ಗೂಳಿ ನೊಣ
Warble flies | |
---|---|
Ox Warble-fly (Hypoderma bovis) | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | |
ವರ್ಗ: | |
ಗಣ: | |
ಕುಟುಂಬ: | |
ಉಪಕುಟುಂಬ: | |
ಕುಲ: | Hypoderma Latreille, 1818
|
Species | |
|
ಗೂಳಿ ನೊಣಡಿಪ್ಟರ ಗಣದ ಈಸ್ಟ್ರಿಡೀ ಕುಟುಂಬಕ್ಕೆ ಸೇರಿದ ಒಂದು ಕೀಟ (ಆಕ್ಸ್‌ಬಾಟ್ ಫ್ಲೈ). ಹೈಪೋಡರ್ಮ ಇದರ ಶಾಸ್ತ್ರೀಯ ಹೆಸರು.
ಲಕ್ಷಣಗಳು
[ಬದಲಾಯಿಸಿ]ಜೇನು ನೊಣವನ್ನು ಹೋಲುತ್ತದೆ. ದಪ್ಪವಾದ ಹಾಗೂ ರೋಮಮಯವಾದ ದೇಹ, ಚಿಕ್ಕ ಗ್ರಾಹಕಾಂಗ (ಆಂಟಿನೀ), ಕ್ಷೀಣಿಸಿರುವ ವದನಾಂಗಗಳು, ನೀಳವಾದ ಅಂಡ ನಿಕ್ಷೇಪಕ - ಇವು ಪ್ರೌಢ ನೊಣದ ಮುಖ್ಯ ಲಕ್ಷಣಗಳು. ಪ್ರೌಢ ಗೂಳಿ ನೊಣಗಳು ಸ್ವತಂತ್ರ ಜೀವನ ಸಾಗಿಸಬಲ್ಲವು. ಆದರೆ ಡಿಂಭಗಳು (ಇವಕ್ಕೆ ಗ್ರಬ್ ಎಂದು ಹೆಸರು) ಮಾತ್ರ ದನಕರುಗಳ ಮೇಲೆ ಪರಾವಲಂಬಿಗಳಾಗಿರುತ್ತವೆ.
ಪ್ರಭೇದಗಳು
[ಬದಲಾಯಿಸಿ]ಗೂಳಿನೊಣಗಳಲ್ಲಿ ಹಲವಾರು ಪ್ರಭೇದಗಳಿವೆ. ಮುಖ್ಯವಾದವು ಯುರೋಪಿನಲ್ಲಿ ಕಂಡುಬರುವ ಬೋವಿಸ್ ಪ್ರಭೇದ ಮತ್ತು ಅಮೆರಿಕದಲ್ಲಿನ ಲೈನಿಯೇಟಂ ಪ್ರಭೇದ. ಕೊನೆಯದು ಭಾರತದಲ್ಲೂ ಕಂಡುಬರುತ್ತದೆ.
ಸಂತಾನೋತ್ಪತ್ತಿ
[ಬದಲಾಯಿಸಿ]ಪ್ರೌಢ ನೊಣಗಳ ಚಟುವಟಿಕೆ ಮೇ-ಆಗಸ್ಟ್ ತಿಂಗಳುಗಳಲ್ಲಿ ಹೆಚ್ಚು. ಹೆಣ್ಣುನೊಣ ದನಕರುಗಳ ಕಾಲುಗಳ ಮೇಲಿರುವ ಮತ್ತು ಗೊರಸುಗಳ ಬಳಿಯಿರುವ ಕೂದಲಿನ ಮೇಲೆ ಸಾಲುಸಾಲಾಗಿ ಮೊಟ್ಟೆಗಳನ್ನಿಡುತ್ತದೆ. ಒಂದೊಂದು ಕೂದಲಿನ ಮೇಲೂ 1-10 ಮೊಟ್ಟೆಗಳು ಇರುತ್ತವೆ. ಮೊಟ್ಟೆಗಳ ಆಕಾರ ಚುಟ್ಟದಂತೆ. ಒಂದೊಂದೂ ತನ್ನ ತುದಿಯಲ್ಲಿನ ಉಪಾಂಗಗಳ ಸಹಾಯ ದಿಂದ ಕೂದಲಿಗೆ ಅಂಟಿರುತ್ತದೆ. ಕೆಲದಿನ ಗಳಾದ ಮೇಲೆ ಮೊಟ್ಟೆಯಿಂದ ಹೊರ ಬಂದ ಡಿಂಭಗಳು ಪೋಷಕ ಜೀವಿಯ ಚರ್ಮ ವನ್ನು ಕೊರೆದು ದೇಹವನ್ನು ಹೊಕ್ಕು, ಹಲವು ತಿಂಗಳ ಕಾಲ ದೇಹದಾದ್ಯಂತ ಓಡಾಡಿ, ಕೊನೆಗೆ ಗಂಟಲಿನ ಒಳಗೋಡೆಗೆ ಅಂಟಿಕೊಳ್ಳುತ್ತವೆ. ಚಳಿಗಾಲದವರೆಗೆ ಅಲ್ಲಿದ್ದು ಅನಂತರ ಬೆನ್ನಿನ ತಳಭಾಗದಲ್ಲಿ ಬಂದು ನೆಲೆಗೊಂಡು ತಮ್ಮ ಬೆಳೆವಣಿಗೆ ಯನ್ನು ಮುಂದುವರಿ ಸುತ್ತವೆ (ಇವುಗಳ ಕ್ರಿಯಾಚಟುವಟಿಕೆ ಗಳಿಂದಾಗಿ ಇವು ಇರುವ ಸ್ಥಳಗಳು ಊದಿಕೊಂಡಂತೆ ಕಾಣುತ್ತವೆ). ಪೋಷಕಜೀವಿಯ ಲಸಿಕೆ (ಸೀರಂ) ಮತ್ತು ಕೀವನ್ನು ಸೇವಿಸಿ ಬೆಳೆಯುತ್ತವೆ. ಬೆಳೆವಣಿಗೆ ಪೂರ್ಣಗೊಂಡ ಮೇಲೆ ಉರುಳೆಯಾಕಾರ ವನ್ನು ತಳೆಯುವ ಇವು ಸು. 25ಮೀಮೀ ಉದ್ದವಿರುತ್ತವೆ. ಕೊನೆಗೆ ಪೋಷಕ ಜೀವಿಯ ದೇಹದಿಂದ ಹೊರಬಂದು, ನೆಲಕ್ಕುದು ರುತ್ತವೆ. ಭೂಮಿಗೆ ಬಿದ್ದ ಅನತಿಕಾಲದಲ್ಲಿಯೇ ಕೋಶಾವಸ್ಥೆಯನ್ನು ಸೇರುತ್ತವೆ. ಕೋಶಾವಸ್ಥೆಯ ಅವಧಿ 5-6 ವಾರಗಳು ಮಾತ್ರ. ಈ ಅವಧಿಯಲ್ಲಿ ರೂಪಾಂತರಗೊಂಡು ಎರಡು ರೆಕ್ಕೆಯುಳ್ಳ ಪ್ರೌಢ ನೊಣಗಳಾಗುತ್ತವೆ.
ಹಾವಳಿ
[ಬದಲಾಯಿಸಿ]ಗೂಳಿ ನೊಣಗಳ ಡಿಂಭಗಳು ದನಗಳ ಚರ್ಮವನ್ನು ಕೊರೆಯುವುದರಿಂದ ರೋಗಪೀಡಿತ ದನಗಳ ಚರ್ಮ ಅಪ್ರಯೋಜಕವಾಗುತ್ತದೆ. ಅಲ್ಲದೆ ದನಗಳ ಮಾಂಸವೂ ಕೆಟ್ಟುಹೋಗುತ್ತದೆ. ಹಸುಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಇವೆಲ್ಲ ಕಾರಣಗಳಿಂದಾಗಿ ಗೂಳಿ ನೊಣಗಳು ದನಗಳ ಪಿಡುಗು ಎನಿಸಿಕೊಂಡಿವೆ. ಇವನ್ನು ನಾಶ ಪಡಿಸಲು ಕೋಶಾವಸ್ಥೆಯಲ್ಲಿರುವಾಗಲೀ ಇವುಗಳ ಡಿಂಭಗಳನ್ನು ಹಿಡಿದು ಕೊಲ್ಲುವುದೊಂದೇ ಮಾರ್ಗ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- common cattle grub on the UF / IFAS Featured Creatures Web site