ಚರ್ಚೆಪುಟ:ಕಾರ್ಲ್ ಲಿನೆಯಸ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ ಪ್ರಿಯಾ ಅವರೆ. ಪ್ರಖ್ಯಾತ ಸಸ್ಯಶಾಸ್ತ್ರಜ್ಞರಾದ ಕಾರ್ಲ್ ಲಿನೆಯಸ್ ಅವರ ಕುರಿತಾದ ಲೇಖನವನ್ನು ಬಹಳ ಅದ್ಭುತವಾಗಿ ರಚಿಸಿದ್ದೀರಿ. ಅವರ ಬಾಲ್ಯ, ಆರಂಭಿಕ ಶಿಕ್ಷಣ ಮತ್ತು ಜೀವನದ ಬಗ್ಗೆ ಸಂಕ್ಷಿಪ್ತವಾದ ವಿವರವನ್ನು ನೀಡಿದ್ದೀರಿ. ಅವರ ಪ್ರಮುಖ ಪ್ರಕಟಣೆಗಳು ಮತ್ತು ಲಿನೆಯಸ್ ಟ್ಯಾಕ್ಸಾನಮಿಯ ಬಗ್ಗೆ ಕನ್ನಡದಲ್ಲಿ ಓದಿ, ಅರ್ಥ ಮಾಡಿಕೊಳ್ಳಲು ಈ ಲೇಖನವು ಉಪಯುಕ್ತವಾಗಿದೆ. ಇಷ್ಟು ಮಾತ್ರವಲ್ಲದೆ ಇವರನ್ನು ಕುರಿತು ಮತ್ತಷ್ಟು ವಿಷಯಗಳಿದ್ದು ಹಾಗು ಇವರಿಗೆ ಸಂಬಂಧ ಪಟ್ಟ ಕೆಲವು ಚಿತ್ರಗಳನ್ನು ಈ ಲೇಖನದಲ್ಲಿ ಅಳವಡಿಸಿದರೆ ಇದೊಂದು ಪರಿಪೂರ್ಣ ಲೇಖನವಾಗುತ್ತದೆ. ಲೇಖನದ ರಚನಾ ಶೈಲಿ ಮತ್ತು ವಿಷಯಗಳು ಉತ್ತಮವಾಗಿದೆ. --N Upasana (ಚರ್ಚೆ) ೧೧:೨೧, ೧೫ ಜನವರಿ ೨೦೧೬ (UTC)