ವಿಷಯಕ್ಕೆ ಹೋಗು

ಚರ್ಚೆಪುಟ:ಕನಕದಾಸರು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಾಸಶ್ರೇಷ್ಠ ಶ್ರೀ ಕನಕದಾಸರು ವಿಶ್ವ ಮಾನವರಾಗಿದ್ದಾರೆ. ಅವರ ಕೀರ್ತನೆಗಳು ಮನುಜ ಕುಲ ಸನ್ಮಾರ್ಗದತ್ತ ಕೊಂಡೊಯ್ಯುವಂತದ್ದು. ಕರ್ನಾಟಕ ರಾಜ್ಯ ಸರ್ಕಾರವು ದಾಸಶ್ರೇಷ್ಟರ ಹೆಸರಿನಲ್ಲಿ ಪ್ರಶಸ್ತಿಗಳನ್ನು, ಸರ್ಕಾರಿ ಗೌರವವನ್ನು ಸಲ್ಲಿಸುತ್ತಿದೆ. "ನಾನು" ಹೋದರೆ ಹೋದೇನು ಇದೊಂದನ್ನು ಮಾನವರು ಅಳವಡಿಸಿಕೊಂಡರೆ ಸಾಕು. ವಿಶ್ವದಲ್ಲಿ ಅನ್ಯಾಯ, ದ್ವೇಷ, ಅಸೂಯೆಗಳು ಮಾಯವಾಗಿ ವಿಶ್ವವು ಶಾಂತಿಯಿಂದಿರುತ್ತದೆ.

ಶ್ರೀ ಕನಕದಾಸರು (೧೫೦೯-೧೬೦೯) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪ೦ಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕವಿಗಳು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸ೦ಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.

ಕನಕದಾಸರು ದಂಡನಾಯಕನಾಗಿದ್ದು ಯಾವುದೋ ಯುಧ್ಧದಲ್ಲಿ ಸೋತ ಅವರಿಗೆ ಉಪರತಿ ಉಂಟಾಗಿ ಹರಿ ಭಕ್ತರಾದರಂತೆ. ಕನಕದಾಸರ ಊರು ಕಾಗಿನೆಲೆ (ಈಗ ಹಾವೇರಿ ಜಿಲ್ಲೆಯಲ್ಲಿದೆ). ಕನಕದಾಸರ ಕೀರ್ತನೆಗಳು ಕಾಗಿನೆಲೆಯ ಕೇಶವನಿಗೆ ಅರ್ಪಿತವಾಗಿರುವುದನ್ನು ಗಮನಿಸಬಹುದು. ಜನಪ್ರಿಯ ನ೦ಬಿಕೆಯ೦ತೆ, ಕನಕದಾಸರು ಕುರುಬರೆಂದು ಹೇಳಿದರೂ ಕುರುಬರಲ್ಲಿ ದಾಸ-ವೈಷ್ಣವರು ಇಲ್ಲದಿರುವುದು ಇವರು ಬೇಡ ವ೦ಶಕ್ಕೆ ಸೇರಿದವರು ಎಂಬ ವಾದವಿದೆ!ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿ೦ದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊ೦ಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಭಕ್ತರು. ಅನೇಕರ ನ೦ಬಿಕೆಯ೦ತೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದಾದಾಗ ದೇವಸ್ಥಾನದ ಹಿ೦ದೆ ನಿ೦ತು ಹಾಡತೊಡಗಿದರ೦ತೆ ("ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ"). ಹಿ೦ದುಗಡೆಯ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತ೦ತೆ (ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿ೦ದುಗಡೆಯ ಗೋಡೆಯಲ್ಲಿ ಬಿರುಕನ್ನು ಕಾಣಬಹುದು - ಇಲ್ಲಿ ಒ೦ದು ಕಿಟಕಿಯನ್ನು ನಿರ್ಮಿಸಿ ಕನಕನ ಕಿ೦ಡಿ ಎ೦ದು ಕರೆಯಲಾಗಿದೆ ಕನಕದಾಸರ ಕಾಲ ಅನೇಕ ವಿದ್ವಾಂಸರು ಕನಕದಾಸರ ಕಾಲ ನಿರ್ಣಯ ಕುರಿತು ಪ್ರಯಾಸ ಪಟ್ಟಿದ್ದಾರೆ. ಆದರೆ ಯಾವುದು ನಿಖರವೆಂದು ಹೇಳಲು ಸಾಧ್ಯವಾಗಿಲ್ಲ. ಕಾರಣ ಹಲವು ಭಿನ್ನಾಭಿಪ್ರಾಯಗಳಿವೆ. ಆದರೂ ಅವರ ಸಾಹಿತ್ಯದಲ್ಲಿ ಮೂಡಿಬಂದ ಸಮಕಾಲೀನ ಜನಜೀವನ ಚಿತ್ರ, ಪೂರ್ವದ ಕವಿಗಳನ್ನು ಅವರು ಸ್ಮರಿಸಿರುವುದರಿಂದ ಹಾಗೂ ನಂತರದ ಕವಿಗಳು ಕನಕದಾಸರನ್ನು ಸ್ಮರಿಸಿರುವುದರಿಂದ ಅವರ ಕಾಲವನ್ನು ನಿರ್ಣಯಿಸಲು ಸಾಧ್ಯವಾಗುತ್ತದೆ.

ಉರಗಾಲಯವೆ ಪೆಸರ್ವಡೆದನ ಮತ್ಸೋದರ ಜಾತೆಯಾತ್ಮ ಸಂಭವನ ವರ ಪುರಾಣಂಗಳ ಕನ್ನಡಿಸಿದ ಕವೀಶ್ವರರ ಕೊಂಡಾಡುವೆ ಮುದದಿ

ಮೇಲಿನ ‘ಮೋಹನ ತರಂಗಿಣಿ’ ಕೃತಿಯ ಪದ್ಯದಲ್ಲಿ ಕನಕದಾಸರೇ ಉಲ್ಲೇಖಿಸಿರುವಂತೆ ಗದುಗಿನ ಭಾರತವನ್ನು ಬರೆದ ಕುಮಾರವ್ಯಾಸನನ್ನು, ತೊರವೆ ರಾಮಾಯಣವನ್ನು ಬರೆದ ಕುಮಾರ ವಾಲ್ಮೀಕಿಯನ್ನು ಸ್ಮರಿಸಿರುವುದರಿಂದ ಅವರೀರ್ವರಿಗಿಂತ ಕನಕದಾಸರು ಈಚಿನವರಾಗಿದ್ದಂತೂ ಖಚಿತ. ೧೭ನೇ ಶತಮಾನದ ಕಾಖಂಡಕಿ ಮಹಿಪತಿರಾಯರ ಮಗನಾದ ಕಾಖಂಡಕಿ ಕೃಷ್ಣರಾಯರು ಹರಿದಾಸ ಪರಂಪರೆಯನ್ನು ಸ್ಮರಿಸುತ್ತ “ನೆರೆ ತಾಲಪಾಕರ ಸಂತಮತಿ ಕನಕರ ಹರಿಭಕ್ತಿ ಉಲ್ಲಾಸಕರ’’ ಎಂದು ತೆಲುಗಿನ ಅನ್ನಮಾಚಾರ್ಯರನ್ನು ಕನ್ನಡದ ಕನಕದಾಸರನ್ನೂ ಜೊತೆಯಲ್ಲಿ ನೆನೆದಿರುವುದರಿಂದ ಆ ಕಾಲಕ್ಕಿಂತ ಹಿಂದಿನವರು ಎಂಬುದು ಸ್ಪಷ್ಟವಾಗುತ್ತದೆ.

ಕನಕದಾಸರು ಯುದ್ಧ ವರ್ಣನೆಯನ್ನು ಮಾಡುತ್ತ

ರಾಜರು ರಕ್ಕಸು ಮಾಂತರು ಲಾಳಿಬಿಲ್ಲೊಜರು ಪೆಟಲಂಬಿನವರು ತೇಜೋಮಯ ಬಾಣಗಾರರು ತುಖಗರಾಜನೆರಂಕೆಯಿಕ್ಕೆಲದಿ

ಪೆಟಲಂಬಿನವರು (ತುಬಾಕಿಯವರು) ಎಂಬ ಶಬ್ದ ಪ್ರಯೋಗ ಮಾಡಿದ್ದಾರೆ. ಪೆಟಲಂಬುಗಳ ಬಳಕೆಯಾದದ್ದು ೧೫೨೦ರಲ್ಲಿ ಜರುಗಿದ ರಾಯಚೂರು ಯುದ್ಧದಲ್ಲಿ. ಆ ಕಾಲದಲ್ಲಿ ಕನಕದಾಸರು ಜೀವಿಸಿದ್ದರೆಂದು ವೇದ್ಯವಾಗುತ್ತದೆ.

ಶ್ರೀಕೃಷ್ಣದೇವರಾಯ ೧೫೦೯ರಿಂದ ೧೫೨೯ರವರೆಗೆ ಆಳಿದ ದ್ವಾರಕೆಯ ಶ್ರೀಕೃಷ್ಣನೊಂದಿಗೆ ವಿಜಯನಗರದ ಶ್ರೀಕೃಷ್ಣದೇವರಾಯನನ್ನು ಸಮೀಕರಿಸಿ ಮೋಹನ ತರಂಗಿಣಿ ಎಂಬ ಕೃತಿ ಬರೆದಿದ್ದಾರೆ. ಅಲ್ಲದೆ ವಿಜಯನಗರದ ಜನಜೀವನವನ್ನು ತಮ್ಮ ಕಾವ್ಯದಲ್ಲಿ ಚಿತ್ರಿಸಿದ್ದಾರೆ. ಆದ್ದರಿಂದ ಕನಕದಾಸರು ಶ್ರೀಕೃಷ್ಣದೇವರಾಯನ ಕಾಲದಲ್ಲಿದ್ದರೆಂಬುದು ನಿಸ್ಸಂಶಯ.

ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು- ಜಗದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ

ಎಂಬ ಕೀರ್ತನೆಯನ್ನು ಹಾಡಿದ್ದಾರೆ. ಕನಕದಾಸರ ಜೀವಿತಾವಧಿಗೆ ಸರಿಹೊಂದುವ ಒಂದು ಶಾಸನವು ಭೂಕಂಪನವನ್ನು ಕುರಿತು ಹೇಳುತ್ತದೆ. ಆದ್ದರಿಂದ ಅದು ಭೀಕರವಾದ ಭೂಕಂಪನವೇ ಆಗಿರಬೇಕು. ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಸೋಮಪುರ ಹೋಬಳಿಯ ಬಿಲ್ಲನಕೋಟೆ ಎಂಬ ಗ್ರಾಮದ ಬಂಡೆಯ ಮೇಲೆ ಕಲಿ ವರುಷ ೪೬೦೮ನೇ ಪ್ರಭವ ಸಂವತ್ಸರದ ಶ್ರಾವನ ಸುದ ೬ ಗುಲು ಭೂಮಿ ನಡುಗಿತು, ವಾರಳಲೂ ಬಿಲ್ಲನ ಕೊಡೆಯ (ಕೋಟೆಯ) ಖಬಿನಗೆಲಸಿ (ಕಬ್ಬಿಣದ ಕೆಲಸಗಾರ) ವೀರಯ್ಯನ ಮಗ ದೊಡ ವೀರೈಯ ಹೊಯಿದ ಸೇಸನ ಎಂಬ ಶಾಸನವಿದೆ. ಇದರ ಕಾಲ ೧೫-೧೭-೧೫೦೭. ಗುರುವಾರಕ್ಕೆ ಸರಿ ಹೊಂದುತ್ತದೆ. ಅನಿರುದ್ಧನ ಜನನವನ್ನು ತಿಳಿಸುವ ಮೋಹನ ತರಂಗಿಣಿಯ ಈ ಪದ್ಯ.

ಆನಂದ ಸವಂತ್ಸರ ಮಾಘಶುದ್ಧನವೀನ ಪಂಚಮಿ ರವಿವಾರ ಭಾನುವುದಯದ ಸ್ವಾತಿಯ ನಕ್ಷತ್ರದೆತಾನುದಿಸಿದ ಗಂಡು ಮಗನು

ಇದು ೧೫-೨-೧೪೬೫ ಭಾನುವಾರ ಸಮದೂಗುತ್ತದೆ. ಅನಿರುದ್ಧನ ಜನನದ ಕಾಲಕ್ಕೆ ಕನಕದಾಸರು ತಮ್ಮ ಜನನ ಕಾಲವನ್ನು ಸಮನಾಗಿಸಿದ್ದಾರೆ. ಆದ್ದರಿಂದ ಕನಕದಾಸರ ಜನನದ ಕಾಲ ೧೫-೦೨-೧೪೬೫. ಪುರಂದರದಾಸರ ಕಾಲ ೧೪೮೪-೧೫೬೪ ಎಂದಾಗಿದೆ. ಪುರಂದರದಾಸರು ಕಾಲವಾದ ಮೇಲೆ ಕನಕದಾಸರು ಬಾಳಿದ್ದರು ಎಂಬ ಐತಿಹ್ಯವಿದೆ. ಒಟ್ಟಾರೆ ಕನಕದಾಸರು ೯೮ ವರ್ಷಗಳ ಕಾಲ ಬದುಕಿದ್ದರೆಂಬಲ್ಲಿ ವಿದ್ವಾಂಸರಲ್ಲಿ ಏಕಾಭಿಪ್ರಾಯವಿದೆ. ಆದ್ದರಿಂದ ಕನಕದಾಸರ ಮರಣ ಕಾಲವನ್ನು ೧೫೬೩ಕ್ಕೆ ಎಂದು ಒಪ್ಪಿದ್ದಾರೆ. ಒಟ್ಟಿನಲ್ಲಿ ಕನಕದಾಸರ ಜನನ ಮರಣದ ಕಾಲವನ್ನು ೧೪೬೫ ರಿಂದ ೧೫೬೩ ಎಂದು ಒಪ್ಪಬಹುದು.

--101.59.30.136 ೧೪:೧೧, ೪ ಅಕ್ಟೋಬರ್ ೨೦೧೫ (UTC)ಕನಕದಾಸರ ಕಾಲ--101.59.30.136 ೧೪:೧೧, ೪ ಅಕ್ಟೋಬರ್ ೨೦೧೫ (UTC) ಅನೇಕ ವಿದ್ವಾಂಸರು ಕನಕದಾಸರ ಕಾಲ ನಿರ್ಣಯ ಕುರಿತು ಪ್ರಯಾಸ ಪಟ್ಟಿದ್ದಾರೆ. ಆದರೆ ಯಾವುದು ನಿಖರವೆಂದು ಹೇಳಲು ಸಾಧ್ಯವಾಗಿಲ್ಲ. ಕಾರಣ ಹಲವು ಭಿನ್ನಾಭಿಪ್ರಾಯಗಳಿವೆ. ಆದರೂ ಅವರ ಸಾಹಿತ್ಯದಲ್ಲಿ ಮೂಡಿಬಂದ ಸಮಕಾಲೀನ ಜನಜೀವನ ಚಿತ್ರ, ಪೂರ್ವದ ಕವಿಗಳನ್ನು ಅವರು ಸ್ಮರಿಸಿರುವುದರಿಂದ ಹಾಗೂ ನಂತರದ ಕವಿಗಳು ಕನಕದಾಸರನ್ನು ಸ್ಮರಿಸಿರುವುದರಿಂದ ಅವರ ಕಾಲವನ್ನು ನಿರ್ಣಯಿಸಲು ಸಾಧ್ಯವಾಗುತ್ತದೆ.

ಉರಗಾಲಯವೆ ಪೆಸರ್ವಡೆದನ ಮತ್ಸೋದರ ಜಾತೆಯಾತ್ಮ ಸಂಭವನ ವರ ಪುರಾಣಂಗಳ ಕನ್ನಡಿಸಿದ ಕವೀಶ್ವರರ ಕೊಂಡಾಡುವೆ ಮುದದಿ

ಮೇಲಿನ ‘ಮೋಹನ ತರಂಗಿಣಿ’ ಕೃತಿಯ ಪದ್ಯದಲ್ಲಿ ಕನಕದಾಸರೇ ಉಲ್ಲೇಖಿಸಿರುವಂತೆ ಗದುಗಿನ ಭಾರತವನ್ನು ಬರೆದ ಕುಮಾರವ್ಯಾಸನನ್ನು, ತೊರವೆ ರಾಮಾಯಣವನ್ನು ಬರೆದ ಕುಮಾರ ವಾಲ್ಮೀಕಿಯನ್ನು ಸ್ಮರಿಸಿರುವುದರಿಂದ ಅವರೀರ್ವರಿಗಿಂತ ಕನಕದಾಸರು ಈಚಿನವರಾಗಿದ್ದಂತೂ ಖಚಿತ. ೧೭ನೇ ಶತಮಾನದ ಕಾಖಂಡಕಿ ಮಹಿಪತಿರಾಯರ ಮಗನಾದ ಕಾಖಂಡಕಿ ಕೃಷ್ಣರಾಯರು ಹರಿದಾಸ ಪರಂಪರೆಯನ್ನು ಸ್ಮರಿಸುತ್ತ “ನೆರೆ ತಾಲಪಾಕರ ಸಂತಮತಿ ಕನಕರ ಹರಿಭಕ್ತಿ ಉಲ್ಲಾಸಕರ’’ ಎಂದು ತೆಲುಗಿನ ಅನ್ನಮಾಚಾರ್ಯರನ್ನು ಕನ್ನಡದ ಕನಕದಾಸರನ್ನೂ ಜೊತೆಯಲ್ಲಿ ನೆನೆದಿರುವುದರಿಂದ ಆ ಕಾಲಕ್ಕಿಂತ ಹಿಂದಿನವರು ಎಂಬುದು ಸ್ಪಷ್ಟವಾಗುತ್ತದೆ.

ಕನಕದಾಸರು ಯುದ್ಧ ವರ್ಣನೆಯನ್ನು ಮಾಡುತ್ತ

ರಾಜರು ರಕ್ಕಸು ಮಾಂತರು ಲಾಳಿಬಿಲ್ಲೊಜರು ಪೆಟಲಂಬಿನವರು ತೇಜೋಮಯ ಬಾಣಗಾರರು ತುಖಗರಾಜನೆರಂಕೆಯಿಕ್ಕೆಲದಿ

ಪೆಟಲಂಬಿನವರು (ತುಬಾಕಿಯವರು) ಎಂಬ ಶಬ್ದ ಪ್ರಯೋಗ ಮಾಡಿದ್ದಾರೆ. ಪೆಟಲಂಬುಗಳ ಬಳಕೆಯಾದದ್ದು ೧೫೨೦ರಲ್ಲಿ ಜರುಗಿದ ರಾಯಚೂರು ಯುದ್ಧದಲ್ಲಿ. ಆ ಕಾಲದಲ್ಲಿ ಕನಕದಾಸರು ಜೀವಿಸಿದ್ದರೆಂದು ವೇದ್ಯವಾಗುತ್ತದೆ.

ಶ್ರೀಕೃಷ್ಣದೇವರಾಯ ೧೫೦೯ರಿಂದ ೧೫೨೯ರವರೆಗೆ ಆಳಿದ ದ್ವಾರಕೆಯ ಶ್ರೀಕೃಷ್ಣನೊಂದಿಗೆ ವಿಜಯನಗರದ ಶ್ರೀಕೃಷ್ಣದೇವರಾಯನನ್ನು ಸಮೀಕರಿಸಿ ಮೋಹನ ತರಂಗಿಣಿ ಎಂಬ ಕೃತಿ ಬರೆದಿದ್ದಾರೆ. ಅಲ್ಲದೆ ವಿಜಯನಗರದ ಜನಜೀವನವನ್ನು ತಮ್ಮ ಕಾವ್ಯದಲ್ಲಿ ಚಿತ್ರಿಸಿದ್ದಾರೆ. ಆದ್ದರಿಂದ ಕನಕದಾಸರು ಶ್ರೀಕೃಷ್ಣದೇವರಾಯನ ಕಾಲದಲ್ಲಿದ್ದರೆಂಬುದು ನಿಸ್ಸಂಶಯ.

ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು- ಜಗದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ

ಎಂಬ ಕೀರ್ತನೆಯನ್ನು ಹಾಡಿದ್ದಾರೆ. ಕನಕದಾಸರ ಜೀವಿತಾವಧಿಗೆ ಸರಿಹೊಂದುವ ಒಂದು ಶಾಸನವು ಭೂಕಂಪನವನ್ನು ಕುರಿತು ಹೇಳುತ್ತದೆ. ಆದ್ದರಿಂದ ಅದು ಭೀಕರವಾದ ಭೂಕಂಪನವೇ ಆಗಿರಬೇಕು. ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಸೋಮಪುರ ಹೋಬಳಿಯ ಬಿಲ್ಲನಕೋಟೆ ಎಂಬ ಗ್ರಾಮದ ಬಂಡೆಯ ಮೇಲೆ ಕಲಿ ವರುಷ ೪೬೦೮ನೇ ಪ್ರಭವ ಸಂವತ್ಸರದ ಶ್ರಾವನ ಸುದ ೬ ಗುಲು ಭೂಮಿ ನಡುಗಿತು, ವಾರಳಲೂ ಬಿಲ್ಲನ ಕೊಡೆಯ (ಕೋಟೆಯ) ಖಬಿನಗೆಲಸಿ (ಕಬ್ಬಿಣದ ಕೆಲಸಗಾರ) ವೀರಯ್ಯನ ಮಗ ದೊಡ ವೀರೈಯ ಹೊಯಿದ ಸೇಸನ ಎಂಬ ಶಾಸನವಿದೆ. ಇದರ ಕಾಲ ೧೫-೧೭-೧೫೦೭. ಗುರುವಾರಕ್ಕೆ ಸರಿ ಹೊಂದುತ್ತದೆ. ಅನಿರುದ್ಧನ ಜನನವನ್ನು ತಿಳಿಸುವ ಮೋಹನ ತರಂಗಿಣಿಯ ಈ ಪದ್ಯ.

ಆನಂದ ಸವಂತ್ಸರ ಮಾಘಶುದ್ಧನವೀನ ಪಂಚಮಿ ರವಿವಾರ ಭಾನುವುದಯದ ಸ್ವಾತಿಯ ನಕ್ಷತ್ರದೆತಾನುದಿಸಿದ ಗಂಡು ಮಗನು

ಇದು ೧೫-೨-೧೪೬೫ ಭಾನುವಾರ ಸಮದೂಗುತ್ತದೆ. ಅನಿರುದ್ಧನ ಜನನದ ಕಾಲಕ್ಕೆ ಕನಕದಾಸರು ತಮ್ಮ ಜನನ ಕಾಲವನ್ನು ಸಮನಾಗಿಸಿದ್ದಾರೆ. ಆದ್ದರಿಂದ ಕನಕದಾಸರ ಜನನದ ಕಾಲ ೧೫-೦೨-೧೪೬೫. ಪುರಂದರದಾಸರ ಕಾಲ ೧೪೮೪-೧೫೬೪ ಎಂದಾಗಿದೆ. ಪುರಂದರದಾಸರು ಕಾಲವಾದ ಮೇಲೆ ಕನಕದಾಸರು ಬಾಳಿದ್ದರು ಎಂಬ ಐತಿಹ್ಯವಿದೆ. ಒಟ್ಟಾರೆ ಕನಕದಾಸರು ೯೮ ವರ್ಷಗಳ ಕಾಲ ಬದುಕಿದ್ದರೆಂಬಲ್ಲಿ ವಿದ್ವಾಂಸರಲ್ಲಿ ಏಕಾಭಿಪ್ರಾಯವಿದೆ. ಆದ್ದರಿಂದ ಕನಕದಾಸರ ಮರಣ ಕಾಲವನ್ನು ೧೫೬೩ಕ್ಕೆ ಎಂದು ಒಪ್ಪಿದ್ದಾರೆ. ಒಟ್ಟಿನಲ್ಲಿ ಕನಕದಾಸರ ಜನನ ಮರಣದ ಕಾಲವನ್ನು ೧೪೬೫ ರಿಂದ ೧೫೬೩ ಎಂದು ಒಪ್ಪಬಹುದು.

Start a discussion about ಕನಕದಾಸರು

Start a discussion