ಗೊಂಡಲ್
ಗೊಂಡಲ್ ಭಾರತದ ಒಂದು ಮಾಜಿ ದೇಶೀಯ ಸಂಸ್ಥಾನ; ಅದರ ರಾಜಧಾನಿಯಾಗಿದ್ದ ಪಟ್ಟಣ. ಈಗ ಗುಜರಾತ್ ರಾಜ್ಯದ ರಾಜಕೋಟೆ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಕೇಂದ್ರ.
ಇತಿಹಾಸ
[ಬದಲಾಯಿಸಿ]ಈ ಸಂಸ್ಥಾನವನ್ನು ೧೬೩೪ರಲ್ಲಿ ಜಡೇಜ ವಂಶದ ಥಾಕೂರ್ ಶ್ರೀ ಕುಂಭೋಜಿ-೧ ಎಂಬವನು ಸ್ಥಾಪಿಸಿದ.ಗೊಂಡಲ್ ಸಂಸ್ಥಾನವನ್ನಾಳುತ್ತಿದ್ದ ರಾಜ ರಜಪುತವಂಶಸ್ಥ. ಆತನ ಮೂಲ ಪುರುಷ 17ನೆಯ ಶತಮಾನದ ಕುಂಭೋಜಿ. 1807ರಲ್ಲಿ ಬ್ರಿಟಿಷರೊಂದಿಗೆ ಆಗಿನ ರಾಜ ಸಂಧಿ ಮಾಡಿಕೊಂಡಿದ್ದ.
ಸಂಸ್ಥಾನದ ವಿಸ್ತೀರ್ಣ ಮತ್ತು ಜನಸಂಖ್ಯೆ
[ಬದಲಾಯಿಸಿ]ಸಂಸ್ಥಾನದ ವಿಸ್ತೀರ್ಣ 1,024 ಚ.ಮೈ. 1941ರ ಗಣತಿಯ ಪ್ರಕಾರ ಅದರ ಜನಸಂಖ್ಯೆ 2,44,514 ಇತ್ತು. ಇಲ್ಲಿ ಗೊಂಡಲ್ ಮತ್ತು ಪಾನೇಲೀ ಎಂಬ ಎರಡು ಸರೋವರಗಳಿವೆ.
ಸಂಸ್ಥಾನದ ವಾಣಿಜ್ಯ
[ಬದಲಾಯಿಸಿ]ಹತ್ತಿ ಮತ್ತು ಉಣ್ಣೆ ಜವಳಿ, ಜರಿ, ಪಾತ್ರೆ, ಮರದ ಆಟಿಗೆ, ದಂತದ ಬಳೆ ಮುಂತಾದ ಪದಾರ್ಥಗಳು ತಯಾರಾಗುತ್ತವೆ. ಎಣ್ಣೆಯ, ಹಿಟ್ಟಿನ ಮತ್ತು ಹತ್ತಿಯ ನೂಲಿನ ಗಿರಣಿಗಳೂ ಮುದ್ರ್ರಣಾಲಯಗಳೂ ಬೆಂಕಿಪೆಟ್ಟಿಗೆಯ ಮತ್ತು ಚರ್ಮದ ಕಾರ್ಖಾನೆಗಳೂ ಇವೆ.
ಸಂಸ್ಥಾನದ ಶಿಕ್ಷಣ
[ಬದಲಾಯಿಸಿ]ಹಿಂದೆ ಸಂಸ್ಥಾನದಲ್ಲಿ 172 ಪ್ರಾಥಮಿಕ ಶಾಲೆಗಳು, 2 ಪ್ರೌಢಶಾಲೆಗಳು, ಒಂದು ಕಾಲೇಜು ಇದ್ದವು. ಪ್ರಾಥಮಿಕ ಹಾಗೂ ಉಚ್ಚಶಿಕ್ಷಣಗಳು ಉಚಿತವಾಗಿದ್ದವು. ಕಡ್ಡಾಯ ಶಿಕ್ಷಣ, ಸ್ತ್ರೀ ಶಿಕ್ಷಣ ಜಾರಿಯಲ್ಲಿದ್ದವು.
ಹುಟ್ಟುವಳಿ
[ಬದಲಾಯಿಸಿ]ಆಗಿನ ಸಂಸ್ಥಾನದ ವಾರ್ಷಿಕ ಹುಟ್ಟುವಳಿ 60 ಲಕ್ಷ ರೂ. ಅದು ಬ್ರಿಟಿಷರಿಗೆ ವರ್ಷಕ್ಕೆ 1,10,721 ರೂ. ಕಪ್ಪ ಕೊಡಬೇಕಾಗಿತ್ತು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Gondal genealogy and History Archived 2011-05-16 ವೇಬ್ಯಾಕ್ ಮೆಷಿನ್ ನಲ್ಲಿ. Queensland University