ಗುರುದ್ವಾರಾ ನಾನಕ್ ಜೀರಾ ಸಾಹಿಬ್, ಸಂಗ್ರೂರ್

ವಿಕಿಪೀಡಿಯ ಇಂದ
Jump to navigation Jump to search
ಕಾಂಝಲಾ ಗ್ರಾಮದಲ್ಲಿರುವ ಗುರುದ್ವಾರಾ ನಾನಕ್ ಝೀರಾ ಸಾಹಿಬ್ ಶ್ರೀ ಗುರು ನಾನಕ್ ದೇವ್ ಜೀ, ಶ್ರೀ ಗುರು ಹರ್ಗೋಬಿಂದ್ ಸಾಹಿಬ್ ಜೀ ಮತ್ತು ಗುರು ತೇಗ್ ಬಹದ್ದೂರ್ ಜೀ ಯವರ ಆಗಮನದಿಂದ ಪವಿತ್ರವಾದ ಸ್ಥಳವಾಗಿದ್ದು ಸಂಗ್ರೂರ್ ನಿಂದ 18 ಕಿ.ಮೀ ದೂರದಲ್ಲಿದೆ. ಗುರು ನಾನಕ್ ದೇವ್ ಜೀ ತಮ್ಮ ಮೊದಲ ಪ್ರವಚನ ಪ್ರವಾಸ (ಉದಾಸಿ) ಯ ವೇಳೆಯಲ್ಲಿ ಇಲ್ಲಿಗೆ ಬಂದು ನೆಲೆಸಿದ್ದು ಇಲ್ಲಿನ ಗುರುಗಳಿಗೆ ಹಾಗೂ ಜನರಿಗೆ ಬದುಕಿನ ಸರಿಯಾದ ದಾರಿಯನ್ನು ತೋರಿಸಿದ್ದರು.

Gurdwara Nanak Jhira Sahib

ಇಲ್ಲಿಯ ಒಬ್ಬ ಮಹಿಳೆ ಗುರು ತೇಗ್ ಬಹದ್ದೂರ್ ಜೀ ಅವರಿಗೆ ಹಾಲನ್ನು ನೀಡಿ ಇಲ್ಲಿನ ಗ್ರಾಮದ ಕುಷ್ಟರೋಗವನ್ನು ಶಾಶ್ವತವಾಗಿ ಹೋಗಲಾಡಿಸಬೇಕೆಂದು ಮನವಿ ಮಾಡಿದ್ದಳು. ಗುರು ಜೀ ಯವರ ಆಶೀರ್ವಾದದಿಂದ ಅಂದಿನಿಂದ ಈ ಗ್ರಾಮದಲ್ಲಿ ಕುಷ್ಟರೋಗ ಕಾಣದಾಯಿತು.[೧]

ಉಲ್ಲೇಖಗಳು[ಬದಲಾಯಿಸಿ]

  1. "Gurudwara Nanak Jhira Sahib India". Retrieved 7 March 2015.