ಚರ್ಚೆಪುಟ:ಅಪಾಸ್ಟ್ರಫಿ (Apostrophe )
ಪುಟದ ಮೇಲ್ಭಾಗದಲ್ಲಿರುವ ಕೀಲಿಮಣೆ ಕ್ಲಿಕ್ಕಿಸಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. ಅಪಾಸ್ಟ್ರಫಿ (Apostrophe ) ಇಲ್ಲಿಗೆ ಹೋಗು: ಸಂಚರಣೆ, ಹುಡುಕು " ' " ಇಲ್ಲಿಗೆ ಪುನರ್ನಿರ್ದೇಶಿಸುತ್ತದೆ. ಇತರ ಬಳಕೆಗಳಿಗಾಗಿ, ' (ದ್ವಂದ್ವ ನಿವಾರಣೆ) ನೋಡಿ. "Apostrophes" ಇಲ್ಲಿಗೆ ಪುನರ್ನಿರ್ದೇಶಿಸುತ್ತದೆ. the music book, Apostrophes: A Book of Tributes to Masters of Music ನೋಡಿ. ಇತರ ಬಳಕೆಯ ಮಾಹಿತಿಗಾಗಿ, ಅಪಾಸ್ಟ್ರಫಿ (Apostrophe ) (ದ್ವಂದ್ವ ನಿವಾರಣೆ) ನೋಡಿ.
ಟೆಂಪ್ಲೇಟು:Punctuation marks ಅಪಾಸ್ಟ್ರಫಿ ಎಂಬ ಚಿಹ್ನೆಯು ( ’ , ಕೆಲವೊಮ್ಮೆ ' ಎಂದು ನಮೂದಿಸಲಾಗಿದೆ) ಒಂದು ವಿರಾಮ (punctuation) ಚಿಹ್ನೆಯಾಗಿದೆ. ಲ್ಯಾಟೀನ್ ಅಕ್ಷರಮಾಲೆಗಳನ್ನು ಬಳಸುವ ಭಾಷೆಗಳಲ್ಲಿ, ಇದನ್ನು ಕೆಲವೊಮ್ಮೆ ಉಚ್ಚಾರಣಾ (diacritic) ಚಿಹ್ನೆಯಾಗಿ ಬಳಸಲಾಗುತ್ತದೆ. ಇಂಗ್ಲಿಷ್ ಭಾಷೆಯಲ್ಲಿ, ಇದು ಎರಡು ಮುಖ್ಯ ಉದ್ದೇಶಗಳನ್ನು ಪೂರೈಸುತ್ತದೆ - ಒಂದು ಅಥವಾ ಎರಡು ಅಕ್ಷರಗಳನ್ನು ಬಿಟ್ಟುಬಿಡಬಹುದು (ಇದಕ್ಕೆ 'ಸಂಕುಚಿತಗೊಳಿಸುವಿಕೆ (contraction) ಎನ್ನಲಾಗಿದೆ); (ಉದಾಹರಣೆಗೆ does not ಬದಲಿಗೆ doesn't ), ಹಾಗೂ, ಸ್ವಾಮ್ಯಸೂಚಕಗಳನ್ನು (possessives) ಗುರುತಿಸಲು ಬಳಸಲಾಗಿದೆ (ಉದಾಹರಣೆಗೆ the cat's whiskers ). ಆದರೂ, ಕೆಲವು ಬಹುವಚನ ಪದಗಳಲ್ಲಿ ಅಪಾಸ್ಟ್ರಪಿ ಬಳಸಲು ಅವಕಾಶವಿದೆ. ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟು (}Oxford English Dictionary) (OED) ಪ್ರಕಾರ, ಅಪಾಸ್ಟ್ರಫಿ ಪದವು ಗ್ರೀಕ್ ಭಾಷೆಯಿಂದ ಟೆಂಪ್ಲೇಟು:Polytonic ಲ್ಯಾಟೀನ್ ಹಾಗೂ ಫ್ರೆಂಚ್ ಮೂಲಕ ಉದ್ಭವಿಸಿದೆ ([[|hē apóstrophos [prosōidía]]] , “[ಉಚ್ಚಾರಣೆ] ‘ಅತ್ತ ತಿರುಗಿಸುವುದು’, ಅಥವಾ ಸ್ವರಲೋಪ”). [೧]
ಅಪಾಸ್ಟ್ರಫಿ ಚಿಹ್ನೆಯು ಅಂತ್ಯಗೊಳಿಸುವ ಏಕ-ಉದ್ಧರಣ ಚಿಹ್ನೆ (quotation mark)ಯಿಂದ ಭಿನ್ನವಾಗಿದೆ(ಸಾಮಾನ್ಯವಾಗಿ ಒಂದೇ ರೀತಿಯಾಗಿದ್ದರೂ,ಭಿನ್ನ ಉದ್ದೇಶವನ್ನು ಪೂರೈಸುತ್ತದೆ)ಹಾಗೂ ಇದೇ ರೀತಿ ಕಾಣುವ ಪ್ರೈಮ್ ( ′ ), ಇದನ್ನು ಅಡಿಗಳ ಅಥವಾ ಆರ್ಕ್‌ಮೈನ್ಯೂಟ್ ಅಳತೆ ಸೂಚಿಸಲು ಬಳಸಲಾಗುತ್ತದೆ. ಇದಲ್ಲದೆ ವಿವಿಧ ಗಣಿತ ಉದ್ದೇಶಗಳಿಗೆ) ಹಾಗೂ, ಪಾಲಿನೇಷ್ಯನ್ ಭಾಷೆಗಳಲ್ಲಿ ಕಂಠದ್ವಾತೀಯ ವಿರಾಮವನ್ನು ನಿರೂಪಿಸುವ ಒಕಿನಾ(ʻokina)ಗಿಂತ ಭಿನ್ನವಾಗಿದೆ. (ಟೆಂಪ್ಲೇಟು:Okina) ಪರಿವಿಡಿ
೧ ಇಂಗ್ಲಿಷ್ ಭಾಷೆಯಲ್ಲಿ ಅಪಾಸ್ಟ್ರಫಿ ಬಳಕೆ ೧.೧ ಸ್ವಾಮ್ಯಸೂಚಕ ಅಪಾಸ್ಟ್ರಫಿ ೧.೧.೧ ಸ್ವಾಮ್ಯಸೂಚಕ ಅಪಾಸ್ಟ್ರಫಿಗಾಗಿ ಸಾಮಾನ್ಯ ತತ್ವಗಳು ೧.೧.೨ “s” ಅಥವಾ “z” ಧ್ವನಿಯೊಂದಿಗೆ ಅಂತ್ಯಗೊಳ್ಳುವ ಏಕವಚನ ನಾಮಪದಗಳು ೧.೧.೩ ಉಚ್ಚಾರಣರಹಿತ “s”, “x” ಅಥವಾ “z”ನೊಂದಿಗೆ ಅಂತ್ಯಗೊಳ್ಳುವ ನಾಮಪದಗಳು ೧.೧.೪ ಭೌಗೋಳಿಕ ಹೆಸರುಗಳಲ್ಲಿ ಸ್ವಾಮ್ಯಸೂಚಕಗಳು ೧.೧.೫ ಸಂಸ್ಥೆ-ಸಂಘಟನೆಗಳ ಹೆಸರುಗಳಲ್ಲಿ ಸ್ವಾಮ್ಯಸೂಚಕಗಳು ೧.೧.೬ ಉದ್ದಿಮೆಗಳ ಹೆಸರುಗಳಲ್ಲಿ ಸ್ವಾಮ್ಯಸೂಚಕಗಳು ೧.೨ ಬಿಟ್ಟುಹೋದ ಅಕ್ಷರಗಳನ್ನು ಸೂಚಿಸುವ ಅಪಾಸ್ಟ್ರಫಿ ೧.೩ ಕೆಲವು ವಿಶಿಷ್ಟ ಬಹುವಚನಗಳನ್ನು ರಚಿಸುವಲ್ಲಿ ಅಪಾಸ್ಟ್ರಫಿಗಳ ಬಳಕೆ ೧.೪ ಇಂಗ್ಲಿಷೇತರ ಹೆಸರುಗಳಲ್ಲಿ ಅಪಾಸ್ಟ್ರಫಿ ಬಳಕೆ ೧.೫ ಲಿಪ್ಯಂತರಗಳಲ್ಲಿ ಅಪಾಸ್ಟ್ರಫಿಯ ಬಳಕೆ ೧.೬ ಅಶುದ್ಧ ಇಂಗ್ಲಿಷ್ ಬಳಕೆ ೧.೬.೧ ಕಮೀಷನ್:ಹಣ್ಣು,ತರಕಾರಿ ವ್ಯಾಪಾರಿ ಅಪಾಸ್ಟ್ರಫಿಗಳು ೧.೬.೨ ಲೋಪ-ದೋಷ ೧.೬.೩ ಹೆಚ್ಚಿನ ಅಥವಾ ಮಿತ ಬಳಕೆಯ ಪ್ರತಿಪಾದಕರು ೧.೬.೪ ಇತರೆ ದುರ್ಬಳಕೆಗಳು ೨ ಇಂಗ್ಲಿಷೇತರ ಬಳಕೆ ೨.೧ ಅಕ್ಷರಲೋಪದ ಚಿಹ್ನೆಯಾಗಿ ೨.೨ ಕನಿಷ್ಠ ಸಾರ್ಥಕ ಪದಾಕೃತಿಗಳ ಪ್ರತ್ಯೇಕಗೊಳಿಸುವಿಕೆ ೨.೩ ತಾಲವ್ಯೀಕರಣ ಅಥವಾ ತಾಲವ್ಯೀಕರಣವಲ್ಲದ ಗುರುತಾಗಿ ೨.೪ ಕಂಠದ್ವಾರೀಯ ಧ್ವನಿಯಾಗಿ ೨.೫ ಇತರೆ ಭಾಷೆಗಳಲ್ಲಿ ಇತರೆ ಬಳಕೆಗಳು ೩ ಮುದ್ರಣ ರೂಪ ೪ ಕಂಪ್ಯೂಟಿಂಗ್ ೪.೧ ಬೆರಳಚ್ಚು ಯಂತ್ರದ ಅಪಾಸ್ಟ್ರಫಿ ಮತ್ತು ಎಎಸ್‌ಸಿಐಐ (ASCII) ಸಂಕೇತೀಕರಣ ೪.೨ ಸ್ಮಾರ್ಟ್ ಕೋಟ್ಸ್ (Smart quotes) ೪.೩ 8-ಬಿಟ್ ಸಂಕೇತೀಕರಣಗಳಲ್ಲಿ ಮುದ್ರಣದ ಅಪಾಸ್ಟ್ರಫಿ ೪.೪ ಆದೇಶ ಸಂಕೇತ-ಸರಣಿ ರಚನೆ (Programming)(not clear ೫ ಇವನ್ನೂ ಗಮನಿಸಿ ೬ ಉಲ್ಲೇಖಗಳು ೭ ಹೆಚ್ಚಿನ ಓದಿಗಾಗಿ ೮ ಬಾಹ್ಯ ಕೊಂಡಿಗಳು
ಇಂಗ್ಲಿಷ್ ಭಾಷೆಯಲ್ಲಿ ಅಪಾಸ್ಟ್ರಫಿ ಬಳಕೆ ಸ್ವಾಮ್ಯಸೂಚಕ ಅಪಾಸ್ಟ್ರಫಿ
ಇವನ್ನೂ ನೋಡಿ: Saxon genitive
ಇಂಗ್ಲಿಷ್ ಭಾಷೆಯಲ್ಲಿ ಸ್ವಾಮ್ಯತೆಯನ್ನು ಗುರುತಿಸಲು ಅಪಾಸ್ಟ್ರಫಿಯನ್ನು ಬಳಸಲಾಗುತ್ತದೆ. ಈ ವಾಡಿಕೆಯು ಅಂತಿಮವಾಗಿ ಪುರಾತನ ಇಂಗ್ಲಿಷ್ ಭಾಷೆಯ ಸಂಬಂಧಸೂಚಕ (genitive) ಪ್ರಕರಣ: “of” ಪ್ರಕರಣದಿಂದ ವ್ಯುತ್ಪತ್ತಿಯಾಗಿದೆ. ಇದನ್ನು ಸ್ವತಃ ಹಲವು ಭಾಷೆಗಳಲ್ಲಿ ಸ್ವಾಮ್ಯಸೂಚಕ ರೂಪದಲ್ಲಿ ಬಳಸಲಾಗಿದೆ. ಹಲವು ನಾಮಪದಗಳ (nouns) ಷಷ್ಠಿ ವಿಭಕ್ತಿ ರೂಪಗಳು -es ಎಂಬ ರೂಪನಿಷ್ಪತ್ತಿ (inflection)ಯೊಂದಿಗೆ ಕೊನೆಯಾಗುತ್ತಿದ್ದವು. ಸ್ವಾಮ್ಯಸೂಚಕ ಅಂತ್ಯಕ್ಕಾಗಿ ಸರಳವಾಗಿ-s ನೊಂದಿಗೆ ವಿಕಸಿಸುತ್ತಿದ್ದವು. ನಂತರ, ಬಿಟ್ಟುಹೋದ ಅಕ್ಷರ e ಯನ್ನು ಗುರುತಿಸಲು ಅಪಾಸ್ಟ್ರಫಿಯನ್ನು ಸೇರಿಸಲಾಯಿತು. [೨]
ಜಂಟಿ ಹಾಗೂ ಪ್ರತ್ಯೇಕ ಸ್ವಾಮ್ಯಸೂಚಕ
ಜಂಟಿ ಸ್ವಾಮ್ಯಸೂಚಕ (joint possession)- Jason and Sue's emails (ಜೇಸನ್ ಮತ್ತು ಸೂ ಇಬ್ಬರ ವಿದ್ಯುನ್ಮಾನ ಅಂಚೆಗಳು); ಪ್ರತ್ಯೇಕ ಸ್ವಾಮ್ಯಸೂಚಕ (separate possession)- Jason's and Sue's emails (ಜೇಸನ್‌ನ ವಿದ್ಯುನ್ಮಾನ ಅಂಚೆಗಳು ಮತ್ತು ಸೂ ವಿದ್ಯುನ್ಮಾನ ಅಂಚೆಗಳು). ಈ ವಿಚಾರಗಳಿಗೆ ಸಂಬಂಧಿಸಿದ ಮಾಹಿತಿ ಎಷ್ಟು ಒದಗಿಸುತ್ತಾರೆ ಎನ್ನುವುದರಿಂದ ಮಾತ್ರ ಶೈಲಿ ಕೈಪಿಡಿಗಳು ವ್ಯತ್ಯಾಸ ಹೊಂದಿರುತ್ತದೆ. [೩] ಜಂಟಿ ಸ್ವಾಮ್ಯದಲ್ಲಿ, ಕೇವಲ ಕೊನೆಯ ಸ್ವಾಮ್ಯತೆ ಹೊಂದಿರುವ ಪದ ಮಾತ್ರ ಸ್ವಾಮ್ಯಸೂಚಕ ರೂಪನಿಷ್ಪತ್ತಿ ಹೊಂದಿರುತ್ತದೆ; ಪ್ರತ್ಯೇಕ ಸ್ವಾಮ್ಯಸೂಚಕದಲ್ಲಿ, ಎಲ್ಲಾ ಸ್ವಾಮ್ಯತೆ ಹೊಂದಿರುವ ಪದಗಳು ಸ್ವಾಮ್ಯಸೂಚಕ ರೂಪನಿಷ್ಪತ್ತಿ ಹೊಂದಿರುತ್ತವೆ ಎಂಬುದು ಅವುಗಳ ಬಗ್ಗೆ ಒಮ್ಮತಾಭಿಪ್ರಾಯವಾಗಿದೆ. ಆದರೆ ಯಾವುದೇ ಸ್ವಾಮ್ಯತೆ ಹೊಂದಿದ ಪದ (possessor) ಒಂದು ಸರ್ವನಾಮದಿಂದ(pronoun)ಸೂಚಿತವಾದರೆ, ಜಂಟಿ ಮತ್ತು ಪ್ರತ್ಯೇಕ ಸ್ವಾಮ್ಯಗಳೆರಡರಲ್ಲಿ, ಎಲ್ಲಾ ಸ್ವಾಮ್ಯಪದಗಳಿಗೂ ಸ್ವಾಮ್ಯಸೂಚಕ ರೂಪನಿಷ್ಪತ್ತಿಯುಂಟು (His and her emails ; His, her, and Anthea's emails ; Jason's and her emails ; His and Sue's emails ; His and Sue's wedding ; His and Sue's weddings ).
ಜಂಟಿ ಸ್ವಾಮ್ಯದ ವಿಚಾರದಲ್ಲಿ, ಕೇವಲ ಒಂದು ಅಥವಾ ಹೆಚ್ಚು ಜಂಟಿ ಸ್ವಾಮ್ಯದ ವಸ್ತುಗಳು ವ್ಯಾಕರಣಕ್ಕೆ ಸಂಬಂಧಪಟ್ಟ ಪಾತ್ರ ನಿರ್ವಹಿಸುವ ಸ್ಥಿತಿ ಹಾಗೂ ಒಂದು ಅಥವಾ ಅಂತಹದ್ದೇ ಹೆಚ್ಚಿನ ವಸ್ತುಗಳು ಹಾಗೂ ಸ್ವಾಮ್ಯತೆ ಇಲ್ಲದ ವಸ್ತು ಸ್ವತಂತ್ರವಾಗಿ ಆ ಪಾತ್ರ ನಿರ್ವಹಿಸುವ ಸ್ಥಿತಿಯ ನಡುವೆ ಮೇಲಿನ ನಿಯಮವು ವ್ಯತ್ಯಾಸ ಗುರುತಿಸುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಕ್ರಿಯಾಪದದ ಸಂಖ್ಯೆಯು ಅಗತ್ಯವನ್ನು ಪೂರೈಸಿದರೂ ("Jason and Sue's dog has porphyria") ಹಾಗೂ ಇನ್ನೂ ಕೆಲವುದರಲ್ಲಿ ಸಂದರ್ಭ ಅಗತ್ಯ ಪೂರೈಸಿದರೂ("Jason and Sue's emails rarely exceed 200 characters in length"), ಸಂಖ್ಯೆ ಮತ್ತು/ಅಥವಾ ವ್ಯಾಕರಣದ ಸ್ಥಿತಿಯು ಕೆಲವೊಮ್ಮೆ ದ್ವಂದ್ವಾರ್ಥತೆಯ ನಿರ್ಣಯವನ್ನು ತಡೆಗಟ್ಟಬಹುದು.
ಒಂದಕ್ಕಿಂತಲೂ ಹೆಚ್ಚು ಅಂಶಗಳಿಗೆ ಸ್ವಾಮ್ಯಸೂಚಕವಿದ್ದು, ಸಂದರ್ಭವು ಕ್ರಮದಲ್ಲಿ ಇಲ್ಲದಿದ್ದಲ್ಲಿ, ಸ್ವಾಮ್ಯಸೂಚಕದ ವಿತರಣೆಯನ್ನು ನಿಷೇಧಿಸುವ ವ್ಯಾಕರಣ ನಿಯಮವು ದ್ವಂದ್ವಾರ್ಥತೆಯನ್ನು ಕೇವಲ ವರ್ಗಾಯಿಸುತ್ತದೆ .
ಜಾಸೋನ್ ಮತ್ತು ಸೂಗೆ ಕಾರು ಅಪಘಾತದಲ್ಲಿ ನಿಧನರಾದ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮಕ್ಕಳಿದ್ದರೆ, ಸೂ ಮಕ್ಕಳನ್ನು ಹೊರತುಪಡಿಸಿ ಜಾಸೋನ್‌ರ ಬೇರೆ ಯಾವ ಮಕ್ಕಳೂ ಸತ್ತಿರುವುದಿಲ್ಲ ಎಂದು ಭಾವಿಸೋಣ. ಜಂಟಿ ಸ್ವಾಮ್ಯಸೂಚಕ ವಿತರಣೆಯನ್ನು ನಿಷೇಧಿಸುವ ನಿಯಮದಡಿ, "Jason and Sue's children [rather than "Jason's and Sue's children"] died in the crash" ಎಂದು ಬರೆಯುವುದರಿಂದ, ಜೇಸನ್, ಸೂ ತಾಯಿಯಾಗಿರದ ಮಕ್ಕಳನ್ನು ಕಳೆದುಕೊಂಡ ಎಂಬ ಗೋಜಲನ್ನು ನಿವಾರಿಸುತ್ತದೆ. ಜೇಸನ್ ಸ್ವತಃ ಸತ್ತನೇ ಎಂಬ ಇನ್ನೊಂದು ದ್ವಂದ್ವಾರ್ಥತೆಯನ್ನು ಪರಿಚಯಿಸುತ್ತದೆ .
ಇನ್ನೂ ಹೆಚ್ಚಿಗೆ, ಒಂದೇ ಅಂಶವೂ ಸ್ವಾಮ್ಯಸೂಚಕವಿರುವ ಪ್ರಕರಣಗಳಲ್ಲಿ, ಜಂಟಿ ಸ್ವಾಮ್ಯಸೂಚಕ ವಿತರಣೆಯನ್ನು ನಿಷೇಧಿಸುವ ನಿಯಮವು ದ್ವಂದ್ವಾರ್ಥತೆಯನ್ನು ಪರಿಚಯಿಸುತ್ತದೆ (ಸಂದರ್ಭವು ಅದನ್ನು ನಿರ್ಣಯಿಸದಿದ್ದರೆ): ವಿತರಣೆಯ ಅಗತ್ಯವನ್ನು ಸೂಚಿಸುವ ನಿಯಮವನ್ನು ಪರಿಗಣಿಸಿ ಓದಿದಲ್ಲಿ, "Jason and Sue's dog died after being hit by a bus" ಎಂಬ ವಾಕ್ಯವು, ನಾಯಿಯು ಕೇವಲ ಸೂ ಸ್ವಾಮ್ಯದಲ್ಲಿತ್ತು, ಜೇಸನ್ ಬದುಕಿಕೊಂಡ ಅಥವಾ ಅವನು ಈ ಘಟನೆಯಲ್ಲಿ ಭಾಗಿಯಾಗಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ; ಇನ್ನೊಂದೆಡೆ, ವಿತರಣೆಯನ್ನು ನಿಷೇಧಿಸುವ ನಿಯಮವು, ಜೇಸನ್ ನಾಯಿಯ (ಸಹ)ಮಾಲಿಕನಾಗಿದ್ದನೇ ಅಥವಾ ಅವನೂ ಸಹ ಅಪಘಾತದಲ್ಲಿ ಸತ್ತನೇ ಎಂಬ ದ್ವಂದ್ವಾರ್ಥತೆಯನ್ನು ಪರಿಚಯಿಸುತ್ತದೆ.
ಸ್ವಾಮ್ಯಸೂಚಕ ಅಪಾಸ್ಟ್ರಫಿಗಾಗಿ ಸಾಮಾನ್ಯ ತತ್ವಗಳು
ಮೂಲಭೂತ ನಿಯಮ (ಏಕವಚನ ನಾಮಪದಗಳು (singular nouns))
ಬಹಳಷ್ಟು ಏಕವಚನ ನಾಮಪದಗಳಿಗೆ ಕೊನೆಯಲ್ಲಿ 's ಸೇರಿಸಲಾಗಿದೆ; ಉದಾಹರಣೆಗೆ, the cat's whiskers .
ಏಕವಚನ ನಾಮಪದವೊಂದು /s/ ಅಥವಾ /z/ ಉಚ್ಚಾರಣಾ ಶಬ್ದದೊಂದಿಗೆ ಕೊನೆಗೊಂಡರೆ (ಉದಾಹರಣೆಗೆ -s , -se , -z , -ce ಕಾಗುಣಿತದಲ್ಲಿ) 's ಸೇರಿಸುವುದೋ ಅಥವಾ ಕೇವಲ ಅಪಾಸ್ಟ್ರಫಿ ಮಾತ್ರ ಹಾಕುವುದೋ ಎಂಬ ಆಧಾರದ ಮೇಲೆ ಪದ್ಧತಿಯಲ್ಲಿ ವ್ಯತ್ಯಾಸವಿರುತ್ತದೆ. ವ್ಯಾಪಕವಾಗಿ ಸ್ವೀಕಾರಾರ್ಹ ಪದ್ಧತಿಯು ಉತ್ತಮವಾಗಿ ನಿರ್ಣಯವಾದ ಮಾತನಾಡುವ ರೂಪವನ್ನು ಅನುಸರಿಸುವುದಾಗಿದೆ. the boss's shoes , Mrs Jones' hat (ಮಾತಿನ ರೂಪಕ್ಕೆ ಆದ್ಯತೆ ನೀಡಿದಲ್ಲಿ Mrs Jones's hat ). ಹಲವು ವಿಚಾರಗಳಲ್ಲಿ ಮೌಖಿಕ ಹಾಗೂ ಲಿಖಿತ ರೂಪಗಳು ಬರಹಗಾರರ ನಡುವೆ ವ್ಯತ್ಯಾಸಗೊಳ್ಳುತ್ತದೆ. ಕೆಳಗೆ ವಿವರಣೆಗಳನ್ನು ನೋಡಿ.
ಮೂಲಭೂತ ನಿಯಮ (ಬಹುವಚನ ನಾಮಪದಗಳು (plural nouns)){ಆಧಾರ|ಮೂಲಭೂತ ನಿಯಮ (ಬಹುವಚನ ನಾಮಪದಗಳು {anchor|Basic rule (plural nouns)}}
ನಾಮಪದವು ಕೊನೆಯಲ್ಲಿ s ಹೊಂದಿರುವ ಸಾಮಾನ್ಯ ಬಹುವಚನವಾಗಿದ್ದಲ್ಲಿ, ಸ್ವಾಮ್ಯಸೂಚಕದಲ್ಲಿ ಕೊನೆಯಲ್ಲಿ ಹೆಚ್ಚುವರಿ s ಸೇರಿಸಲಾಗುವುದಿಲ್ಲ. ಹಾಗಾಗಿ, ಒಂದಕ್ಕಿಂತ ಹೆಚ್ಚು ಪೆನ್ನುಗಳನ್ನು ಉಲ್ಲೇಖಿಸುವಾಗ, pens's caps ಎನ್ನುವ ಬದಲು pens' caps ಎನ್ನುವುದು ಹೆಚ್ಚು ಸೂಕ್ತ.
ಪದದ ಕೊನೆಯಲ್ಲಿ s ಸೇರಿಸಿ ಉಂಟಾಗದ ಬಹುವಚನಗಳಲ್ಲಿ, ಇದರ ಸ್ವಾಮ್ಯಸೂಚಕಕ್ಕೆ s ನ್ನು ಅಪಾಸ್ಟ್ರಫಿಯ ನಂತರ ಸೇರಿಸಲಾಗುತ್ತದೆ; ಉದಾಹರಣೆಗೆ children's hats , women's hairdresser , some people's eyes (ಆದರೆ, ಇದನ್ನು some peoples' recent emergence into nationhood - ಈ ಉದಾಹರಣೆಗೆ ಹೋಲಿಸಿ - ಇದರಲ್ಲಿ peoples ಎಂಬುದು people ಎಂಬ ಏಕವಚನದ ಬಹುವಚನ ರೂಪವಾಗಿದೆ). ಈ ನಿಯಮಗಳನ್ನು ಸಾರ್ವತ್ರಿಕವಾಗಿ ಒಪ್ಪಲಾಗಿದೆ. ಕೆಲವು ಇಂಗ್ಲಿಷ್ ನಾಮಪದಗಳ ಬಹುವಚನಗಳು ಅಂತ್ಯದಲ್ಲಿ s ಬದಲಿಗೆ /s/ ಅಥವಾ /z/ ಉಚ್ಚಾರಣಾ ಶಬ್ದದೊಂದಿಗೆ ಉಚ್ಚರಿಸಲಾಗುತ್ತವೆ. ಉದಾಹರಣೆಗೆ ಶಬ್ದ:mice (mouse ನ ಬಹುವಚನ, dormouse , titmouse ನಂತಹ ಸಮಾಸಪದಗಳಿಗೆ), dice (die ಪದದ ಬಹುವಚನವಾಗಿ ಬಳಸಿದಾಗ), pence (penny ಪದದ ಬಹುವಚನ, sixpence ನಂತಹ ಸಮಾಸಪದಗಳನ್ನು ಏಕವಚನವೆಂದು ಪರಿಗಣಿಸಲಾಗುತ್ತಿದೆ). ಭಾಷಾ ಶೈಲಿ ಮಾರ್ಗದರ್ಶಿಗಳಲ್ಲಿ ಯಾವುದೇ ಆಕ್ಷೇಪಾರ್ಹ ನಿರೂಪಣೆಗಳ ಗೈರಿನಲ್ಲಿ, ವಾಡಿಕೆಯಂತೆ ಅಂತ್ಯದಲ್ಲಿ ಅಪಾಸ್ಟ್ರಫಿ ಮತ್ತು s ಸೇರಿಸಿ ಈ ಬಹುವಚನ ಪದಗಳ ಸ್ವಾಮ್ಯಸೂಚಕಗಳನ್ನು ರಚಿಸಬಹುದಾಗಿದೆ. ಉದಾಹರಣೆಗೆ, seven titmice's tails were found , the dice's last fall was a seven , his few pence's value was not enough to buy bread . ಸಾಧ್ಯವಾದಲ್ಲಿ, ಈ ವಾಕ್ಯಗಳನ್ನು ಬೇರೆ ರೀತಿಯಲ್ಲಿ ನಿರೂಪಿಸಬಹುದಾಗಿದೆ. the last fall of the dice was a seven . [೪]
ಮೂಲಭೂತ ನಿಯಮ (ಸಮಾಸ-ನಾಮಪದಗಳು)
ಮೇಲೆ ತಿಳಿಸಿದ ನಿಯಮಗಳಿಗೆ ಅನುಸಾರವಾಗಿ, ಸಮಾಸ-ನಾಮಪದಗಳು ತಮ್ಮ ಏಕವಚನ ಸ್ವಾಮ್ಯಸೂಚಕದಲ್ಲಿ ಅಪಾಸ್ಟ್ರಫಿ ಹಾಗೂ ಕೊನೆಯಲ್ಲಿ ಸೇರಿಸಲಾದ s ಅಕ್ಷರ ಹೊಂದಿರುತ್ತದೆ. ಉದಾಹರಣೆಗೆ, the Attorney-General's husband ; the Lord Warden of the Cinque Ports' prerogative ; this Minister for Justice's intervention ; her father-in-law's new wife .
ಈ ಉದಾಹರಣೆಗಳಲ್ಲಿ, ಕೊನೆಯಲ್ಲಿ ಸಂಭವಿಸದೇ s ನೊಂದಿಗೆ ಬಹುವಚನಗಳು ರಚನೆಯಾಗುತ್ತವೆ. ಉದಾಹರಣೆಗೆ, Attorneys-General . ಆದ್ದರಿಂದ, ಈ ಸಮಾಸಪದಗಳ ಸ್ವಾಮ್ಯಸೂಚಕ ಬಹುವಚನಗಳೊಂದಿಗೆ ಸಮಸ್ಯೆಯೊಂದು ಉಂಟಾಗುತ್ತದೆ. ಈ ವಿಚಾರ ಕುರಿತು ನಿಯಮಗಳನ್ನು ಉಲ್ಲೇಖಿಸುವ ಮೂಲಗಳು, ಬಹುವಚನ ರಚನೆಗಾಗಿ s ಸೇರಿಸಿ, ಸ್ವಾಮ್ಯಸೂಚಕಕ್ಕಾಗಿ ಪ್ರತ್ಯೇಕ s ಸೇರಿಸುವತ್ತ ಒಲವು ತೋರುತ್ತವೆ. ಉದಾಹರಣೆಗೆ, the Attorneys-General's husbands ; successive Ministers for Justice's interventions ; their fathers-in-law's new wives . [೫] ಈ ರೀತಿಯ ವಾಕ್ಯ ನಿರ್ಮಾಣಗಳು ವಿರಾಮಚಿಹ್ನೆಯ ಬಳಕೆಯನ್ನು ಸೂಕ್ತ ಮಟ್ಟಕ್ಕಿಂತಲೂ ದೂರ ಒಯ್ಯುವ ಕಾರಣ, ಪ್ರಾಯೋಗಿಕವಾಗಿ ಈ ವಾಕ್ಯಗಳನ್ನು ಸಾಮಾನ್ಯವಾಗಿ ಪದಗಳಲ್ಲಿ ವ್ಯತ್ಯಾಸ ಮಾಡಿ ರಚಿಸಲಾಗುತ್ತದೆ. ಉದಾಹರಣೆಗೆ, interventions by successive Ministers for Justice .[೬][೭]
ಇತರೆ ವಿರಾಮ ಚಿಹ್ನೆಗಳೊಂದಿಗೆ, ಸರ್ವನಾಮ(pronoun)ಗಳುಳ್ಳ ಸಮಾಸ-ನಾಮಪದಗಳು
ಪದ ಅಥವಾ ಸಮಾಸ-ನಾಮಪದಗಳು ವಿರಾಮಚಿಹ್ನೆಗಳನ್ನು ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಹೊಂದಿದ್ದಲ್ಲಿ, ಅಪಾಸ್ಟ್ರಫಿ ಮತ್ತು s ಎಂದಿನಂತೆ ಸೇರಿಸಲಾಗುವುದು. ಉದಾಹರಣೆಗೆ "Westward Ho!' s railway station;", Awaye!' s Paulette Whitten recorded Bob Wilson's story ;[೮] Washington, D.C.'s museums ,[೯] (D.C. ಎಂಬ ಪ್ರಥಮಾಕ್ಷರಿಯಲ್ಲಿ ಹೆಚ್ಚು ಬಳಕೆಯಲ್ಲಿರುವ ಶೈಲಿಗೆ ವಿರಾಮ ಚಿಹ್ನೆಯ ಅಗತ್ಯವಿರುತ್ತದೆ ಎಂದು ಭಾವಿಸಿ ).
ಪದ ಅಥವಾ ಸಮಾಸ-ನಾಮಪದದಲ್ಲಿ ಸ್ವಾಮ್ಯಸೂಚಕ ಅಪಾಸ್ಟ್ರಫಿ ಈಗಾಗಲೇ ಸೇರಿದ್ದಲ್ಲಿ, ಎರಡು ಸ್ವಾಮ್ಯಸೂಚಕಗಳು ಪರಿಣಮಿಸುತ್ತವೆ. ಉದಾಹರಣೆಗೆ, Tom's sisters' careers ; the head of marketing's husband's preference ; the master of foxhounds' best dog's death . ಕೆಲವು ಭಾಷಾಶೈಲಿ ಮಾರ್ಗದರ್ಶಿಗಳು ಇಂತಹ ವಾಕ್ಯನಿರ್ಮಾಣಗಳು ಸಾಧ್ಯವೆಂದು ಅವಕಾಶ ನೀಡಿದರೂ, ಬೇರೆ ರೀತಿಯಲ್ಲಿ ನಿರೂಪಿಸಬೇಕೆಂದು ಸಲಹೆ ನೀಡುತ್ತವೆ. ಉದಾಹರಣೆಗೆ the preference of the head of marketing's husband . ಮೂಲ ಅಪಾಸ್ಟ್ರಫಿ ಅಥವಾ s ಒಂದಿಗಿನ ಅಪಾಸ್ಟ್ರಫಿ ಪದ ಅಥವಾ ವಾಕ್ಯದ ಕೊನೆಯಲ್ಲಿ ಸಂಭವಿಸಿದರೆ, ಅದು ಎರಡು ಕಾರ್ಯ ಮಾಡಬೇಕಾಗುವುದು. ಉದಾಹರಣೆಗೆ, Our employees are better paid than McDonald's employees ; Standard & Poor's indexes are widely used ; the 5uu's first album (McDonald's ಹಾಗೂ Standard & Poor's ಪದಗಳಲ್ಲಿನ ಸ್ಥಿರ ರೂಪಗಳು ಆಗಲೇ ಸ್ವಾಮ್ಯಸೂಚಕ ಅಪಾಸ್ಟ್ರಫಿ ಹೊಂದಿರುತ್ತವೆ; 5uu's ತನ್ನ ಅಂತ್ಯದಲ್ಲಿರುವ s ಗೆ ಮುಂಚೆ ಸ್ವಾಮ್ಯಸೂಚಕವಲ್ಲದ ಅಪಾಸ್ಟ್ರಫಿ ಹೊಂದಿರುತ್ತದೆ). ಯಾವುದೇ ನಾಮಪದವಾಗಲಿ, ಅಥವಾ ನಾಮಪದ-ಪುಂಜವಾಗಲಿ ತನ್ನ ಕೊನೆಯಲ್ಲಿ ಎರಡು ಅಪಾಸ್ಟ್ರಫಿಗಳನ್ನು ಹೊಂದಿರದು. ಭೌಗೋಳಿಕ ಹೆಸರುಗಳನ್ನೊಳಗೊಂಡ ಇದೇ ರೀತಿಯ ವಿಚಾರಗಳಿಗಾಗಿ, ಕೆಳಗೆ ನೋಡಿ. ಮೇಲೆ ತಿಳಿಸಲಾದ ನಿಯಮಗಳ ವಿಸ್ತರಿತ ಅನ್ವಯಿಸುವಿಕೆಗಳಿಂದ, ಸ್ಥಿರ ಪದಗಳುಳ್ಳ ಪದಸಮೂಹಗಳ ಸ್ವಾಮ್ಯಸೂಚಕಗಳು ಇದೇ ರೀತಿ ರಚನೆಯಾಗಿರುತ್ತವೆ: “Us and Them”'s inclusion on the album The Dark Side of the Moon
You Am I's latest CD The 69'ers' last drummer, Tom Callaghan (ಇದರಲ್ಲಿ ಎರಡನೆಯ ಅಪಾಸ್ಟ್ರಫಿ ಮಾತ್ರ ಸ್ವಾಮ್ಯಸೂಚಕವಾಗಿದೆ) His 'n' Hers' first track is called “Joyriders”.[೧೦] Was She 's success greater, or King Solomon's Mines '?[೧೧]
ವಿದೇಶಿ ಪದಪುಂಜಗಳು, ಶೀರ್ಷಿಕೆಗಳೊಂದಿಗಿನ ಸಂಕೀರ್ಣತೆಗಳ ಬಗ್ಗೆ, ಕೆಳಗೆ ನೋಡಿ.
ಸಮಯ, ಹಣ ಹಾಗೂ ಇದೇ ತರಹ
ಸಮಯ ಮತ್ತು ಹಣವನ್ನು ಉಲ್ಲೇಖಿಸುವಾಗ ಅಪಾಸ್ಟ್ರಫಿ ಬಳಸಲಾಗುತ್ತದೆ. ಉದಾಹರಣೆಗೆ, one hour's respite , two weeks' holiday , a dollar's worth , five pounds' worth , one mile's drive from here ಮುಂತಾದ ವಾಕ್ಯರಚನೆಗಳಲ್ಲಿ ಬಳಸಲಾಗುತ್ತದೆ. ಇದು ಸಾಧಾರಣ ಸ್ವಾಮ್ಯಸೂಚಕ ಬಳಕೆಯಂತಿದೆ. ಉದಾಹರಣೆಗೆ, one hour's respite ಎಂದರೆ ಒಂದು ತಾಸಿನ ಬಿಡುವು (the cat's whiskers ಎಂದರೆ the whiskers of the cat ಎನ್ನುವಂತೆ). ಇದೇ ರೀತಿ ಅಪವಾದಗಳನ್ನು ಲೆಕ್ಕಿಸಲಾಗುವುದು. ಉದಾಹರಣೆಗೆ, three months pregnant (ಇಂದಿನ ಇಂಗ್ಲಿಷ್ ಭಾಷಾ ಬಳಕೆಯಲ್ಲಿ, ನಾವು pregnant of three months ಎಂದಾಗಲೀ, ಅಥವಾ one month(')s pregnant ಎಂದಾಗಲೀ ಬಳಸುವುದಿಲ್ಲ).
ಸ್ವಾಮ್ಯಸೂಚಕ ಸರ್ವನಾಮಗಳು ಮತ್ತು ವಿಶೇಷಣಗಳು
ಕೆಳಕಂಡ ಸ್ವಾಮ್ಯಸೂಚಕ ಸರ್ವನಾಮಗಳು ಮತ್ತು ಗುಣವಾಚಕಗಳಲ್ಲಿ ಅಪಾಸ್ಟ್ರಫಿ ಬಳಸಲಾಗುವುದಿಲ್ಲ. ಉದಾಹರಣೆಗೆ yours , his , hers , ours , its , theirs , and whose . (ಹಲವರು it ಪದದ ಸ್ವಾಮ್ಯಸೂಚಕಕ್ಕೆ it's ಬಳಸುತ್ತಾರೆ, ಆದರೆ it's ಎಂಬುದು ಕೇವಲ it is ಅಥವಾ it has ನ ಸಂಕುಚಿತ ರೂಪ ಎಂಬ ಬಗ್ಗೆ ಸರ್ವಾನುಮತವಿದೆ. [೧೨])
ಅಂತ್ಯದಲ್ಲಿ s ಹೊಂದಿರದ ಇತರೆ ಎಲ್ಲಾ ಸ್ವಾಮ್ಯಸೂಚಕ ಸರ್ವನಾಮಗಳು ಅಪಾಸ್ಟ್ರಫಿ ಹೊಂದಿರುತ್ತವೆ. ಉದಾಹರಣೆಗೆ one's ; everyone's ; somebody's , nobody else's ಇತ್ಯಾದಿ. ಬಹುವಚನ ರೂಪಗಳೊಂದಿಗೆ, ನಾಮಪದಗಳಂತೆಯೇ ಅಪಾಸ್ಟ್ರಫಿಯು s ನಂತರ ಸೇರುತ್ತದೆ. ಉದಾಹರಣೆಗೆ the others' husbands (ಆದರೆ They all looked at each other's husbands ಹೋಲಿಸಿ, ಇದರಲ್ಲಿ each ಹಾಗೂ other ಎರಡೂ ಏಕವಚನದಲ್ಲಿದೆ).
ಅಸಂದಿಗ್ಧಕರಣಕ್ಕೆ ಪ್ರಾಮುಖ್ಯತೆ
ಸ್ಟೀವೆನ್ ಪಿಂಕರ್ ಅವರ The Language Instinct ನಲ್ಲಿ ಪಟ್ಟಿ ಮಾಡಲಾದ ನಾಲ್ಕು ಪದಪುಂಜಗಳ ಪ್ರತಿಯೊಂದಕ್ಕೂ ಸ್ಪಷ್ಟ ಅರ್ಥವಿದೆ:
My sister's friend's investments (ಹೂಡಿಕೆಗಳು ನನ್ನ ಸಹೋದರಿಯ ಗೆಳತಿ/ಗೆಳೆಯನಿಗೆ ಸೇರಿದೆ) My sister's friends' investments (ಹೂಡಿಕೆಗಳು ನನ್ನ ಸಹೋದರಿಯ ಹಲವಾರು ಗೆಳತಿ/ಗೆಳೆಯರಿಗೆ ಸೇರಿದೆ) My sisters' friend's investments (ಹೂಡಿಕೆಗಳು ನನ್ನ ಅನೇಕ ಸಹೋದರಿಯರ ಗೆಳತಿ/ಗೆಳೆಯನಿಗೆ ಸೇರಿದೆ. My sisters' friends' investments (ಹೂಡಿಕೆಗಳು ನನ್ನ ಅನೇಕ ಸಹೋದರಿಯರ ಅನೇಕ ಗೆಳತಿಯರು/ಗೆಳೆಯರಿಗೆ ಸೇರಿದೆ)
ಸ್ವಾಮ್ಯಸೂಚಕ ಅಪಾಸ್ಟ್ರಫಿಯನ್ನು ಅವಲಂಬಿಸಿದ ಅರ್ಥವುಳ್ಳ ವಾಕ್ಯ ರಚಿಸಿರೆಂದು ಕಿಂಗ್‌ಸ್ಲೇ ಅಮಿಸ್‌ಗೆ ಸವಾಲೆಸೆದಾಗ, ಅವರು ಪ್ರತಿಕ್ರಿಯೆಯಲ್ಲಿ ಈ ಉದಾಹರಣೆಗಳನ್ನು ಉಲ್ಲೇಖಿಸಿದರು:
Those things over there are my husband's. (ಅಲ್ಲಿರುವ ವಸ್ತುಗಳು ನನ್ನ ಪತಿಗೆ ಸೇರಿವೆ. .) Those things over there are my husbands'. (ಅಲ್ಲಿರುವ ವಸ್ತುಗಳು ನನ್ನ ಅನೇಕ ಪತಿಯರಿಗೆ ಸೇರಿದ್ದಾಗಿದೆ .) Those things over there are my husbands. (ನಾನು ಅಲ್ಲಿರುವ ವ್ಯಕ್ತಿಗಳೊಂದಿಗೆ ವಿವಾಹವಾಗಿದ್ದೇನೆ. )[೧೩]
“s” ಅಥವಾ “z” ಧ್ವನಿಯೊಂದಿಗೆ ಅಂತ್ಯಗೊಳ್ಳುವ ಏಕವಚನ ನಾಮಪದಗಳು
ಈ ಉಪವಿಭಾಗವು, ಅಂತ್ಯದಲ್ಲಿ sibilant /s/ ಅಥವಾ /z/ ಧ್ವನಿಯೊಂದಿಗೆ ಉಚ್ಚರಿಸಲಾಗುವ ಏಕವಚನದ ನಾಮಪದಗಳ ಬಗ್ಗೆ ಚರ್ಚಿಸುತ್ತದೆ. ಈ ಪದಗಳ ಕಾಗುಣಿತವು -s , -se , -z , -ze , -ce , -x , ಅಥವಾ -xe ಅಕ್ಷರಗಳೊಂದಿಗೆ ಕೊನೆಗೊಳ್ಳುತ್ತವೆ.
ಹಲವು ವಿಶ್ವಸನೀಯ ಮೂಲಗಳ ಪ್ರಕಾರ, sibilant ಧ್ವನಿಯೊಂದಿಗೆ ಅಂತ್ಯವಾಗುವ ಎಲ್ಲಾ ಏಕವಚನ ನಾಮಪದಗಳು ಪ್ರಾಯೋಗಿಕವಾಗಿ ಅಪಾಸ್ಟ್ರಫಿಯ ನಂತರ ಹೆಚ್ಚುವರಿ s ಒಂದಿಗಿನ ಸ್ವಾಮ್ಯಸೂಚಕ ರೂಪಗಳನ್ನು ಹೊಂದಿವೆ. ಉದಾಹರಣೆಗೆ, Modern Language Association ಹಾಗೂ The Economist . [೧೪] ಇಂತಹ ಮೂಲಗಳು ಈ ಉದಾಹರಣೆಗಳಂತೆ ಸ್ವಾಮ್ಯಸೂಚಕ ಏಕವಚನಗಳನ್ನು ನಿರೀಕ್ಷಿಸುತ್ತವೆ: Senator Jones's umbrella ; Mephistopheles's cat . ಇನ್ನೊಂದೆಡೆ, ಕೆಲವು ಆಧುನಿಕ ಬರಹಗಾರರು ಎಲ್ಲಾ ಸಂದರ್ಭಗಳಲ್ಲಿಯೂ ಹೆಚ್ಚುವರಿ s ಬಿಟ್ಟುಬಿಡುತ್ತಾರೆ. ಷಿಕಾಗೋ ಮ್ಯಾನುಯಲ್ ಆಫ್ ಸ್ಟೈಲ್ ಪರ್ಯಾಯ ಪದ್ಧತಿಯೆಂದು ಇದಕ್ಕೆ ಅವಕಾಶ ನೀಡುತ್ತದೆ. [೧೫] ಸಾಮಾನ್ಯವಾಗಿ, ಷಿಕಾಗೊ ಮ್ಯಾನುಯಲ್ ಅಫ್ ಸ್ಟೈಲ್ ಪ್ರಚಲಿತ ಮಾರ್ಗದರ್ಶಿಗಳಲ್ಲಿ ಬಹಳಷ್ಟು ಮಾರ್ಗದರ್ಶಿಗಳೊಂದಿಗೆ ಹೊಂದಿಕೊಂಡು ಹೋಗುತ್ತದೆ. ಇದು ಸಾಂಪ್ರದಾಯಿಕ ಪದ್ಧತಿಯನ್ನು ಶಿಫಾರಸು ಮಾಡುತ್ತದಾದರೂ, ಮಾತನಾಡುವ ಪದದ ಸೂಕ್ತ ಬಳಕೆಗಾಗಿ ಹಲವು ವಿನಾಯಿತಿಗಳಿಗೆ ಅನುಮತಿ ನೀಡುತ್ತದೆ. ಉದಾಹರಣೆಗೆ ಊಷ್ಮ ಧ್ವನಿ(sibilant )ಯೊಂದಿಗೆ ಕೊನೆಗೊಳ್ಳುವ ಬಹ್ವಕ್ಷರದ ಪದಗಳಲ್ಲಿ ಹೆಚ್ಚುವರಿ s ಬಿಟ್ಟುಬಿಡುವುದೂ ಸಹ ಇದರಲ್ಲೊಂದು ಪದ್ಧತಿಯಾಗಿದೆ. [೧೬] ಸಾಮಾನ್ಯ ತತ್ತ್ವಗಳನ್ನು ಪರಿವರ್ತಿಸುವ ಅಥವಾ ವಿಸ್ತರಿಸುವಂತಹ ನಿಯಮಗಳಲ್ಲಿ ಕೆಳಕಂಡವು ಇವೆ:
ಏಕವಚನದ ಸ್ವಾಮ್ಯಸೂಚಕವು ಹೆಚ್ಚುವರಿ ಊಷ್ಮಧ್ವನಿ(sibilant )ಯೊಂದಿಗೆ ಉಚ್ಚರಿಸಲು ಬಹಳ ಕಷ್ಟಕರ ಅಥವಾ ವಿಚಿತ್ರವೆನಿಸಿದ್ದಲ್ಲಿ, ಹೆಚ್ಚುವರಿ s ಸೇರಿಸುವುದು ಬೇಡ; ಈ ವಿನಾಯಿತಿಗಳನ್ನು ದಿ ಗಾರ್ಡಿಯನ್ , [೧೭] ಎಮೊರಿ ವಿಶ್ವವಿದ್ಯಾನಿಲಯದ ಲೇಖನಾ ಕೇಂದ್ರ [೧೮] ಹಾಗೂ ದಿ ಅಮೆರಿಕನ್ ಹೆರಿಟೇಜ್ ಬುಕ್ ಆಫ್ ಇಂಗ್ಲಿಷ್ ಯುಸೇಜ್ ಬೆಂಬಲಿಸುತ್ತದೆ. [೧೯] ಇಂತಹ ಮೂಲಗಳು ಈ ಉದಾಹರಣೆಗಳಂತೆ ಸ್ವಾಮ್ಯಸೂಚಕ ಏಕವಚನಗಳಿಗೆ ಅವಕಾಶ ನೀಡುತ್ತವೆ - Socrates' later suggestion ; James's house , ಅಥವಾ James' house , ಇದು ಯಾವ ರೀತಿಯ ಉಚ್ಚಾರಣೆ ಬಳಸುವ ಉದ್ದೇಶವಿರುತ್ತದೋ ಅದನ್ನು ಅವಲಂಬಿಸುತ್ತದೆ. ಊಷ್ಮಧ್ವನಿಯೊಂದಿಗೆ ಕೊನೆಗೊಳ್ಳುವ ಶಾಸ್ತ್ರೀಯ, ಬೈಬಲ್‌ನ ಹಾಗೂ ಇದೇ ರೀತಿಯ ಹೆಸರುಗಳು, ಅದರಲ್ಲೂ ವಿಶಿಷ್ಟವಾಗಿ, ಬಹ್ವಕ್ಷರದ ಪದಗಳಾಗಿದ್ದಲ್ಲಿ, ಸ್ವಾಮ್ಯಸೂಚಕದಲ್ಲಿ ಹೆಚ್ಚುವರಿ s ಹೊಂದಿರುವುದಿಲ್ಲ. ಇಂತಹವುಗಳಲ್ಲಿ ವಿನಾಯಿತಿ ನೀಡುವ ಮೂಲಗಳ ಪೈಕಿ ದಿ ಟೈಮ್ಸ್ [೨೦] ಮತ್ತು ದಿ ಎಲಿಮೆಂಟ್ಸ್ ಆಫ್ ಸ್ಟೈಲ್ ಸಾಮಾನ್ಯ ಷರತ್ತುಗಳನ್ನು ಪ್ರತಿಪಾದಿಸುತ್ತವೆ, ಹಾಗೂ ವ್ಯಾಂಡರ್ಬಿಲ್ಟ್ ವಿಶ್ವವಿದ್ಯಾನಿಲಯವು[೨೧] ಕೇವಲ ಮೋಸಸ್ ಮತ್ತು ಯೇಸುಕ್ರಿಸ್ತ ನನ್ನು ಮಾತ್ರ ಉಲ್ಲೇಖಿಸುತ್ತವೆ. ಒಂದು ನಿರ್ದಿಷ್ಟ ಪ್ರಕರಣದಲ್ಲಿ, 's ಬಳಸುವ, ಉದಾಹರಣೆಗೆ James's ಅಥವಾ Chris's ಎಂದು ಬರೆಯವ ಜನರೂ ಸಹ, Jesus's ಬದಲಿಗೆ Jesus' ಎಂದು ಬರೆಯುವುದೂ ಉಂಟು. ಹಾರ್ಟ್ಸ್ ರೂಲ್ಸ್ ನಲ್ಲಿ Jesus' ನ್ನು ಸ್ವೀಕಾರಾರ್ಹ ಧರ್ಮಾಚರಣೆಗೆ ಸಂಬಂಧಿತ ಹಳೆಯ ಶೈಲಿಯಾಗಿ ಉಲ್ಲೇಖಿಸಲಾಗುತ್ತದೆ.
ಇದೇ ರೀತಿ, s ಒಂದಿಗೆ ಅಂತ್ಯಗೊಂಡು, ಹೆಚ್ಚುವರಿ s ಇಲ್ಲದೆ ಸ್ವಾಮ್ಯಸೂಚಕ ಅಪಾಸ್ಟ್ರಫಿ ಹೊಂದಿರುವ ಗಮನಾರ್ಹ ಹೆಸರುಗಳ ಪೈಕಿ Dickens ಮತ್ತು Williams ಸೇರಿವೆ. ಇಂತಹ ಯಾವುದಾದರೂ ಹೆಸರುಗಳಲ್ಲಿ ಹೆಚ್ಚುವರಿ s ಬಿಟ್ಟುಬಿಡುವುದರ ನೀತಿಯನ್ನು ಆಗಾಗ್ಗೆ ಪಾಲಿಸಲಾಗುತ್ತದೆ. ಆದರೆ ಕೆಲವು ನಿರ್ದಿಷ್ಟ ಹೆಸರುಗಳು ಪರಸ್ಪರ ವಿರೋಧಾತ್ಮಕವಾಗಿದ್ದರೆ ಇದು ಸಮಸ್ಯಾತ್ಮಕವಾಗಬಹುದು. ಉದಾಹರಣೆಗೆ, St James' Park in Newcastle [the football ground] and the area of St. James's Park in London. ಭೌಗೋಳಿಕ ಹೆಸರುಗಳ ಬಳಕೆ ಬಗ್ಗೆ ಹೆಚ್ಚು ವಿವರಣೆಗಳಿಗಾಗಿ ಕೆಳಗೆ ಸಂಬಂಧಪಟ್ಟ ವಿಭಾಗವನ್ನು ನೋಡಿ.
ಕೆಲವು ಬರಹಗಾರರು sake ಪದದೊಂದಿಗೆ ಸಾಮಾನ್ಯ ಮಾತನಾಡುವ ಪದ್ಧತಿಯನ್ನು ಈ ಪ್ರಕರಣಗಳಲ್ಲಿ ನಮೂದಿಸುವರು: for convenience' sake , for goodness' sake , for appearance' sake , for compromise' sake ಇತ್ಯಾದಿ. ಈ ವಿರಾಮಚಿಹ್ನೆಗೆ ಹಲವು ಶೈಲಿ ಕೈಪಿಡಿಗಳಲ್ಲಿ ಆದ್ಯತೆ ನೀಡಲಾಗಿದೆ. ಇತರರು 's ಸೇರಿಸಲು ಆದ್ಯತೆ ನೀಡುತ್ತಾರೆ. ಉದಾಹರಣೆಗೆ for convenience's sake . [೨೨] ಇನ್ನೂ ಕೆಲವು ಮೂಲಗಳು, sake ಗೆ ಮುಂಚಿತವಾಗಿ s ನಂತಹ ಧ್ವನಿ ಹೊಂದಿದ್ದಲ್ಲಿ, ಅಪಾಸ್ಟ್ರಫಿಯನ್ನು ಬಿಟ್ಟುಬಿಡುತ್ತವೆ. ಉದಾಹರಣೆಗೆ, for morality's sake , but for convenience sake . [೨೩] ಉಚ್ಚಾರಣರಹಿತ “s”, “x” ಅಥವಾ “z”ನೊಂದಿಗೆ ಅಂತ್ಯಗೊಳ್ಳುವ ನಾಮಪದಗಳು
ಉಚ್ಚಾರಣರಹಿತ s , x ಅಥವಾ z ಒಂದಿಗೆ ಕೊನೆಗೊಳ್ಳುವ ಫ್ರೆಂಚ್ ನಾಮಪದಗಳ ಇಂಗ್ಲಿಷ್ ಭಾಷಾ ಸ್ವಾಮ್ಯಸೂಚಕವನ್ನು ವಿವಿಧ ತಜ್ಞರು ವಿವಿಧ ರೂಪಗಳಲ್ಲಿ ನಮೂದಿಸುತ್ತಾರೆ. ಕೆಲವರು Descartes' ಮತ್ತು Dumas' ಎನ್ನುವುದಕ್ಕೆ ಆದ್ಯತೆ ನೀಡಿದರೆ, ಇನ್ನು ಕೆಲವರು Descartes's ಮತ್ತು Dumas's ಎಂದು ಪ್ರತಿಪಾದಿಸುತ್ತಾರೆ. ಖಚಿತವಾಗಿಯೂ, ಈ ವಿಚಾರಗಳಲ್ಲಿಊಷ್ಮಧ್ವನಿ( sibilant )ಉಚ್ಚರಿತವಾಗಿರುತ್ತದೆ. ಸದ್ಯದಲ್ಲಿರುವ ಕೊನೆಯ ಅಕ್ಷರವು ಉಚ್ಚರಿತವಾಗುತ್ತದೆಯೇ ಅಥವಾ ಕೊನೆಯಲ್ಲಿ s ಸೇರಿಸುವ ಅಗತ್ಯವಿದೆಯೇ ಎಂಬುದು ಸೈದ್ಧಾಂತಿಕ ಪ್ರಶ್ನೆಯಾಗಿದೆ. x ಅಥವಾ z ಒಂದಿಗೂ ಅದೇ ರೀತಿಯ ಉದಾಹರಣೆಗಳು Sauce Périgueux's main ingredient is truffle ; His pince-nez's loss went unnoticed ; “Verreaux('s) eagle, a large, predominantly black eagle, Aquila verreauxi,...” “Verreaux”ಗಾಗಿ OED ನಮೂದನೆಯಲ್ಲಿ x ಉಚ್ಚಾರಣೆರಹಿತವಾಗಿದೆ see Verreaux's eagle ನೋಡಿ, ಇದರಲ್ಲಿ ಪ್ರತಿಯೊಂದರಲ್ಲೂ ಬರಹಗಾರರು ಹೆಚ್ಚುವರಿ s ತ್ಯಜಿಸುತ್ತಾರೆ. ಇದೇ ತತ್ತ್ವಗಳು ಮತ್ತು ಅವಶೇಷರೂಪೀ ಅನಿಶ್ಚಿತತೆಗಳು Illinois ಮತ್ತು Arkansas ಎಂಬ ಸಹಜ ಇಂಗ್ಲಿಷ್ ಪದಗಳೊಂದಿಗೆ ಅನ್ವಯಿಸುತ್ತವೆ. [೨೪]
ಉಚ್ಚಾರಣೆರಹಿತ x , z ಅಥವಾ s ಒಂದಿಗೆ ಅಂತ್ಯಗೊಳ್ಳುವ ಬಹುವಚನ ಪದಗಳ ಸ್ವಾಮ್ಯಸೂಚಕದಲ್ಲಿ, ಈ ವಿಚಾರವನ್ನು ಗಮನಿಸುವ ಕೆಲವು ತಜ್ಞರು ಮಾದರಿಯಾಗಿ ಹೆಚ್ಚುವರಿ s ನ ಬಳಕೆ ಹಾಗೂ ಈ s ನ ಮುಂಚೆ ಒಂದು ಅಪಾಸ್ಟ್ರಫಿಯ ಅಗತ್ಯದ ಬಗ್ಗೆ ಹೇಳುತ್ತಾರೆ. ಉದಾಹರಣೆಗೆ The Loucheux's homeland is in the Yukon ; Compare the two Dumas's literary achievements . [೨೫] ಕೊನೆಯಲ್ಲಿ ಉಚ್ಚಾರಣೆರಹಿತ ಬಹುವಚನವುಳ್ಳ ಉಲ್ಲೇಖಿತ ಫ್ರೆಂಚ್ ಶೀರ್ಷಿಕೆಯ ಸ್ವಾಮ್ಯಸೂಚಕವು ಸಂದಿಗ್ಧವಾಗಿದೆ. ಉದಾಹರಣೆಗೆ “Trois femmes's long and complicated publication history”,[೨೬] ಆದರೆ “Les noces' ನ ಏಕವಚನ ಪ್ರಭಾವವು 'exotic primitive'...” (noces ನಲ್ಲಿ ಸನಿಹದ ಊಷ್ಮಧ್ವನಿ(sibilants )-ce- ಹಾಗೂ ಏಕವಚನ ದಲ್ಲಿ s- ). [೨೭] ಮೇಲೆ ಇತರೆ ಶೀರ್ಷಿಕೆಯ ನಿರೂಪಣೆಗಳನ್ನು ಹೋಲಿಸಿ.
ಕೈಪಿಡಿಗಳು ಏಕರೂಪತೆಯನ್ನು ನೀಡುವ ತತ್ವವನ್ನು ಸಾಮಾನ್ಯವಾಗಿ ಹುಡುಕುತ್ತವೆ. ಸಾಮಾನ್ಯ ಇಂಗ್ಲೀಷ್ ವಿರಾಮಚಿಹ್ನೆಗಳಿಗೆ ವಕ್ರವಾಗಿ ಹೊಂದಿಕೆಯಾಗುವ ವಿದೇಶಿ ಪದಗಳಿಗೆ ಕೂಡ ಕೈಪಿಡಿಗಳು ತತ್ವವನ್ನು ಹುಡುಕುತ್ತದೆ. ಭೌಗೋಳಿಕ ಹೆಸರುಗಳಲ್ಲಿ ಸ್ವಾಮ್ಯಸೂಚಕಗಳು
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸ್ಥಳಗಳ ಹೆಸರುಗಳು ಸಾಮಾನ್ಯವಾಗಿ ಸ್ವಾಮ್ಯಸೂಚಕ ಅಪಾಸ್ಟ್ರಫಿಯನ್ನು ಬಳಸುವುದಿಲ್ಲ. ಸ್ಥಳೀಯ ಆಡಳಿತಗಳು ಮತ್ತು ಭೌಗೋಳಿಕ ಲಕ್ಷಣಗಳನ್ನು ವಿಧ್ಯುಕ್ತವಾಗಿ ಹೆಸರಿಸುವ ಅಮೆರಿಕಾ ಸಂಯುಕ್ತ ಸಂಸ್ಥಾನದ ಭೌಗೋಳಿಕ ನಾಮ ಮಂಡಳಿಯು 1890ರಿಂದಲೂ ಸ್ವಾಮ್ಯಸೂಚಕ ಅಪಾಸ್ಟ್ರಫಿಗಳ ಬಳಕೆಯ ಬಗ್ಗೆ ಅಸಮ್ಮತಿ ತೋರುತ್ತಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ನೈಸರ್ಗಿಕ ಲಕ್ಷಣಗಳಲ್ಲಿನ ಕೇವಲ ಐದು ಹೆಸರುಗಳನ್ನು ಅಧಿಕೃತವಾಗಿ ಷಷ್ಠಿ ವಿಭಕ್ತಿಯ ಅಪಾಸ್ಟ್ರಫಿಯೊಂದಿಗೆ ಹೇಳಲಾಗುತ್ತದೆMartha's Vineyard[೨೮] ಎಂಬುದು ಒಂದು ಉದಾಹರಣೆ. ಇನ್ನೊಂದೆಡೆ, ಯುನೈಟೆಡ್ ಕಿಂಗ್ಡಮ್ Bishop's Stortford, Bishop's Castle ಮತ್ತು King's Lynn ಹೆಸರುಗಳನ್ನು ಹೊಂದಿದೆ. ಆದರೆ,( St Albans, St Andrews and St Helens ಹೆಸರುಗಳ ವಿಚಾರದಲ್ಲಿ, ಈ ಬಳಕೆ ವಾಡಿಕೆಗೆ ತರುವ ಮುಂಚೆಯೇ ಈ ರೀತಿ ನಾಮಕರಣ ಮಾಡಲಾಯಿತು) .ನ್ಯೂಕ್ಯಾಸಲ್ ಯುನೈಟೆಡ್ St James' Parkನಲ್ಲಿ ಆಡುತ್ತದೆ ಹಾಗೂ ಎಕ್ಸೆಟರ್ ಸಿಟಿ St James Parkನಲ್ಲಿ ಆಡುತ್ತದೆ, ಲಂಡನ್ St James's Parkಹೊಂದಿದೆ. (ಲಂಡನ್‌ನ ಇಡೀ ಪ್ರದೇಶಕ್ಕೆSt James's Church, Piccadilly ಹೆಸರಿಡಲಾಗಿದೆ.[೨೯]).' ಕೊನೆಯ ಪ್ರಕರಣದ ವಿಶೇಷ ಸನ್ನಿವೇಶಗಳು ಹೀಗಿರಬಹುದು: ಈ ಸ್ಥಳದ ಹೆಸರಿನ ಸಾಂಪ್ರದಾಯಿಕ ಉಚ್ಚಾರಣೆಯು ಅದರ ಕೊನೆಯಲ್ಲಿ ಹೆಚ್ಚುವರಿ -s ಸೇರಿಸುವ ಮೂಲಕ ಬಿಂಬಿಸಲಾಗಿದೆ. ಅಪಾಸ್ಟ್ರಫಿಯಿಲ್ಲದೆ ಕೊನೆಯ -s ನ್ನು ಎರಡು ಬಾರಿ ಬಳಸುವಂತಿಲ್ಲವಾದ್ದರಿಂದ, ಈ ಸ್ಥಳದ ಹೆಸರಿಗೆ ಅಪಾಸ್ಟ್ರಫಿಯಿದೆ. ಇದನ್ನು ಎರಡು ಬಾರಿಯ ಷಷ್ಠಿ ವಿಭಕ್ತಿಯ ಉದಾಹರಣೆಯೆಂದು ಪರಿಗಣಿಸಬಹುದು. ಇದು ಸೇಂಟ್ ಜೇಮ್ಸ್‌ನ ಇಗರ್ಜಿಯ ಉದ್ಯಾನವನ್ನು ಉಲ್ಲೇಖಿಸುತ್ತದೆ (the park of the church of St James). ಆದರೆ, ಆಸ್ಟ್ರೇಲಿಯಾ ಸೇರಿದಂತೆ ಹಲವು ಇಂಗ್ಲಿಷ್-ಭಾಷಿಕ ದೇಶಗಳಲ್ಲಿ ಭೌಗೋಳಿಕ ಹೆಸರುಗಳಲ್ಲಿ ಅಪಾಸ್ಟ್ರಫಿಯನ್ನು ತ್ಯಜಿಸುವುದು ಸ್ಪಷ್ಟ ಮಾನದಂಡವಾಗುತ್ತಿದೆ ಎಂಬ ಸತ್ಯದಿಂದ ಇದಾವುದೂ ಅಪಕರ್ಷಿಸುವುದಿಲ್ಲ. [೩೦] ಯುನೈಟೆಡ್ ಕಿಂಗ್ಡಮ್ ಮತ್ತು ಕೆನಡಾ ದೇಶಗಳಲ್ಲಿ ಈ ಪದ್ಧತಿಯು ಏಕರೂಪವಾಗಿಲ್ಲ.[೩೧] ಸಂಸ್ಥೆ-ಸಂಘಟನೆಗಳ ಹೆಸರುಗಳಲ್ಲಿ ಸ್ವಾಮ್ಯಸೂಚಕಗಳು
ಪ್ರಮಾಣಿತ ತತ್ತ್ವಗಳ ಪ್ರಕಾರ ಅಗತ್ಯವೆಂದು ಕಂಡುಬಂದರೂ, ಕೆಲವೊಮ್ಮೆ, ಸಮುದಾಯಗಳು, ಗುಂಪುಗಳು ಮತ್ತು ಇತರೆ ಸಂಘಟನೆಗಳ ಹೆಸರುಗಳಲ್ಲಿ ಅಪಾಸ್ಟ್ರಪಿಯನ್ನು ಬಿಟ್ಟುಬಿಡಲಾಗುತ್ತದೆ. ಉದಾಹರಣೆಗೆ, Country Women's Association ನಲ್ಲಿ ಅಪಾಸ್ಟ್ರಫಿ ಬಳಸಲಾಗಿದೆ. ಆದರೆ International Aviation ಟೆಂಪ್ಲೇಟು:Sic Association ನಲ್ಲಿ ಬಳಸಲಾಗಿಲ್ಲ;[೩೨] Magistrates' Court of Victoria [೩೩]ನಲ್ಲಿ ಅಪಾಸ್ಟ್ರಫಿ ಬಳಸಲಾಗಿದೆ, ಆದರೆ Federated Ship Painters and Dockers Union ನಲ್ಲಿ ಅಪಾಸ್ಟ್ರಫಿ ಬಳಸಲಾಗಿಲ್ಲ. ಇದರ ಬಳಕೆ ವ್ಯತ್ಯಾಸವಾಗುವ ಸ್ಥಿತಿಗಳಲ್ಲಿದೆ ಹಾಗೂ ಸುಸಂಗತವಾಗಿಲ್ಲ. ಹೆಸರಿನ ಪ್ರಮಾಣಿತ ಸ್ವರೂಪದ ಬಗ್ಗೆ ಯಾವುದಾದರೂ ಅಧಿಕೃತ ಮೂಲವನ್ನು ಉಲ್ಲೇಖಿಸಿ ಎಂದು ಶೈಲಿ ಕೈಪಿಡಿಗಳು ಸಲಹೆ ನೀಡುತ್ತವೆ. ಕೆಲವು ಅಂತಹ ಅಪಾಸ್ಟ್ರಫಿಯ ಪರ ಅಥವಾ ವಿರುದ್ಧ ನಿರ್ದೇಶಾತ್ಮಕ ವಿವರಣೆ ನೀಡುತ್ತವೆ. [೩೪] ಟೆಂಪ್ಲೇಟು:Sic ವಿಚಾರದಂತೆ, ಇಂತಹ ರೂಪಗಳನ್ನು ಸ್ವಾಮ್ಯಸೂಚಕವಲ್ಲದ ಬಹುವಚನಗಳೆಂದು ಸುಮ್ಮನೆ ವಿಶ್ಲೇಷಿಸಲು ಸಾಧ್ಯವಿಲ್ಲ, ಏಕೆಂದರೆ woman ಎಂಬ ಏಕವಚನ ಪದಕ್ಕೆ women ಎಂಬುದು ಏಕೈಕ ಸರಿಯಾದ ಬಹುವಚನ ರೂಪವಾಗಿದೆ. ಉದ್ದಿಮೆಗಳ ಹೆಸರುಗಳಲ್ಲಿ ಸ್ವಾಮ್ಯಸೂಚಕಗಳು
ಇವನ್ನೂ ನೋಡಿ: S-form
ಉದ್ದಿಮೆಯ ಹೆಸರು ಕೌಟುಂಬಿಕ ಹೆಸರನ್ನು ಆಧರಿಸಿದ್ದಲ್ಲಿ, ಅದು ಅಪಾಸ್ಟ್ರಫಿ ತೆಗೆದುಕೊಳ್ಳಬಹುದು ಅಥವಾ ತೆಗೆದುಕೊಳ್ಳದಿರಬಹುದು. ಉದಾಹರಣೆಗೆ, Sainsbury's ಮತ್ತು Harrods ಉದ್ದಿಮೆ ಹೆಸರುಗಳನ್ನು ಗಮನಿಸಿ. ಆದರೂ, ಇತ್ತೀಚೆಗಿನ ದಿನಗಳಲ್ಲಿ, ಉದ್ದಿಮೆಯ ಹೆಸರುಗಳಿಂದ ಅಪಾಸ್ಟ್ರಫಿ ಬಿಟ್ಟುಬಿಡುವ ಪ್ರವೃತ್ತಿ ಹೆಚ್ಚುತ್ತಿದೆ. ಮೊದಲ ಹೆಸರನ್ನು ಆಧರಿಸಿದ ಹೆಸರುಗಳು ಬಹುಶಃ ಅಪಾಸ್ಟ್ರಪಿ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು. ಉದಾಹರಣೆಗೆ Joe's Crab Shack . ಅಪಾಸ್ಟ್ರಫಿ Protection Society [೩೫] (ಅಪಾಸ್ಟ್ರಫಿ ರಕ್ಷಣಾ ಸಮುದಾಯ) ಎನ್ನಲಾದ ಒಂದು ಸಣ್ಣ ಸಮುದಾಯವು, ಅವರ ಹೆಸರುಗಳಿಂದ ನಾಪತ್ತೆಯಾದ ವಿರಾಮಚಿಹ್ನೆಯನ್ನು ಪುನಃ ಸೇರಿಸಿಕೊಳ್ಳಬೇಕೆಂದು Harrods, Currys ಹಾಗೂ Selfridgesನಂತಹ ಬೃಹತ್ ವ್ಯಾಪಾರಿ ಮಳಿಗೆಗಳಿಗೆ ವಿನಂತಿಸಿದೆ. Barclays PLC (ಬಾಕ್ಲೇಯ್ಸ್ ಪಿಎಲ್‌ಸಿ) ವಕ್ತಾರರು ತಿಳಿಸಿದಂತೆ, 'ಅದು ಹಾಗೆಯೇ, ವರ್ಷಗಳಾನಂತರದಲ್ಲಿ ಮಾಯವಾಗಿದೆ. ಬಾರ್ಕ್ಲೇಯ್ಸ್ ಈಗ ಕೌಟುಂಬಿಕ ಹೆಸರಿನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ.'[೩೬] ಬಿಟ್ಟುಹೋದ ಅಕ್ಷರಗಳನ್ನು ಸೂಚಿಸುವ ಅಪಾಸ್ಟ್ರಫಿ
ಅಪಾಸ್ಟ್ರಫಿಯನ್ನು ಸಾಮಾನ್ಯವಾಗಿ ಬಿಟ್ಟುಹೋದ ಅಕ್ಷರಗಳನ್ನು ಸೂಚಿಸಲು ಬಳಸಲಾಗುತ್ತದೆ.
ಉದಾಹರಣೆಗೆ, ಸಂಕುಚಿತಗೊಳಿಸುವಿಕೆ (contraction) - cannot ಬದಲಿಗೆ can't , it is ಅಥವಾ it has ಬದಲಿಗೆ it's , I will ಅಥವಾ I shall ಬದಲಿಗೆ I'll . [೩೭] ಸಂಕ್ಷೇಪಿತ ರೂಪದಲ್ಲಿಯೂ ಸಹ ಇದನ್ನು ಬಳಸಲಾಗುತ್ತದೆ - government ಬದಲಿಗೆ gov't , ಅಥವಾ 1970s ಬದಲಿಗೆ '70s . ಆಧುನಿಕ ಬಳಕೆಯಲ್ಲಿ, ನಿರ್ದಿಷ್ಟವಾಗಿ ಸಮಾಸ ಪದದಲ್ಲಿ, ಪದದ ಆರಂಭದಿಂದ ಅಕ್ಷರಗಳನ್ನು ಕೈಬಿಟ್ಟಲ್ಲಿ, ಅಪಾಸ್ಟ್ರಫಿಗಳನ್ನು ಸಾಮಾನ್ಯವಾಗಿ ಕೈಬಿಡಲಾಗುತ್ತದೆ. ಉದಾಹರಣೆಗೆ, omnibus ಬದಲಿಗೆ 'bus , telephone ಬದಲಿಗೆ 'phone , Internet ಬದಲಿಗೆ 'net ಬಳಸುವುದು ಸಾಮಾನ್ಯವಲ್ಲ. ಆದರೂ, ಸಂಕ್ಷಿಪ್ತಗೊಳಿಸುವಿಕೆಯು ಅಸಾಮಾನ್ಯ, ಆಡುಭಾಷೆ ಅಥವಾ ಪುರಾತನಕಾಲದ್ದಾಗಿದ್ದಲ್ಲಿ, ಅದನ್ನು ಗುರುತಿಸಲು ಕೂಡ ಅಪಾಸ್ಟ್ರಫಿಯನ್ನು ಬಳಸಬಹುದು. ಉದಾಹರಣೆಗೆ, about ಬದಲು 'bout , unless ಬದಲು 'less ಹಾಗೂ it was ಬದಲು 'twas . ಕೆಲವೊಮ್ಮೆ, ಪದದ ಮೂಲ ರೂಪವನ್ನು ಸರಿಯಾಗಿ ತಿಳಿದುಕೊಳ್ಳದಿದ್ದಲ್ಲಿ, ಅಸಮರ್ಪಕ ಪದಸಂಕೋಚನದ ಪರಿಣಾಮ ಉಂಟಾಗುತ್ತದೆ. ಸಾಮಾನ್ಯ ಉದಾಹರಣೆಗೆ, till ಎಂಬುದು ಮೂಲ ರೂಪವಾಗಿದ್ದು, until ನಿಂದ ವ್ಯುತ್ಪತ್ತಿಯಾಗಿದ್ದರೂ, until ಬದಲಿಗೆ 'til ಬಳಸಲಾಗಿದೆ. ನಾವಿಕ ಉಕ್ತಿ forecastle ಇಂದ ಸಂಕುಚಿತಗೊಳಿಸಲಾದ fo'c's'le ಎಂಬ ಕಾಗುಣಿತವು, ಮೂರು ಅಪಾಸ್ಟ್ರಫಿಗಳನ್ನು ಹೊಂದಿರುವುದಕ್ಕೆ ಹೆಸರಾಗಿದೆ. boatswain's ಎಂಬ ಪದದಿಂದ ಪಡೆಯಲಾದ, Bo's'n's Mate ಉಕ್ತಿಯ bo's'n's ಎಂಬ ಕಾಗುಣಿತವು ಮೂರು ಅಪಾಸ್ಟ್ರಫಿಗಳನ್ನು ಹೊಂದಿದೆ - ಇದರಲ್ಲಿ ಎರಡು ಅಪಾಸ್ಟ್ರಫಿಗಳು ಬಿಟ್ಟುಹೋದ ಅಕ್ಷರಗಳು ಹಾಗೂ ಒಂದು ಅಪಾಸ್ಟ್ರಫಿ ಸೇರಿಸಲಾದ ಅಕ್ಷರವನ್ನು ಸೂಚಿಸುತ್ತದೆ. the fo'c's'le's timbers ಉಕ್ತಿಯಲ್ಲಿ Fo'c's'le ಸ್ವಾಮ್ಯಸೂಚಕ s ನ್ನು ಸಹ ತೆಗೆದುಕೊಳ್ಳಬಹುದು. ಇದರಿಂದಾಗಿ ಒಂದೇ ಪದದಲ್ಲಿ ನಾಲ್ಕು ಅಪಾಸ್ಟ್ರಫಿಗಳುಂಟಾಗುತ್ತವೆ. [೩೮] ನಿಷ್ಪನ್ನರೂಪವು ವಿಚಿತ್ರವಾಗಿ ಅಥವಾ ಅಸಹಜವಾಗಿದ್ದಲ್ಲಿ, ಇದನ್ನು ಕೆಲವೊಮ್ಮೆ ಬಳಸಲಾಗುತ್ತದೆ. ಉದಾಹರಣೆಗೆ, KOed ಬದಲಿಗೆ KO'd ಎಂದು ನಮೂದಿಸುವುದು ಸಾಮಾನ್ಯವಾಗಿದೆ (ಇದರಲ್ಲಿ KO ಎಂಬುದನ್ನು ಕ್ರಿಯಾಪದ ರೂಪದಲ್ಲಿ ಬಳಸಲಾಗಿದೆ ಅರ್ಥಾತ್ to knock out (ಹೊಡೆದು ಬೀಳಿಸುವುದು)). a spare pince-nez'd man ಎಂಬುದು ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟು(OED )ನಲ್ಲಿ pince-nez ಎಂಬ ಪದಕ್ಕೆ ಅರ್ಥ ವಿವರಿಸಲಾಗಿದೆ. ಉಲ್ಲೇಖಗಳಲ್ಲಿ pince-nezed ಎಂಬುದೂ ಸಹ ತಿಳಿಸಲಾಗಿದೆ. ಕೆಲವು ಆಡುಭಾಷೆಯ ಸಂದರ್ಭಗಳಲ್ಲಿ, ಸ್ವಾಮ್ಯಸೂಚಕ ಅಥವಾ ಸಂಕುಚಿತಗೊಳಿಸುವ ರೂಪಗಳಾಗಿ ಅಪಾಸ್ಟ್ರಫಿಯ ಕ್ರಿಯೆಯು ಇತರೆ ವಿರಾಮ ಚಿಹ್ನೆಗಳನ್ನು ಅವಲಂಬಿಸುತ್ತದೆ. We rehearsed for Friday's opening night.
(ನಾವು ಶುಕ್ರವಾರ ಪ್ರಥಮ ಪ್ರದರ್ಶನಕ್ಕಾಗಿ ಪೂರ್ವಾಭ್ಯಾಸ ಮಾಡಿದೆವು. )
We rehearsed, for Friday's opening night. (ಶುಕ್ರವಾರ ಪ್ರಥಮ ಪ್ರದರ್ಶನವಾದ್ದರಿಂದ ನಾವು ಪೂರ್ವಾಭ್ಯಾಸ ಮಾಡಿದೆವು. ಗಮನಿಸಿ, ಇಲ್ಲಿ "Friday's" ಎಂಬುದು "Friday is"ನ ಸಂಕ್ಷೇಪಣವಾಗಿದೆ.) ಪ್ರಮಾಣಿತವಲ್ಲದ ಉಚ್ಚಾರಣಾ ಶೈಲಿಯನ್ನು ಸೃಷ್ಟಿಸುವಲ್ಲಿ ಕಣ್ಣು-ಭಾಷೆಗಳು (Eye dialects) ಅಪಾಸ್ಟ್ರಫಿಗಳನ್ನು ಬಳಸುತ್ತವೆ.
ಕೆಲವು ವಿಶಿಷ್ಟ ಬಹುವಚನಗಳನ್ನು ರಚಿಸುವಲ್ಲಿ ಅಪಾಸ್ಟ್ರಫಿಗಳ ಬಳಕೆ
ಕೆಲವು ಬರಹಗಾರರು ಸಂಕ್ಷಿಪ್ತರೂಪಗಳು, ಪ್ರಥಮಾಕ್ಷರಿಗಳು ಮತ್ತು ಚಿಹ್ನೆಗಳಿಗೆ ಬಹುವಚನ ರಚಿಸಲು ಅಪಾಸ್ಟ್ರಪಿ ಬಳಸುತ್ತಾರೆ. s ಬದಲಿಗೆ ಕೇವಲ s ಸೇರಿಸುವುದರಿಂದ ದ್ವಂದ್ವಾರ್ಥ ಅಥವಾ ಅಂದಚೆಂದವಿಲ್ಲದಂತಾಗುತ್ತದೆ . ಕೆಲವು ನಿರ್ದಿಷ್ಟ ಪ್ರಕರಣಗಳು:
ಏಕಮಾತ್ರ ಸಣ್ಣ ಅಕ್ಷರಗಳ ಬಹುವಚನಗಳನ್ನು ನಮೂದಿಸುವಾಗ ಅಪಾಸ್ಟ್ರಫಿಗಳನ್ನು ಬಳಸುವುದು ಬಹುತೇಕ ಸ್ವೀಕಾರಾರ್ಹವಾಗಿದೆ. ಉದಾಹರಣೆಗೆ be sure to dot your i's and cross your t's . ಕೆಲವು ಶೈಲಿ ಕೈಪಿಡಿಗಳು ಫಾಂಟ್ ಬದಲಾವಣೆಗಳನ್ನು ಆಯ್ಕೆ ಮಾಡುತ್ತವೆ: dot your is and cross your ts. [ಉಲ್ಲೇಖದ ಅಗತ್ಯವಿದೆ] ) ದಪ್ಪಕ್ಷರಗಳಿಗೆ ಅಪಾಸ್ಟ್ರಫಿಯ ಅಗತ್ಯವಿರುವುದಿಲ್ಲ (I got three As in my exams [೩೯]).ವಾಕ್ಯದ ಆರಂಭದಲ್ಲಿ ತಪ್ಪಾಗಿ ಓದುವ ಸಾಧ್ಯತೆಯ ಹೊರತುಪಡಿಸಿ, (' A's are the highest marks achievable in these exams.)ಅಪಾಸ್ಟ್ರಫಿ ಅಗತ್ಯವಿಲ್ಲ. ತಪ್ಪಾಗಿ ಓದುವ ಯಾವುದೇ ಸಾಧ್ಯತೆಯಿಲ್ಲದ ಕಾರಣ,
ವರ್ಷಗಳ ಗುಂಪುಗಳನ್ನು ನಮೂದಿಸಲು, ಕೊನೆಯಲ್ಲಿರುವ ಅಪಾಸ್ಟ್ರಫಿಯನ್ನು ಅಗತ್ಯ ಎಂದು ಪರಿಗಣಿಸಲಾಗುವುದಿಲ್ಲ. ಈ ಕಾರಣದಿಂದಾಗಿಯೇ, ಹಲವು ತಜ್ಞರು 1960's [೩೯] ಬದಲಿಗೆ 1960s ಎಂದು ಬಳಸುವುದಕ್ಕೆ ಆದ್ಯತೆ ನೀಡುತ್ತಾರೆ.[೩೯] ಆದರೂ ಅಮೆರಿಕನ್ ಬಳಕೆಯಲ್ಲಿ 1960's ಒಂದು ಮೂಲದಿಂದ ಸ್ವೀಕಾರಾರ್ಹವಾಗಿದೆ. [೪೦] ಇದೇ ರೀತಿ 90's ಅಥವಾ '90's ಬದಲಿಗೆ 90s ಅಥವಾ ' 90s ಬಳಕೆಗೆ ಸಮ್ಮತಿಯಿದೆ.
ಕೆಲವೊಮ್ಮೆ, ಸಂಖ್ಯೆಗಳ ಬಹುವಚನಗಳನ್ನು ನಮೂದಿಸಲು ಅಪಾಸ್ಟ್ರಫಿಯನ್ನು ಬಳಸಲಾಗುತ್ತದೆ. ಉದಾಹರಣೆಗೆ, 1000's of years . ಆದರೂ, ವರ್ಷಗಳ ಗುಂಪುಗಳನ್ನು ಉಲ್ಲೇಖಿಸಿದಲ್ಲಿ, ಇದರ ಅಗತ್ಯವಿಲ್ಲ. ತಪ್ಪಾಗಿ ಓದುವ ಸಾಧ್ಯತೆಯೇ ಇಲ್ಲ. ಹಲವು ಮೂಲಗಳು ಈ ಬಳಕೆಯ ವಿರುದ್ಧ ನಿಲುವು ತಾಳಿವೆ. ಚಿಹ್ನೆಗಳ ಬಹುವಚನಗಳಲ್ಲಿ ಅಪಾಸ್ಟ್ರಫಿಗಳನ್ನು ಆಗಾಗ್ಗೆ ಬಳಸಲಾಗಿದೆ. ಪುನಃ, ಇಲ್ಲೂ ಸಹ ತಪ್ಪಾಗಿ ಓದುವ ಸಾಧ್ಯತೆಯಿಲ್ಲದ ಕಾರಣ, ಇದನ್ನು ಆಗಾಗ್ಗೆ ಅಶುದ್ಧ ಎನ್ನಬಹುದು. [೩೯] That page has too many &s and #s on it. ಅಂತಿಮವಾಗಿ, ಕೆಲವೇ ಕೆಲವು ಕಿರಿದಾದ ಪದಗಳ ಪರ್ಯಾಯ ಕಾಗುಣಿತಗಳಲ್ಲಿ ಬಳಕೆಯನ್ನು ಕೆಲವು ಮೂಲಗಳು ಒಪ್ಪಿಕೊಳ್ಳುತ್ತವೆ. ಉದಾಹರಣೆಗೆ, do , ex , yes , no , which become do's , ex's , etc.[೪೧]
ಪ್ರತಿ ವಿಚಾರದಲ್ಲೂ, ಬಹುತೇಕ ತಜ್ಞರು dos , exes , yeses (ಅಥವಾ yesses ) ಹಾಗೂ noes ಗೆ ಆದ್ಯತೆ ನೀಡುತ್ತಾರೆ. ಅದೇನೇ ಆಗಲಿ, ಅಪಾಸ್ಟ್ರಫಿಯಿಲ್ಲದೆ ವಿಚಿತ್ರವಾಗಿ ಅಥವಾ ಅಸಾಮಾನ್ಯವಾಗಿ ಕಂಡುಬಂದಲ್ಲಿ, ಹಲವು ಬರಹಗಾರರು ಅಂತಹ ಅಪಾಸ್ಟ್ರಫಿಯನ್ನು ಬಳಸುವತ್ತ ಒಲವು ತೋರುವರು.
ಇಂಗ್ಲಿಷೇತರ ಹೆಸರುಗಳಲ್ಲಿ ಅಪಾಸ್ಟ್ರಫಿ ಬಳಕೆ
ಇಂಗ್ಲಿಷ್ ಭಾಷೆಗೆ ಸ್ಥಳೀಯವಲ್ಲದ ಹೆಸರುಗಳಿಗೆ, ಕೆಲವೊಮ್ಮೆ ಇತರೆ ಅಕ್ಷರಗಳನ್ನು ನಿರೂಪಿಸಲು ಪರ್ಯಾಯವಾಗಿ ಅಪಾಸ್ಟ್ರಫಿಗಳನ್ನು ಹೊಂದಿರುತ್ತವೆ (ಕೆಳಗೆ ಇದನ್ನೂ ನೋಡಿ: As a mark of elision).
ಕೆಲವೊಮ್ಮೆ ಐರಿಷ್ ಉಪನಾಮಗಳ ಆಂಗ್ಲೀಕೃತ ಆವೃತ್ತಿಗಳು O ನಂತರ ಅಪಾಸ್ಟ್ರಫಿ ಹೊಂದಿರುತ್ತವೆ. ಉದಾಹರಣೆಗೆ O'Doole .
ಐರಿಷ್ Ó ನಮೂದಿಸುವಿಕೆಯಿಂದ ಇದು ಉದ್ಭವವಾಯಿತು. [ಉಲ್ಲೇಖದ ಅಗತ್ಯವಿದೆ]
ಕೆಲವು ಸ್ಕಾಟಿಷ್ ಮತ್ತು ಐರಿಷ್ ಉಪನಾಮಗಳಲ್ಲಿ M ನಂತರ ಅಪಾಸ್ಟ್ರಫಿ ಬಳಸಲಾಗುತ್ತದೆ. ಉದಾಹರಣೆಗೆ M'Gregor . ಇಲ್ಲಿನ ಅಪಾಸ್ಟ್ರಫಿಯನ್ನು ಸಂಕುಚಿತಗೊಳಿಸುವಿಕೆಯ ಗುರುತು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ Mc ಅಥವಾ Mac ಸಾಮಾನ್ಯವಾಗಿ ಪೂರ್ವಪ್ರತ್ಯಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. (ಆರಂಭಿಕ ಮತ್ತು ಕರಾರುವಾಕ್ಕಾದ ಸದ್ಯದ ಬಳಕೆಯಲ್ಲಿ, ಈ ಚಿಹ್ನೆಯು ಸಾಮಾನ್ಯವಾಗಿ ‘ ಆಗಿರುತ್ತದೆ (ವಿರುದ್ಧ ದಿಕ್ಕಿನ ಅಪಾಸ್ಟ್ರಫಿ) ಇದನ್ನು ಕೆಲವೊಮ್ಮೆ ತಿರುಗಿದ ಅಲ್ಪವಿರಾಮ ಚಿಹ್ನೆ ಎನ್ನಲಾಗಿದೆ. ಅಂತಿಮವಾಗಿ ಇದನ್ನು c ಅಕ್ಷರದ ರೂಪದಲ್ಲಿ ಬರೆಯಲಾಯಿತು, ಏಕೆಂದರೆ ಅದರ ಆಕಾರವು ಸದೃಶವಾಗಿತ್ತು.) ವಿಜ್ಞಾನ ಕಾಲ್ಪನಿಕ ಕಥೆಗಳಲ್ಲಿ, ಕಂಠದ್ವಾರೀಯ ಧ್ವನಿಯನ್ನು ಸೂಚಿಸಲು ಅಪಾಸ್ಟ್ರಫಿಯನ್ನು ಕೆಲವೊಮ್ಮೆ ಅನ್ಯಲೋಕ ಜೀವಿಯ ಹೆಸರುಗಳಲ್ಲಿ ಬಳಸಲಾಗುತ್ತಿತ್ತು. ಉದಾಹರಣೆಗೆ, Star Trek ನಲ್ಲಿ T'Pau. ಅಲ್ಲದೆ ಅಲಂಕಾರಿಕವಾಗಿಯೂ ಬಳಸಲಾಗುತ್ತಿತ್ತು.
ಲಿಪ್ಯಂತರಗಳಲ್ಲಿ ಅಪಾಸ್ಟ್ರಫಿಯ ಬಳಕೆ
ಲಿಪ್ಯಂತರಗೊಂಡ ವಿದೇಶಿ ಪದಗಳಲ್ಲಿ, ತಪ್ಪಾಗಿ ವ್ಯಾಖ್ಯಾನಿತವಾಗಬಲ್ಲ ಅಕ್ಷರಗಳನ್ನು ಅಥವಾ ಉಚ್ಚಾರಾಂಶಗಳನ್ನು ಪ್ರತ್ಯೇಕಿಸಲು ಈ ಅಪಾಸ್ಟ್ರಫಿಯನ್ನು ಬಳಸಬಹುದಾಗಿದೆ. ಉದಾಹರಣೆಗೆ:
ಟೆಂಪ್ಲೇಟು:Scriptರ ಲಿಪ್ಯಂತರವಾದ ಅರಬಿಕ್ ಭಾಷಾ ಪದ mus'haf ನಲ್ಲಿ, ಉಚ್ಚರಣಾ ಅಕ್ಷರಗಳು mus·haf ಎಂದು ಓದಬೇಕೇ ಹೊರತು mu·shaf ಎಂದಲ್ಲ. Shin'ichi ಎಂಬ ಜಪಾನೀ ಹೆಸರಿನಲ್ಲಿ (ಇದನ್ನು kanji ಬಳಸಿ ಹಲವು ರೀತ್ಯಾ ಬರೆಯಬಹುದಾದರೂ, ಇದು ಎಲ್ಲಾ ವಿಚಾರಗಳಲ್ಲಿಯೂ hiragana ಟೆಂಪ್ಲೇಟು:Nihongo2 shi·n·i·chi ಗೆ ಹೊಂದಿಕೊಳ್ಳುವುದು) ಟೆಂಪ್ಲೇಟು:Nihongo2 n ಮತ್ತು ಟೆಂಪ್ಲೇಟು:Nihongo2 i ಅಕ್ಷರಗಳು ಪ್ರತ್ಯೇಕ moras ಆಗಿದ್ದು, ಹೆಸರನ್ನು shin + ichi ಎಂದು ವಿಭಾಗಿಸಬೇಕು. ಆದರೂ, shi ಮತ್ತು nichi ತಾವೇ ಸ್ವತಃ ಚಾಲ್ತಿಯಲ್ಲಿದ್ದು ಸಾಮಾನ್ಯ ಜಪಾನೀ ಪದಗಳಾಗಿರುತ್ತವೆ. ಅವುಗಳ ಸಂಯುಕ್ತವು hiraganaಗೆ ಸದೃಶವಾಗಿದೆ. ಟೆಂಪ್ಲೇಟು:Nihongo2.
ಇನ್ನೂ ಹೆಚ್ಚಿಗೆ, ಲಿಪ್ಯಂತರಗಳಲ್ಲಿ ಕಂಠದ್ವಾರೀಯ ಧ್ವನಿಯನ್ನು ಸೂಚಿಸಲು ಅಪಾಸ್ಟ್ರಫಿಯನ್ನು ಬಳಸಲಾಗುತ್ತದೆ. ಉದಾಹರಣೆಗೆ:
al-qur'ān ಎಂಬ ಸಾಮಾನ್ಯ ಲಿಪ್ಯಂತರ ಭಾಗವಾದ ಟೆಂಪ್ಲೇಟು:Script Qur'an ಎಂಬ ಅರಾಬಿಕ್ ಶಬ್ದದಲ್ಲಿ ಅರಬಿಕ್ ವರ್ಣಮಾಲೆಯಲ್ಲಿ hamza ಎಂಬ ಒಂದು ಅಕ್ಷರಕ್ಕೆ ಅಪಾಸ್ಟ್ರಫಿ ಹೊಂದುತ್ತದೆ.
ಅಶುದ್ಧ ಇಂಗ್ಲಿಷ್ ಬಳಕೆ
ಅಪಾಸ್ಟ್ರಫಿಯ ಅಶುದ್ಧ ಬಳಕೆಯು ವ್ಯಾಪಕವಾಗಿದೆ. ವಿರಾಮಚಿಹ್ನೆಯ ದುರ್ಬಳಕೆಯು ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಬಹುವಚನ ಮತ್ತು ಸ್ವಾಮ್ಯಸೂಚಕಗಳ ನಡುವಿನ ವ್ಯತ್ಯಾಸಗಳನ್ನು ರಕ್ಷಿಸಿ, ಉತ್ತೇಜಿಸಿ ಸಮರ್ಥಿಸುವ ಕಾರ್ಯಕ್ಕಾಗಿ, ಅಪಾಸ್ಟ್ರಫಿ ರಕ್ಷಣಾ ಸಮುದಾಯದ ಬ್ರಿಟಿಷ್ ಮೂಲದ ಸಂಸ್ಥಾಪಕರಿಗೆ 2001ರ ಸಾಲಿನ ಇಗ್ ನೊಬೆಲ್ ಪ್ರಶಸ್ತಿ ದೊರಕಿತು. [೪೨] ಬ್ರಿಟಿಷ್ ಪರೀಕ್ಷಾ ಮಂಡಳಿ OCR 2004ರಲ್ಲಿ ಸಲ್ಲಿಸಿದ ವರದಿಯಲ್ಲಿ, ಅಪಾಸ್ಟ್ರಫಿಯ ತಪ್ಪಾದ ಬಳಕೆಯು ಸಾರ್ವತ್ರಿಕವಾಗುವಷ್ಟು ವ್ಯಾಪಕವಾಗಿದೆ ಎಂದು ತಿಳಿಸಿದೆ. [೪೩] 2008ರಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ, ಯುನೈಟೆಡ್ ಕಿಂಗ್ಡಮ್‌ನ ಪ್ರೌಢವಯಸ್ಕ ಜನಸಂಖ್ಯೆಯಲ್ಲಿ ಅರ್ಧದಷ್ಟು ತಾವು ಅಪಾಸ್ಟ್ರಫಿಯನ್ನು ಸರಿಯಾಗಿ ಬಳಸಲು ತಿಳಿದಿಲ್ಲ ಎಂದಿದ್ದಾರೆ. [೪೪] ಕಮೀಷನ್:ಹಣ್ಣು,ತರಕಾರಿ ವ್ಯಾಪಾರಿ ಅಪಾಸ್ಟ್ರಫಿಗಳು ಗ್ರೀನ್ ಕ್ರೇಗ್ಸ್ ಗೃಹ ನಿರ್ಮಾಣ ಬಡಾವಣೆಯನ್ನು ಸೂಚಿಸುವ ಫಲಕ.
ಬಹುವಚನಗಳನ್ನು ರಚಿಸಲು ತಪ್ಪಾಗಿ ಬಳಸಲಾಗುವ ಅಪಾಸ್ಟ್ರಫಿಗಳಿಗೆ greengrocers' ಅಪಾಸ್ಟ್ರಫಿs , grocers' ಅಪಾಸ್ಟ್ರಫಿs ಅಥವಾ ಕೆಲವೊಮ್ಮೆ ತಮಾಷೆಗಾಗಿ greengrocers ಅಪಾಸ್ಟ್ರಫಿ's , "rogue ಅಪಾಸ್ಟ್ರಫಿs" ಅಥವಾ "idiot's ಅಪಾಸ್ಟ್ರಫಿs" (ಇದು Denglisch ಭಾಷೆಯಲ್ಲಿ ಅಪಾಸ್ಟ್ರಫಿಗಳ ತಪ್ಪು ಬಳಕೆಯನ್ನು ಟೀಕಿಸುವ ಜರ್ಮನ್ ಪದ Deppenapostroph ನ ಅಕ್ಷರಾನುವಾದ ಎನ್ನಲಾಗಿದೆ. ಬಹಳಷ್ಟು ಇಂಗ್ಲಿಷ್ ನಾಮಪದಗಳ ಬಹುವಚನ ಮತ್ತು ಸ್ವಾಮ್ಯಸೂಚಕ ರೂಪಗಳ ಒಂದೇ ರೀತಿಯ ಧ್ವನಿಯಿಂದಾಗಿ ಈ ಅಭ್ಯಾಸವು ಬಂದಿದೆ. ಸಾಮಾನ್ಯವಾಗಿ, ಅಪಾಸ್ಟ್ರಫಿ ಅಥವಾ ಇತರೆ ವಿರಾಮ ಚಿಹ್ನೆಯ ಬಳಕೆ ಕುರಿತು ವ್ಯಾಪಕ ಅಜ್ಞಾನದಿಂದಾಗಿ, ಇದನ್ನು ಕೆಲವೊಮ್ಮೆ ಹೈಪರ್‌ಕರೆಕ್ಷನ್ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಲಿನ್ ಟ್ರಸ್, ಈಟ್ಸ್, ಶೂಟ್ಸ್ & ಲೀವ್ಸ್ ನ ಲೇಖಕಿ ಹೇಳಿದ ಪ್ರಕಾರ, 19ನೆಯ ಶತಮಾನದ ಮುಂಚೆ, ಉಚ್ಚಾರಣೆಯನ್ನು ಸ್ಪಷ್ಟಗೊಳಿಸಲೆಂದು, ಸ್ವರದೊಂದಿಗೆ ಕೊನೆಗೊಳ್ಳುವ ವಿದೇಶಿ ಧ್ವನಿಯ ಪದದ ಬಹುವಚನ ರಚಿಸಲು ಅಪಾಸ್ಟ್ರಫಿ ಬಳಕೆಯು ಪ್ರಮಾಣಕ ಅಕ್ಷರಸಂಯೋಜನೆಯಾಗಿತ್ತು.(ಉದಾಹರಣೆಗೆ banana's , folio's , logo's , quarto's , pasta's , ouzo's ) ಇಂದು ಔಪಚಾರಿಕ ಬರೆಹದಲ್ಲಿ ಈ ತರಹದ ಅಪಾಸ್ಟ್ರಫಿಗಳ ಬಳಕೆ ಇಂದು ಸೂಕ್ತವಲ್ಲ ಎಂದು ಟ್ರಸ್ ಅಭಿಪ್ರಾಯಪಟ್ಟಿದ್ದಾರೆ. [೪೫]
ಲಿವರ್ಪೂಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾಷ ಶಿಕ್ಷಕರೊಬ್ಬರು ಈ ಉಕ್ತಿಯನ್ನು ಮೊದಲ ಬಾರಿಗೆ 20ನೆಯ ಶತಮಾನದ ಮಧ್ಯದಲ್ಲಿ ಬಳಸಿದರು. ಹಣ್ಣು, ತರಕಾರಿ ವ್ಯಾಪಾರಿ(ಗ್ರೀನ್‌ಗ್ರಾಸರ್)ಕೈಬರಹದ ಚಿಹ್ನೆಗಳು ಮತ್ತು ಜಾಹೀರಾತುಗಳಲ್ಲಿ ಇಂತಹ ತಪ್ಪುಗಳು ಸರ್ವೇಸಾಮಾನ್ಯವಾಗಿತ್ತು. ಉದಾಹರಣೆಗೆ, Apple's 1/- a pound, Orange's 1/6d a pound ).
ಪ್ರಸಿದ್ಧ ಉದ್ದಿಮೆಗಳ ಉದ್ಯೋಗಿಗಳು ಸಾಮೂಹಿಕ ಸಂವಹನದಲ್ಲಿ ಈ ರೀತಿಯ ಚಿಹ್ನೆಗಳನ್ನು ಬಳಸಿದಲ್ಲಿ, ಇಂಗ್ಲಿಷ್ ಭಾಷಾ ವ್ಯಾಕರಣ ಚೆನ್ನಾಗಿ ತಿಳಿದಿಲ್ಲದವರು ಸಹ ಇದು ಸರಿಯಿದೆ ಎಂದು ಭಾವಿಸುತ್ತಾರೆ ಹಾಗೂ ಇದೇ ಅಭ್ಯಾಸವನ್ನು ಅಳವಡಿಸಿಕೊಳ್ಳುತ್ತಾರೆ ಎಂದು ಕೆಲವರು ವಾದಿಸಿದ್ದಾರೆ. [೪೬]
ಇಂಗ್ಲಿಷ್ ಮಾತೃಭಾಷೆಯಲ್ಲದ ಭಾಷಿಕರು ಕೆಲವೊಮ್ಮೆ ಈ ದೋಷವನ್ನು ಎಸಗುವರು. ಉದಾಹರಣೆಗೆ, ಡಚ್‌ನಲ್ಲಿ, a, e, i, o, u, ಅಥವಾ y ಒಂದಿಗೆ ಕೊನೆಗೊಳ್ಳುವ ಪದಗಳನ್ನು ಬಹುವಚನ ರೂಪದಲ್ಲಿ ನಮೂದಿಸುವಾಗ, s ಮುಂಚೆ ಅಪಾಸ್ಟ್ರಫಿ ಸೇರಿಸಲಾಗುತ್ತದೆ. ಉದಾಹರಣೆಗೆ baby's (ಇಂಗ್ಲಿಷ್ ಭಾಷೆಯಲ್ಲಿ babies ) ಹಾಗೂ jury's (ಇಂಗ್ಲಿಷ್ ಭಾಷೆಯಲ್ಲಿ juries ). ಇದನ್ನು ಕೆಲವೊಮ್ಮೆ ಇಂಗ್ಲಿಷ್ ಭಾಷೆಯಲ್ಲಿ ಒಯ್ಯಲಾದಲ್ಲಿ, "Dunglish" ದೋಷಗಳಿಗೆ ಕಾರಣವಾಗುತ್ತವೆ. [೪೭] ಕೆಲವು ನಕಲಿ-ಆಂಗ್ಲಿಸಿಸಂ(ಗ್ರೇಟ್ ಬ್ರಿಟನ್ ಅಭಿವ್ಯಕ್ತಿ)ನಲ್ಲಿ ಹೈಪರ್‌ಫಾರಿನಿಸಂನ್ನು ವಿಧ್ಯುಕ್ತಗೊಳಿಸಲಾಗಿದೆ. ಉದಾಹರಣೆಗೆ, ಇಂಗ್ಲಿಷ್ ಪದ pin ಇಂದ ಫ್ರೆಂಚ್ ಪದ pin's ಎಂಬುದನ್ನು ಬಳಸಲಾಗಿದೆ. collectable lapel pinsನ ಏಕವಚನ ಮತ್ತು ಬಹುವಚನ ರೂಪಗಳಲ್ಲಿ ಅಪಾಸ್ಟ್ರಫಿಯೊಂದಿಗೆ ಬಳಸಲಾಗಿದೆ. ಇದೇ ರೀತಿ, ಬ್ರಿಟಿಷ್ ಕ್ರೀಡಾ ಸಂಸ್ಥೆ Rangers F.C. ಹೆಸರನ್ನಾಧರಿಸಿ, ಅಂಡೊರಾ ದೇಶದಲ್ಲಿಯೂ FC Rànger's ಎಂಬ ಒಂದು ಫುಟ್ಬಾಲ್ ಕ್ರೀಡಾ ಸಂಸ್ಥೆಯಿದೆ. ಇದೇ ರೀತಿ, ಜಪಾನ್‌ನಲ್ಲಿ Super Monkey's ಎನ್ನಲಾದ ನೃತ್ಯ ಸಮೂಹ ಹಾಗೂ Titan Go King's ಎನ್ನಲಾದ ಪಾಪ್ ಪಂಕ್ ವಾದ್ಯತಂಡವಿದೆ. [೪೮]
ಬಹುವಚನ ನಾಮಪದಗಳಲ್ಲಿ s ಮುಂಚೆ ಅಪಾಸ್ಟ್ರಫಿಗಳ ವ್ಯಾಪಕ ಬಳಕೆಯಿಂದಾಗಿ, ಕ್ರಿಯಾಪದದ ಪ್ರಥಮ ಪುರುಷ ಏಕವಚನದ s ಮುಂಚೆಯೂ ಅಪಾಸ್ಟ್ರಫಿಯ ಅಗತ್ಯವಿದೆಯೆಂದು [ಯಾರು?] ನಂಬಲು ಕಾರಣವಾಯಿತು. ಇದರಿಂದಾಗಿ, he take's , it begin's , ಇತ್ಯಾದಿ.[ಉಲ್ಲೇಖದ ಅಗತ್ಯವಿದೆ] ಲೋಪ-ದೋಷ
ಈ ನಡುವೆ, St Annes, St Johns Lane[೪೯] ಮುಂತಾದ ಸಾಮಾನ್ಯ-ಬಳಕೆಯ ಹಲವು ಹೆಸರುಗಳಲ್ಲಿ ಅಪಾಸ್ಟ್ರಫಿ ಬಿಟ್ಟುಬಿಡುವುದು ಸರ್ವೇಸಾಮಾನ್ಯವಾಗುತ್ತಿದೆ.
2009ರಲ್ಲಿ, ರಾಯಲ್ ಟನ್‌ಬ್ರಿಡ್ಜ್ ವೆಲ್ಸ್ ನಿವಾಸಿಯೊಬ್ಬರು St John's Close ಎಂಬುದನ್ನು St Johns Close ಎಂದು ತಪ್ಪಾಗಿ ಅಪಾಸ್ಟ್ರಫಿಗಳನ್ನು ಚಿತ್ರಿಸಿದ್ದರಿಂದ ವಿಧ್ವಂಸಕತೆಯ ಆರೋಪ ಎದುರಿಸಬೇಕಾಯಿತು. [೫೦]
ಯುನೈಟೆಡ್ ಕಿಂಗ್ಡಮ್‌ನ ಬೃಹತ್ ವ್ಯಾಪಾರ ಮಳಿಗೆ ಟೆಸ್ಕೊ (Tesco) ಸರಿಯಾದ ಇಂಗ್ಲಿಷ್ ಭಾಷೆಯ ಅಗತ್ಯ ಕಂಡುಬಂದರೆ ಅಪಾಸ್ಟ್ರಫಿ ಚಿಹ್ನೆಯನ್ನು ಬಿಟ್ಟುಬಿಡುತ್ತದೆ. ಮಳಿಗೆಯ ಒಳಾಂಗಣ ಚಿಹ್ನೆ ಸಂಗ್ರಹಗಳ ಜಾಹೀರಾತುಗಳಲ್ಲಿ(ಇದರ ವಸ್ತುಗಳ ನಡುವೆ)mens magazines , girls toys , kids books ಮತ್ತು womens shoes ಎಂದು ನಮೂದಿಸಲಾಗಿದೆ. Troublesome Words ಎಂಬ ತಮ್ಮ ಕೃತಿಯಲ್ಲಿ ಲೇಖಕ ಬಿಲ್ ಬ್ರೈಸನ್‌ಇದಕ್ಕಾಗಿ ಟೆಸ್ಕೊ ಮಳಿಗೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. 'ಈ ತರಹದ ತಪ್ಪುಗಳು ಅಕ್ಷಮ್ಯ, ಅದನ್ನು ಎಸಗಿದವರು ಭಾಷಾ ಕ್ಷೇತ್ರದ ಓಬೀರಾಯರು.' [೫೧] ಹೆಚ್ಚಿನ ಅಥವಾ ಮಿತ ಬಳಕೆಯ ಪ್ರತಿಪಾದಕರು ಪಶ್ಚಿಮ ಯಾರ್ಕ್‌ಷೈರ್ ಕೌಂಟಿಯ ಲೀಡ್ಸ್ ರೇಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರನ್ನು ತಾತ್ಕಾಲಿಕ ಟ್ಯಾಕ್ಸಿಯತ್ತ ನಿರ್ದೇಶಿಸುತ್ತಿರುವ ಫಲಕ. ಇದರಲ್ಲಿ ಅನಗತ್ಯ ಅಪಾಸ್ಟ್ರಫಿಯನ್ನು ಅನಾಮಧೇಯರು ಕಾಪಿ- ಎಡಿಟರ್ ಹೊಡೆದುಹಾಕಿರುವುದನ್ನು ಕಾಣಬಹುದು.
ಅಪಾಸ್ಟ್ರಫಿಗಳು ಅವಶ್ಯಕತೆಯನ್ನು ಮೀರಿವೆ ಎಂದು ಉಚ್ಚಾರಣಾ ನುರೂಪ ತತ್ವಗಳ ಇಂಗ್ಲಿಷ್ ಭಾಷಾ ಕಾಗುಣಿತ ಸುಧಾರಣೆಯ ಪ್ರತಿಪಾದಕರಲ್ಲಿ ಒಬ್ಬರಾದ ಜಾರ್ಜ್ ಬರ್ನಾರ್ಡ್ ಷಾ ವಾದಿಸಿದ್ದರು. ಅವು ತಮ್ಮ ಹಲವು ಕೃತಿಗಳಲ್ಲಿ cant , hes ಇತ್ಯಾದಿ ಪದಗಳ ಉಚ್ಚಾರಣೆಗೆ ಅಪಾಸ್ಟ್ರಫಿಗಳನ್ನು ಬಳಸಲೇ ಇಲ್ಲ. ಆದರೂ, ಅವರು I'm ಮತ್ತು it's ಗೆ ಅವಕಾಶ ನೀಡಿದ್ದರು. [೫೨] ಹೂಬರ್ಟ್ ಸೆಲ್ಬಿ, ಜೂನಿಯರ್ ಸಂಕುಚಿತಗೊಳಿಸುವಿಕೆಗಳಲ್ಲಿ ಅಪಾಸ್ಟ್ರಫಿಯ ಬದಲು ಒಂದು ಓರೆಗೆರೆ (slash) ಬಳಸುತ್ತಿದ್ದರು. ಅವರು ಸ್ವಾಮ್ಯಸೂಚಕಗಳಲ್ಲಿ ಅಪಾಸ್ಟ್ರಫಿಯನ್ನು ಬಳಸಲೇ ಇಲ್ಲ. ಲೂಯಿಸ್ ಕೆರೊಲ್ ಅಪಾಸ್ಟ್ರಫಿಯನ್ನು ಹೆಚ್ಚಾಗಿ ಬಳಸುತ್ತಿದ್ದರು. Shall not ಬದಲಿಗೆ ಅವರು ಹೆಚ್ಚು ಬಾರಿ sha'n't ಎಂದು ಬಳಸುತ್ತಿದ್ದರು. ಇದರಲ್ಲಿ "ll" ಹಾಗೂ ಹಾಗೂ ಬಹಳಷ್ಟು ಸಾಮಾನ್ಯವಾದ "o" ಬದಲಿಗೆ ಒಂದು ಅಪಾಸ್ಟ್ರಫಿ ಸೇರಿಸುತ್ತಿದ್ದರು. [೫೩] ಈ ಇಬ್ಬರೂ ಲೇಖಕರ ಬಳಕೆ ಶೈಲಿಯು ಅಷ್ಟೇನು ವ್ಯಾಪಕವಾಗಲಿಲ್ಲ. ಇತರೆ ದುರ್ಬಳಕೆಗಳು
ಇಂದು 1970sನ್ನು 1970s ಅಥವಾ '70s ಎಂದು ನಮೂದಿಸುವ ಬದಲು, 1970's ಅಥವಾ 70's ಎಂದು ಹ್ರಸ್ವಗೊಳಿಸುವುದು ಸಾಮಾನ್ಯವಾಗಿದೆ. ಇದರಲ್ಲಿ ಶತಮಾನವನ್ನು ನಮೂದಿಸುವ ಅಂಕಿಗಳ ಸ್ಥಾನದಲ್ಲಿ ಅಪಾಸ್ಟ್ರಫಿ ಬಳಸಲಾಗಿದೆ.
Hear'Say ಎಂಬ ಬ್ರಿಟಿಷ್ ಪಾಪ್ ಗಾಯನ ಸಮೂಹವು ತನ್ನ ಹೆಸರಿನಲ್ಲಿ ಅಪಾಸ್ಟ್ರಫಿಯ ಅಸಾಂಪ್ರದಾಯಿಕ ಬಳಕೆ ಮಾಡಿದೆ. '2001ರಲ್ಲಿ Hear'Say ನಾಮಕರಣವು [...] ವಿರಾಮಚಿಹ್ನೆಯ ಗೊಂದಲದತ್ತ ಸಾಗುವ ದಾರಿಯಲ್ಲಿ ಒಂದು ಪ್ರಮುಖ ಮೈಲುಗಲ್ಲಾಗಿದೆ' ಎಂದು ಟ್ರಸ್ ಪ್ರತಿಕ್ರಿಯಿಸಿದ್ದಾರೆ. [೫೪] ಇನ್ನೊಂದೆಡೆ, ಡೆಕ್ಸಿಸ್ ಮಿಡ್ನೈಟ್ ರನ್ನರ್ಸ್ (Dexys Midnight Runners) ಅಪಾಸ್ಟ್ರಫಿಯನ್ನು ಬಿಟ್ಟುಬಿಡುತ್ತದೆ (ಆದರೂ dexys ಎಂಬುದನ್ನು ಸ್ವಾಮ್ಯಸೂಚಕ ರೂಪದ ಬದಲಿಗೆ dexy ಪದದ ಬಹುವಚನ ರೂಪ ಎಂದು ಅರ್ಥೈಸಿಕೊಳ್ಳಲಾಗಿದೆ.
ಸಾರ್ವಜನಿಕ ಕ್ಷೇತ್ರದಲ್ಲಿ, ಅಪಾಸ್ಟ್ರಫಿಯನ್ನು ದುರ್ಬಳಕೆ ಮಾಡಲಾಗಿದೆ ಎಂದು ತಪ್ಪಾಗಿ ಭಾವಿಸಿದುದರ ಉದಾಹರಣೆ The La's ಎಂಬ Liverpudlian ರಾಕ್ ಶೈಲಿಯ ವಾದ್ಯತಂಡದ ಹೆಸರು. ಈ ಅಪಾಸ್ಟ್ರಫಿಯನ್ನು ತಪ್ಪು ಎಂದು ಮೊದಲಿಗೆ ಭಾವಿಸಲಾಗಿತ್ತು. ಆದರೆ, ಅಪಾಸ್ಟ್ರಫಿ d ಅಕ್ಷರವನ್ನು ಕೈಬಿಡುವುದರ ಗುರುತಾಗಿದೆ. ಈ ಹೆಸರು "The Lads" ಎಂಬುದರ ಸ್ಕೂಸ್ ಆಡುಭಾಷೆಯಾಗಿದೆ. ಇಂಗ್ಲಿಷೇತರ ಬಳಕೆ ಅಕ್ಷರಲೋಪದ ಚಿಹ್ನೆಯಾಗಿ
ಹಲವು ಭಾಷೆಗಳಲ್ಲಿ, ಅದರಲ್ಲೂ ವಿಶಿಷ್ಟವಾಗಿ ಯುರೋಪಿಯನ್ ಭಾಷೆಗಳಲ್ಲಿ, ಇಂಗ್ಲಿಷ್‌ನಂತೆ ಇತರೆ ಭಾಷೆಗಳಲ್ಲಿ ಪದಗಳಿಂದ ಒಂದು ಅಥವಾ ಹೆಚ್ಚು ಅಕ್ಷರಗಳ ಲೋಪವನ್ನು ಸೂಚಿಸಲು ಅಪಾಸ್ಟ್ರಫಿಯನ್ನು ಬಳಸಲಾಗುತ್ತದೆ.
ಆಫ್ರಿಕಾನ್ಸ್ ಭಾಷೆಯಲ್ಲಿ, ಪದಗಳಿಂದ ಅಕ್ಷರಗಳು ಬಿಟ್ಟುಹೋಗಿವೆ ಎಂಬುದನ್ನು ಸೂಚಿಸಲು ಅಪಾಸ್ಟ್ರಫಿಗಳನ್ನು ಬಳಸಲಾಗುತ್ತದೆ. ಅನಿರ್ದೇಶಕ ಗುಣವಾಚಿ(article) 'n ಲ್ಲಿ ಇದು ಅತಿ ಹೆಚ್ಚು ಬಳಕೆಯಲ್ಲಿದೆ. ಇದು een ನ ಹ್ರಸ್ವರೂಪವಾಗಿದೆ. ಇದರ ಅರ್ಥ 'ಒಂದು (one)' (ಸಂಖ್ಯೆ). ಆರಂಭಿಕ e ಬಿಟ್ಟುಹೋಗಿ ಅದನ್ನು ದೊಡ್ಡಕ್ಷರವಾಗಿಸದ ಕಾರಣ, ವಾಕ್ಯವೊಂದು 'n ಒಂದಿಗೆ ಆರಂಭವಾದಲ್ಲಿ ವಾಕ್ಯದ ಎರಡನೆಯ ಪದದ ಮೊದಲ ಅಕ್ಷರವನ್ನು ದೊಡ್ಡ ಅಕ್ಷರವಾಗಿಸುತ್ತದೆ. ಉದಾಹರಣೆಗೆ, 'n Boek is groen. ಎಂದರೆ, 'A book is green (ಪುಸ್ತಕವು ಹಸಿರು ಬಣ್ಣದ್ದು)' ಜೊತೆಗೆ, ಸ್ವರಗಳೊಂದಿಗೆ ಅಂತ್ಯಗೊಳ್ಳುವ ಬಹುವಚನಗಳು ಮತ್ತು ಕೆಲವು ಅಲ್ಪಾರ್ಥಕಗಳು(foto's , taxi's , Lulu's , Lulu'tjie , garage's ಇತ್ಯಾದಿ) ಅಪಾಸ್ಟ್ರಫಿ ಹೊಂದಿರುತ್ತದೆ. [೫೫] ಡ್ಯಾನಿಷ್ ಭಾಷೆಯಲ್ಲಿ, ವಾಣಿಜ್ಯ ವಸ್ತುಗಳ ಮೇಲೂ ಅಪಾಸ್ಟ್ರಫಿಗಳನ್ನು ಕಾಣಬಹುದು. ಜಾಹೀರಾತು ಭಿತ್ತಿಪತ್ರಗಳ ಸ್ಟಾಂಡ್ ಪಕ್ಕ Ta' mig med ("Take me with [you]") ಎಂಬುದನ್ನು ಗಮನಿಸಬಹುದು. ಇದನ್ನು ಪ್ರಮಾಣಿತ ಅಕ್ಷರಶೈಲಿಯಲ್ಲಿ Tag mig med ಎಂದು ಬರೆಯಲಾಗುತ್ತದೆ. ಜರ್ಮನ್ ಭಾಷೆಯಲ್ಲಿ, ಸ್ವಾಮ್ಯಸೂಚಕವನ್ನು ಸೂಚಿಸಲು ಅಪಾಸ್ಟ್ರಫಿಯನ್ನು ಬಳಸುವಂತಿಲ್ಲ. ಆದರೆ, ಮೂಲ ರೂಪದಲ್ಲಿ s ಆಗಲೇ ಇದ್ದಲ್ಲಿ, ಅಪಾಸ್ಟ್ರಫಿ ಬಳಸಬಹುದಾಗಿದೆ. ಉದಾಹರಣೆಗೆ Lukas' bog ಡಚ್ ಭಾಷೆಯಲ್ಲಿ ಅಪಾಸ್ಟ್ರಫಿಯನ್ನು, ವಾಡಿಕೆಯಂತೆ, ಬಿಟ್ಟುಹೋದ ಅಕ್ಷರಗಳನ್ನು ಸೂಚಿಸಲು ಬಳಸಲಾಗುತ್ತದೆ. ಉದಾಹರಣೆಗೆ, ಅನಿರ್ದೇಶಕ ಗುಣವಾಚಿ een ನ್ನು n ಆಗಿ ಹ್ರಸ್ವಗೊಳಿಸಬಹುದು, ಹಾಗು ನಿರ್ದೇಶಕ ಗುಣವಾಚಿ het ನ್ನು t ಆಗಿ ಹ್ರಸ್ವಗೊಳಿಸಬಹುದು. ವಾಕ್ಯವೊಂದರ ಮೊದಲ ಪದದಲ್ಲಿ ಇದು ಸಂಭವಿಸಿದಲ್ಲಿ, ವಾಕ್ಯದ ಎರಡನೆಯ ಪದದ ಪ್ರಥಮಾಕ್ಷರವನ್ನು ದೊಡ್ಡಕ್ಷರವಾಗಿಸಲಾಗುತ್ತದೆ. ಸಾಮಾನ್ಯವಾಗಿ, ಒಟ್ಟಾರೆ, ಈ ರೀತಿಯಲ್ಲಿ ಅಪಾಸ್ಟ್ರಫಿ ಬಳಕೆಯನ್ನು ಪ್ರಮಾಣಿತವಲ್ಲ ಎಂದು ಪರಿಗಣಿಸಲಾಗುತ್ತದೆ. ಆದರೆ, des morgens, des middags, des avonds, des nachts ಬದಲು 's morgens , 's middags , 's avonds, 's nachts ಪದಗಳಲ್ಲಿ ಬಳಸಬಹುದು (ಈ ಪದಗಳ ಅರ್ಥ: ಬೆಳಿಗ್ಗೆಯ ಸಮಯದಲ್ಲಿ, ಮಧ್ಯಾಹ್ನದ ಸಮಯದಲ್ಲಿ, ಸಂಜೆಯ ಸಮಯದಲ್ಲಿ, ರಾತ್ರಿಯ ಸಮಯದಲ್ಲಿ). ಜೊತೆಗೆ, ಪದಗಳ ಕೊನೆಯ ಅಕ್ಷರಗಳು ಸ್ವರಾಕ್ಷರಗಳಾಗಿದ್ದಲ್ಲಿ ಅಂತಹ ಬಹುವಚನ ಪದಗಳಿಗೆ ಅಪಾಸ್ಟ್ರಫಿ ಬಳಸಬಹುದಾಗಿದೆ. ಉದಾಹರಣೆಗೆ foto's , taxi's ಹಾಗೂ ಇಂತಹ ಸ್ವರಾಕ್ಷರಗಳೊಂದಿಗೆ ಅಂತ್ಯಗೊಳ್ಳುವ ಅಂಕಿತನಾಮಗಳ ಷಷ್ಠಿ ವಿಭಕ್ತಿ ರೂಪಗಳಿಗೂ ಅಪಾಸ್ಟ್ರಫಿ ಬಳಸಬಹುದಾಗಿದೆ. ಉದಾಹರಣೆಗೆ Anna's , Otto's ಇವು ಬಹುಶಃ ಬಿಟ್ಟುಹೋದ ಸ್ವರಾಕ್ಷರಗಳಾಗಿವೆ; ಅಪಾಸ್ಟ್ರಫಿ ಬಳಕೆಯಿಂದಾಗಿ fotoos ಹಾಗೂ Annaas ಎಂಬಂತೆ ಅಕ್ಷರ ತಪ್ಪಾಗುವುದನ್ನು ತಡೆಗಟ್ಟುತ್ತದೆ. Fundamento de Esperanto ಮಾರ್ಗದರ್ಶಿಯು ಲೋಪ ಗುರುತನ್ನು la ಇಂದ l' ನಿರ್ದೇಶಕ ಗುಣವಾಚಿಗೆ, ಹಾಗೂ koro (ಹೃದಯ) ಇಂದ kor' ನಾಮನಿರ್ದೇಶಿತ ನಾಮಪದಗಳಿಗೆ ಸೀಮಿತಗೊಳಿಸುತ್ತದೆ.
ಇದನ್ನು ಬಹುಮಟ್ಟಿಗೆ ಕವನಗಳಿಗೆ ಸೀಮಿತವಾಗಿಸುತ್ತದೆ. ಅದೇನೇ ಇರಲಿ, ಪ್ರಮಾಣಿತವಲ್ಲದ ರೂಪಗಳು ಸಹ (danke al , "ಇವರಿಗೆ ಧನ್ಯವಾದಗಳು" ಇಂದ dank' al ; ಹಾಗೂ (de la , "ಇದರ" ಇಂದ del' ) ಆಗಾಗ್ಗೆ ಸಂಭವಿಸುತ್ತವೆ. ಪದದೊಳಗೆ ಲೋಪಗಳನ್ನು ಸಾಮಾನ್ಯವಾಗಿ ಒಂದು ಕೂಡುಗೆರೆ (hyphen) ಮೂಲಕ ಗುರುತಿಸಲಾಗುತ್ತದೆ. ಉದಾಹರಣೆಗೆ, doktoro 'ವೈದ್ಯ (Dr) ಇಂದ D-ro . gitar'ist'o (guitarist) ಇಂತಹ ಸಂಯುಕ್ತ ಪದಗಳನ್ನು ಗುರುತಿಸುವುದು ಸುಲಭವಾಗಲೆಂದು, ಪದ-ಭಾಗಗಳ ನಡುವೆ ಕೂಡುಗೆರೆ ಬಳಸಿರೆಂದು ಕೆಲವು ಆರಂಭಿಕ ಶೈಲಿ ಮಾರ್ಗದರ್ಶಿಗಳು ಬಳಸಿ, ಶಿಫಾರಸು ಮಾಡಿದ್ದವು.
ಪ್ರೆಂಚ್, ಇಟ್ಯಾಲಿಯನ್ ಮತ್ತು ಕ್ಯಾಟಲಾನ್ ಪದ-ಸರಣಿಗಳಲ್ಲಿ (ಉದಾಹರಣೆಗೆ (coup) d'état , (maître) d'hôtel (ಇದನ್ನು ಇಂಗ್ಲಿಷ್‌ನಲ್ಲಿ ಬಳಸುವಾಗ, ಆಗಾಗ್ಗೆ maître d ಎಂದು ಹ್ರಸ್ವಗೊಳಿಸಲಾಗುತ್ತದೆ), ಹಾಗೂ L'Aquila) ಮೊದಲ ಪದದಲ್ಲಿನ ಕೊನೆಯ ಸ್ವರವು (de, "of", ಇತ್ಯಾದಿ) ಲೋಪವಾಗುವುದು, ಏಕೆಂದರೆ, ಇದರ ನಂತರದ ಪದವು ಸ್ವರದೊಂದಿಗೆ ಅಥವಾ ಅನುಚ್ಚರಿತ h ಒಂದಿಗೆ ಆರಂಭವಾಗುತ್ತದೆ. ಇದೇ ರೀತಿ, ಫ್ರೆಂಚ್ ಭಾಷೆಯಲ್ಲಿ la église (ಇಗರ್ಜಿ) ಬದಲಿಗೆ l'église, que ilಬದಲಿಗೆ qu'il ("that he") ಇತ್ಯಾದಿ ಎನ್ನಲಾಗುತ್ತದೆ. ಫ್ರೆಂಚ್ ಮತ್ತು ಇಟ್ಯಾಲಿಯನ್ ಉಪನಾಮಗಳು ಕೆಲವೊಮ್ಮೆ ಲೋಪಗಳ ಅಪಾಸ್ಟ್ರಫಿಗಳನ್ನು ಹೊಂದಿವೆ (ಉದಾಹರಣೆಗೆ d'Alembert, D'Angelo. ಫ್ರೆಂಚ್ ಭಾಷೆಯಲ್ಲಿ ಸ್ತ್ರೀಲಿಂಗ ಏಕವಚನದ ಸ್ವಾಮ್ಯಸೂಚಕ ವಿಶೇಷಣಗಳು ಲೋಪವಾಗುವುದಿಲ್ಲ, ಆದರೆ ಪುಲ್ಲಿಂಗ ರೂಪಕ್ಕೆ ಬದಲಾಗುತ್ತದೆ : église ಮುಂಚೆ ಸಂಭವಿಸುವ ma ಎಂಬುದು mon église (ನನ್ನ ಇಗರ್ಜಿ)[೫೬] ಎಂದಾಗುತ್ತದೆ . ಜರ್ಮನ್ ಬಳಕೆಯು ಇದೇ ರೀತಿಯಲ್ಲಿರುತ್ತದೆ. ಅಪಾಸ್ಟ್ರಫಿಗಳನ್ನು ಬಹುಶಃ ವಿಶಿಷ್ಟವಾಗಿ ಲೋಪವಾದ ಅಕ್ಷರಗಳನ್ನು ಸೂಚಿಸಲು ಬಳಸಲಾಗುತ್ತದೆ. ಇದನ್ನು ಬಹುವಚನಗಳಿಗೆ ಅಥವಾ ಬಹಳಷ್ಟು ಸ್ವಾಮ್ಯಸೂಚಕ ರೂಪಗಳಿಗೆ ಬಳಸುವಂತಿಲ್ಲ (ಕೆಲವೇ ಕೆಲವು ಅಪವಾದಗಳ ಪೈಕಿ Max' Vater ಸಹ ಸೇರಿದೆ). ಎರಡೂ ತರಹದ ಬಳಕೆಗಳು ವ್ಯಾಪಕವಾಗಿದ್ದರೂ, ಅವು ಅಶುದ್ಧ. greengrocers' apostrophes ಎಂಬುದರ ಜರ್ಮನ್ ಸಮಾನಾರ್ಥಕ ಪದವು ಹೀನಾರ್ಥಕವಾದ Deppenapostroph (ದಡ್ಡರ ಅಪಾಸ್ಟ್ರಫಿ) ಎನ್ನಲಾಗುತ್ತದೆ. (ಜರ್ಮನ್ ವಿಕಿಪೀಡಿಯಾದಲ್ಲಿ Apostrophitis ಎಂಬುದನ್ನು ನೋಡಿ.) ಪುರಾತನ ಗ್ರೀಕ್ ಭಾಷೆಯ ಆಧುನಿಕ ಮುದ್ರಣದಲ್ಲೂ, ಲೋಪಗಳನ್ನು ಗುರುತಿಸಲೂ ಸಹ ಅಪಾಸ್ಟ್ರಫಿಗಳನ್ನು ಬಳಸಲಾಗುತ್ತದೆ. ಮುಂದಿನ ಪದವು ಸ್ವರದೊಂದಿಗೆ ಆರಂಭವಾದಲ್ಲಿ, ಹ್ರಸ್ವಸ್ವರಗಳೊಂದಿಗೆ ಅಂತ್ಯಗೊಳ್ಳುವ ಕೆಲವು ನಿರ್ದಿಷ್ಟ ಪುರಾತನ ಗ್ರೀಕ್ ಪದಗಳು ಲೋಪವಾಗುತ್ತವೆ. ಉದಾಹರಣೆಗೆ, ಹಲವು ಪುರಾತನ ಗ್ರೀಕ್ ಭಾಷಾ ಲೇಖಕರು δὲ ἄλλος (dè állos ) ಬದಲಿಗೆ δ’ ἄλλος (d'állos ) ಹಾಗೂ ἆρα οὐ (âra ou ) ಬದಲಿಗೆ ἆρ’ οὐ (âr' ou ) ಎಂದು ನಮೂದಿಸುವರು. ಹೆಬ್ರೂ ಭಾಷೆಯಲ್ಲಿ ಪ್ರಥಮಾಕ್ಷರಗಳಿಗೆ ಒಂದು geresh ಬಳಸಲಾಗುತ್ತದೆ. ಇದನ್ನು ಅಪಾಸ್ಟ್ರಫಿಯ ರೂಪದಲ್ಲಿ ನಮೂದಿಸಲಾಗುತ್ತದೆ. ಎರಡು geresh(״)ಗಳನ್ನು ಬಹುವಚನ ರೂಪ gershayim ಎನ್ನಲಾಗುತ್ತದೆ. ಇದನ್ನು ಪ್ರಥಮಾಕ್ಷರಿಗಳನ್ನು ಸೂಚಿಸಲು ಬಳಸಲಾಗುತ್ತದೆ. ಪ್ರಥಮಾಕ್ಷರಿಯ ಕೊನೆಯ ಅಕ್ಷರದ ಬಲಕ್ಕೆ ಇದನ್ನು ಸೇರಿಸಲಾಗುತ್ತದೆ. ಐರಿಷ್ ಭಾಷೆಯಲ್ಲಿ, F ಅಥವಾ ಸ್ವರಾಕ್ಷರಗಳೊಂದಿಗೆ ಆರಂಭವಾಗುವ ಕ್ರಿಯಾಪದಗಳ ಭೂತಕಾಲಗಳು d' (do ನ ಅಕ್ಷರಲೋಪ) ಒಂದಿಗೆ ಆರಂಭವಾಗುತ್ತದೆ. ಉದಾಹರಣೆಗೆ do oscail ಎಂಬುದು d'oscail ("ತೆರೆಯಿತು") ಎಂದಾಗುತ್ತದೆ, ಹಾಗೂ do fhill ಎಂಬುದು d'fhill ("ವಾಪಸಾಯಿತು") ಎಂದಾಗುತ್ತದೆ. is ಸಂಯೋಜಕ ಪದವನ್ನು ಲೋಪಗೊಳಿಸಿ s ಎನ್ನಲಾಗುತ್ತದೆ, ಹಾಗೂ do ("to"), mo ("my") ಇತ್ಯಾದಿ ಪದಗಳನ್ನು F ಹಾಗೂ ಸ್ವರಾಕ್ಷರಗಳ ಮುಂಚೆ ಲೋಪಗೊಳಿಸಲಾಗುತ್ತದೆ. ಲುಗಾಂಡಾ ಭಾಷೆಯಲ್ಲಿ ಸ್ವರದೊಂದಿಗೆ ಅಂತ್ಯಗೊಳ್ಳುವ ಪದದ ನಂತರ ಸ್ವರದೊಂದಿಗೆ ಆರಂಭವಾಗುವ ಇನ್ನೊಂದು ಪದವು ಅನುಸರಿಸಿದಲ್ಲಿ, ಮೊದಲ ಪದದ ಕೊನೆಯ ಸ್ವರವು ಲೋಪವಾಗಿ, ಎರಡನೆಯ ಪದದ ಮೊದಲ ಸ್ವರಾಕ್ಷರದ ಉದ್ದವನ್ನು ಹೆಚ್ಚಿಸಲಾಯಿತು.. ಮೊದಲ ಅಕ್ಷರವು ಏಕಾಕ್ಷರವಾಗಿದ್ದಲ್ಲಿ, ಅಕ್ಷರ ಸಂಯೋಜನಾ ಶಾಸ್ತ್ರದಲ್ಲಿ ಲೋಪವನ್ನು ಅಪಾಸ್ಟ್ರೊಫಿನಲ್ಲಿ ನಿರೂಪಿಸಲಾಗುತ್ತದೆ. ಉದಾಹರಣೆಗೆ, taata w'abaana "the father of the children", wa ("of") ಎಂಬುದು w ' ಎಂದಾಗುತ್ತದೆ; y'ani? ("who is it?") ಯಲ್ಲಿ, ye ("who") ಎಂಬುದು y' ಎಂದಾಗುತ್ತದೆ. ಆದರೆ, ಹಲವು ಉಚ್ಚಾರಣಾಂಶಗಳಿಂದ ಕೂಡಿದ ಪದದ ಕೊನೆಯ ಸ್ವರವನ್ನು ಮಾತಿನಲ್ಲಿ ಲೋಪವಾಗಿಸಿದರೂ, ಬರೆಯುವ ಸಮಯ ಅದನ್ನು ಯಾವಾಗಲೂ ನಮೂದಿಸಲಾಗುತ್ತದೆ. ಉದಾಹರಣೆಗೆ omusajja oyo ("ಈ ಮನುಷ್ಯ"), *omusajj'oyo ಅಲ್ಲ, ಏಕೆಂದರೆ omusajja (ಮನುಷ್ಯ) ಎಂಬುದು ಹಲವು ಉಚ್ಚಾರಣಾಂಶಗಳಿಂದ ಕೂಡಿದೆ. ನಾರ್ವೇಜಿಯನ್ ಭಾಷೆಯಲ್ಲಿ, ಪದವನ್ನು ಸಂಕುಚಿತಗೊಳಿಸಲಾಗಿದೆಯೆಂಬುದನ್ನು ಸೂಚಿಸಲು ಅಪಾಸ್ಟ್ರಫಿ ಬಳಸಲಾಗುತ್ತದೆ. ಉದಾಹರಣೆಗೆ "har ikke" (have not) ಇಂದ "ha'kke". ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಿಗಿಂತಲೂ ಭಿನ್ನವಾಗಿ, ಇಂತಹ ಲೋಪಗಳನ್ನು ಪ್ರಮಾಣಿತ ಅಕ್ಷರ ಸಂಯೋಜನಾ ಶಾಸ್ತ್ರದ ಅಂಗವೆಂದು ಪರಿಗಣಿಸಲಾಗುವುದಿಲ್ಲ. ಆದರೂ ಇದನ್ನು ಇನ್ನಷ್ಟು ಉಕ್ತ ಶೈಲಿಯ ಲೇಖನ ರಚಿಸಲು ಬಳಸಲಾಗುತ್ತದೆ. -s ಧ್ವನಿಯೊಂದಿಗೆ ಅಂತ್ಯಗೊಳ್ಳುವ ಪದಗಳ ಷಷ್ಠಿ ವಿಭಕ್ತಿಯನ್ನು ಗುರುತಿಸಲು ಅಪಾಸ್ಟ್ರಫಿ ಬಳಸಬಹುದು. ಉದಾಹರಣೆಗೆ, -s, -x, ಹಾಗೂ -z ಒಂದಿಗೆ ಕೊನೆಗೊಳ್ಳುವ ಪದಗಳು. ಕೆಲವು ಭಾಷಣಕಾರರು ಟೆಂಪ್ಲೇಟು:IPA-no ಶಬ್ದದೊಂದಿಗೆ ಅಂತ್ಯಗೊಳ್ಳುವ ಪದಗಳನ್ನೂ ಸೇರಿಸಿಕೊಳ್ಳುವರು. (ನಾರ್ವೇಜಿಯನ್ ಭಾಷೆಯ ಪದದ ಕೊನೆಯಲ್ಲಿ -s ಸೇರಿಸಿ ಬಹುವಚನ ರಚಿಸುವುದಿಲ್ಲ. ಇಂಗ್ಲಿಷ್ ಭಾಷೆಯಂತೆ ನಾರ್ವೇಜಿಯನ್ ಭಾಷೆಯಲ್ಲಿ ಷಷ್ಠಿ ವಿಭಕ್ತಿಯ -s ಹಾಗೂ ಬಹುವಚನದ -s ನಡುವೆ ವ್ಯತ್ಯಾಸವನ್ನು ಹುಡುಕುವ ಅಗತ್ಯವಿಲ್ಲ.) ಸಾಮಾನ್ಯವಾಗಿ, ಪದವೊಂದರ ಕೊನೆಯಲ್ಲಿ -s ಸೇರಿಸುವುದರ ಮೂಲಕ ಷಷ್ಠಿ ವಿಭಕ್ತಿ ರೂಪವನ್ನು ಸೃಷ್ಟಿಸಬಹುದು. ಉದಾಹರಣೆಗೆ "mann" (man) manns (man's) ಪದವು ಆಗಲೇ s ಒಂದಿಗೆ ಅಂತ್ಯಗೊಂಡಿದ್ದಲ್ಲಿ, ಕೊನೆಯಲ್ಲಿ s ಸೇರಿಸುವ ಬದಲಿಗೆ, ಅಪಾಸ್ಟ್ರಫಿ ಸೇರಿಸಲಾಗುವುದು. ಉದಾಹರಣೆಗೆ los (naval pilot) los' (naval pilot's). ಅಮೆರಿಕಾ ಸಂಯುಕ್ತ ಸಂಸ್ಥಾನದ ಮಾಜಿ ರಾಷ್ಟ್ರಾಧ್ಯಕ್ಷ ಜಾರ್ಜ್ ಬುಷ್ ಹೆಸರು ಎರಡು ಷಷ್ಠಿ ವಿಭಕ್ತಿರೂಪಗಳನ್ನು ಹೊಂದಿದ್ದವು - Bushs and Bush'.
ಕನಿಷ್ಠ ಸಾರ್ಥಕ ಪದಾಕೃತಿಗಳ ಪ್ರತ್ಯೇಕಗೊಳಿಸುವಿಕೆ
ಕೆಲವು ಭಾಷೆಗಳಲ್ಲಿ, ಪದದ ಧಾತುವು ವಿಶಿಷ್ಟವಾಗಿ ಅನ್ಯರೂಪಿ ಹಾಗೂ ಸಮೀಕೃತವಾಗಿರದಿದ್ದಲ್ಲಿ, ಪದದ ಧಾತು ಮತ್ತು ಪ್ರತ್ಯಯ ಅಥವಾ ಉಪಸರ್ಗವನ್ನು ಪ್ರತ್ಯೇಕಿಸಲು ಅಪಾಸ್ಟ್ರಫಿ ಬಳಸಲಾಗುತ್ತದೆ. ಕನಿಷ್ಠ ಸಾರ್ಥಕ ಪದಾಕೃತಿಗಳ ಪ್ರತ್ಯೇಕಗೊಳಿಸುವಿಕೆಯ ಇನ್ನೊಂದು ರೀತಿಗಾಗಿ, ಕೆಳಗೆ pinyin ನೋಡಿ.
ಡ್ಯಾನಿಷ್ ಭಾಷೆಯಲ್ಲಿ, ವಿದೇಶೀ ಮೂಲದ ಪದಗಳಿಗೆ ಸ್ವರಭಾರ ಹಾಕುವ ನಿರ್ದೇಶಕ ಗುಣವಾಚಿಗಳನ್ನು ಜೋಡಿಸಲು ಅಪಾಸ್ಟ್ರಫಿಗಳನ್ನು ಆಗಾಗ್ಗೆ ಬಳಸಲಾಗುತ್ತದೆ. ಇಲ್ಲದಿದ್ದಲ್ಲಿ ಪದವು ಸಂದಿಗ್ಧವಾಗಿ ಕಾಣುತ್ತದೆ. ಉದಾಹರಣೆಗೆ, "the IP address" ಎಂದು ಅರ್ಥೈಸಲು IP'en ಎಂದು ಬರೆಯಬಹುದು. ಅಪಾಸ್ಟ್ರಫಿಗೆ ಸಮರ್ಥನೆ ನೀಡಿದರೆ ನಾಜೂಕಿಲ್ಲದಂತೆ ಪರಿಗಣಿಸುವ ಪದಗಳಲ್ಲಿ ಕೆಲವು ವ್ಯತ್ಯಾಸವಿರುತ್ತದೆ. firma ("company") ಅಥವಾ niveau ("level") ನಂತಹ ಬಹಳ ಕಾಲದಿಂದಲೂ ಬಳಕೆಯಲ್ಲಿರುವ ಪದಗಳನ್ನು firma'et ಹಾಗೂ niveau'et ಎಂದು ಬರೆಯಬಹುದು, ಆದರೂ ಸಾಮಾನ್ಯವಾಗಿ ಅಪಾಸ್ಟ್ರಫಿಯಿಲ್ಲದೆ ಕಂಡುಬರುತ್ತವೆ. ಡ್ಯಾನಿಷ್ ಪ್ರಭಾವದಿಂದಾಗಿ, ಅಪಾಸ್ಟ್ರಫಿಯ ಈ ಬಳಕೆಯನ್ನು ನಾರ್ವೆಜಿಯನ್‌ನಲ್ಲಿಯೂ ಕಾಣಬಹುದು. ಆದರೆ ಇದು ತಪ್ಪು. ಇದರ ಬದಲಿಗೆ -ಡ್ಯಾಷ್ ಸಂಕೇತ ಬಳಸಬೇಕಿದೆ. ಉದಾಹರಣೆಗೆ CD-en (the CD). ಫಿನ್ನಿಷ್ ಭಾಷೆಯಲ್ಲಿ, ಬರೆಯುವಾಗ ವ್ಯಂಜನಗಳೊಂದಿಗೆ, ಹಾಗೂ ಉಚ್ಚರಿಸುವಾಗ ಸ್ವರಗಳೊಂದಿಗೆ ಅಂತ್ಯಗೊಳ್ಳುವ ವಿದೇಶಿ ಹೆಸರುಗಳು ಮತ್ತು ಎರವಲು ಪದಗಳ ರೂಪನಿಷ್ಪತ್ತಿ ಮಾಡಲು ಅಪಾಸ್ಟ್ರಫಿಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, show'ssa ("in a show"), Bordeaux'hun ("to Bordeaux") ಫಿನ್ನಿಷ್ ಹಾಗೂ ಸ್ವೀಡಿಷ್ ಭಾಷೆಗಳಲ್ಲಿ ವಿವರಣ ಚಿಹ್ನೆಯ ನಿಕಟ ಸಂಬಂಧಿತ ಬಳಕೆಯಿದೆ. ಎಸ್ಟೊನಿಯನ್ ಭಾಷೆಯಲ್ಲಿ, ಯಾವುದೇ ಪದದ ವಿಭಕ್ತಿರೂಪ ಅಂತ್ಯಗಳಿಂದ ಪ್ರಾತಿಪದಿಕವನ್ನು ಪ್ರತ್ಯೇಕಿಸುವುದಕ್ಕಾಗಿ ವಿದೇಶಿ ಹೆಸರುಗಳನ್ನು ರೂಪನಿಷ್ಪತ್ತಿ ಮಾಡಲು ಅಪಾಸ್ಟ್ರಫಿಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, Monet ' (ಷಷ್ಠಿ ವಿಭಕ್ತಿ ರೂಪ) ಅಥವಾ Monet'sse (Monet ನ ಚತುರ್ಥಿ ವಿಭಕ್ತಿ ರೂಪ) (ಪ್ರಸಿದ್ಧ ಚಿತ್ರಕಲಾವಿದರ ಹೆಸರು). ಪೊಲಿಷ್ ಭಾಷೆಯಲ್ಲಿ, ಪದಗಳು ಮತ್ತು ಪ್ರಥಮಾಕ್ಷರಿಗಳಂತಹ ಅಕ್ಷರಸಮೂಹಗಳ ನಿಷ್ಪತ್ತಿಯನ್ನು ಗುರುತಿಸಲು ಅಪಾಸ್ಟ್ರಫಿಯನ್ನು ವಿಶಿಷ್ಟವಾಗಿ ಬಳಸಲಾಗಿದೆ. ಇದರಲ್ಲಿ ಪ್ರಥಮಾಕ್ಷರಿಗಳ ಕಾಗುಣಿತವು ರೂಪನಿಷ್ಪತ್ತಿಯ ಸಾಮಾನ್ಯ ನಿಯಮಗಳೊಂದಿಗೆ ಘರ್ಷಣೆಯಾಗಬಹುದು. ಇದು ಮುಖ್ಯವಾಗಿ ವಿದೇಶಿ ಪದಗಳು ಮತ್ತು ಹೆಸರುಗಳ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ, "Al Gore's campaign" ಬದಲು Kampania Ala Gore'a ಎಂದು ಬರೆಯಬಹುದು. ಈ ಉದಾಹರಣೆಯಲ್ಲಿ, Ala ಎಂಬುದನ್ನು ಅಪಾಸ್ಟ್ರಫಿಯಿಲ್ಲದೆ ಬರೆಯಬಹುದಾಗಿದೆ, ಏಕೆಂದರೆ, ಇದರ ಕಾಗುಣಿತ ಮತ್ತು ಉಚ್ಚಾರಣೆಯು ಸಾಮಾನ್ಯ ಪೊಲಿಷ್ ನಿಯಮಗಳಡಿ ಸುಲಭವಾಗಿ ಹೊಂದಿಕೆಯಾಗುತ್ತದೆ. ಆದರೆ Gore'a ಗೆ ಅಪಾಸ್ಟ್ರಫಿಯ ಅಗತ್ಯವಿದೆ, ಏಕೆಂದರೆ ಉಚ್ಚಾರಣೆಯಿಂದ e ಮಾಯವಾಗಿ, ರೂಪನಿಷ್ಪತ್ತಿ ವಿನ್ಯಾಸವನ್ನು ಬದಲಿಸಿಬಿಡುತ್ತದೆ. ಉಚ್ಚಾರಣೆ ಹೇಗೇ ಇರಲಿ, ಎಲ್ಲಾ ವಿದೇಶಿ ಪದಗಳ ನಂತರ ಅಪಾಸ್ಟ್ರಫಿಯ ಅಗತ್ಯವಿದೆ ಎಂದು ಈ ನಿಯಮವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಇದರ ಪರಿಣಾಮವನ್ನು ಈ ಉದಾಹರಣೆ ಮೂಲಕ ತಿಳಿಸಬಹುದು Kampania Al'a Gore'a . ಈ ಪ್ರಭಾವವು greengrocers' ಅಪಾಸ್ಟ್ರಫಿಗೆ ಸಮಾನಾಗಿದೆ (ಮೇಲೆ ನೋಡಿ). ತುರ್ಕಿ ಭಾಷೆಯಲ್ಲಿ, ಅಂಕಿತನಾಮದ ಮೊದಲ ಅಕ್ಷರಗಳನ್ನು ದೊಡ್ಡಕ್ಷರಗಳಲ್ಲಿ ನಮೂದಿಸಲಾಗುತ್ತದೆ ಹಾಗೂ ನಾಮಪದ ಮತ್ತು ನಂತರ ಬರುವ ಯಾವುದೇ ಉತ್ತರಪ್ರತ್ಯಯದ ನಡುವೆ ಅಪಾಸ್ಟ್ರಫಿಯನ್ನು ಸೇರಿಸಲಾಗುತ್ತದೆ. ಉದಾಹರಣೆಗೆ, İstanbul'da ("in Istanbul"), okulda ("in school") ಇದಕ್ಕೆ ತದ್ವಿರುದ್ಧವಾಗಿದೆ.
ತಾಲವ್ಯೀಕರಣ ಅಥವಾ ತಾಲವ್ಯೀಕರಣವಲ್ಲದ ಗುರುತಾಗಿ
ಕೆಲವು ಭಾಷೆಗಳು ಮತ್ತು ಲಿಪ್ಯಂತರಣ ವ್ಯವಸ್ಥೆಗಳಲ್ಲಿ ತಾಲವ್ಯೀಕರಣದ ಉಪಸ್ಥಿತಿ ಅಥವಾ ಕೊರತೆಯನ್ನು ಗುರುತಿಸಲು ಅಪಾಸ್ಟ್ರಫಿಯನ್ನು ಬಳಸುತ್ತವೆ.
ಬೆಲರುಸ್ ಹಾಗೂ ಉಕ್ರೇನಿಯನ್ ಭಾಷೆಗಳಲ್ಲಿ, ವ್ಯಂಜನ ಹಾಗು ನಂತರ ಬರುವ ಮೃದು (iotified) ಸ್ವರಗಳ (е, ё, ю, я; Uk. є, ї, ю, я) ನಡುವೆ ಅಪಾಸ್ಟ್ರಫಿ ಬಳಸಲಾಗುತ್ತದೆ. ಮುಂಚಿನ ವ್ಯಂಜನದ ತಾಲವ್ಯೀಕರಣ ನಡೆಯುವುದಿಲ್ಲ ಎಂದು ಇದು ಸೂಚಿಸುತ್ತದೆ. ಅಲ್ಲದೆ, ಪದದ ಮೊದಲ ಅಕ್ಷರದಂತೆಯೇ ಸ್ವರವನ್ನೂ ಸಹ ಉಚ್ಚರಿಸಲಾಗುತ್ತದೆ.
ರಷ್ಯನ್ ಹಾಗೂ ಪಡೆಯಲಾದ ಕೆಲವು ಅಕ್ಷರಮಾಲೆಗಳಲ್ಲಿಯೂ, ъ (ಮುಂಚೆ yer ಎನ್ನಲಾಗುತ್ತಿದ್ದ) ದೃಢ ಸಂಕೇತ ಇದೇ ಕ್ರಿಯೆ ನಡೆಸುತ್ತದೆ. ಆದರೆ, 1918ರ ನಂತರ, ಬದಲಿ ವ್ಯವಸ್ಥೆಯಾಗಿ ಅಪಾಸ್ಟ್ರಫಿ ಬಳಕೆಯಾದದ್ದು 1918ರ ನಂತರ. ಆಗ ಸೋವಿಯತ್ ಅಧಿಕಾರಿಗಳು ಮೊಂಡುತನ ಪ್ರದರ್ಶಿಸುತ್ತಿದ್ದ ಪೀಟ್ರೊಗ್ರಾಡ್‌ನ ಮುದ್ರಣಾ ಉದ್ದಿಮೆಗಳಿಂದ 'ಅಕ್ಷರ ಪರಾವಲಂಬಿ'ಯ ಮುದ್ರಣ ಅಚ್ಚನ್ನು ಮುಟ್ಟುಗೋಲು ಹಾಕುವ ಮೂಲಕ ಕಾಗುಣಿತದ ಸುಧಾರಣೆ ಜಾರಿಗೆತಂದರು. [೫೭] ಬೆಲರುಸಿಯನ್, ರಷ್ಯನ್ ಮತ್ತು ಉಕ್ರೇನಿಯನ್ ಭಾಷೆಗಳಿಗಾಗಿ ಸಿರಿಲ್ಲಿಕ್ ಅಕ್ಷರಮಾಲೆಯಲ್ಲಿ, ಮೃದು ಸಂಕೇತಕ್ಕೆ (ಮುಂಚಿನ ವ್ಯಂಜನದ ತಾಲವ್ಯೀಕರಣವನ್ನು ಸೂಚಿಸುವ ь ಸಂಕೇತ) ಬದಲಿಯಾಗಿ ಅಪಾಸ್ಟ್ರಫಿಯನ್ನು ಬಳಸಲಾಗುತ್ತದೆ. ಉದಾಹರಣೆಗೆ, BGN/PCGN ವ್ಯವಸ್ಥೆಯ ಪ್ರಕಾರ, Русь ಯನ್ನು Rus' ಎಂದು ಲಿಪ್ಯಂತರ ಮಾಡಲಾಗುತ್ತದೆ. ಗೊಂದಲಮಯವಾಗಿ, ಈ ಲಿಪ್ಯಂತರಣ ಯೋಜನೆಗಳಲ್ಲಿ ಕೆಲವು, ಉಕ್ರೇನಿಯನ್ ಮತ್ತು ಬೆಲರುಸಿಯನ್ ಪಠ್ಯದ ಅಪಾಸ್ಟ್ರಫಿಗಳನ್ನು ನಿರೂಪಿಸಲು, ಎರಡು ಅಪಾಸ್ಟ್ರಫಿಗಳನ್ನು ( " ) ಬಳಸುತ್ತವೆ. ಉದಾಹರಣೆಗೆ, ಉಕ್ರೇನಿಯನ್ ಭಾಷೆಯಲ್ಲಿ слов’янське ('ಸ್ಲಾವಿಕ್' ಎಂಬ ಉಚ್ಚಾರಣೆ) slov"yans’ke ಎಂದು ಲಿಪ್ಯಂತರಗೊಳ್ಳುತ್ತದೆ. ಕೆಲವು ಕರೆಲಿಯನ್ ಅಕ್ಷರ ಸಂಯೋಜನೆಗಳಲ್ಲಿ ತಾಲವ್ಯೀಕರಣವನ್ನು ಸೂಚಿಸಲು ಅಪಾಸ್ಟ್ರಫಿ ಬಳಸುತ್ತವೆ. ಉದಾಹರಣೆಗೆ, n'evvuo ("ಸಲಹೆ ನೀಡಲು"), d'uuri ("ಹಾಗೇ (ಅದೇ ತರಹ)"), el'vüttiä ("ಪುನಶ್ಚೇತನಗೊಳಿಸುವುದು").
ಕಂಠದ್ವಾರೀಯ ಧ್ವನಿಯಾಗಿ
ಇವನ್ನೂ ನೋಡಿ: Okina ಮತ್ತು Saltillo (linguistics)
ಇತರೆ ಭಾಷೆಗಳು ಮತ್ತು ಲಿಪ್ಯಂತರಣಾ ವ್ಯವಸ್ಥೆಗಳಲ್ಲಿ ಕಂಠದ್ವಾರೀಯ ಧ್ವನಿಯನ್ನು ಸೂಚಿಸಲು ಅಪಾಸ್ಟ್ರಫಿ ಅಥವಾ ಇದೇ ರೀತಿಯ ಗುರುತನ್ನು ಬಳಸುತ್ತವೆ. ಕೆಲವೊಮ್ಮೆ ಅದನ್ನೂ ಸಹ ಅಕ್ಷರಮಾಲೆಯ ಅಂಗವೆಂದು ಪರಿಗಣಿಸಲಾಗುತ್ತದೆ.
Guaraniಯಲ್ಲಿ ಇದನ್ನು puso /ˈpuso/ ಎನ್ನಲಾಗುತ್ತದೆ. ಉದಾಹರಣೆಗೆ ñe'ẽ , ka'a , a' ỹ ಪದಗಳು. ಹವಾಯಿಯನ್ ʻokina (ʻ) ತಲೆಕೆಳಗಾದ ಅಪಾಸ್ಟ್ರಫಿಯನ್ನು ಆಗಾಗ್ಗೆ (') ಎಂದು ನಮೂದಿತವಾಗಿದೆ. ಇದನ್ನು ಅಕ್ಷರಮಾಲೆಯ ಅಂಗವೆಂದು ಪರಿಗಣಿಸಲಾಗಿದೆ. ಟೊಂಗನ್ ಭಾಷೆಯಲ್ಲಿ, ಅಪಾಸ್ಟ್ರಫಿಯನ್ನು fakauʻa ಎನ್ನಲಾಗಿದ್ದು, ಇದು ಅಕ್ಷರಮಾಲೆಯ ಕೊನೆಯ ಅಕ್ಷರವಾಗಿದೆ. ಕಂಠದ್ವಾರೀಯ ಧ್ವನಿಯನ್ನು ನಿರೂಪಿಸಲು ಇದನ್ನು ಬಳಸಲಾಗುತ್ತದೆ. okinaದಂತೆಯೇ ಇದೂ ಸಹ ತಲೆಕೆಳಗಾಗಿದೆ. ಸಮೊವನ್, ಟಹಿಟಿಯನ್, ಹಾಗೂ ಚಮೊರೊ ಸೇರಿದಂತೆ ವಿವಿಧ ಇತರೆ ಆಸ್ಟ್ರೊನೆಷಿಯನ್ ಭಾಷೆಗಳು. ಪೂರ್ವ ಟಿಮೊರ್‌ನ ಅಧಿಕೃತ ಭಾಷೆಗಳಲ್ಲಿ ಒಂದಾದ ಟೆಟಮ್ ಬ್ರೆಜಿಲ್ ದೇಶದ ಸ್ಥಳೀಯ ಟುಪಿ ಭಾಷೆ ಮಾಯನ್. ಕ್ಲಿಂಗಾನ್, D'ni, Mando'a or Na'vi ಸೇರಿದಂತೆ ಹಲವು ಕಾಲ್ಪನಿಕ ಭಾಷೆಗಳು. [೫೮]
ತುರ್ಕಿ ಭಾಷೆಗಳು ಮತ್ತು ಅರಬಿಕ್ ಲಿಪಿಯ ರೊಮನೀಕರಣಗಳಲ್ಲಿ ಕಂಠದ್ವಾರೀಯ ಧ್ವನಿಯನ್ನು ಹೋಲುವ ಶಬ್ದಗಳನ್ನು ಅಪಾಸ್ಟ್ರಫಿ ನಿರೂಪಿಸುತ್ತದೆ. ತೆರೆಯುವ ಒಂಟಿ ಉದ್ಧರಣ ಚಿಹ್ನೆಯು ಕೆಲವೊಮ್ಮೆ ಈ ಕ್ರಿಯೆ ನಡೆಸುತ್ತದೆ. ಇತರೆ ಭಾಷೆಗಳಲ್ಲಿ ಇತರೆ ಬಳಕೆಗಳು
ಸ್ಲೊವಾಕ್ ಭಾಷೆಯಲ್ಲಿ, ಸಣ್ಣಕ್ಷರಗಳಾದ t , d , l , ಹಾಗೂ ದೊಡ್ಡಕ್ಷರ L ಹಾಗೂ ವ್ಯಂಜನಗಳ ಮೇಲಿರುವ caron ಚಿಹ್ನೆಯು ಅಪಾಸ್ಟ್ರಫಿಯನ್ನು ಹೋಲುತ್ತದೆ (ď , ť , ľ , Ľ ). ಕೆಲವು ವಿಶಿಷ್ಟ ಮುದ್ರಣ ಕಲೆಗೆ ಸಂಬಂಧಿತ ನಮೂದನೆಗಳಲ್ಲಿ ಇದು ಸಾಮಾನ್ಯ. ಆದರೆ, caron ಬದಲಿಗೆ ಅಪಾಸ್ಟ್ರಫಿ ಬಳಸುವುದು ತಪ್ಪು. ಸ್ಲೊವಾಕ್ ಭಾಷೆಯಲ್ಲಿ ತೀಕ್ಷ್ಣ ಉಚ್ಚಾರಣಾ ಶೈಲಿಯ l ಸಹ ಇದೆ: ĺ , Ĺ . ಇವೆರಡೂ ಭಾಷೆಗಳಲ್ಲಿ, ಕೆಲವು ನಿರ್ದಿಷ್ಟ ಪದಗಳಲ್ಲಿ ಲೋಪಗಳನ್ನು ಸೂಚಿಸಲು ಅಪಾಸ್ಟ್ರಫಿ ಬಳಸಲಾಗುತ್ತದೆ (ಸ್ಲೊವಾಕ್ ಭಾಷೆಯಲ್ಲಿ tys' ಎಂಬುದು ty si ನ ಹ್ರಸ್ವ ರೂಪ ಅಥವಾ, ಜೆಕ್ ಭಾಷೆಯಲ್ಲಿ pad' ಎಂಬುದು padl ರ ಸಂಕ್ಷಿಪ್ತ ರೂಪ). ಆದರೂ, ಈ ಲೋಪಗಳನ್ನು ಕವನಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಮೊದಲ ಎರಡು ಅಂಕಿಗಳ ಲೋಪವನ್ನು ಸೂಚಿಸಲು '87 , ಎರಡಂಕಿಯ ವರ್ಷದ ಸಂಖ್ಯೆಯ ಮುಂಚೆಯೂ ಸಹ ಅಪಾಸ್ಟ್ರಫಿ ಬಳಸಲಾಗಿದೆ. ಫಿನ್ನಿಷ್ ಭಾಷೆಯಲ್ಲಿ, k ಎಂಬುದು ವಿಸಂಧಿಯಾಗಿ ಪರಿವರ್ತನೆಯಾಗುವುದು, ವ್ಯಂಜನ ಸ್ವರವ್ಯತ್ಯಯ ವಿನ್ಯಾಸಗಳಲ್ಲಿ ಒಂದು. ಉದಾಹರಣೆಗೆ, keko → keon ("a pile → a pile's") ದೀರ್ಘಾವಧಿಯ ಸ್ವರ ಅಥವಾ ಜಂಟಿಸ್ವರದ ನಂತರ ಅಂತಿಮ ಸ್ವರವು ಸಂಭವಿಸಿದಲ್ಲಿ, ಈ ವಿಸಂಧಿಯನ್ನು ಅಪಾಸ್ಟ್ರಫಿಯೊಂದಿಗೆ ಕಾಗುಣಿತದಲ್ಲಿ ನಮೂದಿಸತಕ್ಕದ್ದು. ಉದಾಹರಣೆಗೆ ruoko → ruo'on , vaaka → vaa'an ಇದು ಸಮಾಸ-ಪದಗಳಿಗೆ ತದ್ವಿರುದ್ಧವಾಗಿದೆ, ಇಲ್ಲಿ ಕೂಡುಗೆರೆಯೊಂದಿಗೆ ಈ ಸಮಸ್ಯೆಯನ್ನು ಬಗೆಹರಿಸಬಹುದು. ಉದಾಹರಣೆಗೆ maa-ala (ಭೂಪ್ರದೇಶ) ಇದೇ ರೀತಿ, ಕವನಗಳಲ್ಲಿ ಸಂಭವಿಸುವ ವಿಸಂಧಿ (ಹ್ರಸ್ವಗೊಳಿಸುವಿಕೆ)ಗಳಿಗೆ ಅಪಾಸ್ಟ್ರಫಿ ಬಳಸಲಾಗುತ್ತದೆ. ಉದಾಹರಣೆಗೆ, missä on ಬದಲಿಗೆ miss' on ("ಎಲ್ಲಿ"). ಬ್ರೆಟನ್ ಭಾಷೆಯಲ್ಲಿ, ವ್ಯಂಜನ /x/ ಕ್ಕಾಗಿ c'h ಸಂಯುಕ್ತವನ್ನು ಬಳಸಲಾಗುತ್ತದೆ (ಇಂಗ್ಲಿಷ್ ಪದ Loch Ness ನಲ್ಲಿನ ch ಪದದಂತೆ) ಫ್ರೆಂಚ್ ಭಾಷೆಯಲ್ಲಿ ವ್ಯಂಜನ /ʃ/ಕ್ಕೆ ch ಬಳಸಲಾಗಿದೆ. ಉದಾಹರಣೆಗೆ ಫ್ರೆಂಚ್ ಭಾಷೆಯ chat ಅಥವಾ ಇಂಗ್ಲಿಷ್ ಭಾಷೆಯ she . ಇಟ್ಯಾಲಿಯನ್ ಭಾಷೆಯಲ್ಲಿ, ಅಂತಿಮ ಸ್ವರದ ನಂತರ, ಕೆಲವೊಮ್ಮೆ ಗ್ರೇವ್ ಅಕ್ಸೆಂಟ್ ಬದಲಿಗೆ ಅಪಾಸ್ಟ್ರಫಿ ಬಳಸಲಾಗುತ್ತದೆ (ದೊಡ್ಡ ಅಕ್ಷರಗಳಲ್ಲಿ, ಅಥವಾ ಆ ಅಕ್ಷರದ ಸರಿಯಾದ ರೂಪವು ಅಲಭ್ಯವಾದಲ್ಲಿ). ಆದ್ದರಿಂದ, Niccolò ಎಂಬುದನ್ನು Niccolo' ಅಥವಾ NICCOLO' ಎಂದು ನಮೂದಿಸಲಾಗಿದೆ. ಸೂಕ್ತ ಕೀಲಿಮಣೆಯ ಅಲಭ್ಯವಾದಲ್ಲಿ, ಇದು ಕೇವಲ ಯಂತ್ರ ಅಥವಾ ಕಂಪ್ಯೂಟರ್ ಬಳಸಿ ಬರೆಯಲು ಅನ್ವಯಿಸುತ್ತದೆ. ಸ್ವಹಿಲಿ ಭಾಷೆಯಲ್ಲಿ, ng ನಂತರದ ಅಪಾಸ್ಟ್ರಫಿ ಪ್ರಕಾರ, /ŋ/ ಧ್ವನಿಯ ನಂತರ /ɡ/ ಧ್ವನಿಯಿರುವುದಿಲ್ಲ, ಅರ್ಥಾತ್ ಇಂಗ್ಲಿಷ್‌ನ finger ಬದಲಿಗೆ, singer ನಲ್ಲಿನ ng ಉಚ್ಚಾರಣೆಯಾಗುತ್ತದೆ. ಲುಗಾಂಡಾದಲ್ಲಿ, ಕೀಲಿಮಣೆಗಳಲ್ಲಿ ŋ ಅಲಭ್ಯವಿದ್ದಲ್ಲಿ, ಇದರ ಬದಲಿಗೆ /ŋ/ ಎಂದು ಉಚ್ಚಾರಣೆಯಾಗುವ ng' ಬಳಸಲಾಗಿದೆ. ಅಪಾಸ್ಟ್ರಫಿಯು ಅದನ್ನು ಅಕ್ಷರ ಸಂಯೋಗ ng ಯಿಂದ ([ŋɡ] ಎಂದು ಉಚ್ಚಾರಣೆಯಾಗುವ) ಪ್ರತ್ಯೇಕವಾಗಿ ಗುರುತಿಸುತ್ತದೆ. ಭಾಷೆಯಲ್ಲಿ ಇದಕ್ಕೆ ಪ್ರತ್ಯೇಕ ಬಳಕೆಯಿದೆ. ಮೇಲೆ ತಿಳಿಸಲಾದ ಸ್ವಹಿಲಿ ಬಳಕೆಯೊಂದಿಗೆ ಇದನ್ನು ಹೋಲಿಸಿ. Jèrriaisನಲ್ಲಿ, ವ್ಯಂಜನದ ಉದ್ದ ಅಥವಾ ಯುಗ್ಮೀಕರಣವನ್ನು ಗುರುತಿಸಲು ಅಪಾಸ್ಟ್ರಫಿ ಬಳಸಲಾಗಿದೆ. ಉದಾಹರಣೆಗೆ, t't /tː/ಯು s's /sː/, n'n /nː/, th'th /ðː/, ಹಾಗೂ ch'ch ನಿರೂಪಿಸುತ್ತದೆ( /ʃː/ ( /t/, /s/, /n/, /ð/, ಹಾಗೂ /ʃ/ ಒಂದಿಗೆ ತದ್ವಿರುದ್ಧ). ಸಾಮಾನ್ಯ ಮ್ಯಾಂಡರಿನ್ (ಮುಖ್ಯ ಚೀನೀ ಭಾಷೆ ಅಥವಾ Putonghua) ಭಾಷೆಯ pinyin (hànyǔ pīnyīn) ರೊಮನೀಕರಣ ವ್ಯವಸ್ಥೆಯಲ್ಲಿ, ಸಂದಿಗ್ಧತೆ ಮೂಡಿಬರುವ ಸಾಧ್ಯತೆಯಿದ್ದಲ್ಲಿ, ಸಾಮಾನ್ಯವಾಗಿ ಅಪಾಸ್ಟ್ರಫಿ ಉಚ್ಚಾರಾಂಶವನ್ನು ಸಡಿಲವಾಗಿ ಪ್ರತ್ಯೇಕಿಸುತ್ತದೆಂದು ಹೇಳಲಾಗಿದೆ. ಉದಾಹರಣೆಗೆ, Xī'ān ನಗರದ ಹೆಸರಿನ ಸಾಮಾನ್ಯ ರೊಮನೀಕರಣದಲ್ಲಿ, ಏಕ-ಉಚ್ಚಾರಾಂಶವುಳ್ಳ ಪದ xian ಇಂದ ಪ್ರತ್ಯೇಕವಾಗಿ ಗುರುತಿಸಲು ಅಪಾಸ್ಟ್ರಫಿ ಸೇರಿಸಿಕೊಂಡಿರುತ್ತದೆ. ಆದರೆ, ಇನ್ನಷ್ಟು ಕಟ್ಟುನಿಟ್ಟಾಗಿ, ಮೊದಲ ಉಚ್ಚಾರಾಂಶದ ನಂತರ ಆರಂಭವಾಗುವ ಹೊಸ ಉಚ್ಚಾರಾಂಶವನ್ನು ಆರಂಭಿಸುವ ಪ್ರತೀ a , e ಅಥವಾ o ಮುಂಚೆ ಒಂದು ಅಪಾಸ್ಟ್ರಫಿ ಸೇರಿಸುವುದು ಸೂಕ್ತ. ಇದರ ಮುಂಚೆ ಯಾವುದೇ ಕೂಡುಗೆರೆ ಅಥವಾ ದೊಡ್ಡಗೀಟು ಇರುವಂತಿಲ್ಲ. ಉದಾಹರಣೆಗೆ, Tiān'ānmén , Yǎ'ān ; ಆದರೆ ಸರಳವಾಗಿ Jǐnán ಎನ್ನಲಾಗುತ್ತದೆ. ಇದರಲ್ಲಿ ji ಮತ್ತು nan ಎಂಬ ಉಚ್ಚಾರಾಂಶಗಳಿವೆ. ಅಪಾಸ್ಟ್ರಫಿ ಇಲ್ಲದಿರುವ ಕಾರಣ, Jīn'ān ಗೆ ಪ್ರತ್ಯುತ್ತರವಾಗಿ ಉಚ್ಚಾರಾಂಶಗಳು jin ಮತ್ತು an ಆಗಿರುವುದಿಲ್ಲ. [೫೯] ಇದು ಒಂದು ರೀತಿಯ ಕನಿಷ್ಠ ಸಾರ್ಥಕ ಪದಾಕೃತಿಯನ್ನು ಪ್ರತ್ಯೇಕಗೊಳಿಸುವ ಗುರುತಾಗಿದೆ.(ಮೇಲೆ ನೋಡಿ) ಸಾಮಾನ್ಯ ಮ್ಯಾಂಡರಿನ ಭಾಷೆಗಾಗಿ ಬಹುಮಟ್ಟಿಗೆ ಮೀರಿಸಲಾದ ವೇಡ್-ಜಾಯ್ಲ್ಸ್ ರೊಮನೀಕರಣ ತತ್ತ್ವದಲ್ಲಿ, ಮುಂಚಿನ ವ್ಯಂಜನ ಶಬ್ದದ ಮಹಾಪ್ರಾಣೋಚ್ಚಾರಣೆಯನ್ನು ಅಪಾಸ್ಟ್ರಫಿ ಗುರುತಿಸುತ್ತದೆ. ಉದಾಹರಣೆಗೆ, tsê (pinyin ze )ನಲ್ಲಿ, ts ನಿಂದ ನಿರೂಪಿತವಾದ ವ್ಯಂಜನಕ್ಕೆ ಮಹಾಪ್ರಾಣೋಚ್ಚಾರಣೆಯಿರುವುದಿಲ್ಲ, ಆದರೆ ts'ê (pinyin ce )ಯಲ್ಲಿ, ts' ಇಂದ ನಿರೂಪಿತವಾದ ವ್ಯಂಜನವು ಮಹಾಪ್ರಾಣೋಚ್ಚಾರಣೆ ಹೊಂದಿದೆ. ಜಪಾನಿ ಭಾಷೆಯ ರೊಮನೀಕರಣದ ಕೆಲವು ವ್ಯವಸ್ಥೆಯಲ್ಲಿ, ಉದಾಹರಣೆಗೆ, ಸಂದಿಗ್ಧ ಸ್ಥಿತಿಯಲ್ಲಿ, na ಹಾಗೂ n + a ನಡುವೆ ವ್ಯತ್ಯಾಸ ಮಾಡಲು, moras ನಡುವೆ ಅಪಾಸ್ಟ್ರಫಿಯನ್ನು ಬಳಸಲಾಗಿದೆ. (ಇದು ಮೇಲೆ ತಿಳಿಸಲಾದ Pinyinನಲ್ಲಿನ ಪ್ರಯೋಗಕ್ಕೆ ಸಮಾನವಾಗಿದೆ.) ಹೆಬ್ರೂ ಬಾಷೆಯಲ್ಲಿ, geresh (ಅಪಾಸ್ಟ್ರಫಿಯಂತೆ ಇರುವ ಒಂದು ಭೇದಸೂಚಕ) ಅಕ್ಷರಗಳ ಪಕ್ಕದಲ್ಲೇ ಇದ್ದು, ಹೆಬ್ರೂ ಅಕ್ಷರಮಾಲೆಯಲ್ಲಿ ನಿರೂಪಿಸಲಾಗದ ಧ್ವನಿಗಳನ್ನು ನಮೂದಿಸಲು ಬಳಸಲಾಗುತ್ತದೆ. j , th ಹಾಗೂ ch ನಂತಹ ಶಬ್ದಗಳನ್ನು ג, ת, ಮತ್ತು צ ಬಳಸಿ geresh ಒಂದಿಗೆ ನಮೂದಿಸಲಾಗುತ್ತದೆ (ಅನೌಪಚಾರಿಕವಾಗಿ "chupchik"). ಉದಾಹರಣೆಗೆ, ಜಾರ್ಜ್ ಎಂಬ ಹೆಸರನ್ನು ಹೆಬ್ರೂ ಭಾಷೆಯಲ್ಲಿ ג׳ורג׳ ಎಂದು ನಮೂದಿಸಲಾಗುತ್ತದೆ (ಇದರಲ್ಲಿ ג׳ ಮೊದಲ ಮತ್ತು ಕೊನೆಯ ವ್ಯಂಜನವನ್ನು ನಿರೂಪಿಸುತ್ತದೆ). 2000ರಲ್ಲಿ ಆಯ್ದುಕೊಳ್ಳಲಾದ ನೂತನ ಉಝ್ಬೆಕ್ ಲ್ಯಾಟೀನ್ ಅಕ್ಷರಮಾಲೆಯಲ್ಲಿ, ಒಂದೇ ಅಕ್ಷರದೊಂದಿಗೆ ಬರೆಯಲಾದ ವಿವಿಧ ಧ್ವನಿಮಾಗಳ ನಡುವೆ ವ್ಯತ್ಯಾಸ ಗುರುತಿಸಲು, ಅಪಾಸ್ಟ್ರಫಿಯು ಭೇದಸೂಚಕವಾಗಿ ವರ್ತಿಸುತ್ತದೆ. ಇದು o (ಸಿರಿಲಿಕ್ ў ಒಂದಿಗೆ ಸರಿಹೊಂದುವ)ನಿಂದ o' ಹಾಗೂ g ಇಂದ g' (ಸಿರಿಲ್ಲಿಕ್ ғ ) ನಡುವೆ ವ್ಯತ್ಯಾಸ ಗುರುತಿಸುತ್ತದೆ. ಇದರಿಂದಾಗಿ, ಯಾವುದೇ ವಿಶೇಷ ಅಕ್ಷರಗಳ ಬಳಕೆಯನ್ನು ತಪ್ಪಿಸಿ, ಸಾಧಾರಣ ASCII ಅಥವಾ ಯಾವುದೇ ಲ್ಯಾಟೀನ್ ಕೀಲಿಮಣೆಯಲ್ಲಿ ಉಝ್ಬೆಕ್ ಭಾಷೆಯನ್ನು ನಮೂದಿಸಬಹುದು. ಇದರ ಜೊತೆಗೆ, ಉಝ್ಬೆಕ್‌ನಲ್ಲಿರುವ ಧ್ವನಿ-ನಂತರದ ಅಪಾಸ್ಟ್ರಫಿಯು ಕಂಠದ್ವಾರಿ ಧ್ವನಿಯ ಧ್ವನಿಮಾವನ್ನು ನಿರೂಪಿಸುತ್ತದೆ. ಇದು ಅರಬಿಕ್ hamzah ಅಥವಾ ‘ayn ಇಂದ ವ್ಯುತ್ಪತ್ತಿಯಾಗಿದೆ ಹಾಗು ಸಿರಿಲ್ಲಿಕ್ ъ ಬದಲಿಗೆ ಬಳಸಲಾಗುತ್ತದೆ. ಇಂಗ್ಲಿಷ್‌ನ ಯಾರ್ಕ್‌ಷೈರ್ ಉಚ್ಚಾರಣೆಯಲ್ಲಿ ಅಪಾಸ್ಟ್ರಫಿಯನ್ನು the ಪದ ನಿರೂಪಿಸಲು ಬಳಸಲಾಗಿದೆ. ಇದು ಇನ್ನಷ್ಟು ಕಂಠದ್ವಾರಿ /t/ ಧ್ವನಿಯಾಗಿ (ಅಥವಾ ಬಿಡುಗಡೆಯಾಗದ) ಹ್ರಸ್ವಗೊಳಿಸಲಾಗಿದೆ. ಬಹಳಷ್ಟು ಬಳಕೆದಾರರು "in the barn" ಬದಲಿಗೆ in t'barn , "on the step" ಬದಲಿಗೆ on t'step ಎಂದು ಬರೆಯುವರು. ಯಾರ್ಕ್‌ಷೈರ್ ಶೈಲಿಯ ಮಾತಿನ ಪರಿಚಯವಿಲ್ಲದವರು intuh barn ಹಾಗೂ ontuh step ಎನ್ನುವ ಶಬ್ದ ಬರುವ ರೀತಿಯಲ್ಲಿ ಹೇಳುತ್ತಾರೆ. in't barn ಹಾಗೂ on't step ಎಂಬುದು ಇನ್ನಷ್ಟು ನಿಖರ ನಮೂದನೆಯಾಗಿರಬಹುದು. ಆದರೂ ಇವೂ ಸಹ ಸರಿಯಾದ ಯಾರ್ಕ್‌ಷೈರ್ ಉಚ್ಚಾರಣಾ ಶೈಲಿಯನ್ನು ನಿರೂಪಿಸುವುದಿಲ್ಲ. ಏಕೆಂದರೆ t ಎಂಬುದು ಹೆಚ್ಚಾಗಿ ಕಂಠದ್ವಾರಿ ಧ್ವನಿಯಂತಿದೆ. ಮ್ಯಾಡ್ರಿಡ್‌ನಲ್ಲಿನ Páginas Amarillasನ ಗಾಲಿಷಿಯನ್ ಭೋಜನಾ ಮಂದಿರಗಳು ಕೆಲವೊಮ್ಮೆ ತಮ್ಮ ಹೆಸರುಗಳಲ್ಲಿ ಸಾಮಾನ್ಯ ಗುಣವಾಚಿ O ("The") ಬದಲಿಗೆ O' ಬಳಸುತ್ತವೆ. [೬೦]
ಮುದ್ರಣ ರೂಪ
ಅಪಾಸ್ಟ್ರಫಿಯ ರೂಪವು ಹಸ್ತಪ್ರತಿಯ ಬರಹದಲ್ಲಿ ಉದ್ಭವಿಸಿದೆ. ಇದು ಕೆಳದಿಕ್ಕಿನತ್ತ ಸಾಗಿ ಗಡಿಯಾರದ ದಿಕ್ಕಿನಲ್ಲಿ ವಕ್ರವಾಗಿರುವ ಬಾಲವುಳ್ಳ ಚುಕ್ಕೆಯಂತೆ ನಮೂದಿಸಲಾಗಿದೆ. ಈ ರೂಪವು ಮುದ್ರಣಾ ಅಪಾಸ್ಟ್ರಫಿ ಯಿಂದ ಹುಟ್ಟಿದೆ.ಇದು(ಟೈಪ್‌ಸೆಟ್) ’ ಎಂದು ಕೂಡ ಹೆಸರಾಗಿದೆ.ಇದನ್ನು ಟೈಪ್‌ಸೆಟ್ ಅಪಾಸ್ಟ್ರಫಿ ಅಥವಾ ಅನೌಪಚಾರಿಕವಾಗಿ, ಗುಂಗುರು ಅಪಾಸ್ಟ್ರಫಿ ಎನ್ನಲಾಗಿದೆ. ನಂತರ, ಸ್ಯಾನ್ಸ್-ಸೆರಿಫ್ ಅಚ್ಚುಮೊಳೆಗಳುಇನ್ನಷ್ಟು ರೇಖಾಗಣಿತೀಯ ಅಥವಾ ಸರಳೀಕೃತ ರೂಪದಲ್ಲಿ ಅಪಾಸ್ಟ್ರಫಿಗಳನ್ನು ವಿಲಕ್ಷಣೀಸಿದ್ದಾರೆ. ಆದರೂ ಸಾಮಾನ್ಯವಾಗಿ, ಅಂತ್ಯಗೊಳಿಸುವ ಉದ್ಧರಣಾ ಚಿಹ್ನೆಯಂತೆ ಒಂದೇ ರೀತಿಯ ದಿಕ್ಕಿನತ್ತ ಒಲವು ಉಳಿಸಿಕೊಂಡಿತ್ತು.
ಬೆರಳಚ್ಚು ಯಂತ್ರದ ಆವಿಷ್ಕರಣದೊಂದಿಗೆ, 'ತಟಸ್ಥ' ಉದ್ಧರಣಾ ಚಿಹ್ನೆ ( ' )ರೂಪವನ್ನು ಮಿತವ್ಯಯದ ದೃಷ್ಟಿಯಿಂದ,ಅಪಾಸ್ಟ್ರಫಿಯನ್ನು ಪ್ರತಿನಿಧಿಸಲು ಏಕೈಕ ಕೀಲಿಯನ್ನು ಮಾತ್ರ ಬಳಸಿಕೊಳ್ಳುವ ಮೂಲಕ ಕೀಲಿಮಣೆಯಲ್ಲಿ ಸೃಷ್ಟಿಸಲಾಯಿತು. ತೆರೆದ ಹಾಗೂ ಮುಚ್ಚಿದ ಒಂಟಿ ಉದ್ಧರಣ ಚಿಹ್ನೆಗಳು, ಒಂಟಿ ಪ್ರೈಮ್‌ಚಿಹ್ನೆಗಳನ್ನು ಇದು ಒಳಗೊಂಡಿತ್ತು, ಇದನ್ನು ಬೆರಳಚ್ಚು ಯಂತ್ರದ ಅಪಾಸ್ಟ್ರಫಿ ಅಥವಾ ಲಂಬ ಅಪಾಸ್ಟ್ರಫಿ ಎನ್ನಲಾಗಿದೆ. ಕಂಪ್ಯೂಟಿಂಗ್
ಯುನಿಕೋಡ್‌ನಲ್ಲಿ ಹಲವು ರೀತಿಗಳ ಅಪಾಸ್ಟ್ರಫಿ ಸಂಕೇತಗಳಿವೆ:
( ' ) ಲಂಬ ಬೆರಳಚ್ಚುಯಂತ್ರ ಅಪಾಸ್ಟ್ರಫಿ (ಯುನಿಕೋಡ್ ಹೆಸರು ಅಪಾಸ್ಟ್ರಫಿ ಅಥವಾ ಅಪಾಸ್ಟ್ರಫಿ-ಉದ್ಧರಣ ಚಿಹ್ನೆ ), U+0027, ASCIIಯಿಂದ ಸ್ವೀಕೃತ. ( ’ ) ವಿರಾಮ ಚಿಹ್ನೆ ಅಪಾಸ್ಟ್ರಫಿ (ಅಥವಾ ಮುದ್ರಣಾ ಅಪಾಸ್ಟ್ರಫಿ ; ಬಲ ಒಂಟಿ ಉದ್ಧರಣ ಚಿಹ್ನೆ ; ಏಕ ಅಲ್ಪವಿರಾಮ ಉದ್ಧರಣಾ ಚಿಹ್ನೆ ), U+2019. ಇದು ಅಪಾಸ್ಟ್ರಫಿ ಹಾಗೂ ಅಂತ್ಯಗೊಳಿಸುವ ಏಕ ಉದ್ಧರಣಾ ಚಿಹ್ನೆಯಾಗಿ ಉಪಯೋಗವಾಗುತ್ತದೆ. ಯುನಿಕೋಡ್ ಪ್ರಮಾಣಗಳ ಪ್ರಕಾರ ಇದು ಅಪಾಸ್ಟ್ರಫಿಗಾಗಿ ಬಳಸಬೇಕಾದ ಆದ್ಯತೆಯ ಸಂಕೇತ. [೬೧] ( ʼ ) ಅಕ್ಷರ ಅಪಾಸ್ಟ್ರಫಿ (ಅಥವಾ ಪರಿವರ್ತಕ ಅಕ್ಷರ ಅಪಾಸ್ಟ್ರಫಿ ), U+02BC. ಅಕ್ಷರಗಳನ್ನು ಪ್ರತ್ಯೇಕಿಸುವ ವಿರಾಮಚಿಹ್ನೆ ಎಂದು ಅಪಾಸ್ಟ್ರಫಿಯನ್ನು ಪರಿಗಣಿಸದೆ, ಸ್ವತಃ ಪ್ರತ್ಯೇಕ ಅಕ್ಷರವೆಂದು ಪರಿಗಣಿಸಿದಲ್ಲಿ, ಇದಕ್ಕೆ ಆದ್ಯತೆ ನೀಡಲಾಗುವುದು.
ಬ್ರೆಟನ್ cʼh, ಸಿರಿಲ್ಲಿಕ್ ಅಜರ್ಬೆಜಾನೀ ಅಕ್ಷರಮಾಲೆ ಅಥವಾ ಅರಬಿಕ್ ಕಂಠದ್ವಾರಿ ಧ್ವನಿ, hamza ಅಥವಾ ಸಿರಿಲ್ಲಿಕ್ ಮೃದು ಸಂಕೇತಗಳು ಸೇರಿದಂತೆ ಇತರೆ ಲಿಪ್ಯಂತರಗಳಲ್ಲಿ ಉದಾಹರಣೆಗಳನ್ನು ಕಾಣಬಹುದು. ಅಕ್ಷರ ಅಪಾಸ್ಟ್ರಫಿಯನ್ನು ಪ್ರಾಯೋಗಿಕವಾಗಿ ಬಳಸುವುದು ಬಹಳ ಅಪರೂಪವಾಗಿರುವ ಕಾರಣ, ಪಠ್ಯವನ್ನು ಈ ರೀತಿ ಸಂಕೇತಗೊಳಿಸಲಾಗಿದೆ ಎಂದು ಭಾವಿಸಬಾರದು ಎಂದು ಯುನಿಕೋಡ್ ಪ್ರಮಾಣಗಳು ಎಚ್ಚರಿಸುತ್ತದೆ. ಯುನಿಕೋಡ್ ಸಂಕೇತ ಪಟ್ಟಿಗಳಲ್ಲಿ ಅಕ್ಷರ ಅಪಾಸ್ಟ್ರಫಿಯನ್ನು ವಿರಾಮ ಚಿಹ್ನೆಗೆ ತದ್ರೂಪಿಯಾಗಿ ನಿರೂಪಿಸಲಾಗಿದೆ. [೬೨]
( ಟೆಂಪ್ಲೇಟು:Okina ) ಟೆಂಪ್ಲೇಟು:Okinaokina ಹವಾಯಿಯನ್ ಕಂಠದ್ವಾರಿ ಧ್ವನಿ ತನ್ನದೇ ಆದ ಯುನಿಕೋಡ್ ಸಂಕೇತ (U+02BB) ಹೊಂದಿದೆ. ( ˮ ) ನೆನೆಟ್ಸ್ ಭಾಷೆಗಳು ಎರಡು ಅಕ್ಷರ ಅಪಾಸ್ಟ್ರಫಿ (ಯುನಿಕೋಡ್ ಹೆಸರು ಪರಿವರ್ತಕ ಅಕ್ಷರ ಎರಡು ಅಪಾಸ್ಟ್ರಫಿ ), U+02EE.
( ՚ ) ಅರ್ಮಿನಿಯನ್ ಅಪಾಸ್ಟ್ರಫಿ , U+055A.
ಟೈಪ್ಸೆಟ್ ಸಾಮಗ್ರಿಯಲ್ಲಿ ಸರ್ವತ್ರ ಇದ್ದರೂ, ಕಂಪ್ಯೂಟರ್‌ನಲ್ಲಿ ಮುದ್ರಣ ಅಪಾಸ್ಟ್ರಫಿಯನ್ನು ( ’ ) ನಮೂದಿಸುವುದು ಬಹಳ ಕಷ್ಟ, ಏಕೆಂದರೆ ಪ್ರಮಾಣಿತ ಕೀಲಿಮಣೆಯಲ್ಲಿ ಅದರದ್ದೇ ಆದ ಕೀಲಿಯಿಲ್ಲ. ವೃತ್ತಿಪರ ಟೈಪ್ಸೆಟಿಂಗ್ ಹಾಗೂ ಚಿತ್ರಕ ವಿನ್ಯಾಸ (graphic design) ಪ್ರಪಂಚದಿಂದಾಚೆಗೆ, ಈ ಅಕ್ಷರವನ್ನು ನಮೂದಿಸುವುದು ಹೇಗೆಂದು ತಿಳಿದಿಲ್ಲದ ಜನರು ಇದರ ಬದಲು ಬೆರಳಚ್ಚುಯಂತ್ರದ ಅಪಾಸ್ಟ್ರಫಿ ( ' ) ಬಳಸುತ್ತಾರೆ. ಅಂತರಜಾಲ ಪ್ರಕಾಶನದ ಸಮಾನತಾವಾದಿ ಸ್ವರೂಪ ಹಾಗೂ ಮುದ್ರಣಕ್ಕೆ ಹೋಲಿಸಿದರೆ ಕಂಪ್ಯೂಟರ್ ದೃಶ್ಯಪರದೆಯ ಕಡಿಮೆ ಚಿತ್ರಸ್ಪಷ್ಟನೆಯ ಕಾರಣ, ಬೆರಳಚ್ಚುಯಂತ್ರದ ಅಪಾಸ್ಟ್ರಫಿಯನ್ನು ಎಂದಿಗೂ ಸಹ ಅಂತರಜಾಲಪುಟಗಳಲ್ಲಿ ಸಹಿಸಿಕೊಳ್ಳಬಹುದು ಎಂದು ಪರಿಗಣಿಸಲಾಗಿದೆ.
ಇನ್ನಷ್ಟೂ ಇತ್ತೀಚೆಗೆ, ಮುದ್ರಣದ ಅಪಾಸ್ಟ್ರಫಿಯು ಅಂತರಜಾಲದಲ್ಲಿ ಸರ್ವೇಸಾಮಾನ್ಯವಾಗುತ್ತಿದೆ. ಏಕೆಂದರೆ, ಯುನಿಕೋಡ್ ಪಠ್ಯ ಸಂಕೇತೀಕರಣ ಪ್ರಮಾಣದ ವ್ಯಾಪಕ ಅಳವಡಿಕೆ,ಉನ್ನತ ಚಿತ್ರ-ಸ್ಪಷ್ಟನೆಯ ದರ್ಶಕಗಳು ಹಾಗೂ ಆಧುನಿಕ ಕಾರ್ಯನಿರ್ವಹಣಾ ವ್ಯವಸ್ಥೆಯಲ್ಲಿ ಪಠ್ಯದ ಸುಧಾರಿತanti-aliasing (ಕರ್ಣೀಯ ರೇಖೆಗಳಲ್ಲಿ,ವಕ್ರರೇಖೆಗಳಲ್ಲಿ ವಿರೂಪಣೆಯನ್ನು ನಯಗೊಳಿಸುವ ತಂತ್ರ) ಇದಕ್ಕೆ ಕಾರಣ. ಇಂದು ಪದ-ಸಂಸ್ಕರಣ ಹಾಗೂ ಕಂಪ್ಯೂಟರ್-ಚಾಲಿತ ಪ್ರಕಾಶನ ತಂತ್ರಾಂಶಗಳ ಮೂಲಕ ಬೆರಳಚ್ಚು ಯಂತ್ರದ ಅಪಾಸ್ಟ್ರಫಿಗಳನ್ನು ಆಗಾಗ್ಗೆ ಸ್ವಯಂಚಾಲಿತವಾಗಿ ಮುದ್ರಣದ ಅಪಾಸ್ಟ್ರಫಿಗಳಾಗಿ ಪರಿವರ್ತಿಸುವ ಕಾರಣ (ಕೆಳಗೆ ನೋಡಿ), ವೃತ್ತಿಪರರಲ್ಲದವರು ರಚಿಸುವ ಕಡತಗಳಲ್ಲಿ ಮುದ್ರಣದ ಅಪಾಸ್ಟ್ರಫಿಯು ಆಗಾಗ್ಗೆ ಕಾಣಸಿಗುತ್ತದೆ. ಕಂಪ್ಯೂಟರ್‌ನಲ್ಲಿ ಅಪಾಸ್ಟ್ರಫಿ ನಮೂದಿಸುವುದು ಹೇಗೆ ಮ್ಯಾಕಿಂತೋಷ್ ವಿಂಡೋಸ್ ಲಿನುಕ್ಸ್/X ಹೆಚ್‌ಟಿಎಂಎಲ್ (HTML) ಅಂಶ ಹೆಚ್‌ಟಿಎಂಎಲ್ (HTML) ದಶಾಂಶ ಬೆರಳಚ್ಚು ಅಪಾಸ್ಟ್ರಫಿ ' ' ' '[೬೩] ' ಮುದ್ರಣದ ಅಪಾಸ್ಟ್ರಫಿ Option + Shift + ] ಕೀಲಿಮಣೆಯ ಸಂಖ್ಯಾಫಲಕದಲ್ಲಿ Alt + 0146 AltGr + shift + B ’ ’ ಬೆರಳಚ್ಚು ಯಂತ್ರದ ಅಪಾಸ್ಟ್ರಫಿ ಮತ್ತು ಎಎಸ್‌ಸಿಐಐ (ASCII) ಸಂಕೇತೀಕರಣ
ಬೆರಳಚ್ಚಿನ ಅಪಾಸ್ಟ್ರಫಿಯನ್ನೇ ( ' ) ಕಂಪ್ಯೂಟರ್ ಕೀಲಿಮಣೆಗಳಲ್ಲಿಯೂ ಅಳವಡಿಸಲಾಯಿತು. ಸಂಕೇತ ಮೌಲ್ಯ 0x27ನಲ್ಲಿರುವ ಈ ಅಪಾಸ್ಟ್ರಫಿಯು, 7-ಬಿಟ್ ASCII ಅಕ್ಷರ ಸಂಕೇತೀಕರಣದಲ್ಲಿರುವ ಏಕೈಕ ಲಭ್ಯ ಅಪಾಸ್ಟ್ರಫಿ ಚಿಹ್ನೆಯಾಗಿದೆ. ಇದರಿಂದಾಗಿ, ಇದು ಬಹಳಷ್ಟು ಓವರ್‌ಲೋಡ್ ಆಗಿರುವ (ಒಂದೇ ಆದೇಶಸಮೂಹ, ಹಲವು ಪರಿಧಿಗಳುಳ್ಳ ಸಂಕೇತಗಳು) ಚಿಹ್ನೆಯಾಗಿದೆ. (notclear ಎಎಸ್‌ಸಿಐಐ(ASCII)ಯಲ್ಲಿ, ಇದು ಬಲಕ್ಕಿರುವ ಒಂಟಿ ಉದ್ಧರಣಾ ಚಿಹ್ನೆ, ಎಡಕ್ಕಿರುವ ಒಂಟಿ-ಉದ್ಧರಣಾ ಚಿಹ್ನೆ, ಅಪಾಸ್ಟ್ರಫಿ, ಲಂಬಗೆರೆ ಅಥವಾ ಪ್ರೈಮ್ ವಿರಾಮ ಚಿಹ್ನೆಗಳು, ಅಥವಾ ತೀಕ್ಷ್ಣ ಉಚ್ಚಾರಣಾ ಶೈಲಿಯ (ಪರಿವರ್ತಕ ಅಕ್ಷರ)ಗಳನ್ನು ನಿರೂಪಿಸುತ್ತದೆ.
1985ರ ಮುಂಚಿನ ಆರಂಭಕಾಲದ ಕಂಪ್ಯೂಟರ್ ದರ್ಶಕಗಳು ಮತ್ತು ಮುದ್ರಕಗಳಲ್ಲಿ ASCII ಅಪಾಸ್ಟ್ರಫಿಯನ್ನು ಮುದ್ರಣದ ಅಪಾಸ್ಟ್ರಫಿ ಎಂದು ನಿರೂಪಿಸಿ, ASCII ಅನುದಾತ್ತ ಸ್ವರ ಚಿಹ್ನೆ ( ` ) U+0060 ಯನ್ನು ಹೊಂದಿಕೆಯಾಗುವ ಎಡ ಒಂಟಿ ಉದ್ಧರಣಾ ಚಿಹ್ನೆಯಾಗಿ ನಿರೂಪಿಸಿತು. ಇದರಿಂದಾಗಿ ಪಠ್ಯದ ಇನ್ನಷ್ಟು ಮುದ್ರಣರೂಪಕ್ಕೆ ಅವಕಾಶ ನೀಡಿತು. ಹಾಗಾಗಿ, ಇಂತಹ ಕಂಪ್ಯೂಟರ್‌ಗಳಲ್ಲಿ ``I can't ಎಂಬುದು ‘‘I can’t’’ ಎಂದು ಗೋಚರಿಸುತ್ತಿತ್ತು. ಆ ಕಾಲದಲ್ಲಿ ರಚಿಸಲಾದ ಕಡತಗಳಲ್ಲಿ ಇದನ್ನು ಇಂದಿಗೂ ಗಮನಿಸಬಹುದು. ಸ್ಮಾರ್ಟ್ ಕೋಟ್ಸ್ (Smart quotes)
ಮುದ್ರಣದ ಅಪಾಸ್ಟ್ರಫಿಗಳು ನಮೂದಿಸಲು ಸುಲಭವಾಗಲೆಂದು, ಪದಸಂಸ್ಕಾರಕ ಮತ್ತು ಪ್ರಕಾಶನಾ ತಂತ್ರಾಂಶಗಳು, ಪಠ್ಯ ನಮೂದಿಸುತ್ತಿರುವಾಗ ಆಗಾಗ್ಗೆ ಬೆರಳಚ್ಚು ಯಂತ್ರದ ಅಪಾಸ್ಟ್ರಫಿಗಳನ್ನು ಮುದ್ರಣದ ಅಪಾಸ್ಟ್ರಫಿಗಳನ್ನಾಗಿಸುತ್ತದೆ.( ಅದೇ ವೇಳೆ, ತೆರೆಯುವ ಮತ್ತು ಮುಚ್ಚುವ ಒಂಟಿ ಮತ್ತು ಜಂಟಿ ಉದ್ಧರಣಾ ಚಿಹ್ನೆಗಳನ್ನು ಅವುಗಳ ಸೂಕ್ತ ಎಡ ಅಥವಾ ಬಲ ರೂಪಗಳಿಗೆ ಪರಿವರ್ತಿಸುತ್ತವೆ.)
ಫಾರ್ಮ್ ಫೀಲ್ಡ್ (ಜಾಲಪುಟವೊಂದರಲ್ಲಿ ಹೆಸರು, ವಿಳಾಸ ಮುಂತಾದ ಮಾಹಿತಿಗಳನ್ನು ಭರ್ತಿ ಮಾಡುವ ಪಠ್ಯಕ್ಷೇತ್ರ) ಒಂದರಲ್ಲಿ ಪಠ್ಯ ನಮೂದಿಸಿ ಕಳುಹಿಸಿದ ನಂತರ, ಅಂತರಜಾಲಸರ್ವರ್‌ಗಳಲ್ಲಿ ಇದೇ ರೀತಿಯ ಸೌಕರ್ಯ ಒದಗಿಸಲಾಗುತ್ತದೆ. ಉದಾಹರಣೆಗೆ, ವೆಬ್ಲಾಗ್‌ಗಳು ಅಥವಾ ಉಚಿತ ವಿಶ್ವಕೋಶಗಳು). ಇದನ್ನು ಸ್ಮಾರ್ಟ್ ಕೋಟ್ಸ್ ಲಕ್ಷಣ ಎನ್ನಲಾಗಿದೆ; ಕಂಪ್ಯೂಟರ್ ಕ್ರಮವಿಧಿಗಳ ಸ್ವಯಂಚಾಲಿತ ಬದಲಾಗದ ಅಪಾಸ್ಟ್ರಫಿಗಳು ಮತ್ತು ಉದ್ಧರಣಾ ಚಿಹ್ನೆಗಳನ್ನು ಮೂಕ ಉದ್ಧರಣೆ ಗಳು ಎನ್ನಲಾಗುತ್ತವೆ.
ಇಂತಹ ಪರಿವರ್ತನೆಯು ಯಾವಾಗಲೂ ಅಕ್ಷರ ಸಂಪುಟ ಮತ್ತು ಸಂಕೇತೀಕರಣ ಪ್ರಮಾಣಗಳಿಗೆ ಹೊಂದಿಕೊಂಡು ನಡೆಯುವುದಿಲ್ಲ (ಕೆಲವೊಮ್ಮೆ ಬೇರೆ ರೀತಿಯಲ್ಲಿ ಪರಿವರ್ತನೆಯಾಗಬಹುದು). ಜೊತೆಗೆ, ಇಂತಹ ಹಲವು ತಂತ್ರಾಂಶಗಳು ಪಠ್ಯದ ಮುಂಭಾಗದಲ್ಲಿರುವ ಅಪಾಸ್ಟ್ರಫಿಗಳನ್ನು ತೆರೆಯುವ ಒಂಟಿ ಉದ್ಧರಣಾ ಚಿಹ್ನೆಯಾಗಿ ತಪ್ಪಾಗಿ ಪರಿವರ್ತಿಸಿಬಿಡುತ್ತವೆ. ಉದಾಹರಣೆಗೆ, ವರ್ಷಗಳ ಹ್ರಸ್ವಗೊಳಿಸುವಿಕೆಯಲ್ಲಿ, ಸಂದರ್ಭಗಳಿಗೆ ಅನುಗುಣವಾಗಿ, 1929 ಅಥವಾ 2029 ಗಳಿಗೆ ’29 ಎಂದು ನಮೂದಿಸಬೇಕು(ಸಂದರ್ಭವನ್ನು ಅವಲಂಬಿಸಿ). ಆದರೆ ಇದು ‘29 ಎಂದು ನಮೂದಿಸಲಾಗುತ್ತದೆ - ಇದು ತಪ್ಪು. ಇನ್ನೊಂದು ಉದಾಹರಣೆ ನೋಡಿ: it was ಎಂಬ ಉಕ್ತಿಯ ಪುರಾತನರೂಪಿ ಸಂಕ್ಷಿಪ್ತ ’twas ಬದಲಿಗೆ ‘twas ಎಂದು ತಪ್ಪಾಗಿ ನಮೂದಿಸಲಾಗುತ್ತದೆ. ಮೈಕ್ರೊಸಾಫ್ಟ್ ವರ್ಡ್ ತಂತ್ರಾಂಶದಲ್ಲಿ, ಈ ಸಮಸ್ಯೆಯನ್ನು ಸರಿಪಡಿಸುವ ಸುಲಭ ಮಾರ್ಗವೇನೆಂದರೆ, ಎರಡು ಅಪಾಸ್ಟ್ರಫಿಗಳನ್ನು ನಮೂದಿಸಿ (ಮಧ್ಯದಲ್ಲಿ ಅಗತ್ಯವಿದ್ದರೆ ಅಂತರ ಸಹ ನೀಡಬಹುದು); ನಂತರ ಮೊದಲ ಅಪಾಸ್ಟ್ರಫಿಯನ್ನು ಅಳಿಸುವುದು. ಸ್ಮಾರ್ಟ್ ಕೋಟ್ ಲಕ್ಷಣಗಳೂ ಸಹ ಕೆಲವೊಮ್ಮೆ ಅಪಾಸ್ಟ್ರಫಿಯ ಬದಲು ಪ್ರೈಮ್ ಅಗತ್ಯವಿದೆ ಎಂಬುದನ್ನು ಗಮನಿಸಲು ವಿಫಲವಾಗುತ್ತವೆ. ಉದಾಹರಣೆಗೆ, ಅಕ್ಷಾಂಶ 49° 53′ 08″ ಎಂಬುದನ್ನು 49° 53’ 08” ಎಂದು ತಪ್ಪಾಗಿ ಪ್ರದರ್ಶಿಸುತ್ತದೆ.
ಮೈಕ್ರೊಸಾಫ್ಟ್ ವರ್ಡ್‌ನಲ್ಲಿ ಸ್ಮಾರ್ಟ್ ಕೋಟ್ಸ್‌ನ್ನು 'ಆಫ್' ಮಾಡಬಹುದಾಗಿದೆ. (ಈ ತಂತ್ರಾಂಶದ ಕೆಲವು ಆವೃತ್ತಿಗಳಲ್ಲಿ, Tools -> AutoCorrect -> AutoFormat as you type ಕ್ಲಿಕ್ ಮಾಡಿ, ನಂತರ ಸೂಕ್ತ ಆಯ್ಕೆಯನ್ನು ಪರೀಕ್ಷಿಸುವುದಾಗಿದೆ). ಪರ್ಯಾಯವಾಗಿ, ಅಪಾಸ್ಟ್ರಫಿಯನ್ನು ನಮೂದಿಸಿದ ಕೂಡಲೆ CONTROL-Z ಕೀಲಿ ಟೈಪ್ ಮಾಡಿದರೆ(ತೆರೆಯುವುದಕ್ಕೆ ಅದನ್ನು ಲಂಬ ಅಪಾಸ್ಟ್ರಫಿಯನ್ನಾಗಿ ಪುನಃ ಪರಿವರ್ತಿಸಬಹುದು. ಮೂರನೆಯ ಪರ್ಯಾಯ ವಿಧಾನವಾಗಿ,ಕಂಟ್ರೋಲ್ ಕೀಲಿ ಒತ್ತಿ ಹಿಡಿದು ಎರಡು ಅಪಾಸ್ಟ್ರಫಿಗಳನ್ನು ಟೈಪ್ ಮಾಡಿದಲ್ಲಿ,, ಕೇವಲ ಒಂದು ಅಪಾಸ್ಟ್ರಫಿ ಮಾತ್ರ ಗೋಚರಿಸುತ್ತದೆ. 8-ಬಿಟ್ ಸಂಕೇತೀಕರಣಗಳಲ್ಲಿ ಮುದ್ರಣದ ಅಪಾಸ್ಟ್ರಫಿ
ವಿಭಿನ್ನ 8-ಬಿಟ್ ಅಕ್ಷರ ಸಂಕೇತೀಕರಣಗಳಲ್ಲಿ ಮುದ್ರಣದ ಅಪಾಸ್ಟ್ರಫಿ (') ಗಾಗಿ ಆಧಾರವನ್ನು ಪರಿಚಯಿಸಲಾಯಿತು (1984ರಲ್ಲಿ ಆಪೆಲ್ ಮ್ಯಾಕಿಂತೊಷ್ ಕಾರ್ಯನಿರ್ವಹಣ ವ್ಯವಸ್ಥೆಯ ಮ್ಯಾಕ್ ರೊಮನ್ ಅಕ್ಷರ ಸಂಪುಟ, ಹಾಗೂ ನಂತರ, ಮೈಕ್ರೊಸಾಫ್ಟ್ ವಿಂಡೋಸ್‌ನ CP1252 ಸಂಕೇತೀಕರಣ). ISO-8859-1ರಲ್ಲಿ ಇಂತಹ ಯಾವುದೇ ಅಕ್ಷರವಿಲ್ಲ.
ಕೆಲವೊಮ್ಮೆ ANSI ಅಥವಾ ISO-Latin ಎಂದು ತಪ್ಪಾಗಿ ಉಲ್ಲೇಖಿಸಲಾದ ಮೈಕ್ರೊಸಾಪ್ಟ್ ವಿಂಡೋಸ್ CP1252 0x92ರಲ್ಲಿ ಮುದ್ರಣದ ಅಪಾಸ್ಟ್ರಫಿ ಹೊಂದಿದೆ. ಮೈಕ್ರೊಸಾಫ್ಟ್ ತಂತ್ರಾಂಶದಲ್ಲಿರುವ "ಸ್ಮಾರ್ಟ್ ಕೋಟ್ಸ್" ASCII ಅಪಾಸ್ಟ್ರಫಿಯನ್ನು ಈ ಮೌಲ್ಯಕ್ಕೆ ಪರಿವರ್ತಿಸುವ ಕಾರಣ, ಇತರೆ ತಂತ್ರಾಂಶ ತಯಾರಕರೂ ಸಹ ಇದನ್ನೇ ನೈಜ ವಿಧಾನ ಎಂದು ಅಳವಡಿಕೊಳ್ಳಲೇಬೇಕಾಗಿದೆ. ಉದಾಹರಣೆಗೆ, 'ಇದರ ಮೌಲ್ಯ CP1252 ಎಂದು ವ್ಯಾಖ್ಯಾನಿತವಾಗಿದೆ' ಎಂದು ಹೆಚ್‌ಟಿಎಮ್‌ಎಲ್ 5 ಪ್ರಮಾಣಿತವು ಸೂಚಿಸುತ್ತದೆ. ಕೆಲವು ಮೈಕ್ರೊಸಾಫ್ಟ್‌ಯೇತರ ಆರಂಭಿಕ ಅಂತರಜಾಲ ವೀಕ್ಷಕಗಳು ಇದಕ್ಕೆ ಒಂದು ಪ್ರಶ್ನಾಚಿಹ್ನೆ '?' ಪ್ರದರ್ಶಿಸುತ್ತವೆ, ಹಾಗೂ, ಮೈಕ್ರೊಸಾಫ್ಟ್ ತಂತ್ರಾಂಶ-ಅನ್ವಯಿಕೆ ಬಳಸಿ ರಚಿಸಲಾದ ಅಂತರಜಾಲ ಪುಟವನ್ನು ಓದಲಾಗದು.
ಆದೇಶ ಸಂಕೇತ-ಸರಣಿ ರಚನೆ (Programming)(not clear
ಹಲವು ಆದೇಶಸಂಕೇತ-ಸರಣಿ ನಮೂನೆಗಳು ಅಕ್ಷರ-ಚಿಹ್ನಾ ಸ್ಥಿರ ಮೌಲ್ಯಗಳ ಎಲ್ಲೆ ಗುರುತಿಸಲು ASCII ಅಪಾಸ್ಟ್ರಫಿ ಬಳಸುತ್ತವೆ. ಕೆಲವೊಮ್ಮೆ, ಅಪಾಸ್ಟ್ರಫಿ ಅಥವಾ ಜಂಟಿ ಉದ್ಧರಣಾ ಚಿಹ್ನೆ ಬಳಸಬಹುದು, ಇದರಿಂದಾಗಿ ಶ್ರೇಣಿ ಸ್ಥಿರಾಂಕಗಳು ಇನ್ನೊಂದು ಅಕ್ಷರವನ್ನು ಹೊಂದಲು ಅವಕಾಶ ನೀಡುತ್ತದೆ (ಆದರೆ ಎರಡನ್ನೂ ಅಲ್ಲ).
ಸಿ ಆದೇಶ-ಸಂಕೇತ ಸರಣಿ ಹಾಗೂ ಇತರೆ ಸಂಬಂಧಿತ ಭಾಷೆಗಳು ಸಹ ಅಕ್ಷರ ಸ್ಥಿರಾಂಕದ ಎಲ್ಲೆ ಗುರುತಿಸಲು ಅಪಾಸ್ಟ್ರಫಿಗಳನ್ನು ಬಳಸುತ್ತವೆ. ಸಿ ಭಾಷೆಯಲ್ಲಿ ಇದು ಒಂಟಿ-ಅಕ್ಷರದ ಪುಂಜಕ್ಕಿಂತಲೂ ಭಿನ್ನವಾಗಿದೆ. ಇವನ್ನೂ ಗಮನಿಸಿ
ಸಮರ್ಥನೆಯ ಅಪಾಸ್ಟ್ರಫಿ (Apologetic ಅಪಾಸ್ಟ್ರಫಿ) ಕೆರಾನ್ (Caron) ಸಂಕುಚಿತಗೊಳಿಸುವಿಕೆ (ವ್ಯಾಕರಣ) (Contraction (grammar)) ಸ್ವರಲೋಪ (Elision) ಷಷ್ಠಿ ವಿಭಕ್ತಿ (Genitive case) ಸ್ವಾಮ್ಯಸೂಚಕ (Possessive case) apos
ಉಲ್ಲೇಖಗಳು
↑ "ಅಪಾಸ್ಟ್ರಫಿ ಎಂಬ ಇಂಗ್ಲಿಷ್ ಪದರೂಪವು ಫ್ರೆಂಚ್ ಮೂಲಕ ಅಳವಡಿಕೆಯ ಕಾರಣ; ಸದ್ಯದ ನಾಲ್ಕು ಉಚ್ಚಾರಾಂಶಗಳುಳ್ಳ ಉಚ್ಚಾರಣೆಗೆ apostrophé ಎಂಬ ವಾಗ್ಮಿಕಲೆಯ ಸಾಧನದೊಂದಿಗಿನ ಗೊಂದಲವೇ ಕಾರಣ" (ಡಬ್ಲ್ಯೂ ಎಸ್. ಅಲೆನ್, ವಾಕ್ಸ್ ಗ್ರೇಕಾ. ದಿ ಪ್ರೊನನ್ಷಿಯೇಷನ್ ಆಫ್ ಕ್ಲ್ಯಾಸಿಕಲ್ ಗ್ರೀಕ್ , 3ನೆಯ ಪರಿಷ್ಕರಣ, 1988. ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್, ಕೇಂಬ್ರಿಡ್ಜ್ , ಪು. 100, ಟಿಪ್ಪಣಿ 13). ↑ OED, “ಅಪಾಸ್ಟ್ರಫಿ2” ನೋಡಿ. ↑ ಷಿಕಾಗೊ ಮ್ಯಾನುಯಲ್ ಆಫ್ ಸ್ಟೈಲ್ , 5.27; ನ್ಯೂ ಹಾರ್ಟ್ಸ್ ರೂಲ್ಸ್ , §4.2, p. 64; ಗ್ರೆಗ್ ರೆಫರೆನ್ಸ್ ಮ್ಯಾನುಯಲ್ , §642. ↑ Pease pea ಎಂಬುದರ ಬಹುವಚನ ರೂಪ Pease ನ ಬಳಕೆ ಅನಿಶ್ಚಿತ: Lentils' and pease'[s] ಬಳಕೆಯು ಇಂತಹ ಆಹಾರಗಳಲ್ಲಿ ಐಚ್ಛಿಕವಾಗಿದೆ . ಫ್ರೆಂಚ್ ಭಾಷೆಯಿಂದ ಎರವಲು ಪಡೆಯಲಾದ -eau , -eu , -au ಅಥವಾ -ou ಒಂದಿಗೆ ಕೊನೆಗೊಳ್ಳುವ ನಾಮಪದಗಳು ಕೆಲವೊಮ್ಮೆ ಪರ್ಯಾಯ ಬಹುವಚನಗಳನ್ನು ಹೊಂದಿರುತ್ತವೆ. ಇವು ಫ್ರೆಂಚ್‌ನ ಕೊನೆಯ ಅಕ್ಷರ -x ನ್ನು ಉಳಿಸಿಕೊಳ್ಳುತ್ತವೆ. beaux or beaus ; bureaux or bureaus ; adieux ಅಥವಾ adieus ; fabliaux ಅಥವಾ fabliaus ; choux ಅಥವಾ chous . ಈ ಬಹುವಚನಗಳಲ್ಲಿನ x ನ್ನು ಕೆಲವೊಮ್ಮೆ ಉಚ್ಚರಿಸಲಾಗುವುದು. ಒಂದು ವೇಳೆ ಹಾಗಾಗಿದ್ದಲ್ಲಿ, ಶೈಲಿ ಮಾರ್ಗದರ್ಶಿಗಳಲ್ಲಿ ವಿಶಿಷ್ಟ ನಿಯಮಗಳ ಗೈರುಹಾಜರಿಯಲ್ಲಿ, ಅಪಾಸ್ಟ್ರಫಿಯಿಂದಲೇ ಬಹುವಚನ ಸ್ವಾಮ್ಯಸೂಚಕಗಳು ರಚನೆಯಾಗುತ್ತವೆ: the beaux' [or beaus'] appearance at the ball ; the bureaux' [or bureaus'] responses differed . x ಉಚ್ಚರಿಸದಿದ್ದಲ್ಲಿ, ವಿಶೇಷ ನಿಯಮಗಳ ಗೈರಿನಲ್ಲಿ, ಅಪಾಸ್ಟ್ರಫಿ ಒಂದು s ಅನುಸರಿಸುವುದರೊಂದಿಗೆ ಬಹುವಚನಗಳು ರಚನೆಯಾಗುತ್ತವೆ: the beaux's appearance ; the bureaux's responses ; their adieux's effect was that everyone wept . ಕೆಳಗೆ Nouns ending with silent “s”, “x”, or “z” ಹಾಗೂ ಸಂಬಂಧಿತ ಟಿಪ್ಪಣಿಗಳನ್ನೂ ನೋಡಿ. ↑ ಸ್ಟೈಲ್ ಗೈಡ್ , ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಜಸ್ಟಿಸ್, ಬ್ಯೂರೊ ಆಫ್ ಜಸ್ಟಿಸ್ ಸ್ಟ್ಯಾಟಿಸ್ಟಿಕ್ಸ್; ದಿ ಯುನೈಟೆಡ್ ಸ್ಟೇಟ್ಸ್ ಗವರ್ನ್‌ಮೆಂಟ್ ಪ್ರಿಂಟಿಂಗ್ ಆಫಿಸ್ ಸ್ಟೈಲ್ ಮ್ಯಾನುಯಲ್ 2000 ; ಷಿಕಾಗೊ ಮ್ಯಾನುಯಲ್ ಆಫ್ ಸ್ಟೈಲ್ (CMOS), 5.25: “ಕೊನೆಯ ಪದಕ್ಕೆ ಸೂಕ್ತ ಮುಕ್ತಾಯವನ್ನು ಸೇರಿಸುವ ಮೂಲಕ ಬಹುಪದ ಸಂಯುಕ್ತದ ನಾಮಪದದ ಸ್ವಾಮ್ಯಸೂಚಕವನ್ನು ರಚಿಸಬಹುದು {parents-in-law's message}.” ↑ CMOS, 7.25: “ಬಹುವಚನ ಸಂಯುಕ್ತಗಳು ಸಮಸ್ಯೆಗಳನ್ನು ಹುಟ್ಟಿಸಿದರೆ, ಆಯ್ಕೆ ಮಾಡಿ, of . ... the professions of both my daughters-in-law .” ↑ Is the English Possessive 's Truly a Right-Hand Phenomenon? ↑ ಈ ಉದಾಹರಣೆಯನ್ನು www.abc.net.au ಇಂದ ಉಲ್ಲೇಖಿಸಲಾಗಿದೆ. ಷಿಕಾಗೊ ಮ್ಯಾನುಯಲ್ ಆಫ್ ಸ್ಟೈಲ್ 7.18 ನೋಡಿ. ↑ ಈ ಉದಾಹರಣೆಯನ್ನು ದಿ ಗ್ರೆಗ್ ರೆಫರೆನ್ಸ್ ಮ್ಯಾನುಯಲ್ 10ನೆಯ ಆವೃತ್ತಿ, 2005, 641ನೆಯ ಪಂಕ್ತಿಯಿಂದ ಉಲ್ಲೇಖಿಸಲಾಗಿದೆ. ↑ hers ಎಂಬ ಒಂದು ಪದವನ್ನು ಅಪಾಸ್ಟ್ರಫಿಯಿಲ್ಲದೆ ಉಚ್ಚರಿಸಲಾಗಿದೆ ಎಂಬ ಸತ್ಯದ ನಡುವೆಯೂ ಇದು ಸಾಮಾನ್ಯವಾಗಿದೆ. ಈ ವಿಭಾಗದಲ್ಲಿ ಕೆಳಗೆ ನೋಡಿ. His 'n' Hers's first track ಸೈದ್ಧಾಂತಿಕವಾಗಿ ಸಾಧ್ಯ, ಆದರೆ Hers ನಂತರ ಹೆಚ್ಚುವರಿ ಊಷ್ಮಾಕ್ಷರವನ್ನು ನಿಜಕ್ಕೂ ಉಚ್ಚರಿಸಿದ ಹೊರತು ಇದು ಅಸಂಭವ. [ಉಲ್ಲೇಖದ ಅಗತ್ಯವಿದೆ] ↑ ಅಂತಹ ಶೀರ್ಷಿಕೆಗಳಲ್ಲಿ ಬಳಸಲಾದ ಇಟಾಲಿಕ್ಸ್ಗಳನ್ನು ಅಪಾಸ್ಟ್ರಫಿ ಮತ್ತು s ವರೆಗೆ ಮುಂದುವರೆಸುವುದನ್ನು ಬಹಳಷ್ಟು ಮೂಲಗಳು [ಯಾರು?] ವಿರೋಧಿಸುತ್ತವೆ. ↑ ಉದಾಹರಣೆಗೆ New Hart's Rules ನೋಡಿ. ಈ ಪುಟದಲ್ಲಿ ಪಟ್ಟಿ ಮಾಡಲಾದ ಯಾವುದೇ ಇತರೆ ಮೂಲಗಳು it's ಎಂಬುದನ್ನು it ನ ಸ್ವಾಮ್ಯಸೂಚಕ ರೂಪದಲ್ಲಿ ಬಳಕೆಯನ್ನು ಬೆಂಬಲಿಸುತ್ತಿಲ್ಲ. ↑ ಕೋರಿಯರ್ ಮೇಲ್, ಲಿಟ್ಲ್ ಥಿಂಗ್ಸ್ ದಟ್ ಮ್ಯಾಟರ್ ↑ ಎಂಎಲ್‌ಎ ಸ್ಟೈಲ್ ಮ್ಯಾನುಯಲ್ , 2ನೆಯ ಆವೃತ್ತಿ, 1998, 3.4.7e: “ಟು ಫಾರ್ಮ್ ದಿ ಪೊಸೆಸಿವ್ ಆಫ್ ಎನ್ ಸಿಂಗ್ಯುಲರ್ ಪ್ರಾಪರ್ ನೌನ್, ಆಡ್ ಎನ್ ಅಪಾಸ್ಟ್ರಫಿ ಎಂಡ್ ಎನ್ s ”; ದಿ ಎಕಾನಾಮಿಸ್ಟ್‌ಸ್ ಸ್ಟೈಲ್ ಗೈಡ್; ದಿ ಎಲಿಮೆಂಟ್ಸ್ ಆಫ್ ಸ್ಟೈಲ್ ಕೇವಲ ಸ್ಥೂಲವಾಗಿ ನಿರೂಪಿಸಲಾದ ಅಪವಾದಗಳ ಸಹಿತ, ಇದೇ ನಿಯಮವನ್ನು ರಚಿಸುತ್ತದೆ. ↑ ಚಿಕಾಗೊ ಮ್ಯಾನ್ಯುಯಲ್ ಆಫ್ ಸ್ಟೈಲ್ಸ್ 't: 7.23 ಟೆಕ್ಸ್ಟ್ ಎನ್ ಆಲ್ಟರ್ನೇಟಿವ್ ಪ್ರಾಕ್ಟೀಸ್ ಮೇಲೆ ತಿಳಿಸಲಾದ ಈ ನಿಯಮಗಳು, ಅಪವಾದಗಳು ಮತ್ತು ಆಯ್ಕೆಗಳೊಂದಿಗೆ ಅಸಮಾಧಾನ ಹೊಂದಿದವರು, s ಅಕ್ಷರದೊಂದಿಗೆ ಕೊನೆಗೊಳ್ಳುವ ಎಲ್ಲಾ ಪದಗಳಿಂದ ಸ್ವಾಮ್ಯಸೂಚಕ s ನ್ನು ಬಿಟ್ಟುಬಿಡುವ ಮುಂಚಿನ ವ್ಯವಸ್ಥೆಯನ್ನು ಆಯ್ದುಕೊಳ್ಳಬಹುದು. ಉದಾಹರಣೆಗೆ “Dylan Thomas' poetry,” “Maria Callas' singing,” ಮತ್ತು “that business' main concern.” ಅನ್ವಯಿಸಲು ಸುಲಭವೆನಿಸಿದರೂ, ಬಳಕೆಯು ಉಚ್ಚಾರಣೆಯ ನಿಯಮವನ್ನು ತಿರಸ್ಕರಿಸುತ್ತದೆ, ಇದು ಹಲವರಿಗೆ ಅಸಹಜ ಎಂದು ತೋರುತ್ತದೆ. ↑ ಪೊಸೆಸಿವ್ಸ್ ಅಂಡ್ ಅಟ್ರಿಬ್ಯೂಟಿವ್ಸ್, ದಿ ಷಿಕಾಗೊ ಮ್ಯಾನುಯಲ್ ಆಫ್ ಸ್ಟೈಲ್ ಆನ್ಲೈನ್ . ↑ ದಿ ಗಾರ್ಡಿಯನ್ಸ್ ಸ್ಟೈಲ್ ಗೈಡ್. ↑ ಎಮೊರಿ ಯುನಿವರ್ಸಿಟಿ ರೈಟಿಂಗ್ ಸೆಂಟರ್‌ನ 'ಯೂಸ್ ಆಫ್ ದಿ ಅಪಾಸ್ಟ್ರಫಿ'. ↑ ದಿ ಅಮೆರಿಕನ್ ಹೆರಿಟೇಜ್ ಬುಕ್ ಆಫ್ ಇಂಗ್ಲಿಷ್ ಯುಸೇಜ್. 8. ವರ್ಡ್ ಫಾರ್ಮೇಷನ್ b. ಫಾರ್ಮಿಂಗ್ ಪೊಸೆಸಿವ್ಸ್. ↑ ದಿ ಟೈಮ್ಸ್ ಆನ್ಲೈನ್ ಸ್ಟೈಲ್ ಗೈಡ್. ↑ ವ್ಯಾಂಡರ್ಬಿಲ್ಟ್ ಯುನಿವರ್ಸಿಟಿ ಸ್ಟೈಲ್ ಗೈಡ್. ↑ DummiesWorld Wide Words. ಮರುಕಳಿಸಿದ ದಿನಾಂಕ 2007-03-13.. ಷಿಕಾಗೊ ಮ್ಯಾನುಯಲ್ ಆಫ್ ಸ್ಟೈಲ್ , 7.22: “ಫಾರ್...ಸೇಕ್ ಎಕ್ಸ್‌ಪ್ರೆಷನ್ಸ್ ಟ್ರೆಡಿಷನಲಿ ಒಮಿಟ್ ದಿ s ವೆನ್ ದಿ ನೌನ್ ಎಂಡ್ಸ್ ಇನ್ ಎನ್ s or ಎನ್ s ಸೌಂಡ್.” ಆಕ್ಸ್‌ಫರ್ಡ್ ಸ್ಟೈಲ್ ಮ್ಯಾನುಯಲ್ , 5.2.1: “ಯೂಸ್ ಎನ್ ಅಪಾಸ್ಟ್ರಫಿ ಎಲೋನ್ ಆಫ್ಟರ್ ಸಿಂಗ್ಯೂಲರ್ ನೌನ್ಸ್ ಎಂಡಿಂಗ್ ಇನ್ ಎನ್ s ಆರ್ z ಸೌಂಡ್ ಎಂಡ್ ಕಂಬೈನ್ಡ್ ವಿತ್ sake : for goodness' sake”. ↑ “ಪ್ರ್ಯಾಕ್ಟೀಸ್ ವೇರೀಸ್ ವೈಡ್ಲಿ ಇನ್ for conscience' sake ಎಂಡ್ for goodness' sake , ಎಂಡ್ ದಿ ಯೂಸ್ ಆಫ್ ಎನ್ ಅಪಾಸ್ಟ್ರಫಿ ಇನ್ ದೆಮ್ ಮಸ್ಟ್ ಬಿ ರಿಗಾರ್ಡೆಡ್ ಎಸ್ ಆಪ್ಷನಲ್” ದಿ ನ್ಯೂ ಫೌಲರ್ಸ್ ಮಾಡರ್ನ್ ಇಂಗ್ಲೀಷ್ ಯುಸೇಜ್ , ed. Burchfield, RW, 3rd edition, 1996, entry for “sake”, p. 686. ↑ ಸರಿಯಾದ ಸ್ವಾಮ್ಯಸೂಚಕವೆಂದರೆ Arkansas' ಅಲ್ಲ, Arkansas's ಎಂದು ನಮೂದಿಸಬೇಕು ಎಂದು ಅರ್ಕನ್ಸಾಸ್ ಇತಿಹಾಸಕಾರ ಪಾರ್ಕರ್ 2007ರ ಫೆಬ್ರವರಿ ತಿಂಗಳಲ್ಲಿ, ವೆಸ್ಟ್‌ಬ್ರೂಕ್ ರಾಜ್ಯ ಪ್ರತಿನಿಧಿ ಸ್ಟೀವ್ ಹ್ಯಾರೆಲ್ಸನ್‌ರಿಗೆ ಮನವಿ ಸಲ್ಲಿಸಿ ಯಶಸ್ವಿಯಾದರು (ಅರ್ಕನ್ಸಾಸ್ ಹೌಸ್ ಟು ಆರ್ಗ್ಯೂ ಓವರ್ ಅಪಾಸ್ಟ್ರಫಿಸ್ ). ಅರ್ಕನ್ಸಾಸ್ ಅಪಾಸ್ಟ್ರಫಿ ಕಾಯಿದೆಯು 2007ರ ಮಾರ್ಚ್ ತಿಂಗಳಲ್ಲಿ ಕಾನೂನಾಯಿತು (ಎಬಿಸಿ ನ್ಯೂಸ್ [ಯುಎಸ್‌ಎ] 6 ಮಾರ್ಚ್ 2007. ↑ ಇದು ಗೋಚರಿಸಬಲ್ಲ ಅಪವಾದವಾಗಿದೆ ದಿ ಕಂಪ್ಲೀಟ್ ಸ್ಟೈಲಿಸ್ಟ್ , ಷೆರಿಡಾನ್ ಬೇಕರ್, 2ನೆಯ ಆವೃತ್ತಿ 1972, ಪಿ. 165: “...citizens' rights , the Joneses' possessions , and similarly The Beaux' Stratagem .” ಆದರೂ, beaux ಹಾಗೂ ಇಂಗ್ಲಿಷ್ ಭಾಷೆಯ ಇತರೆ ಬಹುವಚನಗಳಲ್ಲಿ x ನ್ನು ಆಗಾಗ್ಗೆ ಈಗಾಗಲೇ ಉಚ್ಚರಿಸಲಾಗಿದೆ. ಮೇಲೆ ತಿಳಿಸಲಾದ Basic rule (plural nouns) ಟಿಪ್ಪಣಿ ನೋಡಿ); The Beaux Stratagem , ಜಾರ್ಜ್ ಫರ್ಕುಹಾರ್‌ರ ನಾಟಕದ ಶೀರ್ಷಿಕೆ (1707), ಮೂಲತಃ ಅಪಾಸ್ಟ್ರಫಿ ಕೊರತೆಯಿತ್ತು (1752 ಆವೃತ್ತಿಯ ಶೀರ್ಷಿಕೆ ಪುಟ ನೋಡಿ); stratagem ಪದದಲ್ಲಿ ಆನಂತರ ಬರುವ s ನಿಂದ ಸಂಕೀರ್ಣಗೊಳಿಸಲಾಗಿದೆ. ಕೆಲವು ಆಧುನಿಕ ಆವೃತ್ತಿಗಳು ಅಪಾಸ್ಟ್ರಫಿಯನ್ನು ಸೇರಿಸಿವೆ (ಕೆಲವು s ನ್ನೂ ಸಹ ಸೇರಿಸಿವೆ), ಕೆಲವು ಅದನ್ನು ಬಿಟ್ಟಿವೆ, ಇನ್ನೂ ಕೆಲವು ಕೂಡುಗೆರೆ ಬಳಸಿ ಸಮಾಸಪದವನ್ನಾಗಿಸಿವೆ: The Beaux-Stratagem . ಸ್ವತಃ ಫರ್ಕುಹಾರ್ ಇತರೆಡೆ ಪ್ರಮಾಣಿತ ರೀತಿಯಲ್ಲಿ ಲೋಪ ಹಾಗೂ ಸ್ವಾಮ್ಯಸೂಚಕಕ್ಕೆ ಅಪಾಸ್ಟ್ರಫಿಯನ್ನು ಬಳಸಿದರು. ↑ ಜ್ಯಾಕ್ವಿಲೀನ್ ಲೆಟ್ಜ್‌ಟರ್, ಇಂಟೆಲೆಕ್ಚುಯಲ್ ಟ್ಯಾಕಿಂಗ್: ಕ್ವೆಷ್ಚನ್ಸ್ ಆಫ್ ಎಜುಕೇಷನ್ ಇನ್ ದಿ ವರ್ಕ್ಸ್ ಆಫ್ ಇಸಾಬೆಲ್ ಡಿ ಚ್ಯಾರೆರೆ , ರೊಡೊಪಿ, 1998, ಪಿ. 123. ↑ ಎಲಿಜಬೆತ್ ಎ. ಮೆಕಲಿಸ್ಟರ್, ರಾರಾ!: ವೋಡು, ಪವರ್, ಎಂಡ್ ಪರ್ಫಾರ್ಮೆನ್ಸ್ ಇನ್ ಹೈಟಿ ಎಂಡ್ ಇಟ್ಸ್ ಡಯಾಸ್ಪೋರಾ , ಯುನಿವರ್ಸಿಟಿ ಆಫ್ ಕ್ಯಾಲಿಫೊರ್ನಿಯಾ ಪ್ರೆಸ್, 2002, p. 196. ↑ ಯು.ಎಸ್. ಬೋರ್ಡ್ ಆನ್ ಜಿಯೊಗ್ರಾಫಿಕ್ ನೇಮ್ಸ್: FAQs; “ಹೌ ದಿ ಪಾಸ್ಟ್ ಎಫೆಕ್ಟ್ಸ್ ದಿ ಫ್ಯೂಚರ್: ದಿ ಸ್ಟೋರಿ ಆಫ್ ದಿ ಅಪಾಸ್ಟ್ರಫಿ”, ಕ್ಯಾವೆಲ್ಲಾ ಸಿ ಮತ್ತು ಕರ್ನೊಡಲ್, RA ↑ ಸೇಂಟ್ ಜೇಮ್ಸ್ ಚರ್ಚ್ ಪಿಕೆಡಿಲಿ ವೆಬ್‌ಸೈಟ್ ↑ “ಆಸ್ಟ್ರೇಲಿಯಾದಲ್ಲಿನ ಬಹಳಷ್ಟು ಸ್ಥಳಗಳು ಮತ್ತು ಬೀದಿ ಹೆಸರುಗಳಿಂದ ಅಪಾಸ್ಟ್ರಫಿಯನ್ನು ತೆಗೆಯಲಾಗಿದೆ: Connels Point ; Wilsons Promontory ; Browns Lane .” ದಿ ಪೆಂಗ್ವಿನ್ ವರ್ಕಿಂಗ್ ವರ್ಡ್ಸ್: ಆನ್ ಆಸ್ಟ್ರೇಲಿಯನ್ ಗೈಡ್ ಟು ಮಾಡರ್ನ್ ಇಂಗ್ಲಿಷ್ ಯುಸೇಜ್ , ಪೆಂಗ್ವಿನ್, 1993, p. 41. ↑ ದಿ ಕೇಂಬ್ರಿಡ್ಜ್ ಗೈಡ್ ಟು ಇಂಗ್ಲಿಷ್ ಯುಸೇಜ್ , ಸಂಪಾದಕರು. ಪೀಟರ್ಸ್, ಪಿ, 2004, ಪು. 43. ↑ ಇಂಟರ್ನ್ಯಾಷನಲ್ ಏವಿಯೇಷನ್ ವಿಮೆನ್ಸ್ ಅಸೊಷಿಯೇಷನ್ ↑ ಅಪಾಸ್ಟ್ರಫಿಯೊಂದಿಗೆ ಮತ್ತು ಹೊರತಾಗಿ ಉಚ್ಚಾರಣೆ ಮಾಡಲಾಗಿದೆ: the court's own home page; ಆದರೆ ವಿಕ್ಟೋರಿಯನ್ ಶಾಸನದಲ್ಲಿ ಅಪಾಸ್ಟ್ರಫಿಯೊಂದಿಗೆ ಉಚ್ಚಾರಣೆ ಮಾಡಲಾಗಿದೆ. ಉದಾಹರಣೆಗೆ Magistrates' Court Act, 1989. ↑ 2003ರಲ್ಲಿ ಪ್ರಕಟಿಸಲಾದ ಗ್ರೆಗ್ ರೆಫರೆನ್ಸ್ ಮ್ಯಾನುಯಲ್ ನ ಹತ್ತನೆಯ ಆವೃತ್ತಿಯಲ್ಲಿ, ಸ್ವಾಮ್ಯಸೂಚಕ ಮತ್ತು ವಿವರಣಾತ್ಮಕ ರೂಪಗಳ ನಡುವೆ ವ್ಯತ್ಯಾಸ ಸೂಚಿಸಿದೆ. ಸಮಸ್ಯೆಯನ್ನು ವಿಶ್ಲೇಷಿಸಲು ಇದರ ಭಿನ್ನತೆಯನ್ನು ಬಳಸುತ್ತದೆ. 628ನೆಯ ಪಂಕ್ತಿಯಿಂದ: “a. s ಅಕ್ಷರದೊಂದಿಗೆ ಅಂತ್ಯಗೊಳ್ಳುವ ವಿವರಣಾತ್ಮಕ ರೂಪವನ್ನು ಸ್ವಾಮ್ಯಸೂಚಕ ರೂಪವೆಂದು ಬಗೆಯದಿರಿ [:] sales effort (sales ಎಂಬುದು effort (ಯತ್ನ)ದ ಪ್ರಮಾಣವನ್ನು ವಿವರಿಸುತ್ತದೆ)... b. ಕೆಲವು ರೂಪಗಳ ನಡುವೆ ಭೇದಗಳನ್ನು ಗುರುತಿಸಲು ಕಷ್ಟಕರ. the girls basketball team ಎನ್ನುವರೋ ಅಥವಾ the girls' basketball team? women ನಂತಹ ಅನಿಯಮಿತ ಬಹುವಚನವನ್ನು ಬದಲಿಸಲು ಯತ್ನಿಸಿ. ನೀವು the women basketball team; ಎಂದು ಹೇಳುವುದಿಲ್ಲ; the women's basketball team ಎನ್ನುವಿರಿ. ಸಾದೃಶ್ಯದ ಪ್ರಕಾರ, the girls' basketball team ಎಂಬುದು ಸರಿ. [ನಂತರ ಮೂಡುವ ವಿರಾಮಚಿಹ್ನೆ ಸೇರಿದಂತೆ, ಮೂಲದಲ್ಲಿರುವಂತೆಯೇ ಇಟಾಲಿಕ್ ಅಕ್ಷರಗಳನ್ನು ನಮೂದಿಸಲಾಗಿದೆ]. 640ರ ಪಂಕ್ತಿಯಲ್ಲಿ ಈ ತತ್ತ್ವವನ್ನು ಸಂಘಟನೆಗಳಿಗೆ ಅನ್ವಯಿಸಲಾಗಿದೆ. ಸರಿಹೊಂದದ ಉದಾಹರಣೆಯೂ ಸೇರಿದಂತೆ, ಉದಾಹರಣೆಗಳನ್ನು ನೀಡಲಾಗಿದೆ: Childrens Hospital, (in Los Angeles) : “ಅನೇಕ ಸಂಸ್ಥೆಗಳು, ಅನೇಕ ಉತ್ಪನ್ನಗಳು ಮತ್ತು ಪ್ರಕಟಣೆಗಳ ಹೆಸರುಗಳು ಸ್ವಾಮ್ಯಸೂಚಕ ಅಥವಾ ವಿವರಾಣಾತ್ಮಕ ಶಬ್ದಗಳೆಂದು ಪರಿಗಣಿಸಿದ ಪದಗಳನ್ನು ಹೊಂದಿರುತ್ತವೆ... c. ಎಲ್ಲ ಪ್ರಕರಣಗಳಲ್ಲಿ ಸಂಸ್ಥೆಯ ಆದ್ಯತೆಯನ್ನು ಅನುಸರಿಸಿ.” ↑ ಅಪಾಸ್ಟ್ರಫಿ ಪ್ರೊಟೆಕ್ಷನ್ ಸೊಸೈಟೀಸ್ ವೆಬ್‌ಸೈಟ್. ↑ ಟೈಮ್ಸ್ ಆನ್ಲೈನ್: ಹ್ಯಾರೊಡ್ಸ್ ಟೋಲ್ಡ್ ಟು ಪುಟ್ ಇಟ್ಸ್ ಅಪಾಸ್ಟ್ರಫಿ ಬ್ಯಾಕ್. ↑ ಬಹಳಷ್ಟು ಅನೌಪಚಾರಿಕ ಮಾತಿನಲ್ಲಿ, ಕೆಲವೊಮ್ಮೆ 's does ನ್ನು ನಿರೂಪಿಸುತ್ತದೆ: "Where's that come from?" ↑ SOED forecastle ಪದಕ್ಕೆ fo'c's'le ಎನ್ನುವುದು ಏಕೈಕ ಹ್ರಸ್ವರೂಪ. ಆದರೂ ಇತರೆ ಪದಗಳನ್ನು OEDಯಲ್ಲಿ ತೋರಿಸಲಾಗಿದೆ. SOEDಯಲ್ಲಿ, boatswain ಎಂಬುದರ ವಿಭಿನ್ನರೂಪೀ ಪದ bosun ಎಂಬುದಕ್ಕೆ bo's'n ಒಂದು ಕಾಗುಣಿತವಾಗಿದೆ. ↑ ೩೯.೦ ೩೯.೧ ೩೯.೨ ೩೯.೩ Purdue University Online Writing Lab: The Apostrophe. ಮರುಕಳಿಸಿದ ದಿನಾಂಕ 2007-03-13. ↑ ಗೈಡ್ ಟು ಪಂಕ್ಚುಯೇಚನ್, ಲ್ಯಾರಿ ಟ್ರ್ಯಾಸ್ಕ್, ಯುನಿವರ್ಸಿಟಿ ಆಫ್ ಸಸೆಕ್ಸ್: "ಅಮೆರಿಕನ್ ಇಂಗ್ಲಿಷ್ ಬಳಕೆಯ ಪ್ರಕಾರ, ಅಪಾಸ್ಟ್ರಫಿಯುಂಟು: (A) This research was carried out in the 1970's." ↑ [56] ^ AskOxford.com ↑ "ಇನ್ ಪ್ರೈಸ್ ಆಫ್ ಅಪಾಸ್ಟ್ರಫಿs", ಬಿಬಿಸಿ ನ್ಯೂಸ್, 5 ಅಕ್ಟೋಬರ್ 2001 ↑ 'ಫೇಟಲ್ ಫ್ಲೋರ್ಸ್' ಇನ್ ಎಕ್ಸಾಮ್ ಸ್ಕ್ರಿಪ್ಟ್ಸ್, BBC ನ್ಯೂಸ್, 3 ನವೆಂಬರ್ 2004 ↑ ಹಾಫ್ ಆಫ್ ಬ್ರಿಟನ್ಸ್ ಸ್ಟ್ರಗಲ್ ವಿತ್ ದಿ ಅಪಾಸ್ಟ್ರಫಿ, ದಿ ಡೇಲಿ ಟೆಲಿಗ್ರಾಫ್ , 11 ನವೆಂಬರ್ 2008 ↑ ಟ್ರಸ್, ಲಿನ್. ಈಟ್ಸ್, ಷೂಟ್ಸ್ & ಲೀವ್ಸ್ . ಪಿಪಿ. 63–65. ↑ Christina Cavella and Robin A. Kernodle (PDF). How the Past Affects the Future: The Story of the Apostrophe. American University. Retrieved 2006-10-26. ↑ Burrough-Boenisch, Joy (2004). “Dutch Greengrocers”, Righting English That's Gone Dutch, 2nd, Kemper Conseil Publishing. ↑ ಟೈಟಾನ್ ಗೊ ಕಿಂಗ್ಸ್, ಎಟ್ nippop.com. ↑ www.multimpap.com ಅಂತರಜಾಲತಾಣದಲ್ಲಿ, ಯುನೈಟೆಡ್ ಕಿಂಗ್ಡಮ್‌ನಲ್ಲಿನ "St Johns Lane"ಗಾಗಿ (ಅಪಾಸ್ಟ್ರಫಿ ಸಹಿತ ಅಥವಾ ರಹಿತ) ಹುಡುಕು ನಮೂದಿಸಿದಲ್ಲಿ, 25 ಫಲಿತಾಂಶಗಳಲ್ಲಿ 5ರಲ್ಲಿ ಅಪಾಸ್ಟ್ರಫಿ ಬಿಡಲಾಗಿತ್ತು. ↑ ಫರ್ನಾಂಡೆಸ್, ಕೊಲಿನ್, 'ಪಂಕ್ಚುಯೇಷನ್ ಹೀರೋ' ಬ್ರ್ಯಾಂಡೆಡ್ ಎ ವ್ಯಾಂಡಾಲ್ ಫಾರ್ ಪೇಂಟಿಂಗ್ ಅಪಾಸ್ಟ್ರಫಿಸ್ ಆನ್ ಸ್ಟ್ರೀಟ್ ಸೈನ್ಸ್, ದಿ ಡೇಲಿ ಮೇಲ್ , 19/08/2009ರಂದು ಪ್ರವೇಶಿಸಲಾಯಿತು. ↑ ಬಿಲ್ ಬ್ರೈಸನ್, "ಟ್ರಬಲ್ಸಮ್ ವರ್ಡ್ಸ್," ಪೆಂಗ್ವಿನ್, ಎರಡನೆಯ ಆವೃತ್ತಿ 1987, ಪು. 177 ↑ ಡಬ್ಲ್ಯೂ. ಡಬ್ಲ್ಯೂ. ನಾರ್ಟನ್ & ಕಂಪೆನಿ ↑ ದಿ ಅಪಾಸ್ಟ್ರಫಿ ↑ ಈಟ್ಸ್, ಷೂಟ್ಸ್ & ಲೀವ್ಸ್ . ↑ (2002) Afrikaanse Woordelys en Spelreëls, 9th, Pharos Woordeboeke. ↑ ಆರಂಭಿಕ ಫ್ರೆಂಚ್ ಭಾಷೆಗಳಲ್ಲಿ ಅಂತಹ ಲೋಪಗಳು ಸಂಭವಿಸಿದ್ದವು: m'espée ( ma + espée, modern French mon épée: "my sword"), s'enfance ( sa + enfance, son enfance: "his or her childhood"). ಆದರೆ, ಆಧುನಿಕ ಕಾಲದಲ್ಲಿ ಈ ಅಪಾಸ್ಟ್ರಫಿ ಲೋಪಗಳಿಂದ ಉಳಿದುಕೊಂಡವುಗಳೆಂದರೆ m'amie ಮತ್ತು m'amour, ಇವು mon amie and mon amourಗೆ ಪುರಾತನ ಕಾಲದ, ಮತ್ತು ಪದಪುಂಜೀಯ ಪರ್ಯಾಯವಾಗಿದೆ. ("my [female] friend", "my love"); ಅಪಾಸ್ಟ್ರಫಿ ಕೂಡ ಬಳಕೆಯಾಗದ ರೂಪಗಳು mamie or ma mie, mamour. ↑ ГТРК - Владимир :: Главная ಟೆಂಪ್ಲೇಟು:Ru icon ↑ ಲ್ಯಾಂಗ್ವೇಜ್ ಕಂಸ್ಟ್ರಕ್ಷನ್ ಕಿಟ್, ಅಪಾಸ್ಟ್ರಫಿಗಳನ್ನು ಸೇರಿಸಿ ಹೆಸರುಗಳನ್ನು 'ಪರಕೀಯ'ವಾಗಿ ಕಾಣುವಂತೆ ಮಾಡುವ ಸಾಮಾನ್ಯ ವಿದ್ಯಮಾನವನ್ನು ಇದು ಉಲ್ಲೇಖಿಸುತ್ತದೆ. ↑ ಪಿನ್ಯಿನ್ ↑ ತಮ್ಮ ಹೆಸರುಗಳಲ್ಲಿ 'o' ಹೊಂದಿರುವ ಮ್ಯಾಡ್ರಿಡ್‌ನ ಭೋಜನಾಮಂದಿರಗಳು. ↑ ಯುನಿಕೋಡ್ ಮಂಡಳಿ ↑ ಯುನಿಕೋಡ್ ಸಂಕೇತ ಪಟ್ಟಿಗಳು ↑ ಇದು ಇಂಟರ್ನೆಟ್ ಎಕ್ಸ್‌ಪ್ಲೋರರ್ 8 ಅಥವಾ ಮುಂಚಿನ ಆವೃತ್ತಿಗಳು ಅಥವಾ ವಿಕಿಪೀಡಿಯಾ ಮಾರ್ಕಪ್‌ನೊಂದಿಗೆ ಇದು ಕೆಲಸ ಮಾಡುವುದಿಲ್ಲ.
ಹೆಚ್ಚಿನ ಓದಿಗಾಗಿ
Gibaldi, Joseph (2003). MLA Handbook for Writers of Research Papers. New York: Modern Language Association. Truss, Lynne (2003). Eats, Shoots & Leaves: The Zero Tolerance Approach to Punctuation, North American, Toronto: Gotham Books..
ಬಾಹ್ಯ ಕೊಂಡಿಗಳು ವಿಕ್ಷನರಿ, ಒಂದು ಮುಕ್ತ ಶಬ್ದಕೋಶದಲ್ಲಿ apostrophe ನೋಡಿ.
ಈಸ್ ದೇರ್ ಎನ್ ಅಪಾಸ್ಟ್ರಫಿ ಇನ್ ದಿ ಪ್ಲೂರಲ್ ಆಫ್ ಪಿಜ್ಜಾ? ಇಂಗ್ಲಿಷ್ ಭಾಷೆಯ ಬಹುವಚನಗಳಲ್ಲಿ ಅಪಾಸ್ಟ್ರಫಿಯ ಬಳಕೆ ಕುರಿತು ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್ ಲೇಖನ. ದಿ ಅಪಾಸ್ಟ್ರಫಿ ಕ್ಯಾರೆಕ್ಟರ್ ಕಂಪ್ಯುಟರ್‌ಗಳಲ್ಲಿ ಅಪಾಸ್ಟ್ರಫಿ ನಮೂದಿಸುವಿಕೆ ಬಗೆಗಿನ ಸಮಸ್ಯೆಗಳು.
ದಿ ಅಪಾಸ್ಟ್ರಫಿ ಪ್ರೊಟೆಕ್ಷನ್ ಸೊಸೈಟಿ ಅಪಾಸ್ಟ್ರಫಿ ಅಬ್ಯೂಸ್ ಅಪಾಸ್ಟ್ರಫಿ ಚಿಹ್ನೆಯ ದುರುಪಯೋಗ ಹಾಗು ನಿರ್ಲಕ್ಷ್ಯದ ಉದಾಹರಣೆಗಳು. ಅಪಾಸ್ಟ್ರಫಿ ಕೆಟಸ್ಟ್ರೋಫ್ಸ್ ASCII ಮತ್ತು ಯುನಿಕೋಡ್ ಉದ್ಧರಣಾ ಚಿಹ್ನೆಗಳು ಅಪಾಸ್ಟ್ರಫಿ ಯುಸೇಜ್: ವೆ ಡು ಐ ಯೂಸ್ ದಿ ಸ್ಟುಪಿಡ್ ಥಿಂಗ್ಸ್? ಎ ಕಾರ್ಟೂನ್ ಕ್ರಿಟಿಕ್ ಆಫ್ ದಿ ಗ್ರೀನ್‌ಗ್ರಾಸರ್ಸ್ ಅಪಾಸ್ಟ್ರಫಿ (GIF ) ದಿ ಡ್ರೆಡೆಡ್ ಅಪಾಸ್ಟ್ರಫಿ - ಎನ್ ಅಪ್ರೋಚ್ ಯುಸಿಂಗ್ ಎ ಸಿಂಗಲ್ ರೂಲ್ ಒನ್ಲಿ ಹೌ ಟು ಯೂಸ್ ಎನ್ ಅಪಾಸ್ಟ್ರಫಿ ದಿ ಓಟ್ಮೀಲ್
ವರ್ಗಗಳು:
ಉಲ್ಲೇಖದ ಅಗತ್ಯವಿರುವ ಲೇಖನಗಳು ಅಕ್ಷರಮಾಲೆಯ ಭೇದಸೂಚಕಗಳು ಹೆಬ್ರೂ ಭೇದಸೂಚಕಗಳು ವಿರಾಮಚಿಹ್ನೆ ಮುದ್ರಣಕಲೆ ಇಂಗ್ಲಿಷ್ ಭಾಷೆಯ ಕಾಗುಣಿತ (English spelling)
Navigation menu
ಕೀಲಿಮಣೆ ಫಾಂಟ್ ಆಯ್ಕೆ ಹೊಸ ಖಾತೆ ತೆರೆಯಿರಿ ಲಾಗ್ ಇನ್ (login)
ಲೇಖನ ಚರ್ಚೆ
ಓದು ಸಂಪಾದಿಸಿ ಇತಿಹಾಸವನ್ನು ನೋಡಿ
ಮುಖ್ಯ ಪುಟ ಸಮುದಾಯ ಪುಟ ಪ್ರಚಲಿತ ಇತ್ತೀಚೆಗಿನ ಬದಲಾವಣೆಗಳು ಯಾವುದೋ ಒಂದು ಪುಟ ಸಹಾಯ ದೇಣಿಗೆ
ಉಪಕರಣ
ಇಲ್ಲಿಗೆ ಯಾವ ಸಂಪರ್ಕ ಕೂಡುತ್ತದೆ ಸಂಬಂಧಪಟ್ಟ ಬದಲಾವಣೆಗಳು ವಿಶೇಷ ಪುಟಗಳು ಪ್ರಿಂಟ್ ಆವೃತ್ತಿ ಸ್ಥಿರ ಸಂಪರ್ಕ ಪುಟದ ಮಾಹಿತಿ ಈ ಪುಟವನ್ನು ಉಲ್ಲೇಖಿಸಿ
ಇತರ ಭಾಷೆಗಳು
Azərbaycanca Беларуская Български Català Česky Dansk Deutsch English Esperanto Español Eesti Euskara فارسی Suomi Français Gàidhlig עברית Hrvatski Magyar Bahasa Indonesia Ido Italiano 日本語 Қазақша 한국어 Македонски Nederlands Norsk nynorsk Norsk bokmål Occitan Polski Português Română Русский Srpskohrvatski / српскохрватски Simple English Slovenčina Slovenščina Svenska Kiswahili ไทย Tagalog Türkçe Татарча/tatarça Українська Oʻzbekcha Winaray Хальмг 中文 Edit links
ಈ ಪುಟವನ್ನು ಕೊನೆಯಾಗಿ ೦೩:೪೪, ೯ ಮಾರ್ಚ್ ೨೦೧೩ ರಂದು ಬದಲಾಯಿಸಲಾಗಿತ್ತು. Text is available under the Creative Commons Attribution/Share-Alike License; additional terms may apply. See Terms of Use for details.
Start a discussion about ಅಪಾಸ್ಟ್ರಫಿ (Apostrophe )
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಅಪಾಸ್ಟ್ರಫಿ (Apostrophe ).