ಗುಬ್ಬಕ್ಕನ ಬಯೋಗ್ರಫಿ
ಗೋಚರ
ಗುಬ್ಬಚ್ಚಿ ಪ್ರಧಾನವಾಗಿ ಬೀಜ ತಿನ್ನುವ ಹಕ್ಕಿದಪ್ಪ ಹಾಗೂ ಗಟ್ಟಿ ಬೀಜಗಳನ್ನು ಒಡೆಯಲು ಅನುಕೂಲವಾಗುವಂತೆ ಕೊಕ್ಕು ತ್ರಿಕೋನಾಕಾರವಾಗಿ ಮೋಟಾಗಿದೆ.
ಗಂಡು ಮತ್ತು ಹೆಣ್ಣು ದಂಪತಿಯಂತೆ ಬಾಳುತ್ತವೆ.ಸಾಮಾನ್ಯವಾಗಿ 4 ಮೊಟ್ಟೆಗಳನ್ನು ಇಟ್ಟು 14ದಿನ ಕಾವು ಕೊಡುವ ಜವಾಬ್ದಾರಿ ಹೆಣ್ಣಿನದು.ಮರಿಗಳಿಗೆ ಗಂಡು, ಹೆಣ್ಣು ಎರಡು ಉಣೆಸುತ್ತವೆ.ಮರಿಗಳಿಗೆ ಆಗಾಗ ಸಣ್ಣ, ಮೃದು ದೇಹದ ಕೀಟ,ಹುಳಗಳನ್ನು ತಿನ್ನಿಸುವುದೂ ಇದೆ.ಮರಿಗಳಿಗೆ ಪ್ರೊಟೀನು ಬೇಕಲ್ಲ, ಅದಕ್ಕೆ!
ಗುಬ್ಬಚ್ಚಿ ಬೂದು ಮಿಶ್ರಿತ ತಿಳಿ ಕಂದು ಹಕ್ಕಿ. ಗಂಡು ಹಕ್ಕಿಯ ನೆತ್ತಿ ಬೂದು.ಮೈ ಹಾಗೂ ಕೆನ್ನೆ ಬೂದು ಮಿಶ್ರತ ಕಂದು.ಪಕ್ಕೆ ಹಾಗೂ ಹೊಟ್ಟೆ ಬಿಳಿ. ಫಿಂಚ್ ಹಕ್ಕಿ,ಮುನಿಯ,ಗೀಜಗಗಳು ಗುಬ್ಬಚ್ಚಿಯ ಸೋದರ ಸಂಬಂಧಿಗಳು.ಗುಂಪುಗುಂಪಾಗಿ ವಾಸಿಸುವುದು ಕ್ರಮ.ಪಾಸ್ಸರ್ ಡೊಮೆಸ್ಟಿಕಸ್ ಪಾಸ್ಸರಿಫಾರ್ಮಿಸ್ ಗಣಕ್ಕೆ ಸೇರಿದೆ.
ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನ. ಮನುಷ್ಯ ಸ್ನೇಹಿ ಗುಬ್ಬಚ್ಚಿಗನ್ನು ನಾವೇ ದೂರ ಓಡಿಸುತ್ತಿದ್ದೇವೆಯೇ....ಎಂಬ ಪ್ರಶ್ನೆ ಕೇಳಿಕೊಳ್ಳಬೇಕಾಗಿದೆ. ದಪ್ಪಗಿನ ಅಕ್ಷರ