ಗ್ರೇಟರ್ ಬಾಂಬೆ
'ಗ್ರೇಟರ್ ಮುಂಬಯಿ' 'Greater Bombay'
'ಹಾರ್ನ್ ಬೈ ವೆಲ್ಲಾರ್ಡ್', ನಿರ್ಮಾಣ ಕಾರ್ಯದಿಂದಾಗಿ, 'ಹಾರ್ನ್ ಬೈ ,' ರವರು, " ಆಧುನಿಕ 'ಮುಂಬಯಿ ನಿರ್ಮಾಣ," ದ ಇತಿಹಾಸದಲ್ಲಿ' ಅಮರರಾದರು
[ಬದಲಾಯಿಸಿ]ಮುಂಬಯಿನ , ಬ್ರಿಟಿಷ್ ಗವರ್ನರ್, ವಿಲಿಯಮ್ ಹಾರ್ನ್ ಬೈ ೧೭೮೪ ರವರೆಗೆ, ಮುಂಬಯಿಯ ಗವರ್ನರ್ ಆಗಿದ್ದರು. ಆವರನ್ನು ಮುಂಬಯಿನ ಜನತೆ ಪ್ರೀತಿಯಿಂದ ಜ್ಞಾಪಿಸಿಕೊಳ್ಳುವುದು, ಅವರು ಮಾಡಿರುವ ವೆಲ್ಲಾರ್ಡ್ ಪ್ರದೇಶಗಳನ್ನೆಲ್ಲಾ ಜೊತೆಗೂಡಿಸಿ ಅಭಿವೃದ್ಧಿಮಾಡಿ, ಬೆಳಸಿದ ಕಾರಣಕ್ಕಾಗಿ. ಅವರು, ಪ್ರಥಮವಾಗಿ, ಅಂದಿನ ಮುಂಬಯಿನ ಹತ್ತಿರದ ಹಳ್ಳಕೊಳ್ಳ, ತಗ್ಗುದಿಣ್ಣೆ, ಮತ್ತು ಅವರು ನೀರುತುಂಬಿದ ಚಿಕ್ಕ ಕೆಸರಿನಗುಂಡಿಗಳನ್ನೆಲ್ಲಾ ಮುಚ್ಚಿಸಿ, ಸಮತಟ್ಟಾದ ಭೂಮಿಯನ್ನಾಗಿ ಮಾಡುವ ಕಾರ್ಯವನ್ನು ಎಲ್ಲರಿಗಿಂತ ಮೊದಲು, ಪ್ರಾರಂಭಿಸಿದರು. ಕಾಲಾಂತರದಲ್ಲಿ ಬಂದವರೆಲ್ಲಾ ಈ ಮಹತ್ತರ ಕಾರ್ಯವನ್ನು ಮುಂದುವರೆಸಿದರು. 'ಕಂಬಾಲ ಹಿಲ್,' ನ ಉತ್ತರಭಾಗದ ಜಮೀನನ್ನು ಅವರ ಸಮ್ಮುಖದಲ್ಲಿ ತುಂಬಿಸಿ, ಸಮತಟ್ಟಾದ ಪ್ರದೇಶವನ್ನಾಗಿ ಮಾಡಲಾಯಿತು. ಆಗ ಬ್ರಿಟಿಷ್ ಮಹಾರಾಣಿಯವರ ಪರವಾಗಿ, "ಈಸ್ಟ್ ಇಂಡಿಯ ಕಂಪೆನಿ", ಭಾರತದಲ್ಲಿ ತನ್ನ ಕೊನೆಯ ಆಡಳಿತ ಅವಧಿಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಿತ್ತು. ವ್ಯಾಪಾರಗಳನ್ನು ಹೆಚ್ಚಿಸಿ ಲಾಭಗಳಿಸುವ ಪ್ರಕ್ರಿಯೆಯಲ್ಲಿ ಹೆಚ್ಚು ಸಮಯ ವಿನಿಯೋಗಿಸುತ್ತಿತ್ತು. ಈ ಪ್ರಮುಖ ಯೋಜನೆಯಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ. ೭ ದ್ವೀಪಗಳ ತಗ್ಗುಪ್ರದೇಶಗಳನ್ನು ನೀರುತುಂಬಿದ ಭೂಭಾಗಗಳನ್ನು ಮುಚ್ಚಿ ಸಮತಟ್ಟುಮಾಡುವ ಬೃಹತ್ ಕಾರ್ಯವನ್ನು ತೆಗೆದುಕೊಳ್ಳಲು ಸಮ್ಮತಿಸಲಿಲ್ಲ. ಆದರೆ 'ಹಾರ್ನ್ ಬೈ ,' ರವರು, ಧರ್ಯಗೆಡಲಿಲ್ಲ. ಮುಂಬಯಿನಲ್ಲಿ ಅತಿ ಭಾರಿ ಕೆಲಸವನ್ನು ಪ್ರಪ್ರಥಮವಾಗಿ ಶುರುಮಾಡಿಯೇಬಿಟ್ಟರು. ಸಿವಿಲ್ ಎಂಜಿನಿಯರಿಂಗ್ ನ ಕಾರ್ಯಚಟುವಟಿಕೆಗಳು, ನಗರದ ಭೂಗೋಳವನ್ನೇ ಬದಲಾಯಿಸಿತು.
ಅಂದಿನ ಮುಂಬಯಿ ಪ್ರದೇಶದ "ಮಹಾಲಕ್ಷ್ಮಿ," ಮತ್ತು " ಕಮಾಟಿಪುರ," ಇಲಾಖೆಗಳನ್ನು ಸಮತಟ್ಟಾದ ಪ್ರದೇಶಗಳನ್ನಾಗಿ ಮಾಡಿದ ಕಾರ್ಯ ಶ್ಲಾಘನೀಯ :
[ಬದಲಾಯಿಸಿ]ಅಂದಿನ ಮುಂಬಯಿ ದ್ವೀಪದ, "ಮಹಾಲಕ್ಷ್ಮಿ," ಮತ್ತು "ಕಮಾಟಿಪುರ," ಗಳಿದ್ದ ಜೌಗು ಪ್ರದೇಶಗಳನ್ನು ಅಗೆದು ಮಣ್ಣು-ಕಲ್ಲು-ಬಂಡೆಗಳಿಂದ ಮುಚ್ಚಿ ಮಾಡಿದ ಕೆಲಸಗಳು ಅನನ್ಯ. ಮಸುಕಾದ ಕೆಲವುಪ್ರದೇಶಗಳ ತಗ್ಗುನೆಲ, ಜನರವಾಸಕ್ಕೆ ಅನುಕೂಲಮಾಡಿಡುವ ಕೆಲಸ ಕಷ್ಟಸಾಧ್ಯವಾಗಿತ್ತು. ಮಣ್ಣೆತ್ತುವ, ಮಣ್ಣನ್ನು ವಿಲೇವಾರಿಮಾಡುವ ಈಗಿರುವಂತಹ ಬೃಹತ್ ಯಂತ್ರಗಳು ಆಗಿನಕಾಲದಲ್ಲಿ ಇರಲಿಲ್ಲ. ಕೂಲಿಯವರು ಮಾಡುವ ಕೆಲಸ ಸಹಜವಾಗಿ ಹೆಚ್ಚು ಸಮಯವನ್ನು ಆಕ್ರಮಿಸಿತ್ತು. ೧೭೮೪ ರ ಸುಮಾರಿಗೆ ಒಂದು ಹಂತದ ಕೆಲಸ ಮುಗಿಯಿತು. ತಮ್ಮ ಕೆಲಸದ ಜಾಗವನ್ನು, ಕೋಟೆಪರಿಸರದಿಂದ ಬದಲಾಯಿಸಿ ಆಫೀಸ್, ಹಾಗೂ ಮನೆಯನ್ನು , ಕೋಟೆಯಿಂದ ಪರೇಲ್ ನ ಉತ್ತರಕ್ಕೆ ಹೋಗಿ ನೆಲಸಿದ, 'ಫ್ರಥಮ ಗವರ್ನರ್,' ಎಂದು ಹೆಸರಾದರು. ಮುಂಬಯಿನಗರದ ಉತ್ತರ ಭೂಭಾಗಕ್ಕೆ ಸರಿಯುವ ಆಸೆ, ಯಾರಿಗೂ ಇರಲಿಲ್ಲ. ಅದರಬದಲಾಗಿ ಹೆಚ್ಚು ಹೆಚ್ಚು ಜಾಗವನ್ನು ಸಮುದ್ರವನ್ನು ಹಿಂದಕ್ಕೆ ದೂಡಿ, ಜಮೀನನ್ನು ಆಕ್ರಮಿಸಿಕೊಳ್ಳುವ ಬಗ್ಗೆ ಎಲ್ಲರೂ ಆಸಕ್ತಿ ತೋರಿಸುತ್ತಿದ್ದರು. ಈ ಉತ್ತರದ ಕಡೆಯ ಜರುಗುವ ಹೆಚ್ಚುವರಿ ಪ್ರಾರಂಭ, 'ಜಾನ್ ಮುರ್ರೆ,' ಯವರು, ಹಾರ್ನ್ ಬೈ ರವರನ್ನು ಒಂದು ಪ್ರಶಸ್ಥ್ಯ ವಜ್ರಕ್ಕೆ ಹೋಲಿಸಿ, ಅದನ್ನು ಭಾರತಕ್ಕೆ ದೊರಕಿಸಿದ, ಈಸ್ಟ್ ಇಂಡಿಯ ಕಂಪನಿಯನ್ನು ಮನಸಾರೆ ಅಭಿನಂದಿಸಿದರು. " ೧೭೭೫ ರಲ್ಲಿ, ನಮ್ಮ ಗವರ್ನರ್, ೩೬ ಕ್ಯಾ. [೭.೨ ಗ್ರಾಮ್] ತೂಗುತ್ತಿದ್ದಾರೆ. ಈಗ ಅವರ ಕೀರ್ತಿ ಹಾಗೂ ತೂಕ ಹೆಚ್ಚಾಗಿದೆ; ಬಹುಶಃ,'ಶಾ ಆಫ್ ಇರಾನ್ ನ ಸಂಪತ್ತಿನಷ್ಟು".
'ಹಾರ್ನ್ ಬೈ ವೆಲ್ಲಾರ್ಡ್', ಅಂದಿನ ದಿನಗಳ, 'ಮೊದಲ ಇಂಜಿನಿಯರಿಂಗ್ ಪ್ರಾಜೆಕ್ಟ್,' ಆಗಿತ್ತು.
[ಬದಲಾಯಿಸಿ]೧೭೮೨ ರ ಪ್ರಕಾರ, ವಿಲಿಯಮ್ ಹಾರ್ನ್ ಬೈ ಯವರು, ಗವರ್ನರ ಮುಂಬಯಿ ಪ್ರೆಸಿಡೆನ್ಸಿಯ, ದ್ವೀಪಗಳನ್ನೆಲ್ಲಾ ಕೂಡಿಸಲು ಕಾರ್ಯಗತಮಾಡಿದ ಯೋಜನೆ. 'ಹಾರ್ನ್ ಬೈ ವೆಲ್ಲಾರ್ಡ್' ಮೊದಲ ಇಂಜಿನಿಯರಿಂಗ್ ಪ್ರಾಜೆಕ್ಟ್ ಆಗಿತ್ತು. ೧೭೮೪ ರಲ್ಲಿ ಈಸ್ಟ್ ಇಂಡಿಯ ಕಂಪೆನಿಯ ಡೈರೆಕ್ಟರ್ ಗಳ ವಿರೋಧವಿತ್ತು. ಒಂದು ಲಕ್ಷ ಖರ್ಚು. ೧೮೧೭ ರಲ್ಲಿ ಜೋರಾಗಿ ಕೆಲಸ. ೧೮೪೫ ಕ್ಕೆ ಮುಗಿಯಿತು. ೭ ದಕ್ಷಿಣದ ದ್ವೀಪಗಳು ಸೇರಿದವು. ಈದನ್ನು (ಓಲ್ಡ್ ಮುಂಬಯಿ), ಹಳೆಯ ಮುಂಬಯಿ ಎನ್ನುತ್ತಾರೆ. ಒಟ್ಟು ಸೇರ್ಪಡೆಯಾದ ಕಡಲಿನಜಲಾವೃತ, ಭೂಭಾಗಳನ್ನು ವಾಪಸ್ ಪಡೆಯಲಾಯಿತು. - ೪೩೫ ಚದರ ಕಿ. ಮೀ. ನಾಲೆ ಮತ್ತು ರಸ್ತೆ, ಸೇತುವೆಗಳು, ಸಿದ್ಧವಾದವು.
ಗ್ರೇಟರ್ ಮುಂಬಯಿ, 'ಶಷ್ಟಿ,' ಯನ್ನು ಸೇರಿಸಿಕೊಂಡ, ಉತ್ತರ ಮುಂಬಯಿನ ಪ್ರದೇಶ ; ಈಗ ಅದನ್ನು 'ಸಬರ್ಬ್,' ಯೆಂದು ಕರೆಯುತ್ತಾರೆ.
[ಬದಲಾಯಿಸಿ]೧೯ ನೆ ಶತಮಾನದಲ್ಲಿ ಮುಂಬಯಿ ದ್ವೀಪವನ್ನು, ಶಷ್ಟಿಗೆ ಸೇರಿಸಲು, ಹಾಗೂ ಶಷ್ಟಿಯನ್ನು ಮೇನ್ ಲ್ಯಾಂಡ್ ಗೆ ಸೇರಿಸಲು, ರೈಲ್ವೆ ರಸ್ತೆಗಳನ್ನು ನಿರ್ಮಿಸಿದಮೇಲೆ ಅವುಗಳಿಗೆಲ್ಲಾ ಸಂಪರ್ಕ ದೊರೆಯಿತು. ಯೋರೋಪಿಯನ್, ಪಾರ್ಸಿ, ಮಾರ್ವಾಡಿ, ಗುಜರಾಥಿ, ಶ್ರೀಮಂತರಿಗೆ, ತಮ್ಮ-ತಮ್ಮ ಬಂಗಲೆ, ವಿಲ್ಲಾಗಳನ್ನು ನಿರ್ಮಿಸಲು,ಸಹಾಯವಾಯಿತು. ಶಷ್ಟಿಯಲ್ಲಿ ಮನೆಗಳನ್ನು, ಬಂಗಲೆಗಳನ್ನು ಕಟ್ಟಲು,ಸರ್ಕಾರ ಪ್ರೋತ್ಸಾಹಿಸಿತು. ೧೯೦೧ ರಲ್ಲಿ ಶಷ್ಟಿಯ ಜನಸಂಖ್ಯೆ, ೧೪೬,೯೯೩ ರಷ್ಟು ಇತ್ತು. " ಇದನ್ನು ಗ್ರೇಟರ್ ಮುಂಬಯಿ," ಯೆಂದು ಕರೆಯಲಾಯಿತು. ಶಷ್ಟಿಯ ಕಡೆಯಿಂದ ಮುಂಬಯಿಯ ದ್ವೀಪಗಳನ್ನು, ಕಾಲುವೆಗಳನ್ನು, ೨೦ ನೆ ಶತಮಾನದ ಮೊದಲಭಾಗದಲ್ಲಿ ಸಂಪೂರ್ಣವಾಗಿ, ತುಂಬಿಸಲಾಯಿತು.
ಹಾರ್ನ್ ಬೈ ರವರು, ಇಂಗ್ಲೆಂಡ್ ನ ' ಹ್ಯಾಂಫ್ ಶೈರ್,' ನಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದು, ಕಾಲವಾದರು
[ಬದಲಾಯಿಸಿ]'ಹಾರ್ನ್ ಬೈ,' ಇಂಗ್ಲೆಂಡ್ ಗೆ ೧೭೮೩ ರಲ್ಲಿ ವಾಪಸ್ ಹೋದರು. ಅಲ್ಲಿನ ಪುಟ್ಟ ಗ್ರಾಮ 'ಹುಕ್,' ನ ಮದ್ಯಪ್ರದೇಶದಲ್ಲಿರುವ, 'ಹ್ಯಾಂಫ್ ಶೈರ್,,' ನಲ್ಲಿ, ಸರ್ಕಾರ ಜಮೀನ್ ಕೊಟ್ಟಿತಂತೆ. ಮುಂಬಯಿ ಸರ್ಕಾರದವರು ಕಟ್ಟಿಸಿಕೊಟ್ಟ ಶೈಲಿಯಲ್ಲಿಯೇ 'ಪಾರ್ಕ್ ಲ್ಯಾಂಡ್,' ಯೆಂಬ ಒಂದು 'ಹಳ್ಳಿಯ ಮಾದರಿಯ ಮ್ಯಾಂಶನ್', ನ್ನು ತಮಗೋಸ್ಕರವಾಗಿ ಕಟ್ಟಿಸಿಕೊಂಡರು. ಸನ್ ೧೮೦೩ ರಲ್ಲಿ, ತಮ್ಮ ಹಳ್ಳಿಮನೆಯಲ್ಲಿಯೇ ತೀರಿಕೊಂಡರು.