ವಿಷಯಕ್ಕೆ ಹೋಗು

ಗೌರ್ ಗೋಪಾಲ್ ದಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
His Grace

ಗೌರ್ ಗೋಪಾಲ್ ದಾಸ್
೨೦೧೭ ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೌರ್ ಗೋಪಾಲ್ ದಾಸ್
ವೈಯಕ್ತಿಕ
ಜನನ (1973-12-24) ೨೪ ಡಿಸೆಂಬರ್ ೧೯೭೩ (ವಯಸ್ಸು ೫೧)
ಧರ್ಮಹಿಂದೂ ಧರ್ಮ
ರಾಷ್ಟ್ರೀಯತೆಭಾರತೀಯ
ವಂಶಾವಳಿಬ್ರಹ್ಮ-ಮಧ್ವ-ಗೌಡೀಯ ಪಂಥ
Sectವೈಷ್ಣವ (ಗೌಡೀಯ ವೈಷ್ಣವ)
ಗಮನಾರ್ಹ ಕೆಲಸಗಳುಜೀವನದ ಅದ್ಭುತ ರಹಸ್ಯಗಳು: ನಿಮ್ಮ ಜೀವನದಲ್ಲಿ ಸಮತೋಲನ ಮತ್ತು ಉದ್ದೇಶವನ್ನು ಹೇಗೆ ಕಂಡುಹಿಡಿಯುವುದು , ಸನ್ಯಾಸಿಯ ಮಾರ್ಗ: ಶಾಂತಿ, ಉದ್ದೇಶ ಮತ್ತು ಶಾಶ್ವತ ಸಂತೋಷಕ್ಕೆ ನಾಲ್ಕು ಹಂತಗಳು
Alma materಕುಸ್ರೋ ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಪುಣೆ ಕಾಲೇಜ್ ಆಫ್ ಇಂಜಿನಿಯರಿಂಗ್, ಪುಣೆ
Other namesಗೌರ್ ಗೋಪಾಲ್ ಪ್ರಭು
Templeಇಸ್ಕಾನ್
ತತ್ವಶಾಸ್ತ್ರಅಚಿಂತ್ಯ ಭೇದ ಅಭೇದ
ಹಿರಿಯ ಪೋಸ್ಟಿಂಗ್
Teacherರಾಧಾನಾಥ ಸ್ವಾಮಿ
Period in office೧೯೯೬ –ಇಂದಿನವರೆಗೆ
Initiationದೀಕ್ಷೆ: ೧೯೯೬
Postಬ್ರಹ್ಮಚಾರಿ
Websitehttps://gaurgopaldas.com/

ಗೌರ್ ಗೋಪಾಲ್ ದಾಸ್ (ಐಎಎಸ್‍ಟಿ: ಗೌರ-ಗೋಪಾಲ ದಾಸ) ಒಬ್ಬ ಭಾರತೀಯ ಸನ್ಯಾಸಿ, ಜೀವನಶೈಲಿ ತರಬೇತುದಾರ, ಪ್ರೇರಕ ಭಾಷಣಕಾರ ಮತ್ತು ಮಾಜಿ ಎಲೆಕ್ಟ್ರಿಕಲ್ ಇಂಜಿನಿಯರ್. ಅವರು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಅಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.[]

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಗೌರ್ ಗೋಪಾಲ್ ದಾಸ್ ಅವರು ಭಾರತದ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ವಾಂಬೋರಿ ಪಟ್ಟಣದಲ್ಲಿ ಜನಿಸಿದರು. ಅಂತೆಯೇ ಅವರು ಪುಣೆಯ ಕುಸ್ರೊ ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮತ್ತು ಪುಣೆಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಪದವಿ ಪಡೆದಿದ್ದಾರೆ. []

ಪ್ರಶಸ್ತಿಗಳು ಮತ್ತು ಮನ್ನಣೆಗಳು

[ಬದಲಾಯಿಸಿ]
  • ಫೆಬ್ರವರಿ ೨೦೧೬ ರಲ್ಲಿ, ರೋಟರಿ ಇಂಟರ್ನ್ಯಾಷನಲ್ “ಸೂಪರ್ ಅಚೀವರ್ ಅವಾರ್ಡ್ '೧೬” ರೋಟರಿ ಕ್ಲಬ್, ಮುಂಬೈ.
  • ಜೂನ್ ೨೦೧೭ ರಲ್ಲಿ ಯೂಟ್ಯೂಬ್‌ನಿಂದ ಸಿಲ್ವರ್ ಕ್ರಿಯೇಟರ್ ಪ್ರಶಸ್ತಿ.
  •   ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ದನ್ವೀರ್ ಕರ್ಣ ಪ್ರಶಸ್ತಿ .
  •   ಪುಣೆಯ ಎಂಐಟಿ ವಿಶ್ವ ಶಾಂತಿ ವಿಶ್ವವಿದ್ಯಾಲಯದ ಆದರ್ಶ ಯುವ ಆಧ್ಯಾತ್ಮಿಕ ಗುರು ಪ್ರಶಸ್ತಿ .
  •   ಅಕ್ಟೋಬರ್ ೨೦೧೮ ರಲ್ಲಿ ಯೂಟ್ಯೂಬ್ನಿಂದ ಯೂಟ್ಯೂಬ್ ಗೋಲ್ಡ್ ಪ್ಲೇಬಟನ್ .
  •   ಅಕ್ಟೋಬರ್ ೨೦೧೮ ರಲ್ಲಿ ಭಾರತ್ ನಿರ್ಮನ್ ಫೌಂಡೇಶನ್ ನೀಡಿದ ಗಾಂಧಿ ಶಾಂತಿ ಪ್ರಶಸ್ತಿ .
  •   ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಿಂದ ಡಾಕ್ಟರ್ಸ್ ಆಫ್ ಲೆಟರ್ಸ್ ( ಡಿಲಿಟ್ ) .
  •   ೨೦೧೮-೨೦೧೯ ರಲ್ಲಿ ಬ್ರ್ಯಾಂಡ್ ವಿಷನ್ ಅವರಿಂದ ಅಸಾಧಾರಣ-ಆಧ್ಯಾತ್ಮಿಕ ನಾಯಕ ಪ್ರಶಸ್ತಿ .
  •   ಫೆಬ್ರವರಿ ೨೦೧೯ ರಲ್ಲಿ ಭಾರತದ ಕೈಜೆನ್ ಇನ್ಸ್ಟಿಟ್ಯೂಟ್ ನೀಡಿದ ಐಎಂಎಐ ಪ್ರಶಸ್ತಿ
  •   ಏಪ್ರಿಲ್ ೨೦೧೯ ರಲ್ಲಿ ಶಿರೋಮಣಿ ಸಂಸ್ಥೆಯಿಂದ ಭಾರತ್ ಶಿರೋಮಣಿ ಪ್ರಶಸ್ತಿ .
  •   ಮೇ ೨೦೧೯ ರಲ್ಲಿ ಎನ್‌ಆರ್‌ಐ ವೆಲ್ಫೇರ್ ಸೊಸೈಟಿಯಿಂದ ಮಹಾತ್ಮ ಗಾಂಧಿ ನಾಯಕತ್ವ ಪ್ರಶಸ್ತಿ.
  • ಫೆಬ್ರವರಿ ೨೦೨೩ ರಲ್ಲಿ, ಗೌರ್ ಗೋಪಾಲ್ ದಾಸ್ ಅವರು ಬರೆದಿರುವ "ಎನರ್ಜೈಸ್ ಯುವರ್ ಮೈಂಡ್: ಎ ಮಾಂಕ್ಸ್ ಗೈಡ್ ಟು ಮೈಂಡ್‌ಫುಲ್ ಲಿವಿಂಗ್" ಎಂಬ ಪುಸ್ತಕಕ್ಕೆ ಅವರಿಗೆ ಏಷ್ಯಾದ ಪ್ರತಿಷ್ಠಿತ "ಗೋಲ್ಡನ್ ಬುಕ್ ಅವಾರ್ಡ್ಸ್" ದೊರಕಿತು. [][]

 

ವೃತ್ತಿ

[ಬದಲಾಯಿಸಿ]

ಅವರು ೧೯೯೬ ರಲ್ಲಿ, ಸನ್ಯಾಸಿಯಾಗುವ ಮೊದಲು ಹೆವ್ಲೆಟ್-ಪ್ಯಾಕರ್ಡ್ ಎಂಬ ಕಂಪನಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.[]

ಕೆಲವು ವರ್ಷಗಳ ನಂತರ, ಅವರು ತಮ್ಮ ಕೆಲಸವನ್ನು ತೊರೆದರು ಮತ್ತು ಸನ್ಯಾಸಿಯಾಗಿ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಗೆ ಸೇರಿದರು. ಅಲ್ಲಿ ಅವರಿಗೆ "ಗೌರ್ ಗೋಪಾಲ್ ದಾಸ್" ಎಂಬ ಹೆಸರನ್ನು ನೀಡಲಾಯಿತು.[] ನಂತರ ಅವರು ಇಪ್ಪತ್ತೆರಡು ವರ್ಷಗಳ ಕಾಲ ಅಲ್ಲಿಯೇ ಇದ್ದು, ಪುರಾತನ ತತ್ತ್ವಶಾಸ್ತ್ರ ಮತ್ತು ಸಮಕಾಲೀನ ಮನೋವಿಜ್ಞಾನವನ್ನು ಕಲಿತು, ಜೀವನ ತರಬೇತುದಾರರಾಗುತ್ತಾರೆ.[]

ಅಂದಿನಿಂದ ಇಂದಿನವರೆಗೊ ಅಂದರೆ ಅವರು ೨ ದಶಕಗಳಿಂದ ಭಾರತ ಮತ್ತು ವಿದೇಶಗಳಲ್ಲಿನ ವಿವಿಧ ಶೈಕ್ಷಣಿಕ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಮಾತನಾಡುತ್ತಿದ್ದಾರೆ. ಅಲ್ಲದೆ ವಿಶ್ವಸಂಸ್ಥೆಯಲ್ಲಿ ಮತ್ತು ಮೂರು ಬಾರಿ ಬ್ರಿಟಿಷ್ ಸಂಸತ್ತಿನಲ್ಲಿ ಮಾತನಾಡಿದ್ದಾರೆ. ಅಂತೆಯೇ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸಾಮಾಜಿಕ ಉಪಕ್ರಮಗಳಿಗೆ ನಿಧಿ ಸಂಗ್ರಹಿಸಲು ಅವರು ಅನೇಕ ದತ್ತಿ ಕಾರ್ಯಕ್ರಮಗಳಲ್ಲಿ ಮಾತನಾಡಿದ್ದರು.[]

೨೦೧೮ ರಲ್ಲಿ, ಅವರು ಲೈಫ್ಸ್ ಅಮೇಜಿಂಗ್ ಸೀಕ್ರೆಟ್ಸ್ ಎಂಬ ಪುಸ್ತಕವನ್ನು ಪ್ರಕಟಿಸಿದರು ಮತ್ತು ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ನಿಂದ ಗೌರವ ಡಾಕ್ಟರೇಟ್ ಅನ್ನು ಪಡೆದರು.[] ಒಟ್ಟಾರೆಯಾಗಿ ಅವರು ಸಾಮಾಜಿಕ ಮಾಧ್ಯಮದಾದ್ಯಂತ ೧೭ ದಶಲಕ್ಷಕ್ಕಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.[೧೦]


ಪ್ರಕಟಿತ ಪುಸ್ತಕಗಳು

[ಬದಲಾಯಿಸಿ]
  • ೧ ಜನವರಿ ೨೦೦೩ - ಪುನರುಜ್ಜೀವನ [೧೧]
  • ೮ ಅಕ್ಟೋಬರ್ ೨೦೧೮ - ಜೀವನದ ಅದ್ಭುತ ರಹಸ್ಯಗಳು: ನಿಮ್ಮ ಜೀವನದಲ್ಲಿ ಸಮತೋಲನ ಮತ್ತು ಉದ್ದೇಶವನ್ನು ಹೇಗೆ ಕಂಡುಹಿಡಿಯುವುದು.[೧೨]
  • ೬ ಫೆಬ್ರವರಿ ೨೦೨೦ - ಸನ್ಯಾಸಿಗಳ ಮಾರ್ಗ: ಶಾಂತಿ, ಉದ್ದೇಶ ಮತ್ತು ಶಾಶ್ವತ ಸಂತೋಷಕ್ಕೆ ನಾಲ್ಕು ಹಂತಗಳು.[೧೩]
  • ೧೭ ಜನವರಿ ೨೦೨೩ - ಎನರ್ಜೈಸ್ ಯುವರ್ ಮೈಂಡ್: ಎ ಮಾಂಕ್ಸ್ ಗೈಡ್ ಟು ಮೈಂಡ್‌ಫುಲ್ ಲಿವಿಂಗ್.[೧೪]

ಉಲ್ಲೇಖಗಳು

[ಬದಲಾಯಿಸಿ]
  1. Patwa, Priyadarshini (24 October 2019). "Gaur Gopal Das Talks About 3 Support System Entrepreneurs Need To Beat The Odds". Entrepreneur (in ಇಂಗ್ಲಿಷ್). Retrieved 17 March 2020.
  2. "The monk who HAM-ed it up". www.thehindubusinessline.com (in ಇಂಗ್ಲಿಷ್). 2017-01-18. Retrieved 2023-05-09.
  3. "Golden Book Awards 2023: Ashneer Grover, Namita Thapar, Kamlesh Patel – A look at the winners". cnbctv18.com (in ಇಂಗ್ಲಿಷ್). 2023-02-03. Retrieved 2023-05-09.
  4. "Asias most prestigious book award golden book awards announces winners 2023". Lokmat.
  5. "The monk who HAM-ed it up". The Hindu. Retrieved 18 January 2017.
  6. "Know Gaur Gopal Das, the spiritual Guru of billionaire Yashovardhan Birla, the head of the Yash Birla Group". Financialexpress (in ಇಂಗ್ಲಿಷ್). 2023-06-12. Retrieved 2024-01-07.
  7. "Monk and lifestyle coach Gaur Gopal Das to release his first book this month". The Times of India. 2018-09-26. Retrieved 2023-05-09.
  8. "Speaker Profile : Gaur Gopal Das - London Speaker Bureau India". London Speaker Bureau (in Indian English). Retrieved 2023-05-09.
  9. "Odisha Governor Enlightens Audience Through His Oratorical Brilliance". KIIT University. 10 November 2018. Retrieved 10 November 2018.
  10. "Watch | The Hindu Lit for Life Dialogue - Live your best life". The Hindu (in Indian English). 2023-02-10. Retrieved 2023-05-09.
  11. "Best Gaur Gopal Das Books: Find the Ultimate Inner Peace and Personal Growth (2023)". The Economic Times. 2023-04-28. Archived from the original on 2023-05-09. Retrieved 2023-05-09.
  12. https://books.google.co.in/books?id=f7mjDwAAQBAJ&redir_esc=y
  13. https://books.google.co.in/books?id=-dPRxQEACAAJ&redir_esc=y
  14. https://books.google.co.in/books?id=7laIEAAAQBAJ&redir_esc=y


ಬಾಹ್ಯಕೊಂಡಿಗಳು

[ಬದಲಾಯಿಸಿ]