ಚರ್ಚೆಪುಟ:ಆಲಮಟ್ಟಿ ಆಣೆಕಟ್ಟು

ವಿಕಿಪೀಡಿಯ ಇಂದ
Jump to navigation Jump to search

ಅಂಕೆ ಅಂಶಗಳು[ಬದಲಾಯಿಸಿ]

ನೀರು ಹಂಚಿಕೆಯ ಅಂಕೆ ಅಂಶಗಳು
೧ ಟಿ. ಎಮ್.ಸಿ. = ೧೦೦ ಕೋಟಿ ಘನ ಮೀಟರ್ ಅಥವಾ ಗಜ ಅಥವಾ ಅಡಿ; ಟಿ. ಎಮ್.ಸಿ.ನಂತರ ಅದನ್ನು ಬರೆಯಬೇಕು.

೧,೦೦೦,೦೦೦,೦೦೦ ಘನ ಅಡಿ = ೨೮,೦೦೦,೦೦೦ ಘನ ಮೀಟರ್ ; ಕರ್ಣಾಟಕ ಭಾಗ್ಯ ನಿಗಮದ ಅಂತರ್ ಜಾಲ ತಾಣದಲ್ಲಿ ಹಂಚಿದ ನೀರಿನ ಪ್ರಮಾಣದ ಅಂಕೆ ಮುಂದೆ ಮೀ / ಅಡಿ ಬರೆದಿಲ್ಲ.; ಮೀಟರ್ ಎಂದು ಊಹಿಸಿಕೊಳ್ಳಬೇಕು.

There are 28,316,846,592 liters in 1 TMC of water.
Tmcft, TMC, tmc, or Tmc ft are abbreviations for 1,000,000,000 = 1 billion or one (T)Thousand (M)

Million (C)Cubic ft. It is a measurement used in referring to water volume in river flow or reservoirs.

1 Tmcft is therefore equal to: 28,316,846,592 liters
1,000,000,000 cubic ft or 28,000,000 m3
22,956.841139 acre feet
ಇಂಗ್ಲಿಷ್ ತಾಣದಲ್ಲಿರುವುದಕ್ಕೂ ,ಕರ್ಣಾಟಕ ಭಾಗ್ಯ ನಿಗಮದ ಅಂತರ್ ಜಾಲ ತಾಣದಲ್ಲಿ ಇರವುದಕ್ಕೂ / ಪ್ರಜಾವಾಣಿಗೂ ನೀರಿನ ಹಂಚಿಕೆ ಅಂಕೆ ಅಂಶಗಳಿಗೆ ಹೊಂದಾಣಿಕೆ ಇಲ್ಲ. ಪ್ರಜಾವಾಣಿಯ ಅಂಕಿ ಅಂಶಗಳು ಇತ್ತೀಚಿನದು ಮತ್ತು ನಿಖರವಾಗಿ TMC ಅಡಿ ಎಂದು ಹೇಳಿದೆ
Bschandrasgr ೧೭:೦೧, ೨೬ ಡಿಸೆಂಬರ್ ೨೦೧೩ (UTC) - ಸದಸ್ಯ:Bschandrasgr/ಪರಿಚಯ -ಬಿ.ಎಸ್ ಚಂದ್ರಶೇಖರ -ಸಾಗರ

ಪುನಃ ತಕರಾರು[ಬದಲಾಯಿಸಿ]

ಈ ಐತೀರ್ಪನ್ನು ಇಡಿಯಾಗಿ ಪ್ರಶ್ನಿಸಿ ಆಂಧ್ರಪ್ರದೇಶ ಸುಪ್ರೀಂ ಕೋರ್ಟಿನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದೆ. ಈ ಮಧ್ಯೆ ಆಂಧ್ರಪ್ರದೇಶದಿಂದ ಪ್ರತ್ಯೇಕಗೊಂಡು ಉದಯವಾಗಿರುವ ಹೊಸ ರಾಜ್ಯ ತೆಲಂಗಾಣ ಹೊಸ ಬೇಡಿಕೆಯನ್ನು ಮುಂದೆ ಮಾಡಿದೆ. ಅದೆಂದರೆ ತೆಲಂಗಾಣದ ಕೃಷ್ಣಾ ಯೋಜನೆಗಳಿಗೆ ಅವಿಭಜಿತ ಆಂಧ್ರಪ್ರದೇಶ ಸರಕಾರಗಳು ಸಾಕಷ್ಟು ನೀರನ್ನು ಹಂಚಿಕೊಡದೆ ಅನ್ಯಾಯ ಮಾಡಿವೆ. ಹೀಗಾಗಿ ಕೃಷ್ಣಾ ನ್ಯಾಯಾಧಿಕರಣವನ್ನು ಪುನಾರಚಿಸಿ ವಿವಾದವನ್ನು ಪುನಃ ಮೊದಲಿನಿಂದ ಆಲಿಸಿ ಐತೀರ್ಪು ನೀಡಬೇಕು ಈ ಬೇಡಿಕೆಯ ತಿರುಳು.

ಕರ್ನಾಟಕ ಮತ್ತು ಮಹಾರಾಷ್ಟ್ರ ಈ ಬೇಡಿಕೆಯನ್ನು ವಿರೋಧಿಸಿವೆ. ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ನ್ಯಾಯಾಧಿಕರಣ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿತ್ತು. ತನ್ನ ನಿಲುವನ್ನು ಪ್ರಮಾಣಪತ್ರದ ರೂಪದಲ್ಲಿ ಸಲ್ಲಿಸದೆ ಉಪನಿರ್ದೇಶಕ ಹಂತದ ಅಧಿಕಾರಿಯೊಬ್ಬರಿಂದ ಪತ್ರ ಬರೆಯಿಸಿರುವ ಜಲಸಂಪನ್ಮೂಲ ಮಂತ್ರಾಲಯದ ಬೇಕಾಬಿಟ್ಟಿ ವರ್ತನೆಯನ್ನು ನ್ಯಾಯಾಧಿಕರಣ ಗಂಭೀರವಾಗಿ ಪರಿಗಣಿಸಿದೆ. ಪ್ರಮಾಣಪತ್ರದ ರೂಪದಲ್ಲಿ ಸಲ್ಲಿಸುವಂತೆ ಪುನಃ ನಿರ್ದೇಶನ ನೀಡಿದೆ. ಆದರೆ ಈ ಪತ್ರದಲ್ಲಿನ ನಿಲುವನ್ನು ಅಧಿಕೃತವೆಂದು ಪರಿಗಣಿಸಿ ದಾಖಲಿಸಿಕೊಂಡಿರುವುದಾಗಿ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ಬುಧವಾರ ಸ್ಪಷ್ಟಪಡಿಸಿದರು.

ಹತ್ತು ತಿಂಗಳ ಹಿಂದೆ 2013ರ ನವೆಂಬರ್ 29ರಂದು ಕೃಷ್ಣಾ ನ್ಯಾಯಾಧಿಕರಣವು ಹೆಚ್ಚುವರಿ ನೀರಿನ ಹಂಚಿಕೆ ಮಾಡಿದ ಅಂತಿಮ ಪರಿಷ್ಕೃತ ಆದೇಶವನ್ನು ನೀಡಿತ್ತು. ಈ ಆದೇಶದಲ್ಲಿ ಮೂರೂ ರಾಜ್ಯಗಳ ನೀರಿನ ಪಾಲನ್ನು ಹೆಚ್ಚಿಸಲಾಗಿತ್ತು. ಮಹಾರಾಷ್ಟ್ರದ ಪಾಲನ್ನು 585 ಟಿಎಂಸಿ ಅಡಿಗಳಿಂದ 666 ಟಿಎಂಸಿ ಅಡಿಗಳಿಗೆ ಹೆಚ್ಚಿಸಲಾಗಿತ್ತು. ಕರ್ನಾಟಕದ ಪಾಲನ್ನು 734ರಿಂದ 907ಕ್ಕೂ, ಆಂಧ್ರದ ಪಾಲನ್ನು 811ರಿಂದ 1005 ಟಿಎಂಸಿಗಳಿಗೂ ಹೆಚ್ಚಿಸಲಾಗಿತ್ತು. ಕೃಷ್ಣಾ ಜಲವಿವಾದ ನ್ಯಾಯಾಧಿಕರಣ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿ ನೀಡಿದ್ದ ಅಂತಿಮ ಪರಿಷ್ಕೃತ ಆದೇಶವನ್ನು ಜಾರಿಗೆ ತರಲು ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದೆ. (ವಿಜಯ ವಾಣಿ-೧೬-೧೦-೨೦೧೪) ಸದಸ್ಯ:Bschandrasgr/ಪರಿಚಯ -ಬಿ.ಎಸ್ ಚಂದ್ರಶೇಖರ -ಸಾಗರ-೧೬-೧೦-೨೦೧೪