ಚರ್ಚೆಪುಟ:ಕೊಡಗಿನ ಚರಿತ್ರೆ
ಕೊಡಗಿನ ಚರಿತ್ರೆ:
ಪಚ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಜಲ್ಲೆಯೇ ಕೊಡಗು. ಇಲ್ಲಿನ ಹೆಚ್ಚು ಜನರು ಆಡುವ ಭಾಷೆಗಳೆಂದರೆ ಕೊಡವ ಮತ್ತು ಅರೆಭಾಷೆ .
ಕರ್ನಾಟಕ ಜನರ ಜೀವನದಿ ಕಾವೇರಿ. ತಲಕಾವೇರಿಯು ಕಾವೇರಿ ನದಿಯ ಉಗಮ ಸ್ಥಾನ. ತಲಕಾವೇರಿಯನ್ನು ಲಕ್ಷಾಂತರ ಜನರು ಆರಾಧಿಸುತ್ತಾರೆ. ಕೊಡಗು ಅರಣ್ಯ ಸಂಪತ್ತಿನಿಂದ ಕೂಡಿದ್ದು, ನಾಗರಹೊಳೆ ಎಂಬ ರಾಷ್ಷೀಯ ಉದ್ಯನವನ ಇಲ್ಲಿದೆ. ಹಾಗು ಇಲ್ಲಿನ ಪ್ರಮುಖ ಬೆಳೆ ಕಾಫಿ.
ಹಾಲೇರಿ ಅರಸುಮನೆತನ:
ಕೊಡಗನ್ನು ಆಳಿದ ಪ್ರಮುಖ ರಾಜವಂಶವೆಂದರೆ ಹಾಲೇರಿ ಅರಸುಮನೆತನ. ೧೭ನೇ ಶತಮಾನದ ಆರಂಭದಲ್ಲಿ ಇದನ್ನು ವೀರರಾಜನು ಸ್ಥಾಪಿಸಿದನು. ಮುಂದೆ,ಮುದ್ದುರಾಜನು ಮುದ್ದುರಾಜಕೇರಿಯನ್ನು ಕಟ್ಟಿಸಿ ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಮುದ್ದುರಾಜಕೇರಿಯೇ ಮಡಿಕೇರಿಯಾಗಿದೆ.ಕೊಡಗನ್ನು ೧೮ನೇ ಶತಮಾನದ ಉತ್ತರಾರ್ಧಾದಲ್ಲಿ ಹೈದರ್ ಅಲಿ ಮತ್ತು ಟ್ಟಿಪ್ಪು ಸುಲ್ತಾನರು ಆಳಿದರು. ಆ ಸಂದರ್ಭದಲ್ಲಿ ಕೊಡಗಿನ ರಾಜನಾಗಿದ್ದ ವೀರರಾಜನು ಟಿಪ್ಪುವಿನ ಬಂಧಿಯಾಗಿದ್ದ. ಅವನ ಕೈಯಿಂದ ತಪ್ಪಿಸಿಕೊಂಡ ವೀರರಾಜನು ಬ್ರಿಟಿಷರ ಸಹಾಯದಿಂದ ಕೊಡಗನ್ನು ವಶಪಡಿಸಿಕೊಂಡನು. ಟಿಪ್ಪುವಿನ ಮರಣಾನಂತರ ಬ್ರಿಟಿಷರು ಮತ್ತು ಕೊಡಗಿನ ಅರಸರು ಸ್ನೇಹದಿಂದಿದ್ದರು.
ಕೊಡಗು ಮತ್ತು ಬ್ರಿಟಿಷರು:
ಕೆಲಕಾಲದ ಬಳಿಕ ಬ್ರಿಟಿಷರು ಕೊಡಗನ್ನು ವಶಪಡಿಸಿಕೊಂಡರು(೧೮೩೪). ಕೊಡಗಿನ ಕೊನೆಯ ಅರಸ ಚ್ಚಿಕ್ಕವೀರರಾಜೇಂದ್ರನನ್ನು ಅವರು ಗಡಿಪಾರು ಮಾಡಿ ಕೊಡಗನ್ನು ತಾವೇ ನೇರವಾಗಿ ಆಳತೊಡಗಿದರು. ಕೊಡಗನ್ನು ವಿಭಜಿಸಿ, ಕೊಡಗಿನ ಭಾಗವಾಗಿದ್ದ ಅಮರಸುಳ್ಯವನ್ನು ಕೆನರಾ ಜಿಲ್ಲೆಗೆ ಸೇರಿಸಿದರು.
ಕೊಡಗಿನ ಕಣ್ಮಣಿಗಳು:
ಕೊಡಗಿನ ಹೆಸರನ್ನು ಜಗತ್ತಿಗೆ ಪರಿಚಯ ಮಾಡಿದವರಲ್ಲಿ ಜನರಲ್ ಕೊಡಂದೆರ ಮಾದಪ್ಪ ಕಾರ್ಯಪ್ಪ ಅವರು ಪ್ರಮುಖರು. ಬ್ರಿಟಿಷರ ಕಾಲದಲ್ಲಿ ಅವರು ಪ್ರಥಮ ಭಾರತೀಯ ಜನರಲ್ ಆಗಿದ್ದವರು. ಸ್ವತಂತ್ರ ಭಾರತದ ಭೂಸೇನೆ,ನೌಕಾದಳ ಮತ್ತು ವಾಯುಪಡೆಗಳಿಗೆ ಮೊದಲ ಅಧಿಪತಿಯಾಗಿದ್ದವರು. ತಮ್ಮ ಆಡಳಿತ ಸಾಹಸ, ಶೌರ್ಯಕ್ಕೆ ಹೆಸರಾದ ಕಾರ್ಯಪ್ಪನವರರಿಗೆ ಫೀಲ್ಡ್ ಮಾರ್ಷಲ್ ಎಂಬ ಅತ್ಯನ್ನತ ಪದವಿಯನ್ನು ನೀಡಲಾಯಿತು.
ಇನ್ನೊಬ್ಬ ಮಹಾನ್ ದೇಶಭಕ್ತ ಕೊಡಗಿನವರಾದ ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ. ಅವರು ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಭಾರತದ ವಿಜಯಕ್ಕೆ ಕಾರಣರಾದರು. ಈ ಇಬ್ಬರು ವೀರರು ಕೊಡಗಿನ ಕಣ್ಮಣಿಗಳೆಂದು ಹೆಸರುವಾಸಿಯಾಗಿದ್ದಾರೆ.ಸೈನ್ಯಶಕ್ತಿಯೊಂದಿಗೆ ಗುರುತಿಸಿಕೊಂಡ ಕೊಡಗು ಕ್ರೀಡೇ, ಸಾಹಸ, ಜನಪದ ಮತ್ತು ಪ್ರಕೃತಿ ಸೌಂದರ್ಯಕ್ಕೂ ಹೆಸರಾಗಿದೆ.
Start a discussion about ಕೊಡಗಿನ ಚರಿತ್ರೆ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಕೊಡಗಿನ ಚರಿತ್ರೆ.