ಗ್ಯಾಲಿಫಾರ್ಮೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಏವೀಸ್ ವರ್ಗದಲ್ಲಿನ ಒಂದು ಉಪವರ್ಗ. ಗೌಜಲು, ಟರ್ಕಿ ಕೋಳಿ, ನವಿಲು, ಕೋಳಿ ಮುಂತಾದವು ಈ ಗುಂಪಿಗೆ ಸೇರಿವೆ. ಇವುಗಳಲ್ಲೆಲ್ಲ ಕೊಕ್ಕು ಸಣ್ಣದಾಗಿಯೂ ಉಗುರುಗಳು ಮೊಂಡಾಗಿಯೂ ಇವೆ. ಕಾಲ್ಬೆರಳುಗಳ ಸಂಖ್ಯೆ 4. ಇವುಗಳಲ್ಲಿ ಮೂರು ಮುಂದಕ್ಕೂ ಒಂದು ಹಿಂದಕ್ಕೂ ಬಾಗಿವೆ. ಇದರಿಂದ ನೆಲವನ್ನು ಕೆರೆಯಲೂ ಓಡಲೂ ಅನುಕೂಲ. ಮರಿಗಳ ಮೈ ತುಂಬ ಹತ್ತಿಯಂಥ ಬಹು ಮೃದುವಾದ ಪುಕ್ಕಗಳಿದ್ದು ಇವು ನೋಡಲು ಬಹಳ ಸುಂದರವಾಗಿ ಕಾಣುತ್ತವೆ. ಈ ಗುಂಪಿನ ಹಕ್ಕಿಗಳು ಪಾಲಿನೇಷ್ಯ ಮತ್ತು ಅಂಟಾರ್ಕ್ಟಿಕಗಳನ್ನು ಬಿಟ್ಟು ಪ್ರಪಂಚದ ಉಳಿದ ಭಾಗಗಳಲ್ಲೆಲ್ಲ ಕಾಣದೊರೆಯುತ್ತವೆ. ಇವುಗಳಲ್ಲಿ ಬಹುಪಾಲು ಬಗೆಯವು ಭಕ್ಷ್ಯಯೋಗ್ಯವಾದ ಹಕ್ಕಿಗಳೆಂದು ಹೆಸರಾಗಿವೆ. ಮಾನವ ಸಾಕಲು ತೊಡಗಿದ ಹಕ್ಕಿಗಳಲ್ಲಿ ಇವು ಕೂಡ ಸೇರಿವೆ.