ವಿಷಯಕ್ಕೆ ಹೋಗು

ಗ್ಯಾಂಟ್‌ ರೇಖಾನಕ್ಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೂರು ರೀತಿಯ ನಿಗದಿತ ಕಾಲದ ಅವಲಂಬನೆಗಳು (ಕೆಂಪು ಬಣ್ಣದಲ್ಲಿ) ಹಾಗೂ ಶೇಕಡಾವಾರು ಸಂಪೂರ್ಣತೆ ಸೂಚಿಸುತ್ತಿರುವ ಒಂದು ಗ್ಯಾಂಟ್‌ ನಕ್ಷೆ.

ಗ್ಯಾಂಟ್‌ ರೇಖಾನಕ್ಷೆ ಎಂಬುದು ಕಾರ್ಯಕಲಾಪ ನಿಗದಿತ ಯೋಜನೆಯ ಹಂತವನ್ನು ವಿವರಿಸುವಂತಹ ಒಂದು ರೀತಿಯ ತಿರುಳುರೂಪಿ ನಕ್ಷೆ. ಗ್ಯಾಂಟ್‌ ನಕ್ಷೆಗಳು ಯೋಜನೆಯೊಂದರ ಅವಧಿಯ ಅಂಶಗಳು ಮತ್ತು ಸಾರಾಂಶಿಕ ಅಂಶಗಳ ಪ್ರಾರಂಭ ಹಾಗೂ ಮುಕ್ತಾಯಗೊಳ್ಳುವ ದಿನಾಂಕಗಳನ್ನು ಚಿತ್ರದ ಮೂಲಕ ವಿವರಿಸುತ್ತವೆ. ಯೋಜನೆಯ ಕಾರ್ಯ-ವಿಂಗಡಣಾ ರೂಪುರೇಖೆಯಲ್ಲಿ ಅವಧಿಯ ಅಂಶಗಳು ಮತ್ತು ಸಾರಾಂಶಿಕ ಅಂಶಗಳಿರುತ್ತವೆ. ಕೆಲವು ಗ್ಯಾಂಟ್‌ ನಕ್ಷೆಗಳು ಕಾರ್ಯಚಟುವಟಿಕೆಗಳ ನಡುವಿನ ಅವಲಂಬನ (ಅರ್ಥಾತ್‌ ಆದ್ಯತೆಯ) ಸಂಬಂಧಗಳನ್ನೂ ಸಹ ತೋರಿಸುತ್ತವೆ. ಕೆಳಕಂಡ ಉದಾಹರಣೆಯಂತೆ, ಶೇಕಡಾವಾರು-ಪೂರ್ಣಗೊಳ್ಳುವಿಕೆ ಸೂಚಿಸುವ ಗುರುತು ಹಾಗೂ ಉದ್ದನೆಯ 'ಟುಡೆ' ಗೀಟನ್ನು ಬಳಸಿ ಯೋಜನೆಯ ತಾಜಾ ಸ್ಥಿತಿಯನ್ನು ತೋರಿಸಲೂ ಸಹ ಗ್ಯಾಂಟ್‌ ನಕ್ಷೆಗಳನ್ನು ಬಳಸಬಹುದಾಗಿದೆ.

ಗ್ಯಾಂಟ್‌ ನಕ್ಷೆಯನ್ನು ಈಗ ಸಾಮಾನ್ಯ ನಕ್ಷೆ ರೂಪಿಸುವ ಒಂದು ತಂತ್ರ ಎಂದು ಪರಿಗಣಿಸಿದರೂ ಸಹ, ಮೊದಲ ಬಾರಿಗೆ ಪರಿಚಯಿಸಿದಾಗ[ಸೂಕ್ತ ಉಲ್ಲೇಖನ ಬೇಕು] ಗ್ಯಾಂಟ್‌ ನಕ್ಷೆಗಳು ಅಭೂತಪೂರ್ವ ಪರಿಕಲ್ಪನೆಯೆನಿಸಿದ್ದವು. ಹೆನ್ರಿ ಗ್ಯಾಂಟ್‌ರವರ ಕೊಡುಗೆಗಳಿಗೆ ಗೌರವಾರ್ಥವಾಗಿ, ವ್ಯವಸ್ಥಾಪನಾ ಕ್ಷೇತ್ರ ಹಾಗೂ ಸಮುದಾಯ ಸೇವೆಯಲ್ಲಿ ಸಾಧನೆಗೈಯುವವರಿಗೆ ಹೆನ್ರಿ ಲಾರೆನ್ಸ್‌ ಗ್ಯಾಂಟ್‌ ಪದಕ ನೀಡಿ ಗೌರವಿಸಲಾಗುವುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಸಹ, ಸಂಗ್ರಹಿಸಲಾದ ದತ್ತಾಂಶಗಳನ್ನು ವಿವರಿಸಲು ಈ ಗ್ಯಾಂಟ್‌ ನಕ್ಷೆಯನ್ನು ಬಳಸಲಾಗುತ್ತಿದೆ.

ಐತಿಹಾಸಿಕ ಬೆಳವಣಿಗೆ[ಬದಲಾಯಿಸಿ]

ಈ ರೀತಿಯ ಸಾಧನವನ್ನು ಮೊದಲು ಕರೊಲ್‌ ಆಡಮೀಯಕಿ 1896ರಲ್ಲಿ ವೃದ್ಧಿಪಡಿಸಿದ್ದರೆನ್ನಲಾಗಿತ್ತು. ಇವರು ಇದನ್ನು ಹಾರ್ಮೊನೊಗ್ರಾಮ್‌ ಎಂದು ಕರೆಯುತ್ತಿದ್ದರು. ಆದರೆ, ಆಡಮೀಯಕಿ ತಮ್ಮ ನಕ್ಷೆಯನ್ನು 1931ರ ತನಕ ಪ್ರಕಟಿಸಲಿಲ್ಲ, ನಂತರ ಕೇವಲ ಪೊಲಿಷ್‌ ಭಾಷೆಯಲ್ಲಿ ಮಾತ್ರ ಪ್ರಕಟಿಸತೊಡಗಿದರು. ತಮ್ಮ ನಕ್ಷೆಯನ್ನು 1910ರಿಂದ 1915ರ ತನಕ ವಿನ್ಯಾಸ ಮಾಡಿದ್ದಕ್ಕಾಗಿ ಈ ನಕ್ಷೆಗೆ ಹೆನ್ರಿ ಗ್ಯಾಂಟ್‌ರ (1861-1919) ಹೆಸರನ್ನಿಟ್ಟು ಉಲ್ಲೇಖಿಸಲಾಗಿದೆ.[೧][೨]

ಗ್ಯಾಂಟ್‌ ನಕ್ಷೆಗಳನ್ನು ಮೊದಲ ಬಾರಿಗೆ ವ್ಯಾಪಕವಾಗಿ ಬಳಸಲಾದದ್ದು ಮೊದಲ ವಿಶ್ವಸಮರ ನಡೆಯುತ್ತಿದ್ದಾಗ. ಅಂದಿನ ಶಸ್ತ್ರಗಳ ಖಾತಾ ಮುಖ್ಯಸ್ಥರಾಗಿದ್ದ ಜನರಲ್‌ ವಿಲಿಯಂ ಕ್ರೊಜಿಯರ್‌ರವರ ಪ್ರೇರಣೆಯ ಮೇರೆಗೆ, ತುರ್ತು ನೌಕಾದಳ, ಹಡಗು ರವಾನಾ ಮಂಡಳಿ ಮುಂತಾದವುಗಳ ನಕ್ಷೆಗಳನ್ನು ಒಳಗೊಂದಿದ್ದವು.[೩]

1980ರ ದಶಕದಲ್ಲಿ, ಬಹಳ ಸಂಕೀರ್ಣ ಹಾಗೂ ವಿಸ್ತೃತವಾದ ಗ್ಯಾಂಟ್‌ ನಕ್ಷೆಗಳ ರಚನೆಗಾಗಿ ಗಣಕಯಂತ್ರಗಳನ್ನು ಬಳಸಲಾಯಿತು. ಗಣಕಯಂತ್ರಕ್ಕಾಗಿ ವಿನ್ಯಾಸಗೊಂಡ ಮೊಟ್ಟಮೊದಲ ನಕ್ಷಾ ಅನ್ವಯಿಕೆಗಳನ್ನು ಯೋಜನೆಯ ವ್ಯವಸ್ಥಾಪಕರು ಮತ್ತು ಯೋಜನೆಯ ರೂಪುರೇಖೆ ಸಿದ್ಧಪಡಿಸುವವರು ಬಳಸುತ್ತಿದ್ದರು. 1990ರ ದಶಕದ ಅಂತ್ಯದಲ್ಲಿ ಅಂತರಜಾಲದ ಪದಾರ್ಪಣೆ ಹಾಗೂ ಜಾಲಗಳ ನಡುವಿನ ಸಹಯೋಗದಿಂದಾಗಿ, ಸಹಯೋಗಿ ಸಮೂಹ-ತಂತ್ರಾಂಶ ಸೇರಿದಂತೆ ಹಲವು ಅಂತರಜಾಲ-ಅಧಾರಿತ ತಂತ್ರಾಂಶ-ಅನ್ವಯಿಕೆಗಳು ಗ್ಯಾಂಟ್‌ ನಕ್ಷೆಗಳನ್ನೊಳಗೊಂಡಿದ್ದವು.

ಅನುಕೂಲಗಳು ಮತ್ತು ಸೀಮಿತತೆಗಳು[ಬದಲಾಯಿಸಿ]

ಯೋಜನೆಯೊಂದರ ಕಾರ್ಯ-ವಿಂಗಡಣಾ ರೂಪುರೇಖೆಯ (WBS) ಹಂತಗಳು ಮತ್ತು ಚಟುವಟಿಕೆಗಳನ್ನು ನಿರೂಪಿಸಲು ಗ್ಯಾಂಟ್‌ ನಕ್ಷೆಗಳ ಬಳಕೆ ಸರ್ವೇಸಾಮಾನ್ಯವಾಗಿದೆ. ಇದರಿಂದಾಗಿ, ಯೋಜನೆಯ ಕಾರ್ಯಕಲಾಪಗಳು ಸುಲಭವಾಗಿ ಅರ್ಥವಾಗುತ್ತವೆ. ಚಟುವಟಿಕೆಗಳ ರೂಪುರೇಖೆ ರಚಿಸುವಾಗಲೇ ಯೋಜನೆಯ ಕಾರ್ಯವಿಂಗಡಣಾ ರೂಪುರೇಖೆಯನ್ನು ವಿನ್ಯಾಸಗೊಳಿಸುವ ಯತ್ನ ಸಾಮಾನ್ಯವಾಗಿ ಎಸಗಲಾಗುವ ತಪ್ಪು. ಈ ಅಭ್ಯಾಸದಿಂದಾಗಿ, 100% ನಿಯಮದ ಪಾಲನೆ ಬಹಳ ದುಸ್ತರವಾಗುವುದು. ಬದಲಿಗೆ, 100% ನಿಯಮವನ್ನು ಪಾಲಿಸುವಂತೆ ಡಬ್ಲ್ಯೂಬಿಎಸ್‌ನ್ನು ಸಂಪೂರ್ಣರೀತಿಯಲ್ಲಿ ವಿನ್ಯಾಸಗೊಳಿಸಿ, ನಂತರ ಯೋಜನೆಯ ರೂಪುರೇಖೆಯನ್ನು ವಿನ್ಯಾಸಗೊಳಿಸಬಹುದು.[೪]

ಒಂದೇ ಹಾಳೆ ಅಥವಾ ಪರದೆ ಹಿಡಿಸುವ ಸಣ್ಣ-ಪುಟ್ಟ ಯೋಜನೆಗಳಿಗೆ ಗ್ಯಾಂಟ್‌ ನಕ್ಷೆ ಬಹಳ ಉಪಯುಕ್ತಕರ. ಆದರೆ, 30ಕ್ಕಿಂತಲೂ ಹೆಚ್ಚಿನ ಚಟುವಟಿಕೆಗಳುಳ್ಳ ಯೋಜನೆಗಳಿಗೆ ಗ್ಯಾಂಟ್‌ ನಕ್ಷೆ ಸೂಕ್ತವಾಗದೇ ಹೋಗಬಹುದು

. ಬಹಳ ದೊಡ್ಡ ಗಾತ್ರದ ಗ್ಯಾಂಟ್‌ ನಕ್ಷೆಗಳು ಬಹಳಷ್ಟು ಗಣಕಯಂತ್ರ ಪರದೆಗಳಿಗೆ ಸರಿಹೊಂದದಿರಬಹುದು. ತೋರಿಸಲಾಗುವ ಗ್ಯಾಂಟ್‌ ನಕ್ಷೆಯ ಭಾಗವು ತೀರಾ ಕಡಿಮೆ ಮಾಹಿತಿ ನೀಡುತ್ತದೆ ಎಂಬ ಟೀಕೆ ಕೇಳಿಬರುತ್ತದೆ. ಆರ್ಥಾತ್‌, ಯೋಜನೆಗಳು ಗ್ಯಾಂಟ್‌ ನಕ್ಷೆಯ ಮೂಲಕ ಸೂಕ್ತವಾಗಿ ಸಂವಹಿಸುವ ಕ್ಷಮತೆಗಿಂತಲೂ ಇನ್ನಷ್ಟು ಜಟಿಲವಾಗಿರುತ್ತವೆ.

ಗ್ಯಾಂಟ್‌ ನಕ್ಷೆಗಳು ಯೋಜನೆಯ ಮುಪ್ಪಟ್ಟು ನಿಬಂಧನೆಗಳ (ವೆಚ್ಚ, ಸಮಯ ಮತ್ತು ವ್ಯಾಪ್ತಿ) ಕೆಲ ಭಾಗವನ್ನು ಮಾತ್ರ ವಿವರಿಸುತ್ತದೆ, ಏಕೆಂದರೆ ಇವು ವೇಳಾಪಟ್ಟಿ ವ್ಯಸ್ಥಾಪನಾ ಕಾರ್ಯದ ಮೇಲೆ ಹೆಚ್ಚಾಗಿ ಕೇಂದ್ರೀಕೃತವಾಗಿವೆ. ಗ್ಯಾಂಟ್‌ ನಕ್ಷೆಗಳು ಯೋಜನೆಯ ಅಥವಾ ಅದಕ್ಕೆ ಸಂಬಂಧಿತ ಕಾರ್ಯಾಂಶಗಳ ಗಾತ್ರವನ್ನು ವಿವರಿಸದು. ಆದ್ದರಿಂದ ಯೋಜನೆಯು ನಿಗದಿತ ವೇಳೆಗಿಂದ ಎಷ್ಟರ ಮಟ್ಟಕ್ಕೆ ಹಿಂದುಳಿದಿದೆ ಎಂಬ ಮಾಹಿತಿಯನ್ನು ತಪ್ಪಾಗಿ ತಿಳಿಸುವ ಸಾಧ್ಯತೆ ಹೆಚ್ಚು. ಎರಡು ಯೋಜನೆಗಳು ಅಷ್ಟೇ ದಿನಗಳಲ್ಲಿ ಹಿಂದುಳಿದಿದ್ದರೆ, ಇವೆರಡರಲ್ಲಿ ದೊಡ್ಡ ಯೋಜನೆಯು ಸಂಪನ್ಮೂಲ ಬಳಕೆಯ ಮೇಲೆ ಹೆಚ್ಚಿನ ಪ್ರಭಾವ ಬೀರುವುದು ಸಹಜ. ಆದರೂ ಗ್ಯಾಂಟ್ ನಕ್ಷೆಯು ಈ ವ್ಯತ್ಯಾಸವನ್ನು ತಿಳಿಸುವುದಿಲ್ಲ.

ಯೋಜನೆ ವ್ಯವಸ್ಥಾಪನಾ ತಂತ್ರಾಂಶಗಳು ರೂಪುರೇಖೆ ಅವಲಂಬನೆಗಳನ್ನು ಚಟುವಟಿಕೆಗಳ ನಡುವಿನ ಗೀಟುಗಳಾಗಿ ತೋರಿಸಬಹುದಾದರೂ, ಈ ರೀತಿಯ ಅವಲಂಬನೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಲ್ಲಿ, ನಕ್ಷೆ ತುಂಬ ಗೋಜಲಾಗುತ್ತದೆ.

ಗ್ಯಾಂಟ್‌ ನಕ್ಷೆಯ ಅಡ್ಡಸರಳುಗಳು ನಿರ್ದಿಷ್ಟ ಎತ್ತರ ಹೊಂದಿರುವ ಕಾರಣ, ದೊಡ್ಡ ಯೋಜನೆಗಳ ಕಾರ್ಯಭಾರ ಮತ್ತು ಅಗತ್ಯ ಸಂಪನ್ಮೂಲಗಳ ಮಾಹಿತಿಯನ್ನು ತಪ್ಪಾಗಿ ಮೂಡಿಸುವ ಸಾಧ್ಯತೆಯಿದೆ. ಈ ಲೇಖನದಲ್ಲಿ ನೀಡಲಾದ ಉದಾಹರಣೆಯ ಪ್ರಕಾರ, ಚಟುವಟಿಕೆ E ಮತ್ತು G ಒಂದೇ ಗಾತ್ರವೆಂದು ಗೋಚರಿಸಬಹುದು, ಆದರೆ ನಿಜವೇನೆಂದರೆ ಅವುಗಳ ಪ್ರಮಾಣಗಳಲ್ಲಿ ವ್ಯತ್ಯಾಸವಿರುತ್ತದೆ. ಗ್ಯಾಂಟ್‌ ನಕ್ಷೆಯು ಯೋಜನೆಯ ಎಲ್ಲಾ ಚಟುವಟಿಕೆಗಳ ಕಾರ್ಯಭಾರಗಳನ್ನು ಒಂದೇ ಪ್ರಮಾಣದಲ್ಲಿ ಪರಿಗಣಿಸುತ್ತದೆಂಬ ಟೀಕೆಯುಂಟು. ವಾಸ್ತವದಲ್ಲಿ, ಹಲವು ಚಟುವಟಿಕೆಗಳು, ಇವುಗಳಲ್ಲಿ ಹೆಚ್ಚಾಗಿ ಸಾರಾಂಶಿಕ ಅಂಶಗಳು, ಮುನ್ನೆಲೆ ಮತ್ತು ಹಿನ್ನೆಲೆಯ ಕಾರ್ಯ ರೂಪುರೇಖೆ ಹೊಂದಿರುತ್ತವೆ, ಹಾಗಾಗಿ ಕಾರ್ಯ-ಸಂಪೂರ್ಣತೆಯ ಸೂಚಿಯನ್ನು ತಪ್ಪಾಗಿ ಸಂವಹಿಸಬಹುದು.

ಉದಾಹರಣೆ[ಬದಲಾಯಿಸಿ]

ಕೆಳಗಿನ ಉದಾಹರಣೆಯಲ್ಲಿ A ಇಂದ G ವರೆಗೆ ಗುರುತಿಸಲಾಗಿರುವ ಏಳು ಕಾರ್ಯಗಳಿವೆ. ಕೆಲವು ಕಾರ್ಯಗಳನ್ನು (A ಮತ್ತು B ) ಒಟ್ಟಿಗೆ ಮಾಡಬಹುದಾದರೆ, ಇನ್ನೂ ಕೆಲವು ಕಾರ್ಯಗಳು ಮೊದಲಿನ ಕಾರ್ಯ ಸಂಪೂರ್ಣಗೊಳ್ಳುವ ತನಕ ಆರಂಭವಾಗದು (A ಸಂಪೂರ್ಣವಾಗುವ ತನಕ C ಆರಂಭವಾಗದು). ಜೊತೆಗೆ, ಪ್ರತಿಯೊಂದು ಕಾರ್ಯವೂ ಸಹ ಮೂರು ಸಮಯ-ಅಂದಾಗುಳನ್ನು ಹೊಂದಿವೆ: ಆಶಾವಾದವುಳ್ಳ ಸಮಯ-ಅಂದಾಜು (O ), ಬಹುಶಃ ಅಥವಾ ಸಹಜ ಸಮಯ-ಅಂದಾಜು (M ) ಹಾಗೂ ನಿರಾಶಾವಾದವುಳ್ಳ ಸಮಯ-ಅಂದಜು (P ). ನಿರೀಕ್ಷಿತ ಸಮಯವನ್ನು  (TE ) (O + 4M + P ) ÷ 6 ಸೂತ್ರದ ಮೂಲಕ ಗಣಿಸಲಾಗುತ್ತದೆ.

ಚಟುವಟಿಕೆ ಪೂರ್ವವರ್ತಿ ಸಮಯ ಅಂದಾಜುಗಳು ನಿರೀಕ್ಷಿತ ಸಮಯ
ಆಶಾವಾದದ. (O) ಸಹಜ (M ) ನಿರಾಶಾವಾದದ (P )
A 2 4 6 4.00
B. 3 5 9 5.33
C A 4 5 7 5.17
D A 4 6 10 6.33
E. B , C 4 5 7 5.17
F D 3 4 8 4.50
G. E. 3 5 8 5.17

ಈ ಹಂತವು ಸಂಪೂರ್ಣಗೊಂಡ ನಂತರ ಗ್ಯಾಂಟ್‌ ನಕ್ಷೆ ಅಥವಾ ಜಾಲ-ರೇಖಾಚಿತ್ರವನ್ನು ರಚಿಸಬಹುದು.

ಮೈಕ್ರೊಸಾಫ್ಟ್‌ ಪ್ರಾಜೆಕ್ಟ್‌ (MSP) ಬಳಸಿ ರಚನೆಯಾದ ಗ್ಯಾಂಟ್‌ ನಕ್ಷೆ.ಗಮನಿಸಿ: (1) ನಿರ್ಣಾಯಕ ಹಂತವು ಕೆಂಪುಬಣ್ಣದಲ್ಲಿದೆ, (2) ನಿರ್ಣಾಯಕವಲ್ಲದ ಚಟುವಟಿಕೆಗಳನ್ನು ಜೋಡಿಸುವ ಕಪ್ಪು ರೇಖೆಗಳು ಸಡಿಲ ಹಂತವನ್ನು ಸೂಚಿಸುತ್ತವೆ, (3) ಶನಿವಾರ ಮತ್ತು ರವಿವಾರದ ದಿನಗಳು ವಾರದ ರಜೆಗಳಾಗಿರುವುದರಿಂದ, ಗ್ಯಾಂಟ್‌ ನಕ್ಷೆಯಲ್ಲಿ ವಾರಾಂತ್ಯ ದಿನಗಳ ಮೂಲಕ ಹಾದು ಹೋಗುವ ಕೆಲವು ಸರಳುಗಳು ಅತ್ಯುದ್ದವಾಗಿರುತ್ತವೆ.

ಇವನ್ನು ನೋಡಿ:[ಬದಲಾಯಿಸಿ]

  • Critical path method
  • ಯೋಜನೆ ನಿರ್ವಹಣೆಯ ತಂತ್ರಾಂಶಗಳ ಪಟ್ಟಿ
  • Program Evaluation and Review Technique (PERT)
  • Event chain diagram

ಉಲ್ಲೇಖಗಳು‌‌[ಬದಲಾಯಿಸಿ]

  1. H.L. Gantt, Work, Wages and Profit , published by The Engineering Magazine , New York, 1910; republished as Work, Wages and Profits , Easton, Pennsylvania, Hive Publishing Company, 1974, ISBN 0879600489.
  2. Peter W. G. Morris, The Management of Projects , Thomas Telford, 1994, ISBN 0727725939, Google Print, p.18
  3. Wallace Clark and Henry Gantt (1922) The Gantt chart, a working tool of management . New York, Ronald Press.
  4. Project Management Institute (2003). A Guide To The Project Management Body Of Knowledge (3rd ed. ed.). Project Management Institute. ISBN 1-932714-12-X

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]

  • ಎಡ್ವರ್ಡ್‌ ಟಫ್ಟ್‌ರವರ ಅಂತರಜಾಲತಾಣದಲ್ಲಿ ಗ್ಯಾಂಟ್‌ ನಕ್ಷೆಯ ವಿನ್ಯಾಸದ ಇತಿಮಿತಿಗಳ ಬಗ್ಗೆ ದೀರ್ಘಾವಧಿಯ ಚರ್ಚೆ