ಚರ್ಚೆಪುಟ:ಕುದುರೆಮುಖ ಶಿಖರ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದಕ್ಕೆ "ಕುದುರೆ ಮುಖ" ಎಂದು ಹೆಸರು ಬರಲು ಕಾರಣವೇನೆಂದರೆ, ಸದರಿ ಪ್ರಾಂತ್ಯದಲ್ಲೇ ಇದು ಅತ್ಯಂತ ಎತ್ತರದ ಶಿಖರವಾಗಿದ್ದು,ಕಲ್ಲುಬಂಡೆ,ಹುಲ್ಲುಗಾವಲು ಹಾಗೂ ಶೋಲಾ ಅರಣ್ಯ ದಿಂದ ಆವೃತವಾಗಿದೆ. ಹಿಂದೆ ಅರಬ್ಬಿ ಸಮುದ್ರದಲ್ಲಿ ಸಮುದ್ರಯಾನ ಮಾಡುತ್ತಿದ್ದವರು ದೂರದಿಂದ ಈ ಶಿಖರವನ್ನು ಗಮನಿಸಿದಾಗ ಕಲ್ಲುಬಂಡೆಗಳಿಂದ ಕೂಡಿದ ಈ ಪ್ರದೇಶವು ಚದುರಂಗ ಆಟದ ಕಾಯಿಯ ಕುದುರೆಯಂತೆ ಕಾಣುತ್ತಿತಂತೆ.ಆದ್ದರಿಂದ ಈ ಶಿಖರವನ್ನು "ಕುದುರೆ ಮುಖ"ವೆಂದು ಕರೆಯತೊಡಗಿದರು.ಈಗಲೂ ಅರಬ್ಬಿ ಸಮುದ್ರ ಮತ್ತು ಜಮಲಾಬಾದ್ ಕೋಟೆಯ ಕಡೆಯಿಂದ ಅಂದರೆ ಬೆಳ್ತಂಗಡಿಯಿಂದ ನೋಡಿದಾಗ ಒಂದು ಕುದುರೆಯು ತನ್ನ ಮುಖವನ್ನು ಆಕಾಶದಡೆಗೆ ಎತ್ತಿದಂತೆ ಕಾಣುತ್ತದೆ. ಸದರಿ ‌ಕಲ್ಲುಬಂಡೆಯಿಂದ ಕೂಡಿದ ಪ್ರದೇಶವನ್ನು ಹುಲ್ಲುಗಾವಲು ಹಾಗೂ ಶೋಲಾ ಅರಣ್ಯವು ಸುತ್ತುವರಿದ್ದಿದ್ದು,ಅವುಗಳ ನಡುವೆ ಸುಂದರವಾದ "ಊಹಾತ್ಮಕ " ಕುದುರೆ ಮುಖವು ಗೋಚರಿಸುತ್ತದೆ. ಈ ಪ್ರಕೃತಿಯ ಸೌಂದರ್ಯ, ರುದ್ರರಮಣೀಯತೆಯು ಪ್ರಪಂಚದ ಬೇರಡೆ ಎಲ್ಲೂ ಸಿಗುವುದಿಲ್ಲ ಎಂಬುದು ಈ ರಾಜ್ಯಕ್ಕೆ ಹೆಮ್ಮೆತರುವ ವಿಷಯವಾಗಿದೆ.