ಘೋಟುಲ್
ಘೋಟುಲ್ ಎಂಬುದು ಬುಡಕಟ್ಟು ಜನಾಂಗದವರು ಕಟ್ಟುಕೊಳ್ಳುವ ಒಂದು ವಿಸ್ತಾರವಾದ ಗುಡಿಸಲು. ಘೋಟುಲ್ ಅನ್ನು ಮಣ್ಣಿನಿಂದ ಅಥವಾ ಮರಗಳಿಂದ ಮಾಡಲಾಗುತ್ತದೆ. ಇವುಗಳನ್ನು ಗೊಂಡರು ಮತ್ತು ಮುರಿಯಾ ಪಂಗಡದವರು ವಾಸಿಸುವ ಛತ್ತೀಸ್ ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಕಾಣಬಹುದು.
ಗೊಂಡರ ಸಮುದಾಯದ ಸಮಾಜೋ ಧಾರ್ಮಿಕ ಜೀವನದ ಅವಿಭಾಜ್ಯ ಅಂಗವಾಗಿದೆ ಈ ಘೋಟುಲ್. ಗೊಂಡರ ದಂತಕಥೆಯ ಪ್ರಕಾರ ಪ್ರಪ್ರಥಮ ಘೋಟುಲ್ ಅನ್ನು ಅವರ ಆರಾಧ್ಯ ದೈವ 'ಲಿಂಗೋ' ಕಟ್ಟಿದುದು [೧] .
ಇತಿಹಾಸ ಮತ್ತು ಕಾರ್ಯ ಚಟುವಟಿಕೆಗಳು
[ಬದಲಾಯಿಸಿ]ಘೋಟುಲ್ ಅಲ್ಲಿ ಒಬ್ಬ ಹಿರಿಯ ಸಂಚಾಲಕ ಇರುತ್ತಾನೆ. ಇದರ ಸದಸ್ಯರು ಅವಿವಾಹಿತ ಗಂಡು ಮತ್ತು ಹೆಣ್ಣು ಮಕ್ಕಳು. ಹೆಣ್ಣು ಮಕ್ಕಳನ್ನು ಮೋತಿಯಾರಿಯರೆಂದೂ ಗಂಡು ಮಕ್ಕಳನ್ನು ಚೆಲಿಕರರೆಂದೂ ಕರೆಯುವರು. ಇಲ್ಲಿ ಅವರಿಗೆ ಶಿಸ್ತು, ಸ್ವಚ್ಛತೆ ಮತ್ತು ಇತರೆ ಶ್ರಮದ ಕೆಲಸಗಳನ್ನು ಕಲಿಸಲಾಗುತ್ತದೆ. ತಮ್ಮ ಬಗ್ಗೆ, ತಮ್ಮ ಪಂಗಡದ ಬಗ್ಗೆ ಹೆಮ್ಮೆ ಪಡುವುದನ್ನೂ, ತಮ್ಮನ್ನು ಮತ್ತು ತಮ್ಮ ಹಿರಿಯರನ್ನೂ ಗೌರವಿಸುವದನ್ನು ಕಲಿಸಲಾಗುತ್ತದೆ . ಸಮಾಜದ ಕೆಲಸವನ್ನು ಮಾಡುವುದು ಗೌರವಯುತವಾದದ್ದೆಂದು ಹೇಳಿಕೊಡಲಾಗುತ್ತದೆ.
ಘೋಟುಲ್ ನ ಹುಡುಗರು ಮದುವೆ ಸಮಾರಂಭಗಳಿಂದ ಹಿಡಿದು ಅಂತ್ಯ ಸಂಸ್ಕಾರದವರೆಗಿನ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಾಯಕರಾಗುತ್ತಾರೆ. ಕಥೆ ಹೇಳುವುದು, ಶಿಕಾರಿ ಹೊರಡುವುದು, ಒಗಟು ಕೇಳುವುದೂ ಸೇರಿದಂತೆ ನಾನಾ ತರಹದ ಚಟುವಟಿಕೆಗಳನ್ನು ನಡೆಸುತ್ತಾರೆ.
ಘೋಟುಲ್ ಅಲ್ಲಿ ಹದಿ ಹರೆಯದವರು ತಮಗೆ ಇಷ್ಟವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಉಲ್ಲೇಖ
[ಬದಲಾಯಿಸಿ]