ವಿಷಯಕ್ಕೆ ಹೋಗು

ಗೋವಿಂದಗಢ ಅರಮನೆ

ನಿರ್ದೇಶಾಂಕಗಳು: 24°22′16″N 81°17′38.25″E / 24.37111°N 81.2939583°E / 24.37111; 81.2939583
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

 24°22′16″N 81°17′38.25″E / 24.37111°N 81.2939583°E / 24.37111; 81.2939583

೧೮೭೦ ರಲ್ಲಿ ಗೋವಿಂದಗಢ ಅರಮನೆ

ಗೋವಿಂದಗಢ ಅರಮನೆಯನ್ನು ಗೋವಿಂದಗಢ ಕೋಟೆ ಎಂದೂ ಕರೆಯುತ್ತಾರೆ. ಇದು ಭಾರತದ ಮಧ್ಯಪ್ರದೇಶದ ಗೋವಿಂದಗಢದಲ್ಲಿರುವ ಒಂದು ಅರಮನೆಯಾಗಿದೆ . ೧೯ ನೇ ಶತಮಾನದಲ್ಲಿಈ ಕೋಟೆಯನ್ನು ರೇವಾದ ದೊರೆ ನಿರ್ಮಿಸಿದನು. ಈ ಕೋಟೆಯು ಗೋವಿಂದಗಢ ಸರೋವರದ ತೀರದಲ್ಲಿನ ರಾಜಮನೆತನದ ನಿವಾಸವಾಗಿತ್ತು.

ವಿವರಣೆ

[ಬದಲಾಯಿಸಿ]
೨೦೧೮ ರಲ್ಲಿ ಕೋಟೆಯ ಆಂತರಿಕ ವಿಭಾಗ

ಗೋವಿಂದಗಢ ಕೋಟೆಯನ್ನು ೧೮೫೩ ರಲ್ಲಿ ರೇವಾ ಮತ್ತು ಗೋವಿಂದಗಢ ಪ್ರಾಂತ್ಯದ ಆಡಳಿತಗಾರ ರಾಜಾ ರಘುರಾಜ್ ಸಿಂಗ್ ಎಂಬವನು ನಿರ್ಮಿಸಿದನು. ಇವನು ಕೋಟೆಯಂತಹ ರಚನೆಯನ್ನು ಅರಮನೆಯಾಗಿ ಬಳಸುತ್ತಿದ್ದನು. [] ಅರಮನೆಯ ಆವರಣವು ಹಲವಾರು ಕಟ್ಟಡಗಳು ಮತ್ತು ದೇವಾಲಯಗಳನ್ನು ಒಳಗೊಂಡಿತ್ತು. ಮೊದಲು ಭಾರತದಲ್ಲಿ ಬಿಳಿ ಹುಲಿ ಎಂದು ಕರೆಸಿಕೊಂಡಿದ್ದ ಮೋಹನ್ ಎಂಬವನನ್ನು ಈ ಕೋಟೆಯಲ್ಲಿ ಇರಿಸಲಾಗಿತ್ತು. [] [] ಅರಮನೆಯು ಸುಮಾರು ೧ ಶತಮಾನದವರೆಗೆ ಬಳಕೆಯಲ್ಲಿತ್ತು. ಆದರೆ ಭಾರತೀಯ ಸ್ವಾತಂತ್ರ್ಯ ಮತ್ತು ನಂತರದ ರಾಜಪ್ರಭುತ್ವದ ರೇವಾ ರಾಜ್ಯದ ಅವನತಿಯು ಕೋಟೆಯನ್ನು ಖಾಲಿ ಮಾಡಲು ಕಾರಣವಾಯಿತು. ನಂತರ ಕಟ್ಟಡದಲ್ಲಿ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಯಿತು. []

೨೦೧೮ ರಲ್ಲಿಈ ಕೋಟೆಯನ್ನು ನವೀಕರಿಸಿ ಐಷಾರಾಮಿ ಹೋಟೆಲ್ ಆಗಿ ಪರಿವರ್ತಿಸಲಾಗುವುದೆಂದು ಘೋಷಿಸಲಾಯಿತು. [] []

ಹೆಚ್ಚಿನ ಓದುವಿಕೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "ATA - Projects Details". www.aishwaryatipnisarchitects.com. Retrieved 2020-06-19.
  2. Chowdhary, Charu (2018-12-20). "Latest travel Articles & blogs". India News, Breaking News, Entertainment News | India.com (in ಇಂಗ್ಲಿಷ್). Retrieved 2020-06-19.
  3. "World's first white tiger sanctuary opens in India in bid to protect species". ITV News (in ಇಂಗ್ಲಿಷ್). Retrieved 2020-06-19.
  4. ೪.೦ ೪.೧ "Govindgarh Fort, Rewa". www.nativeplanet.com (in ಇಂಗ್ಲಿಷ್). Retrieved 2020-06-19.