ಚರ್ಚೆಪುಟ:ಕನ್ನಡ ಚಿತ್ರ ಸಂಗೀತ
ಪರಿಷ್ಕರಣೆ
[ಬದಲಾಯಿಸಿ]ಏನಿದು? ಪುಟದ ತುಂಬಾ ಸಂಪರ್ಕಗಳನ್ನೇ ಹಾಕಲಾಗಿದೆ? ಸದ್ಯಕ್ಕೆ ಲೇಖನವನ್ನ ಪರಿಷ್ಕರಣೆಗೆ ಹಾಕುತ್ತಿದ್ದೇನೆ.
- ಈ ಲೇಖನದಲ್ಲಿರುವ ಸಂಗೀತ ನಿರ್ದೇಶಕ, ಗಾಯಕರ ಪಟ್ಟಿ ಈಗಾಗಲೇ ಸುಮಾರು ದಿನಗಳಿಂದ Template ಕನ್ನಡ ಸಿನೆಮಾದಲ್ಲಿತ್ತು, ಒಮ್ಮೆ ಆ Templateನ ಇತಿಹಾಸ ಪುಟವನ್ನು ನೋಡುವುದು. ಅದನ್ನು ಕನ್ನಡ ಸಿನೆಮಾ ಪರಿವಿಡಿ ಮತ್ತು ಕನ್ನಡ ಚಿತ್ರ ಸಂಗೀತ ಎಂದು ಎರಡು ಭಾಗಗಳನ್ನಾಗಿ ಮಾಡಿರುವೆ. Templatesಗಳ ತಪ್ಪು ಬಳಕೆಯ ಬಗ್ಗೆ ಈಗಾಗಲೇ ಎರಡು ಚರ್ಚಾ ಪುಟಗಳಲ್ಲಿ ಬರೆದಿದ್ದನ್ನು ನೀವು ಗಮನಿಸಿಲ್ಲ ಅನ್ನಿಸುತ್ತೆ. ಅದನ್ನೇ ಅರಳೀ ಕಟ್ಟೆಯಲ್ಲಿ ಹಾಕಿದ್ದೆ, ಇನ್ನೂ ಯಾವ ಸಂಪಾದಕರೂ ಅದರ ಬಗ್ಗೆ ಚರ್ಚಿಸುವಂತೆ ಕಂಡಿಲ್ಲ. -ಹಂಸವಾಣಿದಾಸ 23:48, ೩೦ March ೨೦೦೬ (UTC)
- ಟೆಂಪ್ಲೇಟಿನಲ್ಲಿ ಆ ರೀತಿಯ ಪಟ್ಟಿ ಹಾಕುವುದಕ್ಕೂ, ವಿಷಯದ ಪುಟಕ್ಕೇ ಹಾಕುವುದಕ್ಕೂ ವ್ಯತ್ಯಾಸವುಂಟು. ಅದನ್ನ ವಾಪಸ್ ಟೆಂಪ್ಲೇಟು ಮಾಡಿಯೇ ಹಾಕಿ. ಟೆಂಪ್ಲೇಟು ಎಲ್ಲ ಸಂಬಂಧಿತ ಲೇಖನಗಳ ಕೊನೆಯಲ್ಲಿ ಸೇರಿಸಲಾಗುತ್ತದೆ. ಟೆಂಪ್ಲೇಟಿನ ಬಗ್ಗೆ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ನೀವು ಆಂಗ್ಲದ ಸಹಾಯ ಪುಟಗಳನ್ನು ಓದಿಕೊಳ್ಳಬಹುದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 07:47, ೩೧ March ೨೦೦೬ (UTC)
- ಮೇಲಿನ ಚರ್ಚೆಯನ್ನು ಗಮನಿಸಿ, ಟೆಂಪ್ಲೇಟ್‍ಗಳ ಮೂಲೋದ್ದೇಶವಾದ 'reusability' ದೃಷ್ಟಿಯಿಂದ, ಈ ಲೇಖನದಲ್ಲಿದ್ದ ಸಂಪರ್ಕಗಳ ಪಟ್ಟಿಯನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿ ಆಯಾ ಟೆಂಪ್ಲೇಟ್‍ಗಳನ್ನು ರಚಿಸಿರುವೆ(ಸಂಗೀತ ನಿರ್ದೇಶಕರು, ಚಿತ್ರಸಾಹಿತಿಗಳು, ಹಿನ್ನೆಲೆ ಗಾಯಕರು, ಹಿನ್ನೆಲೆ ಗಾಯಕಿಯರು). ಓದುಗರ ದೃಷ್ಟಿಯಿಂದ ಲೇಖನದಲ್ಲಿ ಯಾವುದೇ ವ್ಯತ್ಯಾಸ ಕಾಣದಿದ್ದರೂ ವಿಕಿಪೀಡಿಯನ್ನರ ದೃಷ್ಟಿಯಿಂದ ಸಾಕಷ್ಟು ಬದಲಾವಣೆಯಾಗಿದೆ. 'edit' ಮೋಡ್‍ನಲ್ಲಿ ನೋಡಿದರೆ, ಇದರ ಮಹತ್ವ ತಿಳಿಯುವುದು. ಈಗ ಲೇಖನವು ಸಮಂಜಸವಾಗಿದೆ ಎನಿಸಿದಲ್ಲಿ, ಪರಿಷಕರಣೆ ಟ್ಯಾಗ್ ತೆಗೆಯಬಹುದೆಂದೆಣಿಸುರುವೆ. --ಮನ 17:56, ೩೧ March ೨೦೦೬ (UTC)
- ಹಾಗಲ್ಲ, ಮನೋಹರ್. ಕನ್ನಡ ಸಿನೆಮಾ ಟೆಂಪ್ಲೇಟು ಖಾಲಿಯಾಗಿತ್ತು. ಮುಂಚೆ ಇದ್ದ ಪಟ್ಟಿ ಅಲ್ಲಿಂದ ತೆಗೆದುಹಾಕಲಾಗಿತ್ತು. ಹೊಸ ಟೆಂಪ್ಲೇಟಿಗೆ ಹಾಕುವಾಗ ಹಳೆಯ ಟೆಂಪ್ಲೇಟನ್ನು ಡಿಲೀಶನ್ ಅಥವಾ ಅಳಿಸುವಿಕೆಗೆ ಹಾಕುವ ಕೋರಿಕೆ ಸಲ್ಲಿಸಿ, ಚರ್ಚೆಯಾದ ನಂತರ ಅಳಿಸಬೇಕೆಂದಿದ್ದರೆ ಅಳಿಸುವಿಕೆಗೆ ಹಾಕುವುದು ವಿಕಿ ಪದ್ಧತಿ. ಒಂದು ವಿಷಯ ಎಲ್ಲರೂ ಗಮನಿಸಿ - ಇದುವರೆಗೂ ಕನ್ನಡ ಸಿನೆಮಾ ಎಂಬ ಹೆಸರಿನ ಟೆಂಪ್ಲೇಟನ್ನ ಸಾಕಷ್ಟು ಲೇಖನಗಳಿಗಾಗಲೇ ಸೇರಿಸಿಯಾಗಿದೆ... ಆ ಲೇಖನಗಳಲ್ಲಿ ಖಾಲಿ ಟೆಂಪ್ಲೇಟು ಚೆಂದ ಕಾಣುವುದೆ? ಅದರಲ್ಲೇ ಬಹುಶಃ ವಿಂಗಡಣೆಯೂ ಮಾಡಿ ಮುಂದುವರೆಯಬಹುದಿತ್ತು. ಅಥವಾ ಅಲ್ಲಿ ಪಟ್ಟಿಗಳಿಗೆ ಹೊಸತೊಂದು ವಿಧಾನವನ್ನು propose ಮಾಡಿ ಮುಂದುವರೆಯಬಹುದಿತ್ತು. ಆದರೆ ಮೊದಲಾಗಿ ಇಷ್ಟು ದೊಡ್ಡ ಟೆಂಪ್ಲೇಟುಗಳಾಗುವುವಾದರೆ ಇವಕ್ಕೆ ಟೆಂಪ್ಲೇಟುಗಳೇ ಬೇಡವೆಂದು ಕಾಣುತ್ತದೆ. ಸುಮ್ಮನೆ ಪ್ರತಿ ಲೇಖನದಲ್ಲೂ ದೊಡ್ಡ ಗಾತ್ರದ ಟೆಂಪ್ಲೇಟೇ ಆಗಿ ಹೋಗತ್ತೆ. ಇವುಗಳನ್ನು ಪ್ರಾರಂಭಿಸಿದ ಉದ್ದೇಶಗಳೇನು ಎಂದು ತಿಳಿಸುವ ಪ್ರಯತ್ನ ಇಲ್ಲಿ ಮಾಡಿರುವೆ ಒಮ್ಮೆ ನೋಡಿ. ಚರ್ಚೆ ಮುಂದುವರೆಯಲಿ.
- ಸದ್ಯಕ್ಕೆ ಈ ಪುಟ 'ಕ್ಲೀನಪ್' ಪಟ್ಟಿಯಿಂದ ತೆಗೆಯಬಹುದು. ಆದರೆ ಸಂಪರ್ಕಗಳ ಪಟ್ಟಿಯಷ್ಟೇ ಅಲ್ಲ, ಈ ಲೇಖನದಲ್ಲಿ ಇರುವ ಕೆಲ ವಾಕ್ಯಗಳೇ ಸಾಕಷ್ಟು ಪರಿಷ್ಕರಣೆಗೆ ಒಳಪಡಬೇಕಿದೆ. ಅಷ್ಟೇ ಅಲ್ಲದೆ, ಇಲ್ಲಿ ಸಂಪರ್ಕಗಳಿಗಿಂತ ಹೆಚ್ಚಾಗಿ ಸದ್ಯಕ್ಕೆ ಕನ್ನಡ ಚಿತ್ರ ಸಂಗೀತದ ಇತಿಹಾಸ, ಅದರ ಉಗಮ, ಅದರ golden days ಇವೆಲ್ಲದರ ಬಗ್ಗೆ ಸಾಕಷ್ಟು ಬರೆಯಬೇಕಿದೆ. ಇದು ಕೇವಲ ಪುಟವಷ್ಟೇ ಅಲ್ಲ, ಕನ್ನಡ ಚಿತ್ರ ಸಂಗೀತವೆಂಬ ಲೇಖನವೂ ಹೌದು ಎಂಬುದನ್ನ ಮರೆಯದಿರೋಣ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:32, ೩೧ March ೨೦೦೬ (UTC)
- clarityಗಾಗಿ talk pageಉಗಳಲ್ಲಿ ಶೀರ್ಷಿಕೆ ಸೇರಿಸುವಾಗ ದಯವಿಟ್ಟು ಕಾಮೆಂಟುಗಳ chronology ತೆಗೆದುಹಾಕಬೇಡಿ.-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 21:05, ೩೧ March ೨೦೦೬ (UTC)
- ಆಯಿತು. ಇನ್ನು ಲೇಖನದ ವಿಷಯವನ್ನು ಮುಂದುವರೆಸುತ್ತ.. ಮೊದಲ ಟಾಕೀ ಚಿತ್ರದ ಕಾಲದಿಂದ ಇಲ್ಲಿಯವರೆಗೆ ಚಿತ್ರ ಸಂಗೀತ ನಡೆದು ಬಂದ ದಾರಿಯನ್ನು ಆಗಿರುವ ಅನೇಕಾನೇಕ ಬದಲಾವಣೆಗಳು, ಒಳ್ಳೆಯ ಹಾಗು ಕೆಟ್ಟ ರೀತಿಯವು ಇದರಲ್ಲಿ ಬರಯಬಹುದು. ಈಗಿರುವ ಚುಟುಕು ಪ್ರಾರಂಭಿಕ ಸಾಲುಗಳನ್ನು ಅಗತ್ಯ ಬಿದ್ದಂತೆ ಪರಿಷ್ಕರಿಸಿ. ಈಗಷ್ಟೇ ಪರಿಷ್ಕೃತ ಪುಟವನ್ನು ನೋಡಿದೆ, ಧನ್ಯವಾದಗಳು -ಹಂಸವಾಣಿದಾಸ 22:13, ೩೧ March ೨೦೦೬ (UTC)
ಹಾಗೆಯೇ ಗಮನಿಸಿ:
- ಹೊರಗಿನ ಸಂಪರ್ಕಗಳನ್ನು ಹೊರಗಿನ ಸಂಪರ್ಕಗಳು ಎಂಬ ಹೊಸ ವಿಭಾಗ ಪ್ರಾರಂಭಿಸಿ ಹಾಕಬೇಕು.
- ಹೊರಗಿನ ಸಂಪರ್ಕಗಳು ಯಾವುದೇ ಲಾಗಿನ್ ಮತ್ತು ನೋಂದಣಿಯ ಜರೂರತ್ತು ಇಲ್ಲದೆಯೇ ಲಭ್ಯವಿರಬೇಕು.
- ಯಾವ ಸಂಪರ್ಕಗಳು ಸೇರಿಸಬೇಕು? ಎಂಬುದನ್ನ ನೋಡಿ
cheers, -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 17:04, ೨೯ March ೨೦೦೬ (UTC)
- ನೋಂದಣಿಯ ಅವಶ್ಯಕತೆಯಿರುವ ತಾಣಗಳನ್ನು ಹಾಕಬಾರದೆಂದು ತಿಳಿದಿರಲಿಲ್ಲ. ಅದನ್ನು ತೆಗೆದಿದ್ದೇನೆ. ಈ ತಾಣದ ಸಂಪರ್ಕ ಹಾಕಲಾಗಿದ್ದ ನನ್ನ ಬಳಕೆದಾರ ಪುಟವನ್ನು ಪರಿಷ್ಕರಿಸಿದ್ದೇನೆ. -ಹಂಸವಾಣಿದಾಸ 23:48, ೩೦ March ೨೦೦೬ (UTC)
- ಲೇಖನಗಳಲ್ಲಿ ಆ ತರಹದ ಸಂಪರ್ಕಗಳನ್ನು ಹಾಕುವ ಹಾಗಿಲ್ಲ, ನಿಮ್ಮ ಸದಸ್ಯ ಪುಟದಲ್ಲಿ ಏನು ಹಾಕಿಕೊಂಡರೂ ತೊಂದರೆಯಿಲ್ಲ. :) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 07:47, ೩೧ March ೨೦೦೬ (UTC)
regarding female singers.
[ಬದಲಾಯಿಸಿ]i am still beginner in using kannada in computer. so i wil tell in english only. Now i made some additions to the kan music directors and male singers. I have added mano murthy, ravi dattaatreya and v hari krishna into the list. i created new pages in their name also. it is linked now.
i came to know the importance of templates. once the template is revised, the same thing appears on all pages where it is used. now i found that female singers template is not editable!! i dint find the edit link. i wanted to add Pallavi MD's name into the female singers list. kindly look into the matter. -- user:Gagan
- ಪಲ್ಲವಿ ಎಂ.ಡಿ ಅವರ ಹೆಸರನ್ನು ಹಿನ್ನೆಲೆ ಗಾಯಕಿಯರ ಟೆಂಪ್ಲೇಟಿಗೆ ಈಗ ಸೇರಿಸಲಾಗಿದೆ. - ಮನ|Mana Talk - Contribs ೨೨:೦೬, ೨೭ November ೨೦೦೬ (UTC)
music history major additons
[ಬದಲಾಯಿಸಿ]as usual i find difficult to type in kannada. so english only. i have made major additions to kannada film music history. i have told about most of the music directors. i think there is a need to arrange these facts in an order of chronology.. for example: 1950s, 1960s, 70s, 80s, 90s, 2000s.. then in each chronology, there should be information on milestones like new music directors who were introduced (that i have written).. but i have not written about new singers introduced. and even new lyrics writers introduced. and major awards won by music industry in those days... and there is a need to add information about the music companies also.. earlier it was HMV company whih bought all kannada films rights (during 1960s)... but later maadhuri, lahari and others also entered the market.. then came akash audio, manoranjan audio, anand audio, jhemkaar audio, and now ashiwni audio.. now a days every producer has opened his own audio company.. like ramu audio, arjun audio, leela audio, sampige audio.. etc etc..
all of u pls contribute what u have.. i have more "vyaamOha" and bhakti towards hams mahaaraaja.. if u find any thing to be very biased, then pls change it..
shridhar raajanna (samsa vaani daasa) can contribute a lot i think...
NPOV - Tone
[ಬದಲಾಯಿಸಿ]ಲೇಖನದಲ್ಲಿನ ವಾಕ್ಯಗಳು ವಿಶ್ವಕೋಶದ ಗುಣಮಟ್ಟದಲ್ಲಿಲ್ಲ. ವಾಕ್ಯಗಳ ಶೈಲಿ/ಧಾಟಿ ಮತ್ತು ವಸ್ತುನಿಷ್ಠತೆ ಈ ಲೇಖನದಲ್ಲಿ ಗಣನೀಯವಾಗಿ ಪರಿಷ್ಕರಸಬೇಕಿದೆ. ಉದಾ:
- ಮೊದ ಮೊದಲು, ಹಂಸ್
- ಇವರಲ್ಲಿ ವಿಜಯ ಭಾಸ್ಕರ್ ಅವರ ವಿಶೇಷತೆ ಎಂದರೆ, ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ ಬಹುತೇಕ ಚಿತ್ರಗಳಿಗೆ ಇವರೇ ಸಂಗೀತ ನೀಡಿದ್ದರು.
- ಇವರೆಲ್ಲರ ನಡುವೆ ಭಾರೀ ಹೊಸ ಅಲೆಯನ್ನು ತಂದ ಸಂಗೀತ ನಿರ್ದೇಶಕರು ಎಂದರೆ ಹಂಸಲೇಖ ಅವರು. ಬಂಡಾಯ ಕವಿ ಗಂಗರಾಜು ಕನ್ನಡಿಗರಿಗೆ ಹಂಸಲೇಖ ಎಂದು ಪರಿಚಯವಾಗಿ ಈಗ ಸಾಹಿತ್ಯ ಸರೋವರ-ಸಂಗೀತ ಸಮುದ್ರವಾಗಿ ಬೆಳೆದಿದ್ದಾರೆ. ವಿ.ರವಿಚಂದ್ರನ್ ಅವರ ಚಿತ್ರಗಳು ಗೆಲ್ಲಲು ಅರ್ಧ ಪಾಲು ಹಂಸಲೇಖ ಅವರ ಸಾಹಿತ್ಯ ಸಂಗೀತವೇ ಕಾರಣ ಎಂದೇ ರವಿಚಂದ್ರನ್ ಅವರ ಅಭಿಮಾನಿಗಳೂ ಒಪ್ಪುತ್ತಾರೆ.
- ನಂತರದ ದಿನಗಳಲ್ಲಿ ಸಾಧು ಕೋಕಿಲ ಮತ್ತು ರಾಜೇಶ್ ರಾಮನಾಥ್ ಅವರು ಹೊಸ ಸಂಗೀತ ನಿರ್ದೇಶಕರಾಗಿ ಪರಿಚಯಗೊಂಡರೂ, ಹಂಸಲೇಖರ ಜಾದೂವನ್ನು ಅವರಿಂದ ತೋರಿಸಲು ಸಾಧ್ಯವಾಗಲಿಲ್ಲ.
- ಈ ಮಧ್ಯೆ ಹಂಸ್ ಮತ್ತು ರವಿಚಂದ್ರನ್ ಜೋಡಿ ಮುರಿದು ಬಿದ್ದಿತು. ಇದರ ಪರಿಣಾಮವಾಗಿ "ಪ್ರೀತ್ಸೋದ್ ತಪ್ಪಾ?" ಚಿತ್ರದ ನಂತರ "ಮಾಂಗಲ್ಯಮ್ ತಂತುನಾನೇನಾ" ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದರು. ನಂತರ ರವಿಚಂದ್ರನ್ ಅವರೇ ಸಂಗೀತ ನಿರ್ದೇಶನ ಮತ್ತು ಸಾಹಿತ್ಯ ರಚನೆಗೆ ಇಳಿದು ಸಂಗೀತ ಅಭಿಮಾನಿಗಳ ಕಿವಿಗಳ ಮೇಲೆ "ಪ್ರಯೋಗ" ಮಾಡಿದರು.
ಲೇಖನಗಳು ಯಾವುದೇ ವ್ಯಕ್ತಿಯ ಮೇಲೆ ಅವಹೇಳನವಾಗಲಿ, ವ್ಯಂಗ್ಯವಾಗಲಿ ಮಾಡದಂತಿರಬೇಕು. ಹೊಗಳಿಕೆಯನ್ನು ಸಾಧ್ಯವಾದಷ್ಟೂ ತಡೆಗಟ್ಟಬೇಕು ಮತ್ತು factual information ಮಾತ್ರ ಹಾಕಬೇಕು. ಮುಖ್ಯವಾಗಿ "ಪ್ರಯೋಗ" ಮಾಡಿದರು ಎಂಬಂತಹ ಸಾಲುಗಳು Biographies of living persons ಕಾರ್ಯನೀತಿಯನ್ನು ಮೀರಿವೆ. ಅವುಗಳ ಕಡೆಗೆ ಹೆಚ್ಚಿನ ಮಹತ್ವ ಕೊಡಬೇಕಿದೆ. - ಮನ|Mana Talk - Contribs ೨೧:೫೬, ೨೭ November ೨೦೦೬ (UTC)