ವಿಷಯಕ್ಕೆ ಹೋಗು

ಚರ್ಚೆಪುಟ:ಕೋಟಿ ಚೆನ್ನಯ ಥೀಮ್ ಪಾರ್ಕ್, ಕಾರ್ಕಳ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೋಟಿ ಚೆನ್ನಯ ಥೀಮ್ ಪಾರ್ಕ, ಕಾರ್ಕಳ

ಅನಾದಿ ಕಾಲದಿಂದ ಕನ್ನಡ ಹಾಗೂ ತುಳುವ ಜನರು ನಂಬಿಕೊಂಡು ಬಂದಿರುವಂಥ ತುಳು ಜನಪದ ಕಥೆ ಕೋಟಿ ಚೆನ್ನಯರ ಕಥೆ. ಈ ಕಥೆಯನ್ನು ಅಡಿಪಾಯವಾಗಿಟ್ಟುಕೊಂಡು ಕನಾರ್ಟಕದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಕೋಟಿ ಚೆನ್ನಯ ಥೀಮ್ ಪಾರ್ಕೊಂದನ್ನು ನಿರ್ಮಿಸಲಾಗಿದೆ. ತುಳವ ಜನರು ಕೋಟಿ ಚೆನ್ನಯರನ್ನು ದೇವರುಗಳೆಂದು ನಂಬಿಕೊಂಡು ಬಂದಿರುವ ಹಿನ್ನಲೆಯಲ್ಲಿ ಈ ಪಾರ್ಕ್ ತುಳುನಾಡಿನ ಈ ಅದಮ್ಯ ಪರಂಪರೆಯ ನಿಶಾನೆಯಾಗಿ ನಿಂತಿದೆ. ತುಳುನಾಡಿನ ಐತಿಹಾಸಿಕ ವಸ್ತು ಸಂಗ್ರಹಾಲಯದೊಂದಿಗೆ, ೫ ಅಡಿ ಎತ್ತರದ ಪೀಠದ ಮೇಲೆ ಸ್ಥಾಪಿಸಲಾದ ಹತ್ತು ಅಡಿ ಎತ್ತರವುಳ್ಳ ಕೋಟಿ ಚೆನ್ನಯರ ಶಿಲಾ ಮೂರ್ತಿಗಳನ್ನೂ ಈ ಫಾರ್ಕ್ ಹೊಂದಿದೆ.ಕಾರ್ಕಳದ ಶಿಲ್ಪಿ ಜಯರಾಜ ಆಚಾರ್ಯ ಈ ಶಿಲ್ಪಗಳನ್ನು ಕೆತ್ತಿರುತ್ತಾರೆ.

ತುಳುವ ಜನರು ನಂಬಿಕೊಂಡು ಬಂದಿರುವ ಪ್ರಕಾರ, ಕೋಟಿ ಚೆನ್ನಯರು ಜಾತಿ ಪದ್ಧತಿಯಲ್ಲಿ ಅತೀ ಕೆಳಮಟ್ಟದಿಂದ ಬಂದವರಾದರೂ, ತಮ್ಮ ಪ್ರಾಂತ್ಯದ ಆಧುನಿಕ ಚಿಂತಕರಾಗಿಯೂ,ನ್ಯಾಯ ಪ್ರವರ್ತಕರಾಗಿಯೂ, ಊರವರ ಆಪತ್ಭಾಂಧವರಾಗಿಯೂ ಇದ್ದರು.ಇವರ ಗಾಥೆ ಹಾಗೂ ತುಳು ಜನತೆಯ ಪುರಾತನ ಜೀವನಕ್ರಮದ ಪುರಾವೆಗಳನ್ನು ಉಳಿಸುವ ಉದ್ದೇಶದಿಂದ ಕೋಟಿ ಚೆನ್ನಯ ಥೀಮ್ ಪಾರ್ಕನ್ನು ೧೦೦ ಎಕರೆ ಜಾಗದಲ್ಲಿ, ರಾಜ್ಯ ಸರಕಾರದ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪಾರ್ಕನ್ನು ಜನವರಿ ೨೮, ೨೦೧೨ರಂದು ಕರ್ನಾಟಕದ ಅಂದಿನ ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡರವರು ಉದ್ಘಾಟಿಸಿದ್ದರು

ಚಿತ್ರ:Http://www.daijiworld.com/news/news disp.asp?n id=128506

. ಅದೇ ಪ್ರದೇಶದಲ್ಲಿ ಔಷದೀಯ ಗಿಡಮೂಲಿಕೆಗಳ ಉದ್ಯಾನವನ್ನೂ ನಿರ್ಮಿಸಿ, ಅದನ್ನು 'ತಾಯಿ ದೇಯಿ ಬೈದೆತಿ' (ಕೋಟಿ ಚೆನ್ನಯರ ತಾಯಿಯ) ಹೆಸರಿನೊಂದಿಗೆ ಲೋಕಾರ್ಪಣೆ ಮಾಡಬೇಕು ಎಂಬ ಪ್ರಸ್ತಾಪವನ್ನೂ ಅಂದು ಮಾಡಲಾಗಿತ್ತು.

ಪಾರ್ಕನಲ್ಲಿರುವ ವಸ್ತು ಸಂಗ್ರಹಾಲಯದ ಪ್ರವೇಶದಲ್ಲೇ 'ಗುತ್ತಿನಮನೆ ಹೆಬ್ಬಾಗಿಲು ಚಾವಡಿ'ಯನ್ನು ಕಾಣಬಹುದು. ಗೋಡೆಗಳ ಮೇಲೆ ತುಳು ಪರಂಪರೆಯ ಆಟೋಟ (ಕಂಬಳ) ಹಾಗೂ ಇನ್ನಿತರ ಜೀವನಶೈಲಿಗಳ ಚಿತ್ರಗಳನ್ನು ಕಾಣಬಹುದು. ತುಳು ಸಮುದಾಯಗಳಲ್ಲಿ ಕಾಣಬಹುದಾದಂಥಹ ಕಾವಿ ಕಳೆ, ಹಾಗೂ ಸಾಂಸ್ಕೃತಿಕ ಮನೆಗಳ ರಚನಾಶೈಲಿಯನ್ನೇ ಇಲ್ಲಿನ ವಸ್ತು ಸಂಗ್ರಹಾಲಯದ ರಚನೆಯಲ್ಲಿ ಬಳಸಲಾಗಿದೆ. ಅಲ್ಲದೆ, ಕನ್ನಡ ಹಾಗೂ ತುಳು ಸಂಸ್ಕೃತಿಗಳ ಪ್ರತೀಕಗಳಾಗಿರುವ 'ನಂದಿಕೇಶ್ವರ', 'ವೀರಭದ್ರ', 'ಗೊಮ್ಮಟ ಮಲ್ಲ', 'ಸಂಸಾರ ಬ್ರಹ್ಮ', ಹಾಗೂ ಇನ್ನಿತರ ಪುಥ್ಥಳಿಗಳನ್ನೂ, ಹಾಗೂ ದಿನನಿತ್ಯದ ಉಪಯೋಗದ ಹಳೆ ಸಾಮಾಗ್ರಿಗಳನ್ನೂ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದು.

ಪಾರ್ಕನಲ್ಲಿ ದೈವಾರಾಧನೆಯ ಗುಡಿಯಾದ 'ಗರೋಡಿ'ಯ ಮಾದರಿಯೂ ಇದ್ದು, ಪೂರ್ತಿ ಸಂಗ್ರಹಾಲಯದ ಪರಿಶೀಲನೆ ನಡೆಸಿದರೆ, ಕೋಟಿ ಚೆನ್ನಯರ ಜೀವನವನ್ನು ಬಿಂಬಿಸುವ ೧೪೩ ಚಿತ್ರಣಗಳನ್ನು ಕಾಣಬಹುದು.

ಈ ಪಾರ್ಕಗೆ ಜನಸಾಮಾನ್ಯರಿಗೆ ಉಚಿತ ಪ್ರವೇಶವಿದೆ. ಇತ್ತೇಚೆಗೆ, ಈ ಪಾರ್ಕನ ಉಸ್ತುವಾರಿಯಲ್ಲಿ ನಿರ್ಲಕ್ವದ ದೂರುಗಳು ಸಾಮಾನ್ಯವಾಗಿ ಕೇಳಿಬರುತ್ತಿವೆ.

ಉಲ್ಲೇಖಗಳು

[ಬದಲಾಯಿಸಿ]


http://www.nammabhoomi.com/koti-chennaya-theme-park-karkala/


http://www.thehindu.com/todays-paper/tp-national/tp-karnataka/theme-park-reflects-architecture-of-tulunadu/article2844063.ece

ಲೇಖನ ಚೆನ್ನಾಗಿದ್ದು ಇನ್ನೂ ಸ್ವಲ್ಪ ವಿಸ್ತೃತವಾಗಿ ಡೀಟೇಲ್ಸ್ ಅನ್ನು ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಹಾಗೆ ಅಲ್ಲಿಯ ಫೋಟೋವನ್ನು ಮರೆಯದೆ ಹಾಕಿ Chittha Jinendra M M (ಚರ್ಚೆ) ೧೦:೧೨, ೧ ಜುಲೈ ೨೦೧೯ (UTC)