ವಿಷಯಕ್ಕೆ ಹೋಗು

ಗ್ವಾಟನಾಮೊ ಬೇ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಗ್ವಾಟನಾಮೊ ಬೇ

[ಬದಲಾಯಿಸಿ]

(Guantánamo Bay)

  • ಎಲ್ಲಿದೆ ಗ್ವಾಟನಾಮೊ ಬೇ ?
ಕ್ಯೂಬಾದ ದಕ್ಷಿಣ-ಪೂರ್ವದಲ್ಲಿರುವ ಗ್ವಾಟನಾಮೊ ಬೇ


ಜಿಟ್ಮೊ ಎಂದೂ ಕರೆಯಲಾಗುವ ಗ್ವಾಟನಾಮೊ ಬೇ ಈಗ ಅಮೆರಿಕದ ಮಿಲಿಟರಿ ನೆಲೆಯಾಗಿದೆ.ಕ್ಯೂಬಾದ ಗ್ವಾಟನಾಮೊ ನೌಕಾನೆಲೆ ಬಳಿ ಇರುವ ಈ ನೆಲೆಯಲ್ಲಿಅಮೆರಿಕದ ಕೈದಿಗಳನ್ನು ಇರಿಸಲಾಗಿದೆ.ಈ ನೆಲೆಯನ್ನು ಮೊಟ್ಟ ಮೊದಲ ಬಾರಿಗೆ ೭೦ರ ದಶಕದಲ್ಲಿ ಹೈಟಿ ಮತ್ತು ಕ್ಯೂಬಾದ ನಿರಾಶ್ರಿತರನ್ನು ಇರಿಸಲು ಉಪಯೋಗಿಸಲಾಗಿತ್ತು.ಈ ನಿರಾಶ್ರಿತರು ಪ್ಲೋರಿಡಾ ಸಮೀಪ ಜಲಮಾರ್ಗವಾಗಿ ಅಮೆರಿಕವನ್ನು ಪ್ರವೇಶಿಸಲು ಯತ್ನಿಸುವಾಗ ಸಿಕ್ಕಿಬಿದ್ದರು.೨೦೦೨ ರಲ್ಲಿ ೯/೧೧ ದಾಳಿ ನಡೆದ ನಂತರ ಅಮೆರಿಕವು ತುಂಬಾ ಅಪಾಯಕಾರಿಯಾದ ವ್ಯಕ್ತಿಗಳನ್ನು ಇರಿಸಲು, ಯುದ್ಧ ಅಪರಾಧಗಳ ಸಂಬಂಧ ಬಂಧಿತರನ್ನು ವಿಚಾರಣೆಗೊಳಪಡಿಸಲು ಈ ನೆಲೆಯನ್ನು ಪುನರ್ ರೂಪಿಸಿದೆ. ೨೦೧೫ ಫೆಬ್ರವರಿಗೆ ಅನ್ವಯವಾಗುವಂತೆ ಇಲ್ಲಿ ೧೨೨ ಕೈದಿಗಳನ್ನು ಇರಿಸಲಾಗಿದೆ.
ಅಮೆರಿಕ ಮತ್ತು ಬೇ
ಅಮೆರಿಕವು ೧೯೦೩ರಿಂದ ಗ್ವಾಟನಾಮೊ ಪ್ರದೇಶದಸ ೪೫ ಚದರ ಮೈಲಿಯನ್ನು ಗುತ್ತಿಗೆಗೆ ಪಡೆದು, ಉಪಯೋಗಿಸುತ್ತಿದೆ.ಈ ನೆಲೆಯು ಕ್ಯೂಬಾದ ಗಡಿಯ ಜತೆ ೧೭ ಮೈಲಿಯನ್ನು ಹಂಚಿಕೊಂಡಿದೆ. ಅಮೆರಿಕವು ಗ್ವಾಟನಾಮೊ ಪ್ರದೇಶವನ್ನು ಗುತ್ತಿಗೆಗೆ ಪಡೆದಿರುವುದರಿಂದ ಕ್ಯೂಬಾ ಸರಕಾರಕ್ಕೆ ವಾಷಿ‍ಕ ೪,೦೮೫ ಡಾಲರ್ ಹಣವನ್ನು ಪಾವತ್ತಿಸುತ್ತಿದೆ. ಈ ನೆಲೆಯಲ್ಲಿ ಬಂಧನ ಸೌಲಭ್ಯಗಳನ್ನು ಕಲ್ಪಿಸಲು ಅಮೆರಿಕದ ರಕ್ಷಣಾ ಸಚಿವಾಲಯಕ್ಕೆ ವರ್ಷಕ್ಕೆ ೧೫೦ ಮಿಲಿಯನ್ ಡಾಲರ್ ಹೊರೆ ಬೀಳುತ್ತಿದೆ ಎಂದು ಹೇಳಲಾಗಿದೆ.
ಈಗೇಕೆ ಸುದ್ದಿಯಲ್ಲಿ?
ಗ್ವಾಟನಾಮೊ ನೆಲೆಯಲ್ಲಿ ಕೈದಿಗಳಿಗೆ ಹಿಂಸೆ ನೀಡಲಾಗುತ್ತಿದೆ.ಎಮಬ ಸುದ್ದಿ ಆಗಾಗ್ಗೆ ವರದಿಯಾಗುತ್ತಲೇ ಇತ್ತು. ಇದರ ಜತೆಗೆ ಅಮೆರಿಕದ ಜತೆಗಿನ ಸಂಭಂಧ ತಹಬದಿಗೆ ಬರುವ ಮುನ್ನವೇ ಗ್ವಾಟನಾಮೊ ನೆಲೆಯನ್ನು ತಮ್ಮ ಸುಪರ್ದಿಗೆ ಮತ್ತೆ ವಾಪಸ್ ನೀಡಬೇಕೆಂದು ಕ್ಯೂಬಾದ ಅಧ್ಯಕ್ಷ ರೌಲ್ ಕ್ಯಾಸ್ಟ್ರೊ,ಅಮೆರಿಕವನ್ನು ಕೇಳಿದ್ದರು.ಆದರೆ ಕಳೆದವಾರ ಬಂಧನ ಶಿಬಿರದಲ್ಲಿ ಕೈದಿಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂಬ ಸುದ್ದಿ ಮತ್ತೊಮ್ಮೆ ವರದಿಯಾಗಿದೆ.
The U.S. Marinesಯು.ಎಸ್.ಎ. ೨ ಮತ್ತು ೩ನೇ ರೆಜಿಮೆಂಟ್ ನೌಕಾಸೇನಾ ನೆಲೆ. 1st, 2nd & 3rd Regiments at Deer Point Camp, Guantánamo Bay, Cuba, April 26, 1911
  • Cuba–United States relations
  • Platt Amendment
  • Cuban-American Treaty of Relations
  • Guantanamo Bay detention camp
  • Territories of the United States
  • Unincorporated territories of the United States

ಉಲ್ಲೇಖ

[ಬದಲಾಯಿಸಿ]