ಚರ್ಚೆಪುಟ:ಕುದುರೆಮುಖ

ವಿಕಿಪೀಡಿಯ ಇಂದ
Jump to navigation Jump to search

ಕುದುರೆಮುಖ ಶಿಖರ ಅಥವ ಕುದ್ರೆ ಮುಖ್ ಅನ್ನುವುದಕ್ಕಿಂತಲೂ ಕುದುರೆಮುಖ[೧] ಹೆಸರು ಸರಿಯೆಂದು ತೋರುತ್ತದೆ. ಈ ಪುಟವನ್ನು ಕುದುರೆಮುಖ ಪುಟವಾಗಿ ಸ್ಥಳಾಂತರಿಸಬೇಕೆಂದು ನನ್ನ ಅಭಿಪ್ರಾಯ. ತೇಜಸ್ ೦೬:೫೭, ೨೯ ಮಾರ್ಚ್ ೨೦೧೧ (UTC)

ಉಲ್ಲೇಖಗಳು[ಬದಲಾಯಿಸಿ]

  1. ಇಂಗ್ಲಿಷ್ ವಿಕಿಪೀಡಿಯ[೧]

(suMkadavar ೦೩:೩೪, ೧ ಏಪ್ರಿಲ್ ೨೦೧೧ (UTC)) ಕುದುರೆ ಮುಖ ಒಂದು ಚಿಕ್ಕ ಪರ್ವತ. ಅಂತಹ ಪರ್ವತ ಶಿಖರವೇನೂ ಅಲ್ಲ. ಅದರ ಪ್ರಾಮುಖ್ಯತೆಯೆಂದರೆ ಅಲ್ಲಿ ಕಬ್ಬಿಣದ ಅದಿರು ಸಿಗುತ್ತದೆ. ಅಲ್ಲದೆ ಅದೊಂದು ಪರ್ಯಟಕರ ತಾಣ. ಕುದುರೆಮುಖ ಶಿಖರವೆಂದು ಕರೆಯುವ ಪ್ರಮೇಯವೇ ಇಲ್ಲ.

ಇದಕ್ಕೆ "ಕುದುರೆ ಮುಖ" ಎಂದು ಹೆಸರು ಬರಲು ಕಾರಣವೇನೆಂದರೆ, ಸದರಿ ಪ್ರಾಂತ್ಯದಲ್ಲೇ ಇದು ಅತ್ಯಂತ ಎತ್ತರದ ಶಿಖರವಾಗಿದ್ದು,ಕಲ್ಲುಬಂಡೆ,ಹುಲ್ಲುಗಾವಲು ಹಾಗೂ ಶೋಲಾ ಅರಣ್ಯ ದಿಂದ ಆವೃತವಾಗಿದೆ. ಹಿಂದೆ ಅರಬ್ಬಿ ಸಮುದ್ರದಲ್ಲಿ ಸಮುದ್ರಯಾನ ಮಾಡುತ್ತಿದ್ದವರು ದೂರದಿಂದ ಈ ಶಿಖರವನ್ನು ಗಮನಿಸಿದಾಗ ಕಲ್ಲುಬಂಡೆಗಳಿಂದ ಕೂಡಿದ ಈ ಪ್ರದೇಶವು ಚದುರಂಗ ಆಟದ ಕಾಯಿಯ ಕುದುರೆಯಂತೆ ಕಾಣುತ್ತಿತಂತೆ. ಈಗಲೂ ಅರಬ್ಬಿ ಸಮುದ್ರ ಮತ್ತು ಜಮಲಾಬಾದ್ ಕೋಟೆಯ ಕಡೆಯಿಂದ ಅಂದರೆ ಬೆಳ್ತಂಗಡಿಯಿಂದ ನೋಡಿದಾಗ ಒಂದು ಕುದುರೆಯು ತನ್ನ ಮುಖವನ್ನು ಆಕಾಶದಡೆಗೆ ಎತ್ತಿದಂತೆ ಕಾಣುತ್ತದೆ. ಸದರಿ ‌ಕಲ್ಲುಬಂಡೆಯಿಂದ ಕೂಡಿದ ಪ್ರದೇಶವನ್ನು ಹುಲ್ಲುಗಾವಲು ಹಾಗೂ ಶೋಲಾ ಅರಣ್ಯವು ಸುತ್ತುವರಿದ್ದಿದ್ದು,ಅವುಗಳ ನಡುವೆ ಸುಂದರವಾದ "ಊಹಾತ್ಮಕ " ಕುದುರೆ ಮುಖವು ಗೋಚರಿಸುತ್ತದೆ. (ಇದಕ್ಕೆ ಪೂರಕವಾಗಿ ನನ್ನ ಬಳಿ ಅದರ ಹಲವಾರು ಛಾಯಾಚಿತ್ರಗಳು ಇವೆ.)