ಗುರುರಾಜುಲು ನಾಯ್ಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಗುರುರಾಜುಲು ಗುರುರಾಜ್ ಅಡಿ ಹರಿನ ಗುರುರಾಜ್ ನಾಯ್ಡು ದಾರಿ ಕಥೆಗಳು ನಾಯ್ಡು', ಒಬ್ಬ ಹೆಸರಾಂತ ಹರಿಕಥಾ ವಿದ್ವಾಂಸ.ರಂಗಭೂಮಿ, ಸಂಗೀತ ಮತ್ತು ಚಲನಚಿತ್ರರಂಗದಲ್ಲಿ ತಮ್ಮದೇ ವಿಶಿಷ್ಠ ಛಾಪುಮೂಡಿಸಿದ ಅಪರೂಪದ ಕಲಾವಿದರು. 'ಅರುಣ್ ಕುಮಾರ್,'[೧] ಎಂಬ ಹೆಸರಿನಿಂದ ಚಲನಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು. ಗುರುರಾಜರಿಗೆ, ಬಾಲ್ಯದಿಂದಲೇ ಸಂಗೀತದತ್ತ ಒಲವು. ನಟನಕಲೆಯಲ್ಲೂ ಅತ್ಯಂತ ಆಸಕ್ತಿಯಿತ್ತು. ಒಳ್ಳೆಯ ವಾಚಾಳಿ. ಮೈಸೂರಿನಿಂದ ಬೆಂಗಳೂರಿಗೆ ಬಂದ ಅವರಕುಟುಂಬ, ರಂಗನಟರ ಮನೆಯ ಅಕ್ಕ ಪಕ್ಕದಲ್ಲಿ ಮನೆಮಾಡಿದರು. ಹರಿಕಥಾ ಕಾಲಕ್ಷೇಪಕ್ಕೆ ಅನುಕೂಲವಾಗುವ ತರಹ ಮನೆಯವರು ಅವರಿಗೆ ಸಂಗೀತ ಕಲಿಸುವ ಏರ್ಪಾಡುಮಾಡಿದರು. ಇದೇ ಮುಂದೆ ರಂಗಭೂಮಿಯಲ್ಲಿ ಅವರಿಗೆ ನೆರವಿಗೆ ಬಂತು. ಗೆಳೆಯರೊಂದಿಗೆ ನಾಟಕ ವೀಕ್ಷಿಸಲು ಹೋಗುತ್ತಿದ್ದ ಅವರು, ಅಲ್ಲಿನ ಪಾತ್ರಗಳ ನಕಲು ಮಾಡುವುದರಲ್ಲಿ ಯಶಸ್ವಿಯಾಗಿದ್ದರು. ಗುಬ್ಬಿ ಕಂಪೆನಿ ಪ್ರದರ್ಶಿಸುತ್ತಿದ್ದ ನಾಟಕಗಳಿಗೆ ತಂದೆಯವರಜೊತೆ ಹೋಗುತ್ತಿದ್ದ ಗುರುರಾಜನಿಗೆ, ತಾನೂ ನಟನಾಗುವ ಆಸೆ ಮೊಳಕೆಯೊಡೆಯಿತು. ಅವರ ಮನೆಯ ಪಕ್ಕದಲ್ಲಿ 'ನಟಭಯಂಕರ ಎಂ.ಎನ್. ಗಂಗಾಧರರಾಯರು' ವಾಸವಾಗಿದ್ದರು. ಅವರು ಹೆಸರಾಂತ ನಾಟಕಕಲಾವಿದ 'ಬಿ.ಎನ್.ಚಿನ್ನಪ್ಪ'ನವರ ಮನೆಯಲ್ಲಿ ವಾಸ್ತವ್ಯದಲ್ಲಿದ್ದರು. ನಾಯ್ಡು ಗಂಗಾಧರರಾಯರು ಅಭಿನಯಿಸಿದ ನಾಟಕಗಳನ್ನು ವೀಕ್ಷಿಸಿದರು. ತಾವೂ ಒಬ್ಬ ನಟನಾಗುವ ಆಸೆ, ಅವರಿಗೆ ಬಲವಾಗಿ ಬೇರೂರಿತು. ಹಾಗೆಯೇ ಒಮ್ಮೆ, ನಾಟಕದಲ್ಲಿ ನಟಿಸುವ ಅವಕಾಶಸಿಕ್ಕಿತು. ಬೇರೆ ನಾಟಕಗಳನ್ನು ಪುಕ್ಕಟೆ ನೋಡುವ ಅವಕಾಶವೂ ಪ್ರಾಪ್ತವಾಯಿತು. ಒಂದುಸಾರಿ, ನಾಟಕದ ಪಾತ್ರಧಾರಿಯೊಬ್ಬ ಕಾಣೆಯಾಗಿದ್ದಾಗ, ಆ ಪಾತ್ರವವನ್ನು ಗಂಗಾಧರರಾಯರ ಜೊತೆ ಅಭಿನಯಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ವಿದ್ಯಾಭ್ಯಾಸದ ಜೊತೆಗೆ, ಸಂಗೀತ ಲೋಕ, ನಾಟಕ ಜಗತ್ತು, ಮತ್ತು ಹರಿಕಥಾ ಕಾಲಕ್ಷೇಪಗಳೆಲ್ಲವೂ ಅವರ ಆಪ್ತ ಆಸಕ್ತಿಯ ವಲಯಗಳಾಗಿದ್ದವು. ಇವೆಲ್ಲವೂ ಅತ್ಯಂತ ಪ್ರಿಯವಾದಾಗ ಒಂದನ್ನು ಆರಿಸಿಕೊಳ್ಳುವ ಕೆಲಸ ಕಷ್ಟವಾಯಿತು. ಅವರು ಮೊದಲು ತಮ್ಮ ಶಾಲೆಗೆ ಹೋಗುವುದನ್ನು ಬಿಟ್ಟು, ಸಮಯ ಸಿಕ್ಕಾಗಲೆಲ್ಲಾ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಆಗಾಗ ಹರಿಕಥೆಯನ್ನೂ ಮಾಡುತ್ತಿದ್ದರು.[೨] ಹಲಾವಾರು ನಾಟಕಗಳಲ್ಲಿ ಚಿಕ್ಕ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು.

ಹರಿಕಥಾ ಪ್ರಸಂಗಗಳು[ಬದಲಾಯಿಸಿ]

  • ರೇಣುಕಾದೇವಿ ಮಹಾತ್ಮೆ,
  • ಭೂಕೈಲಾಸ,
  • ಭೀಮ ಜರಾಸಂಧ,
  • ಭಕ್ತ ಸುಧಾಮ,
  • ಭಕ್ತ ಮಾರ್ಕಾಂಡೇಯ,
  • ಭಕ್ತ ಸಿರಿಯಾಳ,
  • ಮಹಿರಾವಣ,
  • ಮಾಯಾ ಬಝಾರ್,
  • ನಲ್ಲತಂಗಾ ದೇವಿ,
  • ಗಜ ಗೌರಿ ವ್ರತ,
  • ಶ್ರೀಕೃಷ್ಣ ಗಾರುಡಿ,
  • ಲವ ಕುಶ,
  • ನಕ್ಕು ನಗಿಸಿ ಅಳುವ ಮರೆಸು,
  • ಗಿರಿಜಾಕಲ್ಯಾಣ,
  • ಮೂರುವರೆ ವಜ್ರಗಳು,
  • ಕಿರಾತಾರ್ಜುನ,
  • ಸತ್ಯ ಹರಿಶ್ಚಂದ್ರ,
  • ಉತ್ತರನ ಪೌರುಷ,
  • ಚಂದ್ರ ಹಾಸ,
  • ಮಾರುತಿ ವಿಜಯ,
  • ಸಂತ ಸಕ್ಕೂಬಾಯಿ,
  • ಕೋಳೂರು ಕೊಡಗೂಸು,
  • ಅಯ್ಯಪ್ಪ ಸ್ವಾಮಿ,
  • ಬಬ್ರುವಾಹನ,
  • ನಳ ದಮಯಂತಿ,
  • ಶನಿಪ್ರಭಾವ,
  • ರಾಮಾಯಣ (ನಾಲ್ಕು ಪರ್ವಗಳು)
  • ಭಕ್ತ ಕುಂಬಾರ,
  • ಲಂಕಾದಹನ,

ಶ್ರೀಜಯಭಾರತಿ ಕಲಾಸಂಘ[ಬದಲಾಯಿಸಿ]

'ಗುರುರಾಜುಲು ನಾಯ್ಡು', 'ಶ್ರೀ.ಜಯಭಾರತಿ ಕಲಾಸಂಘ'ವೆಂಬ ನಾಟಕ ಕಂಪೆನಿಯನ್ನು ಕಟ್ಟಿ ಬೆಳಿಸಿದರು. ತಮ್ಮ ಹೊಸಕಂಪೆನಿಯಲ್ಲಿ ಆಯೋಜಿಸಿ ಪ್ರಸ್ತುತಪಡಿಸಿದ ನಾಟಕಗಳು :

  • ಕೆಂಪೇಗೌಡ,
  • ಎಚ್ಚೆಮನಾಯಕ,
  • ಶಿವಾಜಿ ಮೊದಲಾದ ಐತಿಹಾಸಿಕ ನಾಟಗಳನ್ನು ಆಡಿದರು. ಅವರ ನಾಟಕಗಳಲ್ಲೆಲ್ಲಾ ನಾಯಕನಾಗಿ ಅಭಿನಯಿಸಿ, ಅತಿ ಜನಪ್ರಿಯತೆಯನ್ನು ಗಿಟ್ಟಿಸಿದರು. ಮನೆಯ ಆರ್ಥಿಕ ವಾತಾವರಣ ಸರಿಯಾಗಿರದ ಕಾರಣಕ್ಕಾಗಿ ಅವರು, ಬೆಂಗಳೂರಿನ ವಿಮಾನ ಕಾರ್ಖಾನೆಯಲ್ಲಿ ನೌಕರಿಗೆ ಸೇರಿಕೊಂಡರು. ಕಾರ್ಖಾನೆಯ ಲಲಿತ ಕಲಾ ಸಂಘದ ಮೂಲಕ, ಸಾಮಾಜಿಕ ಮತ್ತು ಹಾಸ್ಯ ನಾಟಕಗಳಲ್ಲಿ ತಮ್ಮ ಅಬಿನಯವನ್ನು ಪ್ರದರ್ಶಿಸಿದರು. ಆಗಿನ ಕಾಲದ ರಂಗ ದಿಗ್ಗಜ, ಎಂ.ವಿ.ಸುಬ್ಬಯ್ಯ ನಾಯ್ಡು ರವರ ಆಹ್ವಾನದ ಮೇರೆಗೆ ಅವರ ಕಂಪೆನಿಯ ನಾಟಕಗಳಲ್ಲಿ ಪಾಲ್ಗೊಂಡರು.

ನಾಯ್ಡುರವರ ಅಭಿನಯ ಚತುರತೆ[ಬದಲಾಯಿಸಿ]

'ಎಚ್ಚೆಮನಾಯಕ' ನಾಟಕದಲ್ಲಿ 'ಚಾಂದ್ ಖಾನ್' ಪಾತ್ರ ನಿರ್ವಹಿಸಿದ್ದರು. 'ಶ್ರೀರಾಮ ವಿಜಯ' ನಾಟಕದಲ್ಲಿ 'ರಾವಣ'ನ ಪಾತ್ರ ಅವರಿಗೆ ಅಪಾರ ಖ್ಯಾತಿ ತಂದುಕೊಟ್ಟಿತು. ಸುಬ್ಬಯ್ಯ ನಾಯ್ಡು ಕಂಪೆನಿಯ ನಾಟಕಗಳಲ್ಲಿ ಪ್ರಮುಖ ಪಾತ್ರನಿರ್ವಹಿಸಿದ ಅವರಿಗೆ, 'ಭಕ್ತ ಅಂಬರೀಷ್' ನಾಟದ 'ರಮಾಕಾಂತ'ನ ಪಾತ್ರ ಬಹಳ ಹೆಸರು ತಂದುಕೊಟ್ಟಿತು. 'ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿ'ಯಲ್ಲಿ ರಾತ್ರಿಹೊತ್ತು ನಾಟಕಗಳಲ್ಲಿ ಪಾತ್ರಾಭಿನಯ ಮಾಡುತ್ತಾ, ಬೆಳಗಿನ ಹೊತ್ತಿನಲ್ಲಿ ಹಿಂದೂಸ್ತಾನ್ ವಿಮಾನ ಕಾರ್ಖಾನೆಯಲ್ಲಿ ದುಡಿಮೆ ನಡೆದಿತ್ತು. ಈ ವ್ಯವಸ್ಥೆ ಬಹಳ ದಿನ ನಡೆಯಲಿಲ್ಲ. ಕೊನೆಗೊಂದು ದಿನ ಫ್ಯಾಕ್ಟರಿ ಕೆಲಸಕ್ಕೆ ರಾಜಿನಾಮೆ ಕೊಟ್ಟು, ನಾಟಕಕ್ಕೆ ತಮ್ಮ ಮುಂದಿನ ಜೀವನವನ್ನು ಮುಡುಪಾಗಿಟ್ಟರು.

ನಾಯ್ಡುರವರ ವ್ಯಕ್ತಿತ್ವ[ಬದಲಾಯಿಸಿ]

'ಗುರುರಾಜುಲು ನಾಯ್ಡು', ಒಬ್ಬ ಆಕರ್ಶಕ ವ್ಯಕ್ತಿತ್ವದ ಎತ್ತರದ ಆಳು. ಭವ್ಯ ವ್ಯಕ್ತಿತ್ವ, ಸುಂದರ ಮುಖ, ಸುಶ್ರಾವ್ಯ ಸಂಗೀತ ಪರಿಣಿತ, ಅಸ್ಖಲಿತ ಭಾಷಾ ನಿಪುಣ. ಅವರು, ವೃತ್ತಿ ನಾಟಕ ಕಂಪೆನಿಯಲ್ಲಿ ಸಕ್ರಿಯರಾದರು. ಕಂಪೆನಿಯ ಜೊತೆ ನಾಡಿನುದ್ದಕ್ಕೂ ಸಂಚರಿಸಿ ನಾಟಕ ಕಾರ್ಯಕ್ರಮವಾನ್ನು ಹಮ್ಮಿಕೊಂಡಿದ್ದರು. ಎಂ.ವಿ.ಸುಬ್ಬಯ್ಯನಾಯ್ಡು ರವರ, ನಿಧನದ ನಂತರ, ನಾಟಕ ಕಂಪೆನಿಗೆ ತಿಲಾಂಜಲಿ ಕೊಟ್ಟು, ಹರಿಕಥೆಗೆ ಹೆಚ್ಚು ಒತ್ತು ನೀಡಿದರು.

  • ಶ್ರೀಕೃಷ್ಣ,
  • ವಿಭೀಷಣ,
  • ಚಾಂದ್ ಖಾನ್,
  • ರಮಾಕಾಂತ್,
  • ರಾವಣ, ಮೊದಲಾದ ವೈವಿಧ್ಯಮಯ ಪಾತ್ರಗಳಲ್ಲಿ ತಮ್ಮ ಅಮೂಲ್ಯ ಅಭಿನಯ ನೀಡಿ ಸಭಿಕರನ್ನು ಮಂತ್ರಮುಘ್ದರನ್ನಾಗಿಸಿದರು. ಅತ್ಯಂತ ಹಿರಿಯ ಕೀರ್ತನಕಾರರ ಮಧ್ಯ, ಹರಿಕಥಾ ಕ್ಷೇತ್ರದಲ್ಲಿ ತಾರಾ ವರ್ಚಸ್ಸು ಗಳಿಸಿದರು.

'ಶ್ರೀ. ಆರ್ ನಾಗೇಂದ್ರರಾಯರು, ಗುರುರಾಜುಲು ನಾಯ್ಡುರವರ ಪ್ರತಿಭೆಗೆ ಬೆರಗಾಗಿ, ಮೆಚ್ಚಿ ಅವರನ್ನು ಚಲನಚಿತ್ರರಂಗಕ್ಕೆ ಪರಿಚಯಿಸಿದರು.

ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ[ಬದಲಾಯಿಸಿ]

  • ಆನಂದ ಬಾಷ್ಪ' ಎಂಬ ಕನ್ನಡ ಚಲನಚಿತ್ರದಲ್ಲಿ ಖಳನಾಯಕನ ಪಾತ್ರ ವಹಿಸಿದರು.

ಅರುಣ್ ಕುಮಾರ್ ಚಿತ್ರ ಮಂಡಳಿ ಸ್ಥಾಪಿಸಿದರು[ಬದಲಾಯಿಸಿ]

  • ಸಂಗೀತ ಸಾಮ್ರಾಟ್,
  • ವಿದ್ಯಾವತಿ,
  • ರೂಪಸರ್ಪಿಣಿ

ಮೊದಲಾದ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಿದರು. ನಾಟಕ ರಚನೆಯಲ್ಲೂ ಯಶಸ್ಸುಕಂಡರು. 'ಗುರುರಾಜುಲು ನಾಯ್ಡು, ವೃತ್ತಿ ಹವ್ಯಾಸ ರಂಗಪ್ರಕಾರಗಳಲ್ಲಿ ಹೆಜ್ಜೆ ಗುರುತು ಮೂಡಿಸಿದ್ದಲ್ಲದೆ, ಕೀರ್ತನಕ್ಷೇತ್ರದಲ್ಲಿ ಅಪಾರ ಖ್ಯಾತಿ ಗಳಿಸಿದರು.

ಉಲ್ಲೇಖಗಳು[ಬದಲಾಯಿಸಿ]

  1. "'ಎಂ. ಅರುಣಕುಮಾರ್,' ಕಣಜ,'ಕರ್ನಾಟಕ ಅಕ್ಯಾಡೆಮಿ'". Archived from the original on 2015-02-14. Retrieved 2014-09-25.
  2. 'ಮಹಿರಾವಣ ಹರಿಕಥೆ'ಯ ಯು-ಟ್ಯೂಬ್-ವಿದ್ವಾನ್ ಆರ್.ಗುರುರಾಜುಲು ನಾಯ್ಡು

ಬಾಹ್ಯ ಸಂಪರ್ಕಗಳು[ಬದಲಾಯಿಸಿ]