತುಂಬಿ¬ಹೋಗಿ¬ರುವ ಮಾಧ್ಯಮಗಳು ಪ್ರತ್ಯೇಕ ತೆಲಂ¬ಗಾಣದ ವಿರುದ್ಧ ಎಬ್ಬಿಸಿದ್ದ ಕೂಗಿನಲ್ಲಿ ಐತಿಹಾಸಿಕ ತಪ್ಪೊಂದನ್ನು ಸರಿಪಡಿಸಲಾ¬ಗುತ್ತಿದೆ ಎಂಬ ಅಂಶ ಮರೆಯಾಗಿ¬ಹೋಯಿತು.
ರಾಜ್ಯ ಪುನರ್ರಚನಾ ಆಯೋಗದ ಶಿಫಾರಸಿಗೆ ವಿರುದ್ಧ¬ವಾಗಿ ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾ¬ಬಾದ್ ಸಂಸ್ಥಾ¬ನದ ಭಾಗವಾಗಿದ್ದ ತೆಲಂಗಾಣವನ್ನು ಆಂಧ್ರ ರಾಜ್ಯದಲ್ಲಿ ವಿಲೀನಗೊಳಿಸಲಾ¬ಯಿತು ಎಂಬುದನ್ನು ನಾವು ಮರೆಯ¬ಬಾರದು. ಆಂಧ್ರದ ಬುದ್ಧಿವಂತ, ಅವಕಾಶವಾದಿ ಜನರಿಗೂ ತೆಲಂಗಾಣದ ಮುಗ್ಧರಿಗೂ ಹೋಲಿಕೆ ಮಾಡಲಾಗದು ಎಂಬ ಸತ್ಯ ಗೊತ್ತಿದ್ದರಿಂದಲೇ ಪ್ರಧಾನಿ ಜವಾಹರಲಾಲ್ ನೆಹರೂ ಸಹ ತೆಲಂಗಾಣವನ್ನು ಆಂಧ್ರದಲ್ಲಿ ವಿಲೀನ¬ಗೊಳಿಸುವ ಪ್ರಸ್ತಾಪದ ಕುರಿತು ಆಕ್ಷೇಪ ಎತ್ತಿದ್ದರು. ರಾಜ್ಯ ಪುನರ್ರಚನಾ ಆಯೋಗವೂ ಸಹ ಕರಾವಳಿ ಆಂಧ್ರದ ಉದ್ಯಮಶೀಲ ಜನ ತೆಲಂಗಾಣವನ್ನು ತಮ್ಮ ವಸಾ¬ಹತಾಗಿ ಪರಿವರ್ತಿಸಿಕೊಳ್ಳಬಹುದು ಎಂಬ ಅಂಜಿಕೆ ವ್ಯಕ್ತಪಡಿಸಿತ್ತು.
- ಆದರೆ, ತೆಲಂಗಾಣ ಭಾಗದಲ್ಲಿ ಜಮೀನ್ದಾರರ ವಿರುದ್ಧ ತಲೆ ಎತ್ತಿದ್ದ ಕಮ್ಯುನಿಸ್ಟ್ ಚಳವಳಿಯನ್ನು ಬಗ್ಗುಬಡಿಯಲೆಂದೇ ಅದನ್ನು ವಿಲೀನಗೊಳಿಸ¬ಲಾ ಯಿತು. ಆ ಚಳವಳಿ ಸಾಮಾನ್ಯ ಜನರನ್ನು ಆಕರ್ಷಿಸ¬ತೊಡಗಿತ್ತು ಹಾಗೂ ಭೂಮಾಲೀಕರಲ್ಲಿ ನಡುಕ ಹುಟ್ಟಿ¬ಸಿತ್ತು. ತೆಲಂಗಾಣ ರಾಜ್ಯ ರಚನೆ ಆಗದೇ ಇದ್ದಲ್ಲಿ ಕಮ್ಯುನಿಸ್ಟರು ಗ್ರಾಮೀಣ ಭಾಗದಲ್ಲಿ ತಮ್ಮ ಬಲ ಕ್ರೋಡೀಕರಿಸಿ¬ಕೊಳ್ಳುತ್ತಿದ್ದರು. ಅಲ್ಲದೇ ಆಗಷ್ಟೇ ಅಧಿಕಾರದ ಫಲವನ್ನು ಅನುಭವಿಸುತ್ತಿದ್ದ ರಾಷ್ಟ್ರೀಯ ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಯಾಗಿ ಬೆದರಿಕೆ ಒಡ್ಡುತ್ತಿದ್ದರು.
- ತೆಲಂಗಾಣದ ಜನ ಇಚ್ಛಿಸಿದಲ್ಲಿ ಅವರು ಭವಿಷ್ಯದಲ್ಲಿ ಪ್ರತ್ಯೇಕಗೊಳ್ಳಬ¬ಹುದು ಎಂದು ನೆಹರೂ ಶಿಫಾರಸು ಮಾಡಿದ್ದರು. ಆದರೆ, ಆಂಧ್ರವನ್ನು ಅಪ್ಪಿ¬ಕೊಂಡಿದ್ದು ತೆಲಂಗಾಣಕ್ಕೆ ಮಾರಣಾಂತಿ¬ಕ¬ವಾಗಿ ಪರಿ¬ಣ¬ಮಿಸಿತು. ವರಮಾನ ಹಂಚಿಕೆ, ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಉದ್ಯೋಗ, ಉರ್ದುವಿಗೆ ಸ್ಥಾನಮಾನ, ರಾಜಕೀಯ ಅಧಿಕಾರದ ಹಂಚಿಕೆ ಸೇರಿದಂತೆ ತೆಲಂ ಗಾಣದ ಜನರ ಹಿತಾಸಕ್ತಿಗಳನ್ನು ರಕ್ಷಿಸಲು ನೀಡಿದ ಭರವಸೆ ಗಳನ್ನೆಲ್ಲ ಮುಂದಿನ ಆರು ದಶಕಗಳ ಕಾಲ ಸತತವಾಗಿ ಉಲ್ಲಂಘಿಸಲಾಯಿತು.
- ತೆಲಂಗಾಣಕ್ಕೆ ಏನನ್ನೂ ನೀಡದೇ ನೀರು, ಕಲ್ಲಿದ್ದಲು ಇತ್ಯಾದಿ ಸಂಪನ್ಮೂಲಗಳನ್ನು, ತೆರಿಗೆಯಿಂದ ಬಂದ ಆದಾಯವನ್ನು ಕರಾವಳಿ ಆಂಧ್ರಕ್ಕೆ ಹಂಚಿಕೆ ಮಾಡಲಾಯಿತು.
- ಶಿಕ್ಷಣ, ಆರೋಗ್ಯ ಸೇವೆ, ಸಾರಿಗೆ, ಕೈಗಾರಿಕೆ ಎಲ್ಲ ದರಲ್ಲೂ ಜಾಗತಿಕ ಮಟ್ಟದ ಸೌಲಭ್ಯ, ಅಪಾರ ನೈಸ¬ರ್ಗಿಕ ಸಂಪನ್ಮೂಲ ಇದ್ದರೂ ಈ ಪ್ರಾಂತ್ಯ ಸಾಮಾ¬ಜಿಕ¬ವಾಗಿ, ಆರ್ಥಿಕವಾಗಿ ಅತ್ಯಂತ ಕೆಳಮಟ್ಟಕ್ಕೆ ಇಳಿಯಿತು.
- ಮೂಲಸೌಕರ್ಯಗಳ ಉದ್ದೇಶ¬ಪೂರ್ವಕ ಕಡೆ ಗಣನೆ, ಸರ್ಕಾರಿ ಸಂಸ್ಥೆಗಳ ವ್ಯವಸ್ಥಿತ ನಿರ್ಲಕ್ಷ್ಯ, ತೆಲಂ ಗಾಣದ ಜನರು ಆಲಸಿಗಳು, ಅಪರಾಧಿಗಳು, ಹಿಂದು ಳಿದವರು, ಕ್ರೌರ್ಯ ತುಂಬಿ¬ಕೊಂಡ¬ವರು ಎಂದು ಬೇಕೆಂದೆ ಹಣೆಪಟ್ಟಿ ಹಚ್ಚಿದ್ದು ಎರಡು ಭಾಗಗಳ ಜನರ ನಡುವೆ ದೊಡ್ಡ ಕಂದಕವನ್ನೇ ಉಂಟುಮಾಡಿತು.
- ಶೋಷಣೆಯ ಜತೆಗೆ ತೆಲಂಗಾಣದ ಜನರ ಮೇಲೆ ರಾಜಕೀಯವಾಗಿ, ಆರ್ಥಿಕವಾಗಿ ಸವಾರಿ ಮಾಡ ಲಾಯಿತು. ರಾಜಕಾರಣಿಗಳು ಬಂಡವಾಳ¬ಶಾಹಿ¬ಗಳಾಗಿ, ಬಂಡವಾಳಶಾಹಿಗಳು ರಾಜಕೀಯಕ್ಕೆ ಇಳಿದ ಮೇಲೆ ತೆಲಂಗಾಣದ ಮುಗ್ಧರ ಮೇಲೆ ಬಲ ಹಾಗೂ ಅಧಿಕಾರ ಚಲಾಯಿಸಲು ಇಬ್ಬರ ನಡುವೆ ಅಪವಿತ್ರ ಮೈತ್ರಿ ಮಾಡಿಕೊಂಡರು.
- ಅಪ್ಪಟ ವಸಾಹತುಶಾಹಿಗಳ ತರಹ ಅವರು ಹೈದ¬ರಾಬಾದನ್ನು ಅತಿಕ್ರಮಿಸಿಕೊಂಡರು. ಅದರಿಂದ ಲಾಭ ಮಾಡಿಕೊಂಡರು ಹಾಗೂ ಅದು ತಮ್ಮದು ಎಂದು ಸಾಧಿಸಿದರು. ತಾವೇ ಅದನ್ನು ‘ನಿರ್ಮಿಸಿ’ದ್ದರಿಂದ ಅಲ್ಲಿನ ಜನರಿಗೇ ಅದನ್ನು ಮರಳಿಸಲು ನಿರಾಕರಿಸಿದರು.
ವಿಭಜನೆ ನಂತರ ಈಗ ವಿಚಿತ್ರ ಸನ್ನಿವೇಶ ಉಂಟಾಗಿದೆ. ಶೋಷಣೆ ಮಾಡಿ¬ದವರು, ಅತಿಕ್ರಮಣ ಮಾಡಿ¬ದವರು ಸಹಾನುಭೂತಿ ಯಾಚಿಸುತ್ತಿ¬ದ್ದಾರೆ. ವಿಶೇಷ ಸ್ಥಾನಮಾನ ಬೇಕು ಎಂದು ಬೇಡಿಕೆ ಮುಂದಿಟ್ಟು ಅದನ್ನು ಗಿಟ್ಟಿಸಿಕೊಂಡಿದ್ದಾರೆ.
- ಆಂಧ್ರದ ಭಾಗ ಈಗ ವಿಶೇಷ ಸ್ಥಾನ ಪಡೆದಿದೆ. ತೆರಿಗೆ ವಿನಾಯಿತಿ, ರಾಷ್ಟ್ರ ಮಟ್ಟದ ಸಂಸ್ಥೆಗಳು, ಅಭಿವೃದ್ಧಿಗಾಗಿ ಹೂಡಿಕೆ, ರಾಜಧಾನಿ ನಿರ್ಮಿಸಿ¬ಕೊಳ್ಳಲು ವಿಶೇಷ ನಿಧಿ...ಎಲ್ಲವೂ ದೊರಕಿದೆ.
- ಶೋಷಣೆ ಮುಂದುವರಿಸಲು ಅವಕಾಶ ಮಾಡಿ ಕೊಡದೇ ಇದ್ದು¬ದಕ್ಕಾಗಿ ವಸಾಹತುಶಾಹಿಗಳು ತಮಗೆ ಅನ್ಯಾಯ ಮಾಡಲಾಗಿದೆ ಎಂಬ ಭಾವದಲ್ಲಿ ಇದ್ದಾರೆ. ತಮ್ಮ ವಸಾಹತನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ಅವರಿಗೆ ಪರಿಹಾರ ನೀಡಲಾಗಿದೆ. ತಮ್ಮದಲ್ಲದ್ದನ್ನು ಪಡೆಯಲು ತೋಳ್ಬಲ ಬಳಸುವ ಮಾಫಿಯಾದಂತೆ, ಮಾಲೀಕರಿಗೆ ಅವರದ್ದೇ ಆಸ್ತಿಯನ್ನು ಹಿಂದಿರುಗಿಸಲು ಪರಿಹಾರ ಕೇಳುವ ಗೂಂಡಾ ಬಾಡಿಗೆದಾರರಂತೆ ಆಂಧ್ರದವರು ವರ್ತಿಸಿದ್ದಾರೆ.
- ಪ್ರತ್ಯೇಕ ರಾಜ್ಯದಿಂದಾಗಿ ತೆಲಂಗಾಣದಲ್ಲಿ ಎಲ್ಲ ಬಗೆಯ ಶೋಷಣೆ, ದೌರ್ಜನ್ಯಗಳು ಕೊನೆಗಾಣುತ್ತವೆ ಅಂದಲ್ಲ ಅಥವಾ ಕ್ಷಣಮಾತ್ರದಲ್ಲಿ ಆ ಭಾಗದ ಬಡ ಮಹಿಳೆಯ ಸಬಲೀಕರಣ ಸಾಧ್ಯ¬ವಾಗುತ್ತದೆ ಅಂದಲ್ಲ.
- ಅದೇ ಕಾಲಕ್ಕೆ, ಆಕೆ ಈಗ ತನಗೆ ತಾನೇ ಯಜ ಮಾನಳು ಎಂಬ ಸತ್ಯವನ್ನೂ ಅದು ನಿರಾಕರಿಸು ವುದಿಲ್ಲ. ಹೊಸ ತೆಲಂಗಾಣವನ್ನು ಕಟ್ಟುವಾಗ ದುರ್ಬಲರು ತಮ್ಮ ಪರಾವಲಂಬಿತನವನ್ನು ಬಿಟ್ಟು ತಮ್ಮ ಬದುಕಿನ ಮೇಲೆ, ಜೀವನೋಪಾಯದ ಮೇಲೆ ನಿಯಂತ್ರಣ ಸಾಧಿಸಿಕೊಳ್ಳಬೇಕು. ‘ನೀ ಕಾಳ್ಳು ಮೊಕ್ಕುತಾ, ಬಾಂಚಾನಾ’ ಎಂದು ಆಕೆ ಈಗ ಹೇಳುವಂತಿಲ್ಲ. (ಅಂದರೆ ‘ನಾನು ನಿಮ್ಮ ಗುಲಾ¬ಮಳು, ನಿಮ್ಮ ಕಾಲಿಗೆ ಬೀಳು¬ತ್ತೇನೆ’ ಎಂದರ್ಥ. ತೆಲಂ¬ಗಾಣ¬ದಲ್ಲಿ ಬಡವರು ಸಾಮಾ ನ್ಯವಾಗಿ ಹೇಳುವ ಮಾತು ಅದು.)
ತೆಲಂಗಾಣದ ಸಾಮಾನ್ಯ ಮಹಿಳೆಯ ಕನಸು ನಿಜವಾಗಬೇಕಾದರೆ ಬಹುದೂರ ಸಾಗಬೇಕಿದೆ. ಅಮೆ ರಿಕದ ಕವಿ ರಾಬರ್ಟ್ ಫ್ರಾಸ್ಟ್ ಹೇಳಿದ ಕವನದ ಸಾಲುಗಳನ್ನು ಆಕೆ ಮತ್ತೆ, ಮತ್ತೆ ನೆನಪಿಸಿಕೊಳ್ಳಬೇಕಿದೆ.
- ಜವಾಹರಲಾಲ್ ನೆಹರೂ ಮೃತರಾದಾಗ ಅವರ ಪಕ್ಕದಲ್ಲಿ ಈ ಕವನದ ಸಾಲುಗಳನ್ನು ಗೀಚಿದ ಕಾಗದದ ತುಣುಕು ದೊರಕಿತ್ತು.
- ಕಾನು ಸುಂದರವಾಗಿದೆ, ದಟ್ಟ ಕತ್ತಲೆಯಿಂದ ಕೂಡಿದೆ.
- ಆದರೆ, ನಾನು ಮಾತುಗಳನ್ನು ಉಳಿಸಿಕೊಳ್ಳಬೇಕಿದೆ,
- ನಿದ್ದೆಗೆ ಜಾರುವ ಮುನ್ನ ಮೈಲುಗಟ್ಟಲೇ ಕ್ರಮಿಸಬೇಕಿದೆ, ಮೈಲುಗಟ್ಟಲೇ ಕ್ರಮಿಸಬೇಕಿದೆ.
- (ಲೇಖಕಿ: ಪತ್ರಕರ್ತೆ ಹಾಗೂ ಮಾಧ್ಯಮ ಶಿಕ್ಷಣ ತಜ್ಞೆ) ಆರ್. ಅಖಿಲೇಶ್ವರಿ ದಿ. 03/08/2014/ ಪ್ರಜಾವಾಣಿ