ಗೋಲ್ಪಾರಾ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಅಸ್ಸಾಂ ರಾಜ್ಯದ ಒಂದು ಜಿಲ್ಲೆ; ಅದೇ ಹೆಸರಿನ ಒಂದು ಪಟ್ಟಣ. ಬ್ರಹ್ಮಪುತ್ರಾ ನದಿಯ ಎಡಬಲ ದಂಡೆಗಳ ಮೇಲೆ ಹಬ್ಬಿದೆ. ವಿಸ್ತೀರ್ಣ ೧.೮೨೪ ಚ.ಕಿಮೀ. ಜನಸಂಖ್ಯೆ ೧೦,೮೦,೯೫೯ (೨೦೧೧). ಈ ಪ್ರದೇಶದಲ್ಲಿ ಉಸುಕು ಭೂಮಿ ಇರುವುದರಿಂದ ಅಸ್ಸಾಮಿನ ಉಳಿದ ಭಾಗಗಳಿಗಿಂತ ಇಲ್ಲಿ ಚಳಿ ಕಡಿಮೆ, ಸೆಕೆ ಹೆಚ್ಚು. ಪೂರ್ವದ್ವಾರ ಮತ್ತು ತರಾಯೀ ಭಾಗಗಳು ಮಲೇರಿಯಭೂಯಿಷ್ಠ. ಉಳಿದ ಕಡೆಗಳಲ್ಲಿ ೮೦”-೯೦” ಮಳೆಯಾಗುತ್ತದೆ. ರಾಜ್ಯದ ಉಳಿದ ಎಲ್ಲ ಭಾಗಗಳಿಗಿಂತ ಇಲ್ಲಿ ಭೂಕಂಪನಗಳ ಸಂಭವ ಹೆಚ್ಚು. ಈ ಭಯದಿಂದಾಗಿ ಇಲ್ಲಿ ಬಿದಿರಿನ ಬೊಂಬುಗಳಿಂದ ಕಟ್ಟಿದ ಮನೆಗಳೇ ಹೆಚ್ಚು. ಶೇ. ೮೪ ರಷ್ಟು ಜನರ ಉದ್ಯೋಗ ಕೃಷಿ.
ಗೋಲ್ಪಾರಾ ಪಟ್ಟಣ ಹಿಂದೆ ಈಸ್ಟ್ ಇಂಡಿಯ ಕಂಪೆನಿಯ ಅಧಿಕಾರ ಕಕ್ಷೆಯಲ್ಲಿತ್ತು. ಇಲ್ಲಿ ನೆಲೆಯೂರಿದ ಇಂಗ್ಲಿಷರು ಬಂಗಾಲದ ಬಹುತೇಕ ವ್ಯಾಪಾರವನ್ನು ಬಲವಂತದಿಂದ ತಮ್ಮ ಕಡೆಗೆ ಸೆಳೆದುಕೊಂಡರು. ೧೮೭೮ ರಲ್ಲಿ ಇಲ್ಲಿ ಪೌರ ಸಮಿತಿಯ ಸ್ಥಾಪನೆಯಾಯಿತು. ಇಲ್ಲಿ ಟೀ, ರಬ್ಬರ್, ಹತ್ತಿ, ಎಳ್ಳು, ಮರ, ಸೆಣಬು ಮುಂತಾದವುಗಳ ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ಇಲ್ಲಿಯ ವರೆಗೆ ಸಣ್ಣ ಹಡಗುಗಳು ಬಂದುಹೋಗುತ್ತವೆ. ೨೦೦೬ ಯರಲ್ಲಿ ಭಾರತ ಸರ್ಕಾರ ಈ ಜಿಲ್ಲೆಯನ್ನು ದೇಶದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲೊಂದೆಂದು ಪರಿಗಣಿಸಿ ಅನುದಾನ ನೀಡುತ್ತಿದೆ.