ಘಾಟ್ಕೋಪರ್

ವಿಕಿಪೀಡಿಯ ಇಂದ
Jump to navigation Jump to search
ಘಾಟ್ಕೋಪರ್

घाटकोपर
ಉಪನಗರ
R City Mall, Ghatkopar
R City Mall, Ghatkopar
ಘಾಟ್ಕೋಪರ್
India-locator-map-blank.svg
Red pog.svg
ಘಾಟ್ಕೋಪರ್
ರಾಜ್ಯ
 - ಜಿಲ್ಲೆ
ಮಹಾರಾಷ್ಟ್ರ
 - ಮುಂಬಯಿ ಉಪನಗರ
ನಿರ್ದೇಶಾಂಕಗಳು 19.08° N 72.91° E
ವಿಸ್ತಾರ {{{area_total}}} km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
{{{population_total}}}
 - {{{population_density}}}/ಚದರ ಕಿ.ಮಿ.

(Marathi: घाटकोपर)

'ಘಾಟ್ಕೋಪರ್ ರೈಲ್ವೆ ನಿಲ್ದಾಣ' 'ಮುಂಬಯಿ ಉಪನಗರ'ದ ಭಾಗಗಳಲ್ಲೊಂದು.[೧] 'ಮುಂಬಯಿ ನಗರದ ಪೂರ್ವ-ಮಧ್ಯ ಭಾಗ'ದಲ್ಲಿದೆ. 'ಭಾರತೀಯ ಮಧ್ಯರೈಲ್ವೆಯ ಪ್ರಯಾಣಿಕರ/ಮಾಲ್ ಗಾಡಿಗಳ/ರೈಲ್ವೆ ಗಾಡಿಗಳು,' 'ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ಸ್' ನಿಂದ ಹೊರಟು 'ಘಾಟ್ಕೋಪರ್' ಮುಖಾಂತರವೇ ಹೊರಪ್ರದೇಶಗಳಿಗೆ ಸಂಪರ್ಕ ಹೊಂದಿವೆ. ಸನ್, ೧೯೨೦ ಹಾಗೂ ೩೦ ರ ದಶಕಗಳಲ್ಲಿ 'ಘಾಟ್ಕೋಪರ್' ಬೆಳೆದೇ ಇರಲಿಲ್ಲ. ಹಳ್ಳಿಯಾಗಿತ್ತು. ಆಗ ಅದು ಮುಂಬಯಿಗೆ ಸೇರಿರದೆ, ಥಾಣೆ ಜಿಲ್ಲೆಯ ಭಾಗವಾಗಿತ್ತು. ಆ ದಿನಗಳಲ್ಲಿ 'ವಿಟಿ'ಯಿಂದ 'ಸಯಾನ್' ವರೆವಿಗೆ ಮಾತ್ರ ಮುಂಬಯಿ ಹಬ್ಬಿತ್ತು. ಅದೂ ಅಲ್ಲದೆ, ಮುಂಬಯಿನ ಜೀವನಾಡಿಯಂತಿರುವ ರೈಲು ಸಂಚಾರ ವ್ಯವಸ್ಥೆಯ ಜೊತೆಗೆ 'ಟ್ರಾಮ್ ಸೇವೆ'ಯೂ ಕೇವಲ 'ಮಾಟುಂಗಾ ಬಸ್ ನಿಲ್ದಾಣ'ದವರೆಗೇ ಇದ್ದದ್ದು. ನಂತರ ಕಾಲಕ್ರಮದಲ್ಲಿ 'ಘಾಟ್ಕೋಪರ್,' 'ಗ್ರೇಟರ್ ಮುಂಬಯಿನ ಮ್ಯುನಿಸಿಪಲ್ ಕಾರ್ಪೊರೇಶನ್' ವ್ಯಾಪ್ತಿಗೆ ಸೇರಿತು. ವಿಟಿಯಿಂದ ಥಾಣೆ, ಕಲ್ಯಾಣ್ ವರೆಗೆ ಸಾಗುವ ಒಂದು ಪ್ರಮುಖ ರಸ್ತೆಯಿತ್ತು. ಘಾಟ್ಕೋಪರ್,ಗ್ರೇಟರ್ ಮುಂಬಯಿಗೆ ಸೇರಿದ್ದರೆ, ಉತ್ತರಕ್ಕೆ, ಥಾಣೆಗೆ 'ಆಗ್ರಾ ರಸ್ತೆ'ಯ ಮುಖಾಂತರ, ಸಂಪರ್ಕವಿತ್ತು. ಅಕ್ಕ-ಪಕ್ಕಗಳಲ್ಲಿ ಚಿಕ್ಕ-ಪುಟ್ಟ ಬೆಟ್ಟ-ಗುಡ್ಡಗಳು ಮತ್ತು 'ಖಾಡಿಗಳು' ಸರ್ವೇಸಾಮಾನ್ಯವಾಗಿದ್ದವು.

'ಘಾಟ್ಕೋಪರ್' ಹೆಸರು ಬರಲು ಕಾರಣಗಳು[ಬದಲಾಯಿಸಿ]

೧. ಮರಾಠಿ ಭಾಷೆಯಲ್ಲಿ 'ಕೊಪ್ರೆ' ಯೆಂದರೆ ಒಂದು ಮೂಲೆಯೆಂಬ ಅರ್ಥ ಬರುತ್ತದೆ.(ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಂತೆ), ೨. ಅನೇಕ 'ಘಾಟ್' ಗಳಿದ್ದವು. ("ಚಿಕ್ಕ ಗುಡ್ಡಗಳಿಗೂ ಘಾಟ್ ಎಂದೇ ಮರಾಠಿ ಭಾಷೆಯಲ್ಲಿ ಸಂಬೋಧಿಸುತ್ತಾರೆ"),'ಈಸ್ಟರ್ನ್ ಎಕ್ಸ್ ಪ್ರೆಸ್ ಹೈ' ವೇನ ಹತ್ತಿರ ಚಿಕ್ಕ ನದಿಯಿತ್ತು. ಅದಲ್ಲದೆ ಉಪ್ಪು ತೆಗೆಯಲು 'ಸಮುದ್ರದ ಖಾಡಿ-ನೀರು' ಹತ್ತಿರದಲ್ಲೇ ಸಿಗುತ್ತಿತ್ತು. ಹಾಗಾಗಿ ಈ ಪ್ರದೇಶ 'ಘಾಟ್' ನ ಮೇಲಿದೆ ಎನ್ನುವ ಅಭಿಪ್ರಾಯವಿತ್ತು. ಬೇರೆ ಹತ್ತಿರದ ಭೂಭಾಗಗಳಿಗೆಹೋಲಿಸಿದರೆ, ಇದು ಸ್ವಲ್ಪ ಎತ್ತರ ಪ್ರದೇಶದಲ್ಲಿತ್ತು.ಈಗಲೂ ಇದೆ. 'ಹಿಂದ್ ಸಭಾ ಹಾಸ್ಪಿಟಲ್,[೨] ಘಾಟ್ಕೋಪರ್ ರೈಲ್ವೆ (ಪ) ನಿಲ್ದಾಣದ ಮುಂದೆಯೇ ಇದೆ.[೩]

ಉಲ್ಲೇಖಗಳು[ಬದಲಾಯಿಸಿ]

  1. Ghatkopar info
  2. 'ಹಿಂದ್ ಸಭಾ ಆಸ್ಪತ್ರೆ'
  3. 'Ghatkopar East versus Ghatkopar West–Magic brick.com.'Which is a better choice'? May 9, 2013,