ಗೋಪಾಲಕೃಷ್ಣ ಗಾಂಧಿ
ಗೋಪಾಲ ಕೃಷ್ಣ ಗಾಂಧಿ, [೧] ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಮೊಮ್ಮಗ. ಐ.ಎ.ಎಸ್. ಅದವೀಧರರಾದ ಅವರು, ಭಾರತದ ಆಡಳಿತ ಸೇವೆಯಲ್ಲಿ ಬಹಳ ಮಹತ್ವದ ಸ್ಥಾನವನ್ನು ಹೊಂದಿದ್ದರು,[೨] ಹಾಗೂ ಹಲವಾರು ರಾಷ್ಟ್ರಗಳಲ್ಲಿ ಭಾರತದ ರಾಯಭಾರಿಯಾಗಿ ಯಶಸ್ವಿಯಾಗಿದ್ದರು. ಇದಲ್ಲದೆ, ಗಾಂಧಿಯವರು ಕಾದಂಬರಿಕಾರ, ನಾಟಕಕಾರ, ಅಂಕಣಕಾರ, [೩] ಹಾಗೂ ಪ್ರಭಾವಿಮಾತುಗಾರರೆಂದು ಹೆಸರಾಗಿದ್ದಾರೆ. ಕಲೆ, ನಾಟ್ಯ, ಸಂಗೀತಗಳ ಬಗ್ಗೆ ಹೆಚ್ಚು ಒಲವಿದೆ.
ಪ್ರಾರಂಭಿಕ ಜೀವನ
[ಬದಲಾಯಿಸಿ]ಜನನ
[ಬದಲಾಯಿಸಿ]ತಂದೆಯ ಕಡೆಯಿಂದ ಮಹಾತ್ಮಾ ಗಾಂಧಿಯವರ ಮೊಮ್ಮೊಗ. ತಾಯಿಯವರ ಕಡೆಯಿಂದ ಸಿ. ರಾಜಾಜಿಯವರ ಮೊಮ್ಮೊಗ.ದೇವದಾಸ್ ಗಾಂಧಿ, ಹಾಗೂ ಲಕ್ಷ್ಮೀರಾಜಗೋಪಾಲಾಚಾರಿಯವರ ಮಗನಾಗಿ ೨೨, ಏಪ್ರಿಲ್, ೧೯೪೫ ರಲ್ಲಿ ಜನಿಸಿದರು. ಇವರ ಇತರ ಸೋದರಿ,ಸೋದರರು.
- ತಾರಾ ಗಾಂಧಿ (ತಾರಾ ಭಟ್ಟಾಚಾರ್ಜಿ)
- ರಾಜಮೋಹನ್ ಗಾಂಧಿ,
- ರಾಮಚಂದ್ರ ಗಾಂಧಿ,
ಗೋಪಾಲಕೃಷ್ಣ ಗಾಂಧಿಯವರು, ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ದೆಹಲಿ ವಿಶ್ವವಿದ್ಯಾಲಯದ ಸ್ಟೀಫನ್ ಕಾಲೇಜಿನಿಂದ ಗಳಿಸಿದರು.
ಮದುವೆ
[ಬದಲಾಯಿಸಿ]ಗೋಪಾಲಕೃಷ್ಣಗಾಂಧಿಯವರು ತಾರಾ ರನ್ನು ವಿವಾಹವಾದರು. ಈ ದಂಪತಿಗಳಿಗೆ, ದಿವ್ಯಾ, ಹಾಗೂ ಅಮೃತ ಎಂಬ ಇಬ್ಬರು ಹೆಣ್ಣುಮಕ್ಕಳು.
ವೃತ್ತಿಜೀವನ
[ಬದಲಾಯಿಸಿ]- ೧೯೬೮ ರಲ್ಲಿ ಐ.ಎ ಎಸ್ ಪದವಿ ಗಳಿಸಿ, ತಮಿಳುನಾಡಿನಲ್ಲಿ ೧೯೮೫ ರ ವರೆಗೆ, ಉಪ ರಾಷ್ಟ್ರಪತಿಗಳಿಗೆ ಕಾರ್ಯದರ್ಶಿಯಾಗಿ (೧೯೮೫-೮೭) ಜಂಟಿ ಕಾರ್ಯದರ್ಶಿಯಾಗಿ ರಾಷ್ಟ್ರಪತಿಗಳಿಗೆ (೧೯೮೭-೧೯೯೨)
- ೧೯೯೨ ರಲ್ಲಿ ಮಿನಿಸ್ಟರ್ (ಸಂಸ್ಕೃತಿ) ಆಗಿ ಹೈ ಕಮಿಷನರ್ ಆಫ್ ಇಂಡಿಯಾ ಆಗಿ ಯು.ಕೆ ನಿರ್ದೇಶಕ, ದಿ ನೆಹರು ಸೇಂಟರ್ ಲಂಡನ್, ಯುಕೆ ಇದರ ಬಳಿಕ ಹಲವಾರು ರಾಜತಾಂತ್ರಿಕ ಹಾಗೂ ಆಡಳಿತ ವಿಭಾಗಗಳಲ್ಲಿ ತಮ್ಮ ಜೀವನದುದ್ದಕ್ಕೂ ತಮ್ಮನ್ನು ತೊಡಗಿಸಿಕೊಂಡರು
- ೧೯೯೬ ರಲ್ಲಿ ಭಾರತದ ರಾಷ್ಟ್ರಾಧ್ಯಕ್ಷರಿಗೆ ದಕ್ಷಿಣ ಆಫ್ರಿಕ ಹಾಗೂ ಲೆಸೋಥೋ (Lesotho) ದ ಕಾರ್ಯದರ್ಶಿಯಾಗಿ,
- ೧೯೯೭-೨೦೦೦ ಪ್ರೆಸ್ ಸೆಕ್ರೆಟರಿ,
- ೨೦೦೦ ಶ್ರೀಲಂಕಾದಲ್ಲಿ ಭಾರತದ ಹೈ ಕಮಿಷನರ್
- ೨೦೦೨ ರಲ್ಲಿ ನಾರ್ವೆ ಮತ್ತು ಐಸ್ ಲ್ಯಾಂಡ್ ದೇಶದಲ್ಲಿ ಭಾರತದ ರಾಯಭಾರಿಯಾಗಿ,
- ೨೦೦೩ ರಲ್ಲಿ ಐ ಎ ಎಸ್ ಪದವಿಯಿಂದ ನಿವೃತ್ತಿಹೊಂದಿದರು.
- ಪಚ್ಚಿಮ ಬಂಗಾಳದ ಗವರ್ನರ್ ಆಗಿ ಡಿಸೆಂಬರ್ ೧೪, ೨೦೦೪ ರಿಂದ ವೀರೇನ್ ಜೆ. ಶಾ ರವರ ಕಾರ್ಯಾವಧಿ ಮುಗಿದ ಬಳಿಕ,
- ದೇವಾನಂದ ಕೊನ್ವಾರ್ (ತ್ರಿಪುರ ರಾಜ್ಯದ ಗವರ್ನರ್ ಆಗಿದ್ದರು ) ಪಶ್ಚಿಮ ಬಂಗಾಳದ ಹೆಚ್ಚುವರಿ ಕಾರ್ಯದರ್ಶಿಯಾಗಿ
- ೨೦೦೬ ನ ಕೆಲವು ತಿಂಗಳವರೆಗೆ ಬಿಹಾರದ ಗವರ್ನರ್ ಆಗಿ ಸೇವೆ ಸಲ್ಲಿಸಿದರು.
- ಚೆನ್ನೈ ನ ಕಲಾಕ್ಷೇತ್ರ ಫೌಂಡೇಶನ್, ನ ಚೇರ್ಮನ್ ಆಗಿ ಡಿಸೆಂಬರ್, ೨೦೧೧ ರಿಂದ ಮೇ ೨೦೧೪ ರ ತನಕ,
- ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ ಸಂಸ್ಥೆಯಲ್ಲಿ ಚೇರ್ಮನ್ ಮತ್ತು ಆಡಳಿತ ಮಂಡಲಿಯ ಅಧ್ಯಕ್ಷನಾಗಿ, ೫ ಮಾರ್ಚ್, ೨೦೧೨ ಹಾಗೂ ಮೇ ೨೦೧೪ ರ ತನಕ ಸೇವೆಸಲ್ಲಿಸಿದರು. [೪],
- ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ, ರಾಜಕೀಯವಿಜ್ಞಾನ, ಭಾರತೀಯ ನಾಗರೀಕತೆ ವಿಷಯಗಳ ಪ್ರಾಧ್ಯಾಪಕರಾಗಿ ಕೆಲಸಮಾಡಿದರು.
ವಿವಾದಗಳ ಸುರುಳಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು
[ಬದಲಾಯಿಸಿ]- ಸಿ.ಬಿ.ಐ.ಆಯೋಜಿಸಿದ ೧೫ನೆಯ ಡಿ.ಪಿ.ಕೊಹ್ಲಿ ಸ್ಮಾರಕ ಭಾಷಣ ಮಾಲೆಯಲ್ಲಿ "Eclipse at Noon: Shadows Over India's Conscience" ಎಂಬ ವಿಷಯದಮೇಲೆ ೩೦೦೦ ಜನ ಆಹ್ವಾನಿತ ಶ್ರೋತೃಗಳ ಮುಂದೆ ಮಾತನಾಡುತ್ತಾ ಗೋಪಾಲಕೃಷ್ಣ ಗಾಂಧಿಯವರು ಹೇಳಿದ ಮಾತುಗಳು ಹೀಗಿವೆ :
"[The CBI] is seen as the government's hatchet, rather than honesty's ally. It is often called DDT — meaning not the dichloro diphenyl trichloroethane, the colourless, tasteless, odourless insecticide it should be, but the department of dirty tricks."
- ೧೯೯೩ರಲ್ಲಿ ಮುಂಬಯಿನಗರದಲ್ಲಿ ಜರುಗಿದ 'ಭಯಂಕರ ಸರಣಿ-ಬಾಂಬ್ ಸ್ಫೋಟದಲ್ಲಿ, ಸುಪ್ರೀಂ ಕೋರ್ಟ್ ಲ್ಲಿ ತಪ್ಪಿತಸ್ಥನೆಂದು ತೀರ್ಪುಪಡೆದ "ಯಾಕುಬ್ ಮೆಮನ್", 'ರಾಷ್ಟ್ರಪತಿಯವರಿಗೆ ಕ್ಷಮಾ ಯಾಚನೆ ಮಾಡಲು ಅರ್ಜಿ' ಸಲ್ಲಿಸಿದ್ದನು. ಗೋಪಾಲಕೃಷ್ಣ ಗಾಂಧಿಯವರು ವರ್ಷ.೨೦೧೫ ರಲ್ಲಿ, ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿಯವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಮರಣದಂಡನೆಯ ತೀರ್ಪನ್ನು ಮರು ಪರಿಶೀಲಿಸಲು ಮನವಿಮಾಡಿದ್ದರು. [೫]
ಸಾಹಿತ್ಯ ಕೃಷಿ
[ಬದಲಾಯಿಸಿ]ಹಿಂದಿಭಾಷೆಯಲ್ಲಿ :
- Saranam, translated as Refuge in English
- Dara Shukoh, a play in verse
- Koi Acchha Sa Larka (translation into Hindustani of Vikram Seth's A Suitable Boy)
'ಇಂಗ್ಲಿಷ್ ಭಾಷೆಯಲ್ಲಿ :
- Gandhi and South Africa
- Gandhi and Sri Lanka
- Nehru and Sri Lanka
- India House, Colombo: Portrait of a Residence
- Gandhi Is Gone. Who Will Guide Us Now? (edited)
- A Frank Friendship/ Gandhi and Bengal: A Descriptive Chronology (compiled and edited).
ಇವನ್ನೂ ಓದಿ
[ಬದಲಾಯಿಸಿ]- List_of_translators_into_English[ಶಾಶ್ವತವಾಗಿ ಮಡಿದ ಕೊಂಡಿ]
ಉಲ್ಲೇಖಗಳು
[ಬದಲಾಯಿಸಿ]- ↑ ವಿಜಯ ಕರ್ನಾಟಕ,ಜುಲೈ,೧೨, ೨೦೧೭, ಗೋಪಾಲಕೃಷ್ಣ ಗಾಂಧಿ ಸಂಕ್ಷಿಪ್ತ ಪರಿಚಯ[ಶಾಶ್ವತವಾಗಿ ಮಡಿದ ಕೊಂಡಿ]
- ↑ At-farewell-Gopalkrishna-Gandhi-calls-for-change-in-mindsetsHindu, DECEMBER 14, 2009,
- ↑ thewire.in, gopalkrishna-gandhi
- ↑ Chairman's profile,IIAS, Rashtrapati Nivas, Shimla 171005,Indian institute of advanced study,
- ↑ Pardoning Yakub Memon will be a tribute to Dr. Kalam: Gopalkrishna Gandhi, Hindu, July,29,2015
ಬಾಹ್ಯಸಂಪರ್ಕಗಳು
[ಬದಲಾಯಿಸಿ]- thewire.in All stories[ಶಾಶ್ವತವಾಗಿ ಮಡಿದ ಕೊಂಡಿ]