ಚಂದ್ರನಾಥ ಸ್ವಾಮಿ ಬಸದಿ, ಎರ್ಮಾಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಚಂದ್ರನಾಥ ಸ್ವಾಮಿ ಬಸದಿಯು ಕರ್ನಾಟಕ ಜೈನ ಬಸದಿಗಳಲ್ಲಿ ಒಂದು.

ಸ್ಥಳ[ಬದಲಾಯಿಸಿ]

ಚಂದ್ರನಾಥ ಸ್ವಾಮಿಯ ಬಸದಿಯು ಉಡುಪಿ ತಾಲೂಕು ತೆಂಕ ಎರ್ಮಾಳು ಗ್ರಾಮದ ಎರ್ಮಾಳಿನಲ್ಲಿದೆ. ಇದರ ಬಳಿ ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನ, ಉತ್ತರಕ್ಕೆ ಕಾಪು ಧರ್ಮನಾಥ ಸ್ವಾಮಿ ಬಸದಿಯು ಕಿಲೋ ಮೀಟರ್ ದೂರ, ದಕ್ಷಿಣಕ್ಕೆ ಪಡುಬಿದ್ರಿ ಮುನಿವೃತ ಸ್ವಾಮಿ ಬಸದಿಯು 4 ಕಿ.ಮೀ ದೂರದಲ್ಲಿವೆ. ಎರ್ಮಾಳು ಬೀಡಿನವರು ಮತ್ತು ಶ್ರಾವಕರು ಈ ಬಸದಿಗೆ ಸಂಬಂಧಿಸಿದವರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಸಮೀಪದಲ್ಲಿದೆ ಹಾಗೂ ಇದು ಮೂಡುಬಿದಿರೆ ಶ್ರೀ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಬರುತ್ತದೆ. ಎರ್ಮಾಳು ಬಸದಿ ಕುಟುಂಬದವರು ಈ ಬಸದಿಯನ್ನು ನಡೆಸುತ್ತಿದ್ದಾರೆ.[೧]

ಇತಿಹಾಸ[ಬದಲಾಯಿಸಿ]

ಈ ಬಸದಿಯನ್ನು ಎರ್ಮಾಳು ಬೀಡಿನ ಪೂರ್ವಿಕರು ಸುಮಾರು ೭೦೦ ವರ್ಷಗಳ ಹಿಂದೆ ನಿರ್ಮಿಸಿದರು ಎಂದು ಹೇಳುತ್ತಾರೆ. ಮೂಲ ಸ್ವಾಮಿಯ ಮೂರ್ತಿಯೂ ಪಸ್ತುತ ಬಸದಿಯ ಹಿಂದೆ ಸಮುದ್ರದಲ್ಲಿ ಸಿಕ್ಕಿದೆ. ಇದು ಜೈನ ವ್ಯಾಪಾರಸ್ಥರು ಸಮುದ್ರದಲ್ಲಿ ಮುತ್ತು ರತ್ನದ ವ್ಯಾಪಾರ ಮಾಡುವಾಗ ಹಡಗಿಗೆ ಅಡ್ಡಲಾಗಿ ಕಲ್ಲು ಇತ್ತು. ಅದನ್ನು ಎತ್ತಲು ಹೋದಾಗ ಜೈನ ವ್ಯಾಪಾರಿಗೆ ಮೂರ್ತಿ ಸಿಕ್ಕಿತ್ತು. ಪ್ರಸ್ತುತ ಬಸದಿಯ ಸುಮಾರು ೩ ಎಕರೆ ವಿಸ್ತೀರ್ಣದಲ್ಲಿ ಯಾರೂ ವಾಸವಿಲ್ಲದ ಜಾಗದಲ್ಲಿ ಬಸದಿಯ ನಿರ್ಮಾಣವಾಗುತ್ತದೆ. ಇದು ಮಧ್ವಾಚಾರ್ಯರ ಸಮಕಾಲೀನವೆನ್ನಬಹುದು. ಬಸದಿಗೆ ಮೇಗಿನ ನೆಲೆ ಇಲ್ಲ. ಆದರೆ ಬಸದಿಯಲ್ಲಿ ಚತುರ್ವಿಂಶತಿ ತೀರ್ಥಂಕರರು, ಶ್ಯಾಮ ಯಕ್ಷ, ಜ್ವಾಲಾಮಾಲಿನೀ ಯಕ್ಷಿ, ಪಾಶ್ರ್ವನಾಥ, ಅನಂತನಾಥ ಪದ್ಮಾವತೀ ದೇವಿ ಮೂರ್ತಿ ಇದೆ. ಈ ಬಸದಿಗೆ ಮಾನಸ್ತಂಭ ಇಲ್ಲ.

ವಿಶೇಷತೆ[ಬದಲಾಯಿಸಿ]

ಗೋಪುರದಲ್ಲಿ ವಿಶೇಷ ಪೂಜಾ ಸಮಯವನ್ನು ವಾಲಗದವರು ವಾಲಗ ಊದಲು ಕುಳಿತುಕೊಳ್ಳುತ್ತಾರೆ. ಬಸದಿಯ ಅಧಿಷ್ಠಾನವನ್ನು ಏರಲು ಹೋಗುವಾಗ ಸಿಗುವ ಜಗಲಿಯಲ್ಲಿ ೨ ಕಂಬಗಳಿವೆ. ಅಲ್ಲಿಂದ ಮುಂದುವರಿದಾಗ ಪ್ರಾರ್ಥನಾ ಮಂಟಪವು ಸಿಗುತ್ತದೆ. ಅದಕ್ಕಿಂತ ಮುಂದುವರಿದು ಹೋದಾಗ ತೀರ್ಥಂಕರ ಮಂಟಪ ಸಿಗುತ್ತದೆ. ಇಲ್ಲಿ ಗಂಧ ಕುಟಿ ಸಿಗುತ್ತದೆ. ಶ್ರೀ ಪದ್ಮಾವತಿ ಅಮ್ಮನವರ ಮೂರ್ತಿ ಕುಕ್ಕುಟ ಸರ್ಪದೊಂದಿಗೆ ಇದೆ. ಇದು ಪೂರ್ವಕ್ಕೆ ಮುಖ ಮಾಡಿದೆ. ಇಲ್ಲಿ ಜ್ವಾಲಾಮಾಲಿನೀ ಮತ್ತು ಪದ್ಮಾವತಿ ದೇವರಿಗೆ ಪಾಯಸ ಪೂಜೆ ಇದೆ.

ಪೂಜಾ ವಿಶೇಷತೆ[ಬದಲಾಯಿಸಿ]

ಬಸದಿಯ ಮೂಲ ನಾಯಕನ ಬಿಂಬವು ಶಿಲೆಯದ್ದಾಗಿದೆ. ನಾಲ್ಕು ಅಡಿ ಅಂದಾಜು ಎತ್ತರ ಕುಳಿತ ಭಂಗಿಯಲ್ಲಿದೆ. ದಿನವೂ ಸ್ವಾಮಿ ಚಂದ್ರನಾಥನಿಗೆ ಪಂಚಾಮೃತ ಅಭಿಷೇಕ ನಡೆಯುತ್ತದೆ. ಬಿಂಬಕ್ಕೆ ವಜ್ರಲೇಪನವಾಗಿಲ್ಲ. ಯುಗಾದಿ, ನಾಗಪಂಚಮಿ, ಶ್ರಾವಣ ಶುಕ್ರವಾರ, ನವರಾತ್ರಿ ಪೂಜೆ, ದೀಪಾವಳಿ ಮತ್ತು ತುಲಾ ಸಂಕ್ರಮಣ ಇತ್ಯಾದಿಗಳನ್ನು ಶ್ರದ್ಧೆಯಿಂದ ಮಾಡಲಾಗುತ್ತಿದೆ. ಬಸದಿಯಲ್ಲಿ ಒಂದು ಬಾರಿ ಮಾತ್ರ ಬೆಳಿಗ್ಗೆ ಪೂಜೆ ಮಾಡಲಾಗುತ್ತದೆ. ದೇವರ ಬಲ ಬದಿಯಲ್ಲಿ ತ್ರಿಶೂಲ ಕ್ಷೇತ್ರಪಾಲ, ನಾಗ ದೇವರ ಬಿಂಬಗಳಿವೆ. ಬಸದಿಯ ಸುತ್ತಲೂ ಮುರ ಕಲ್ಲಿನಿಂದ ನಿರ್ಮಿಸಿದ ರಕ್ಷಣಾ ಗೋಡೆಯಿದೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೩೯-೩೪೦.