ಚಪ್ಪರ ಬಂದ್ ಸಮುದಾಯ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಮೂಲತಃ ಅಲೆಮಾರಿ ಬುಡಕಟ್ಟಿನವರಾದ ಚಪ್ಪರಬಂದರು ಅರಣ್ಯವಾಸಿಗಳು, ಯಾವುದೋ ಒಂದು ಕಾಲಕ್ಕೆ ತಮ್ಮ ಮೂಲ ನೆಲೆಯನ್ನು ಬಿಟ್ಟು ದಕ್ಷಿಣ ಭಾರತದತ್ತ ಬಂದ ಇವರು ಮೊಘಲರ ಸೈನಿಕರಿಗೆ ಚಪ್ಪರ, ಡೇರೆ ಹಾಕುವ ಕಾಯಕದಲ್ಲೆ ತೊಡಗಿದ್ದರಂತೆ, ಮೊಘಲ್ ಅರಸರ ಪತನನಂತರ ಅನ್ಯಮಾರ್ಗವಿಲ್ಲದೆ ಭಿಕ್ಷಾಟನೆ, ನಕಲಿ ನಾಣ್ಯ ತಯಾರಿಕೆ, ಮುಂತಾದ ಕಾಯಕಗಳಲ್ಲಿ ತೊಡಗಿದರು ಎಂಬುದನ್ನು ವಕ್ತÈಗಳು ತಿಳಿಸುತ್ತಾರೆ. ಚಪ್ಪರ್‌ಬಂದ್ ಎನ್ನುವ ಶಬ್ದ ಹಿಂದಿ ಶಬ್ದದಿಂದ ಹುಟ್ಟಿದೆ. ಹಿಂದಿಯಲ್ಲಿ ಚಪ್ಪರ್ ಎಂದರೆ ಮೇಲು ಛಾವಣಿ ಹಾಗೆಯೇ ಬಂದ್ ಎಂದರೆ ಕಟ್ಟುವವ. ಆದಕಾರಣ ಚಪ್ಪರ್‌ಬಂದ್ ಎಂದರೆ ಛಾವಣಿಯನ್ನು ಕಟ್ಟುವವ ಎನ್ನಲಾಗುತ್ತದೆ.
ಚಪ್ಪರ ಬಂಧ್‌ರನ್ನು ಮಹಾರಾಷ್ಟ್ರದಲ್ಲಿ ಚಪ್ಪರ್ ಬಸಿ, ಪರದೇಶಿ ಎಂದು ಕರೆಯುತ್ತಾರೆ. ಚಪ್ಪರ್ ಬಂದರಿಗೆ ಚಪ್ಪರ ಬಸಿ, ಪರದೇಶಿ, ಚಪ್ಪರ್ ವಾಲೆ, ರಜಪೂತ್ ಚಪ್ಪರ್ ಬಂಧ್, ಪರದೇಶ ಚಪ್ಪರ ಬಂಧ್, ಚಪ್ಪರಿಯಾ, ಇತ್ಯಾದಿ ಹೆಸರುಗಳಿಂದಲೂ ಗುರುತಿಸಲಾಗುತ್ತದೆ.
ಪೀಠಿಕೆ
[ಬದಲಾಯಿಸಿ]ಮೂಲತಃ ಅಲೆಮಾರಿ ಬುಡಕಟ್ಟಿನವರಾದ ಚಪ್ಪರಬಂದರು ಅರಣ್ಯವಾಸಿಗಳು, ಯಾವುದೋ ಒಂದು ಕಾಲಕ್ಕೆ ತಮ್ಮ ಮೂಲ ನೆಲೆಯನ್ನು ಬಿಟ್ಟು ದಕ್ಷಿಣ ಭಾರತದತ್ತ ಬಂದ ಇವರು ಮೊಘಲರ ಸೈನಿಕರಿಗೆ ಚಪ್ಪರ, ಡೇರೆ ಹಾಕುವ ಕಾಯಕದಲ್ಲೆ ತೊಡಗಿದ್ದರಂತೆ, ಮೊಘಲ್ ಅರಸರ ಪತನನಂತರ ಅನ್ಯಮಾರ್ಗವಿಲ್ಲದೆ ಭಿಕ್ಷಾಟನೆ, ನಕಲಿ ನಾಣ್ಯ ತಯಾರಿಕೆ, ಮುಂತಾದ ಕಾಯಕಗಳಲ್ಲಿ ತೊಡಗಿದರು ಎಂಬುದನ್ನು ವಕ್ತೃಗಳು ತಿಳಿಸುತ್ತಾರೆ. ಚಪ್ಪರ್‌ಬಂದ್ ಎನ್ನುವ ಶಬ್ದ ಹಿಂದಿ ಶಬ್ದದಿಂದ ಹುಟ್ಟಿದೆ. ಹಿಂದಿಯಲ್ಲಿ ಚಪ್ಪರ್ ಎಂದರೆ ಮೇಲು ಛಾವಣಿ ಹಾಗೆಯೇ ಬಂದ್ ಎಂದರೆ ಕಟ್ಟುವವ. ಆದಕಾರಣ ಚಪ್ಪರ್‌ಬಂದ್ ಎಂದರೆ ಛಾವಣಿಯನ್ನು ಕಟ್ಟುವವ ಎನ್ನಲಾಗುತ್ತದೆ.
ಚಪ್ಪರ ಬಂಧ್‌ರನ್ನು ಮಹಾರಾಷ್ಟ್ರದಲ್ಲಿ ಚಪ್ಪರ್ ಬಸಿ, ಪರದೇಶಿ ಎಂದು ಕರೆಯುತ್ತಾರೆ. ಚಪ್ಪರ್ ಬಂದರಿಗೆ ಚಪ್ಪರ ಬಸಿ, ಪರದೇಶಿ, ಚಪ್ಪರ್ ವಾಲೆ, ರಜಪೂತ್ ಚಪ್ಪರ್ ಬಂಧ್, ಪರದೇಶ ಚಪ್ಪರ ಬಂಧ್, ಚಪ್ಪರಿಯಾ, ಇತ್ಯಾದಿ ಹೆಸರುಗಳಿಂದಲೂ ಗುರುತಿಸಲಾಗುತ್ತದೆ.
ಕುಲ, ದೈವ
[ಬದಲಾಯಿಸಿ][[ಗೇಯಲ್(1906, 113)]] ಹೇಳುವ ಹಾಗೆ ಚಪ್ಪರ್‌ಬಂದ್ ಸಮುದಾಯವು 17ನೇ ಶತಮಾನದಲ್ಲಿ ಮೊಗಲ್‌ರ ಸೈನ್ಯ ದಳದೊಂದಿಗೆ ದಕ್ಷಿಣದ ಬಿಜಾಪುರ ಜಿಲ್ಲೆಗೆ ಬಂದು ನೆಲಿಸಿದ್ದಾರೆ ಮತ್ತು ಅವರನ್ನು ಚಪ್ಪರ್‌ಬಂದ್ ಅಥವಾ ಜೋಪಡಿ ಕಟ್ಟುವವರೆಂದು ಕರೆಯಲಾಗಿದೆ. ಇವರು ನಕಲಿ ನಾಣ್ಯಗಳನ್ನು ತಯಾರು ಮಾಡುವವರಾಗಿದ್ದರು.
ಇವರು ಇಸ್ಲಾಂ ಧರ್ಮಾನುಯಾಯಿಗಳಾದರೂ ಸೂಫಿ ಸಂತರನ್ನು ಹೆಚ್ಚು ಆರಾಧಿಸುತ್ತಾರೆ. ಯಮನೂರು ಉರ್ಸ್ಗೆ ಹೋಗುತ್ತಾರೆ. ತಮ್ಮ ಬೆಡಗುಗಳ ದೈವಗಳನ್ನು ಆಯಾ ಬೆಡಗಿನವರು ಪೂಜಿಸುತ್ತಾರೆ. ನರಸ್ಯಾ, ತಿಮ್ಮಪ್ಪ, ಕಾಳಮ್ಮ, ಹುಲಿಗೆಮ್ಮ, ಹನುಮಂತ ಮುಂತಾದ ದೈವಗಳು ಬೆಡಗಿನ ದೈವಗಳಾಗಿವೆ. ಅವುಗಳನ್ನು ಆಯಾ ಬೆಡಗಿನವರು ಮಾತ್ರ ಪೂಜಿಸುತ್ತಾರೆ. ಸಾಮಾನ್ಯವಾಗಿ ಬೆಳ್ಳಿಯಲ್ಲಿ ಆ ದೈವಗಳ ಮುಖಗಳನ್ನು ಮಾಡಿಸಿರುತ್ತಾರೆ. ಆ ಮುಖಗಳನ್ನು ವರ್ಷಕ್ಕೊಮ್ಮೆ ಹೊರತೆಗೆದು ಆ ಬೆಡಗಿನವರೆಲ್ಲಾ ಸೇರಿ ಪೂಜಿಸುತ್ತಾರೆ.
ಮೊಗಲ ಅರಸರ ಆಡಳಿತದಲ್ಲಿ
[ಬದಲಾಯಿಸಿ]ಮೊಘಲ ಅರಸರ ಸೈನಿಕ ವ್ಯವಸ್ಥೆಯಲ್ಲಿ ಚಪ್ಪರಬಂದರು ಯುದ್ದಗಳ ಸಂದರ್ಭದಲ್ಲಿ ಚಪ್ಪರ, ಡೇರೆ ಹಾಕುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಇವರು. ಟಂಕಶಾಲೆಯಲ್ಲಿಯೂ ಇವರು ನಾಣ್ಯಗಳನ್ನು ಟಂಕೀಸುವ ಕೆಲಸ ಮಾಡುತ್ತಿದ್ದರೆಂದು ತಿಳಿದುಬರುತ್ತದೆ. ಯುದ್ದಗಳು ಕೊನೆಗೊಂಡ ನಂತರ ಇವರು ಚಪ್ಪರ, ಡೇರೆ ಹಾಕುವ ಮತ್ತು ಟಂಕಶಾಲೆಗಳಲ್ಲಿ ನಾಣ್ಯಗಳನ್ನು ಚಪಾಯಿಸುವ ಕೆಲಸ ಕಳೆದುಕೊಂಡು ದಿಕ್ಕೇಡಿಗಳಾಗಿ ಅಲೆಮಾರಿಗಳಾದರು.
ನಕಲಿ ನಾಣ್ಯ ತಯಾರಿಕೆ
[ಬದಲಾಯಿಸಿ]ನಾಡಿನಿಂದ ಕಾಡಿಗೆ, ಕಾಡಿನಿಂದ ನಾಡಿಗೆ ಅಲೆದಾಡಬೇಕಾಗಿ ಬಂತು. ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸುವ ವಸಹಾತುಸಾಹಿ ನೀತಿಗಳ ವಿರುದ್ದ ಚಪ್ಪರಬಂದನಂತಹ ಸಮುದಾಯಗಳು ಪ್ರಬಲವಾಗಿ ವಿರೋಧ ಮಾಡಿದವು. ಬ್ರಿಟೀಷರ ಕಾನೂನುಗಳನ್ನು ಇವರು ದಿಕ್ಕರಿಸಿದರು. ವಸಾಹುತುಶಾಹಿ ಆಡಳಿತಕ್ಕೆ ಚಳ್ಳೆಹಣ್ಣು ತಿನಿಸಲು ತಿರ್ಮಾನಿಸಿದವು. ಚಪ್ಪರಬಂದ್ ಸಮುದಾಯಕ್ಕೆ ಈಗಾಗಲೇ ನಾಣ್ಯಗಳನ್ನು ತಯಾರಿಸುವ ಜ್ಞಾನವಿರುವುದರಿಂದ ಬ್ರಿಟೀಷರ ನಾಣ್ಯಗಳನ್ನೇ ಹೋಲುವ ನಕಲಿ ನಾಣ್ಯಗಳನ್ನು ತಯಾರಿಸಿ, ಗುಪ್ತವಾಗಿ ನಾಣ್ಯ ಚಲಾವಣೆಯಲ್ಲಿ ತೊಡಗಿಸಿಕೊಂಡರು.
ಬ್ರಿಟೀಷರ ವಿರುದ್ಧದ ದಂಗೆ ಮತ್ತು ಅಪರಾಧಿ ಬುಡಕಟ್ಟು ಕಾಯ್ದೆ
[ಬದಲಾಯಿಸಿ]ಇದರಿಂದಾಗಿ ಬ್ರಟೀಷರಿಗೆ ದೊಡ್ಡ ಪ್ರಮಾಣದ ಸವಾಲು ಮತ್ತು ತಲೆನೋವಾಯಿತು. ಚಪ್ಪರಬಂದರನ್ನು ನಿಯಂತ್ರಣ ಮಾಡದೇ ಹೋದರೆ ನಾವು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಭಾವಿಸಿದ ಬ್ರಿಟೀಷರು ಇವರನ್ನು ನಿಯಂತ್ರಿಸಲೆಂದೇ 1871ರಲ್ಲಿ ಅಪರಾಧಿ ಬುಡಕಟ್ಟು ಕಾಯ್ದೆ ಜಾರಿಗೆ ತಂದರು. ಕಾಯ್ದೆಯ ಉದ್ದೇಶ ಮೇಲ್ನೋಟಕ್ಕೆ ಅಲೆಮಾರಿಗಳನ್ನು ಸುದಾರಿಸುತ್ತೇವೆ. ಅವರು ಅನಾಗರೀಕರಾಗಿದ್ದಾರೆ ಅವರನ್ನು ಸುಧಾರಣೆ ಮಾಡುವುದು ನಮ್ಮ ಜವಬ್ಧಾರಿ ಎಂದು ಬ್ರಿಟೀಷರು ಹೇಳುತ್ತಿದ್ದರು. ಆದರೆ ಬ್ರಿಟೀಷರ ಹಿಡೆನ್ ಅಜಂಡವೇ ಬೇರೆಯಾಗಿತ್ತು. ತಮ್ಮ ಕಾನೂನುಗಳನ್ನು ಒಪ್ಪದಿರುವ, ತಮ್ಮ ವಿರುದ್ಧ ದಂಗೆ ಎದ್ದ ಸಮುದಾಯಗಳನ್ನು ನಿಯಂತ್ರಿಸುವುದೇ ಆಗಿತ್ತು. ಅಪರಾಧಿ ಬುಡಕಟ್ಟು ವಿಧಿಯ ಅನ್ವಯ 6ನೇ ಸೆಪ್ಟೆಂಬರ್ 1897ರಲ್ಲಿ ಬಿಜಾಪುರ, ಹುಬ್ಬಳ್ಳಿ, ಗದಗ, ಬಾಗಲಕೋಟೆ ಮುಂತಾದವುಗಳಲ್ಲಿರುವ ವಸಾಹತುಗಳಲ್ಲಿ ಇವರನ್ನು ಇಡಲಾಯಿತು. ಈ ವಸಹಾತುಗಳಲ್ಲಿರುವ ಅಪರಾಧಿಗಳಿಗೆ ಶಿಬಿರಗಳನ್ನು ಏರ್ಪಡಿಸಿ ಕೆಲಸವನ್ನು ನಿಡಲಾಯಿತು. ಉದಾಹರಣೆಗೆ ಕಾಲುವೆ, ಡ್ಯಾಂಗಳನ್ನು ಕಟ್ಟುವ ಕಾರ್ಯ, ಬಟ್ಟೆ ನೇಯುವ ಮಿಲ್‌ಗಳಲ್ಲಿ, ರೈಲ್ವೇಕಾರ್ಯಾಗಾರದಲ್ಲಿ ಅಥವಾ ಕಾರ್ಖಾನೆಗಳಲ್ಲಿ, ಬಡಿಗೆ ಕೆಲಸ, ಮೇಸ್ತ್ರಿ ಕೆಲಸ, ಬಣ್ಣಬಳಿಯುವ, ಪುಸ್ತಕ ಮುದ್ರಣ, ನಾಜೂಕಿನ ಕಸೂತಿ ಕೆಲಸ, ಕ್ಷೌರ ಮಾಡುವ, ವಾಹನ ಚಲಾಯಿಸುವ, ಬುಟ್ಟಿಗಳನ್ನು ಹೆಣೆಯುವ, ಕೃಷಿ ಮುಂತಾದ ಕೆಲಸವನ್ನು ನಿಡಲಾಯಿತು. ಅಪರಾಧಿಗಳೆಂದು ಕರೆದರು ಸಹ ಈ ವೇಳೆ ಇವರ ಆರ್ಥಿಕ ಮಟ್ಟ ಸ್ವಲ್ಪ ಪ್ರಮಾಣದಲ್ಲಿ ಉತ್ತಮವಾಗಿತ್ತು.
ವಿಮುಕ್ತಗೊಂಡ ನಂತರವೂ ಕಳಂಕ ಮುಂದುವರಿಕೆ
[ಬದಲಾಯಿಸಿ]ಭಾರತ ಸ್ವತಂತ್ರಗೊಂಡ ತರುವಾಯ ಬಾಬಾ ಸಾಹೇಬ ಅಂಬೇಡ್ಕರ್ ಅವರು ಮತ್ತು ಅಂದಿನ ಪ್ರಧಾನಿಗಳಾಗಿದ್ದ ಜವಹರಲಾಲ್ ನೆಹರು ಅವರು ಅಲೆಮಾರಿ ಬುಡಕಟ್ಟುಗಳನ್ನು ಅಪರಾಧಿ ಬುಡಕಟ್ಟು ಕಾಯ್ದೆಯಿಂದ ವಿಮುಕ್ತಗೊಳಿಸಲು ತೀರ್ಮಾನಿಸಿದರು. 1952 ಆಗಸ್ಟ್ 31ರಂದು ಸೊಲಾಪುರದ ಸೆಟ್ಲಮೆಂಟ್ ತಂತಿಬೇಲಿ ಕತ್ತರಿಸಿ ಇವರನ್ನು ವಿಮುಕ್ತಗೊಳಿಸಲಾಯಿತು. ಆದರೆ ನಿಜವಾಗಲೂ ಸಮಸ್ಯೆ ಎದುರಾದದ್ದೇ ವಿಮುಕ್ತಗೊಂಡ ನಂತರ. ಬ್ರಿಟೀಷರು ತಂತಿಬೇಲಿಯೊಳಗೆ ಜೈಲಿನಲ್ಲಿಟ್ಟು ಅಪರಾಧಿಗಳೆಂಬ ಹಣೆಪಟ್ಟಿ ಹಚ್ಚಿದರು ಸಹ ಕೆಲವು ಸೌಲಭ್ಯಗಳೊಂದಿಗೆ ಮಾಡಲು ಕೆಲಸ ನೀಡಿದ್ದರು. ಮತ್ತು ಸ್ವತಂತ್ರ ಭಾರತದಲ್ಲಿ ಅಪರಾಧಿಗಳೆಂಬ ಕಳಂಕದಿಂದ ಮುಕ್ತರಾಗಲಿಲ್ಲ. ಜೊತೆಗೆ ಆ ಎಲ್ಲಾ ಸೌಲಭ್ಯಗಳಿಂದ ವಂಚಿತರಾದರು. ಜನಸಾಮಾನ್ಯರು, ಪೋಲಿಸ್ ಅಧಿಕಾರಿಗಳು ಇವರನ್ನು ನೋಡುವ ದೃಷ್ಠಿಕೋನ ಬದಲಾಗಲಿಲ್ಲ. ಇಂದಿಗೂ ಎಲ್ಲೆ ಕಳ್ಳತನದಂತಹ ಅಪರಾಧ ಚಟುವಟಿಕೆಗಳು ನಡೆದರೆ ನೇರವಾಗಿ ಸೆಟ್ಲಮೆಂಟ್ ಸಮುದಾಯಗಳನ್ನೇ ಆರೋಪಿಗಳನ್ನಾಗಿ ಬಿಂಬಿಸಲಾಗುತ್ತದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮದೇ ವಿಧಾನಗಳ ಮೂಲಕ ತೊಡಗಿಸಿಕೊಂಡಿದ್ದ ದೇಶಪ್ರೇಮಿ ಸಮುದಾಯಗಳು ಅಪರಾಧಿ ಬುಡಕಟ್ಟುಗಳೆಂಬ ಹಣೆಪಟ್ಟಿ ಹಚ್ಚಿಕೊಂಡಿರುವುದು ದುರಂತವೇ ಸರಿ.
ಪ್ರಸ್ತುತ ವೃತ್ತಿ
[ಬದಲಾಯಿಸಿ]ಪ್ರಸ್ತುತದಲ್ಲಿ ಚಪ್ಪರ್ ಬಂದ್ ಸಮುದಾಯದವರು ಕಾರ್ಪೆಂಟರಿ, ಗಾರೆ ಕೆಲಸ, ರಸ್ತೆ ಕಾಮಗಾರಿ ಕೆಲಸ, ಕೃಷಿ ಕೂಲಿ, ಪಶುಪಾಲನೆ, ಜಾತ್ರೆಗಳಲ್ಲಿ ಗರ್ದಿಗಮ್ಮತ್ ತೋರಿಸುವುದು, ಉಯ್ಯಾಲೆ ಆಡಿಸುವುದು, ಹೆಂಗಸರು ಬುಟ್ಟಿ ಮತ್ತು ಚಾಪೆ ಹೆಣೆಯುವುದು, ಕಾಂಕ್ರಿಟ್ ಕೆಲಸ, ವೆಲ್ಡಿಂಗ್, ಟೈಲ್ಸ್ ಹಾಕುವ ಕೆಲಸ, ಟೈಲರಿಂಗ್, ಪ್ರಿಂಟಿಂಗ್ ಪ್ರೆಸ್ ಕೆಲಸ, ಆಟೋ ಚಾಲಕ, ಮೆಕಾ£ಕ್ ಕೆಲಸ, ದಿನಗೂಲಿ ಕೆಲಸ, ಸೈಕಲ್ ಶಾಪ್, ಸಣ್ಣ-ಪುಟ್ಟ ವ್ಯಾಪಾರಗಳು ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದಾರೆ. ಬೆರಳೆಣಿಕೆಯಷ್ಟು ಜನ ಮಾತ್ರ ಸರ್ಕಾರಿ ಕೆಲಸಗಳಲ್ಲಿದ್ದಾರೆ. ಶಿಕ್ಷಕರಾಗಿ, ಪೋಲಿಸ್ ಇಲಾಖೆಯಲ್ಲಿ ಪೋಲೀಸರಾಗಿ, ಸೈನ್ಯದಲ್ಲಿ ಸೈನಿಕರಾಗಿ, ವಕೀಲರಾಗಿ ದುಡಿಯುತ್ತಿದ್ದಾರೆ. ಈ ಸಮುದಾಯದಲ್ಲಿ ಒಬ್ಬರು ನಿವೃತ್ತ ಕ್ಷೇತ್ರಶಿಕ್ಷಣಾಧಿಕಾರಿ ಕೂಡ ಇದ್ದಾರೆ. ಮಹಿಳೆಯರು ದಿನ ಗೂಲಿ ಕಾರ್ಮಿಕರಾಗಿ, ಮನೆ ಕೆಲಸದವರಾಗಿ ಜೊತೆಗೆ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ.
ಪರಿಶಿಷ್ಟ ಮತ್ತು ಅಲೆಮಾರಿ ಪಟ್ಟಿಯಿಂದ ವಂಚಿತಗೊಂಡ ಸಮುದಾಯ
[ಬದಲಾಯಿಸಿ]ಚಪ್ಪರಬಂದ್ ಸಮುದಾಯವು ಮುಖ್ಯವಾಹಿಯಲ್ಲಿರುವ ಮುಸ್ಲಿಂರಿಗಿಂತ ಭಿನ್ನವಾದ ಮತ್ತು ತನ್ನದೇ ಆದ ಬುಡಕಟ್ಟು ಸಂಸ್ಕೃತಿ, ಆಚರಣೆ, ಸಂಪ್ರದಾಯ ಮತ್ತು ವಿಶಿಷ್ಟವಾದ ಭಾಷೆ ಹೊಂದಿದೆ. ಬುಡಕಟ್ಟಿನ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರೂ ಇವರು ಪರಿಶಿಷ್ಟ ಪಂಗಡದ ಪಟ್ಟಿಯಿಂದ ವಂಚಿತವಾಗಿದೆ. ಮೂಲತಃ ಅಲೆಮಾರಿಯಾಗಿದ್ದರೂ ಹಿಂದುಳಿದ ವರ್ಗಗಳ ಅಲೆಮಾರಿ ಪಟ್ಟಿಯಿಂದಲೂ ವಂಚಿತವಾಗಿ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಪಡೆಯಲಾಗದೇ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದೆ. ನ್ಯಾಯಯುತವಾಗಿ ಈ ಸಮುದಾಯ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರಬೇಕಿತ್ತು.