ವಿಷಯಕ್ಕೆ ಹೋಗು

ಗೊದಮೊಟ್ಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೊದಮೊಟ್ಟೆ ಎಂದರೆ ಉಭಯಚರಗಳಾದ ಕಪ್ಪೆಗಳ ಲಾರ್ವಾ ಹಂತದ ಬಾಲವುಳ್ಳ ಜಲಚರ ಮರಿಗಳಾಗಿದ್ದು ತಮ್ಮ ಕಿವಿರುಗಳ ಮೂಲಕ ಉಸಿರಾಡುತ್ತವೆ [].

ಗೊದಮೊಟ್ಟೆಗಳು


ವಿವರಣೆ

[ಬದಲಾಯಿಸಿ]

ಎಲ್ಲಾ ಉಭಯಚರಗಳ ಜೀವನ ಚಕ್ರವು ಭ್ರೂಣ ಮತ್ತು ವಯಸ್ಕರ ನಡುವೆ ಮಧ್ಯಂತರವಾಗಿರುವ ಲಾರ್ವಾ ಹಂತವನ್ನು ಒಳಗೊಂಡಿರುತ್ತದೆ. ಬಹುತೇಕ ಕಪ್ಪೆಗಳ ಗೊದಮೊಟ್ಟೆಗಳು ಸಸ್ಯಹಾರಿಗಳಾಗಿರುತ್ತವೆ. ಅವು ಮೃದುವಾದ ಪಾಚಿ, ಕೊಳೆಯುತ್ತಿರುವ ಸಸ್ಯವನ್ನು ತಿನ್ನುತ್ತವೆ[]. ಕಪ್ಪೆಗಳ ಗೊದಮೊಟ್ಟೆಗಳು ಸಾಮಾನ್ಯವಾಗಿ ಗೋಳಾಕಾರದಲ್ಲಿರುತ್ತವೆ, ಪಾರ್ಶ್ವವಾಗಿ ಸಂಕುಚಿತ ಬಾಲ ಮತ್ತು ಆಂತರಿಕ ಕಿವಿರುಗಳು ಇರುತ್ತವೆ. ಮೊದಲು ಮೊಟ್ಟೆಯೊಡೆದಾಗ, ಕಪ್ಪೆಗಳ ಗೊದಮೊಟ್ಟೆಗಳು ಬಾಹ್ಯ ಕಿವಿರುಗಳನ್ನು ಹೊಂದಿರುತ್ತವೆ, ಅದು ಅಂತಿಮವಾಗಿ ಚರ್ಮದಿಂದ ಮುಚ್ಚಲ್ಪಡುತ್ತದೆ.

ಹತ್ತುದಿನಗಳ ಗೊದಮೊಟ್ಟೆ
ಬ್ಯೂಫ಼ೋ ಗೊದಮೊಟ್ಟೆಯ ರೂಪ ಪರಿವರ್ತನೆ

ಮಾನವ ಉಪಯೋಗ

[ಬದಲಾಯಿಸಿ]

ಕೆಲವು ಗೊದಮೊಟ್ಟೆಗಳನ್ನು ಆಹಾರಕ್ಕಾಗಿ ಭಾರತ ಮತ್ತು ಚೀನಾ ದೇಶಗಳಲ್ಲೂ , ಆಹಾರ ಮತ್ತು ಔಷಧೀಯ ಉದ್ದೇಶಗಳಿಗಾಗಿ ಪೆರು ದೇಶದಲ್ಲೂ ಗೊದಮೊಟ್ಟೆಗಳ ಬಳಕೆ ಇದೆ.

ಉಲ್ಲೇಖಗಳು

[ಬದಲಾಯಿಸಿ]
  1. "tadpole". Merriam-Webster Dictionary. Merriam-Webster Dictionary. Retrieved 18 September 2020.
  2. ಡೆನ್ವರ್, ರಾಬರ್ಟ್ ಜೆ (2010). ಎನ್ಸೈಕ್ಲೋಪೀಡಿಯಾ ಆಫ್ ಅನಿಮಲ್ ಬಿಹೇವಿಯರ್ (೨ನೇಯ ed.). ಅಕ್ಯಾಡೆಮಿಕ್ ಪ್ರೆಸ್. p. 514-518. ISBN 978-0-12-813252-4. Retrieved 18 September 2020.