ಗೆರಿಡೆ

ವಿಕಿಪೀಡಿಯ ಇಂದ
Jump to navigation Jump to search
Water strider G remigis.jpg

ಹೆಮಿಟೆರಾ ಎಂಬ ಕುಟುಂಬಕ್ಕೆ ಸೇರಿದ ಗೆರಿಡೆಯನ್ನು ನೀರು ಹುಳ, ಮ್ಯಾಜಿಕ್ ಬಗ್ಸ್, ಸ್ಕೇಟರ್ ಮುಂತಾದ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಈ ಜೀವಿಗಳು ನೀರಿನ ಮೇಲೆ ನಡೆಯಬಲ್ಲ ವಿಶಿಷ್ಟ ಗುಣವನ್ನು ಹೊಂದಿರುವ ಕಾರಣದಿಂದ ಈ ಮುಂತಾದ ಹೆಸರುಗಳು ಇವುಗಳಿಗೆ ಬಂದಿದೆ.

ಗೆರಿಡೆಗಳನ್ನು ಸಾಮಾನ್ಯವಾಗಿ ಕೆರೆ, ಹಳ್ಳ, ನದಿ, ಸಮುದ್ರ, ಈಜು ಕೊಳ, ಮನೆಯಲ್ಲಿಯ ವಾಟರ್ ಟ್ಯಾಂಕ್ ಮುಂತಾದ ನೀರಿರುವ ಸ್ಥಳಗಳಲ್ಲಿ ಕಾಣಬಹುದು. ವಿಜ್ಞಾನಿಗಳು ಸುಮಾರು ೧೭೦೦ ಪ್ರಭೇದದ ಗೆರಿಡೆಗಳನ್ನು ಗುರ್ತಿಸಿದ್ದು, ಅವುಗಳಲ್ಲಿ ಸುಮಾರು ೧೭೦ ಪ್ರಕಾರದ ಗೆರಿಡೆಗಳೂ ಸಮುದ್ರದಲ್ಲಿ ಕಂಡು ಬರುತ್ತದೆ.

ದೈಹಿಕ ರಚನೆ: ಗೆರಿಡೆಗಳು ವಿಶಿಷ್ಟವಾದ ದೈಹಿಕ ರಚನೆಗಳನ್ನು ಹೊಂದಿವೆ. ಇವುಗಳ ದೇಹ ಅಸಂಖಾತ ಸೂಕ್ಷ್ಮ ರೋಮಗಳಿಂದ ಆವೃತವಾಗಿದೆ. ಈ ರೋಮಗಳು ಗೆರಿಡೆಗಳ ಮೇಲೆ ಸಿಂಚನವಾಗುವ ನೀರಿನ ಹನಿಗಳಿಂದ ರಕ್ಷಿಸುತ್ತವೆ ಮಾತ್ರವಲ್ಲ ಅವುಗಳ ಕಾರಣದಿಂದ ದೇಹವು ತೂಕವನ್ನು ಹೊಂದಿ ಮುಳಗದಂತೆ ಕಾಪಾಡುತ್ತದೆ.

ಇವುಗಳಲ್ಲಿಯೂ ಕೂಡ ಇತರೆ ಕೀಟಗಳಂತೆ ೬ ಕಾಲುಗಳಿದ್ದು ಮುಂದಿನ ಕಾಲುಗಳು ಅತ್ಯಂತ ಚಿಕ್ಕದಾಗಿರುತ್ತದೆ. ಗೆರಿಡೆಗಳ ಕೆಲ ಪ್ರಭೇದಗಳೂ ಮಾತ್ರ ರೆಕ್ಕೆಯನ್ನು ಹೊಂದಿರುತ್ತದೆ. ಉಳಿದ ಬಹುತೇಕ ಪ್ರಭೇದಗಳೂ ರೆಕ್ಕೆಯನ್ನು ಹೊಂದಿರುವುದಿಲ್ಲ.]]

"https://kn.wikipedia.org/w/index.php?title=ಗೆರಿಡೆ&oldid=738057" ಇಂದ ಪಡೆಯಲ್ಪಟ್ಟಿದೆ