ಚಮ್ಚಮ್
ಗೋಚರ
ಚಮ್ಚಮ್ ಒಂದು ಸಾಂಪ್ರದಾಯಿಕ ಬಂಗಾಳಿ ಸಿಹಿತಿನಿಸಾಗಿದ್ದು, ಭಾರತೀಯ ಉಪಖಂಡದಾದ್ಯಂತ ಜನಪ್ರಿಯವಾಗಿದೆ. ಈ ತಿನಿಸು ವಿವಿಧ ಬಣ್ಣಗಳಲ್ಲಿ ಬರುತ್ತದೆ, ಮುಖ್ಯವಾಗಿ ತಿಳಿ ನಸುಗೆಂಪು, ತಿಳಿ ಹಳದಿ ಮತ್ತು ಬಿಳಿ. ಅಲಂಕಾರವಾಗಿ ಇದನ್ನು ಕೊಬ್ಬರಿ ಅಥವಾ ಖೋವಾ ಚೂರುಗಳಿಂದ ಲೇಪಿಸಲಾಗುತ್ತದೆ.
ಇತಿಹಾಸ
[ಬದಲಾಯಿಸಿ]ಆಧುನಿಕ ದಿನದ ಬಾಂಗ್ಲಾದೇಶದ ಪೊರಾಬರಿಯ ಚಮ್‍ಚಮ್‍ನ ಅಂಡಾಕಾರದ ಕಂದು ಬಣ್ಣದ ವೈವಿಧ್ಯವು ಪೊರಾಬರಿ ಚಮ್‍ಚಮ್ ಎಂದು ಕರೆಯಲ್ಪಡುತ್ತದೆ. ಇದರ ಇತಿಹಾಸ ೧೯ನೇ ಶತಮಾನದ ಮಧ್ಯಭಾಗದಷ್ಟು ಹಳೆಯದ್ದೆಂದು ನಿರ್ಧರಿಸಲಾಗಿದೆ. ಈ ಖಾದ್ಯದ ಆಧುನಿಕ ಬಗೆಯನ್ನು ಮಾಟಿಲಾಲ್ ಗೋರೆ ಅವನ ಅಜ್ಜ ರಾಜಾ ರಾಮ್‍ಗೋರೆ ತಯಾರಿಸಿದ್ದ ಒಂದು ಸಿಹಿ ಖಾದ್ಯವನ್ನು ಆಧರಿಸಿ ತಯಾರಿಸಿದನು. ಇವನು ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಸ್ಥಳೀಯನಾಗಿದ್ದನು.[೧]
ಉಲ್ಲೇಖಗಳು
[ಬದಲಾಯಿಸಿ]- ↑ Mahmud Nasir Jahangiri (2012). "Sweetmeats". In Sirajul Islam and Ahmed A. Jamal (ed.). Banglapedia: National Encyclopedia of Bangladesh (Second ed.). Asiatic Society of Bangladesh.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Cham cham Archived 2016-12-25 ವೇಬ್ಯಾಕ್ ಮೆಷಿನ್ ನಲ್ಲಿ.