ಗೊಡೀಷಿಯ

ವಿಕಿಪೀಡಿಯ ಇಂದ
Jump to navigation Jump to search
ಗೊಡೀಷಿಯ
Clarkiabottae.jpg
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Plantae
(unranked): Angiosperms
(unranked): Eudicots
(unranked): Rosids
ಗಣ: Myrtales
ಕುಟುಂಬ: Onagraceae
ಕುಲ: Clarkia
ಪ್ರಭೇದ: C. bottae
ದ್ವಿಪದ ಹೆಸರು
Clarkia bottae
(Spach) H.F.Lewis & M.E.Lewis
ಸಮಾನಾರ್ಥಕಗಳು

Clarkia deflexa
Godetia bottae


ಗೊಡೀಷಿಯ ಉದ್ಯಾನಗಳಲ್ಲಿ ಅಂದಕ್ಕಾಗಿ ಬೆಳೆಸಲಾಗುವ ಒಂದು ಏಕವಾರ್ಷಿಕ ಸಸ್ಯಜಾತಿ. ಆನಗ್ರೇಸೀ ಕುಟುಂಬಕ್ಕೆ ಸೇರಿದೆ. ಸ್ವಿಟ್ಜರ್ಲೆಂಡಿನ ಪ್ರಸಿದ್ಧ ಸಸ್ಯಶಾಸ್ತ್ರಜ್ಞ ಸಿ.ಎಚ್.ಗೊಡೆಟ್ ಎಂಬವನ ಗೌರವಾರ್ಥವಾಗಿ ಗಿಡಕ್ಕೆ ಈ ಹೆಸರನ್ನು ಇಡಲಾಗಿದೆ.

ವೈಶಿಷ್ಟ್ಯಗಳು[ಬದಲಾಯಿಸಿ]

ಗೊಡೀಷಿಯ ಸುಮಾರು 15 ಪ್ರಭೇದಗಳನ್ನೊಳಗೊಂಡಿದೆ. ಎಲ್ಲವೂ ಅಮೆರಿಕದ ಪಶ್ಚಿಮ ಪ್ರದೇಶಗಳ ಮೂಲ ನಿವಾಸಿಗಳು. ಇವುಗಳಲ್ಲಿ ಕೆಲವು 3/4-1 ಮೀ ಎತ್ತರಕ್ಕೆ ಬೆಳೆಯುವ ಪೊದೆಸಸ್ಯಗಳು, ಇನ್ನು ಕೆಲವು 1/4 ಮೀ ಎತ್ತರದ ಮೂಲಿಕೆಗಳು. ಪೊದೆ ಬಗೆಯವನ್ನು ಅಂಚು ಇಲ್ಲವೆ ಕಲ್ಲೇರಿ ಸಸ್ಯಗಳನ್ನಾಗಿಯೂ ಮೂಲಿಕೆ ಬಗೆಯವನ್ನು ಕುಂಡ ಸಸ್ಯಗಳನ್ನಾಗಿಯೂ ಬೆಳೆಸಲಾಗುತ್ತದೆ. ವಿವಿಧ ಬಗೆಗಳು ಚೆಲುವಾದ ಮತ್ತು ಬಿಳಿ, ಗುಲಾಬಿ, ಕಡುಗೆಂಪು, ಕೆನ್ನೀಲಿ ಮುಂತಾದ ವರ್ಣ ವೈವಿಧ್ಯವನ್ನು ತೋರುವ ಹೂಗಳನ್ನು ಬಿಡುತ್ತವೆ. ಕೆಲವಲ್ಲಿ ದಳಗಳ ಮೇಲೆ ಬಣ್ಣಬಣ್ಣದ ಮಚ್ಚೆಗಳಿರುವುದುಂಟು. ಬಹು ಪಾಲು ಬಗೆಗಳಲ್ಲಿ ಹೂಗಳು ಒಂಟಿಸುತ್ತಿನ ದಳ ಉಳ್ಳವು. ಅಡ್ಡ ತಳಿಯೆಬ್ಬಿಕೆಯ ಪ್ರಯೋಗಗಳ ಮೂಲಕ ಹಲವಾರು ಸುತ್ತಿನ ದಳಗಳುಳ್ಳ ತಳಿಗಳನ್ನು ಪಡೆದು ವೃದ್ಧಿಸಲಾಗಿದೆ. ಹೂಗಳು ರೇಸೀಮ್ ಇಲ್ಲವೇ ಸ್ಪೈಕ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ.

ಬೆಳೆ[ಬದಲಾಯಿಸಿ]

ಗೊಡೀಷಿಯದ ಪ್ರಭೇದಗಳು ಬೆಟ್ಟಸೀಮೆ ಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಶೀತ ಹವಾಗುಣ ಇವುಗಳ ಬೆಳೆವಣಿಗೆಗೆ ಉತ್ತಮವಾದ್ದು. ಮೈದಾನ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಇವನ್ನು ಬೆಳೆಸುವುದು ಒಳ್ಳೆಯದು. ಇವನ್ನು ಬೀಜಗಳ ಮೂಲಕ ವೃದ್ಧಿಸಬಹುದು. ಉದ್ಯಾನಗಾರಿಕೆ ಯಲ್ಲಿ ಹೆಚ್ಚು ಪ್ರಸಿದ್ಧವಾದವು-ಗೊ. ಅಮೀನ, ಗೊ. ಬಾಟೀ, ಗೊ. ಗ್ರ್ಯಾಂಡಿಫ್ಲೋರ ಪ್ರಭೇದಗಳು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೊಡೀಷಿಯ&oldid=684708" ಇಂದ ಪಡೆಯಲ್ಪಟ್ಟಿದೆ