ಗೂಗಾಲ್
ಗಣಿತಶಾಸ್ತ್ರದಲ್ಲಿ ಬಲು ಬೃಹತ್ತಾದ ಒಂದು ಸಂಖ್ಯೆ. 1 ನ್ನು ಬರೆದು ಅದರ ಬಲ ಪಕ್ಕದಲ್ಲಿ ನೂರು ಸಲ 0 ಗಳನ್ನು ಬರೆದಾಗ ದೊರೆಯುವ ಸಂಖ್ಯೆ.
ನಿರೂಪಣೆ
[ಬದಲಾಯಿಸಿ]ಇದರ ನಿರೂಪಣೆ ಹೀಗಿದೆ : 10, 000, 000, 000, 000, 000, 000, 000, 000, 000, 000, 000 000, 000, 000, 000, 000, 000, 000, 000, 000, 000, 000 000, 000, 000, 000, 000, 000, 000, 000, 000, 000, 000
ಇದನ್ನು ಸಂಕ್ಷೇಪ್ತವಾಗಿ 10100 ಎಂಬುದಾಗಿ ಬರೆಯಬಹುದು.
ಕಲ್ಪನೆ
[ಬದಲಾಯಿಸಿ]ಈ ಕೆಳಗಿನ ಉದಾಹರಣೆಗಳಿಂದ ಗೂಗಾಲ್ ಅದೆಷ್ಟು ದೊಡ್ಡ ಸಂಖ್ಯೆ ಎನ್ನುವುದು ಸ್ಪಷ್ಟವಾಗುತ್ತದೆ:
- ಮನುಷ್ಯನ ಉಗಮದಿಂದ ಇಂದಿನವರೆಗೆ ಎಲ್ಲ ಮನುಷ್ಯರೂ ಉಚ್ಚರಿಸಿದ ಪದಗಳು 1016 ನ್ನು ಮೀರಿರುವುದಿಲ್ಲ ಎಂದು ಅಂದಾಜು ಮಾಡಿದ್ದಾರೆ.
- ಸಮಸ್ತ ವಿಶ್ವದಲ್ಲಿ (ಎಂದರೆ ಕಾಣುವ ಕಾಣದಿರುವ ಸಕಲ ಆಕಾಶ ಕಾಯಗಳೂ ಸೇರಿರುವ ಆಕಾಶ) ಒಂದಿಷ್ಟೂ ಖಾಲಿ ಜಾಗವಿಲ್ಲದಂತೆ ಎಲೆಕ್ಟ್ರಾನ್ ಪ್ರೋಟಾನುಗಳನ್ನು ಅತಿನಿಬಿಡವಾಗಿ ಗಿಡಿದರೆ ಆ ಕಣಗಳ ಸಂಖ್ಯೆ 10110.
- ಇದುವರೆಗೆ ಪ್ರಪಂಚದಲ್ಲಿ ಮುದ್ರಣವಾಗಿರುವ ಪದಗಳ ಸಂಖ್ಯೆ 1016 ಕ್ಕಿಂತ ಸ್ವಲ್ಪ ದೊಡ್ಡದಿರಬಹುದು.
- ವಿಶ್ವದಲ್ಲಿ ಇರುವ ಸಮಸ್ತ ಎಲೆಕ್ಟ್ರಾನುಗಳ ಸಂಖ್ಯೆ ಸುಮಾರು 1079.
- ಭಾರತ ಸರ್ಕಾರದ ಮತ್ತು ರಾಜ್ಯ ಸರ್ಕಾರಗಳ ಪ್ರಚಲಿತ ವಾರ್ಷಿಕ ಒಟ್ಟು ಆಯ ಸುಮಾರು ರೂ. 1011. ಇಷ್ಟೇ ಆಯ ಕಳೆದ 10,000 ವರ್ಷಗಳಿಂದಲೂ ಒಂದೇ ಪ್ರಕಾರ ಇತ್ತೆಂದು ಭಾವಿಸಿದರೆ ಈ ಅವಧಿಯ ಸಮಗ್ರ ಆಯ ರೂ. 1011 x 10,000=00 ರೂ 1015
ಇತಿಹಾಸ
[ಬದಲಾಯಿಸಿ]ಅಮೆರಿಕದ ಒಂದು ಶಾಲೆಯಲ್ಲಿ, ಬೃಹತ್ಸಂಖ್ಯೆಗಳನ್ನು ಕುರಿತು ಜನಪ್ರಿಯ ವಿವರಣೆ ನೀಡುತ್ತಿದ್ದಾಗ ಉಪಾಧ್ಯಾಯರು ಅತಿದೊಡ್ಡದಾದ ಒಂದು ಸಂಖ್ಯೆಗೆ, ಎಂದರೆ 1 ನ್ನು ಬರೆದು ಬಳಿಕ ನೂರು 0 ಗಳನ್ನು ಬರೆದಾಗ ದೊರೆಯುವ ಸಂಖ್ಯೆಗೆ, ಹೆಸರನ್ನು ಸೂಚಿಸಬೇಕೆಂದು ವಿದ್ಯಾರ್ಥಿಗಳಿಗೆ ಸವಾಲು ಹಾಕಿದರು. ಆಗ ಮಿಲ್ಟನ್ ಸಿರೋಟ ಎಂಬ ಒಂಬತ್ತು ವರ್ಷ ಅಣುಗ ಗೂಗಾಲ್ ಎಂಬ ಪದವನ್ನು ಹೇಳಿದ (1955). ( ಆತನೇ ಗೂಗಾಲ್‍ಪ್ಲೆಕ್ಸ್ ಎಂಬ ಇನ್ನೊಂದು ಬೃಹತ್ಸಂಖ್ಯೆಯನ್ನು ಕೂಡ ಹೆಸರಿಸಿದ್ದಾನೆ. ಇದರ ಬೆಲೆ 1ನ್ನು ಬರೆದು ಅದರ ಬಲಪಕ್ಕದಲ್ಲಿ ಒಂದು ಗೂಗಾಲ್ 0 ಗಳನ್ನು ಬರೆದಷ್ಟು; ಎಂದರೆ ಸಂಕ್ಷೇಪವಾಗಿ 1010100.
ಗೂಗಾಲ್‍ಪ್ಲೆಕ್ಸ್ ಸಂಖ್ಯೆಯ ವಿಸ್ತೃತರೂಪವನ್ನು ಬರೆಯಲು ಭೂಮಿಯ ವಿಸ್ತಾರ ಏನೂ ಸಾಲದು. ಅಷ್ಟೇ ಅಲ್ಲ ವಿಶ್ವದ ವಿಸ್ತಾರವೂ ಸಾಲದು; ಇಷ್ಟಾದರೂ ಗೂಗಾಲ್ಪ್ಲೆಕ್ಸ್ ಒದು ಸಾಂತಸಂಖ್ಯೆಯೇ ಬೃಹತ್ಸಂಖ್ಯೆಗಳು. )
ಈ ಮಿಲ್ಟನ್ ಸಿರೋಟ ನ ಸಂಬಂಧಿ ಗಣಿತಜ್ಞ ಎಡ್ವರ್ಡ್ ಕಾಸ್ನರ್ ಎಂಬಾತನು Mathematics and the Imagination.ಎಂಬ ತನ್ನ ಪುಸ್ತಕದ ಮೂಲಕ ಈ ಪದವನ್ನು ಜನಪ್ರಿಯಗೊಳಿಸಿದ.
ಗೂಗಲ್ ಕಂಪನಿಯು ಇದೇ ಶಬ್ದ- GOOGOL ವನ್ನು , ಆಕಸ್ಮಿಕವಾಗಿ ತಪ್ಪು ಕಾಗುಣಿತ ಬಳಸಿ GOOGLE ಎಂದು ಬರೆದು ತನ್ನ ಸರ್ಚ್ ಇಂಜಿನ್ನಿಗೆ ಹೆಸರಿಟ್ಟಿತು.