ವಿಷಯಕ್ಕೆ ಹೋಗು

ಗುಣಮಟ್ಟ ನೀತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗುಣಮಟ್ಟ ನೀತಿ

ಧ್ಯೇಯ

ನಮ್ಮ ಸೇವೆಯಿರುವ ವ್ಯಾಪಾರ ರಂಗದಲ್ಲಿ 'ಗುಣಮಟ್ಟ'ವು ಒಂದು ಅತಿಮುಖ್ಯವಾದ ಸ್ಪಧಾ೯ತ್ಮಕ ಅಂಶವಾಗಿದ್ದು, ಅದರಿಂದಾಗಿ ನಾವು ಗುಣಮಟ್ಟದಲ್ಲಿ ಯಾವಾಗಲೂ ಗುರುತಿಸಲ್ಪಡುವ ನಾಯಕ ಸ್ಥಾನದಲ್ಲಿರಲು ಬಯಸುತ್ತೇವೆ. ಗುಣಮಟ್ಟ ಎನ್ನುವುದು ನಾವು ಗ್ರಾಹಕರ ಮತ್ತು ಸಹಭಾಗಿಗಳ ನಿರೀಕ್ಷೆ ಮುಟ್ಟುವುದು, ಅಥವಾ ನಿರೀಕ್ಷೆ ಮೀರುವುದಾಗಿದೆ.

ನಾವು ನಮ್ಮ ಉದ್ದಿಮೆಯಲ್ಲಿ ಬೆಳೆಯುವುದಕ್ಕಾಗಿ ಎಲ್ಲಾ ಉತ್ಪಾದನಾ ಹಂತದಲ್ಲಿ ಗುಣಮಟ್ಟವನ್ನು ಸಮನ್ವಯಗೊಳಿಸುತ್ತೇವೆ.

ಮಾಗ೯

ನಮ್ಮ ಧ್ಯೇಯ ಸಾಧನೆಗಾಗಿ,

ನಮ್ಮ ಎಲ್ಲಾ ಉತ್ಪಾದನೆಗಳ, ವಿಧಾನಗಳ ಮತ್ತು ಸೇವೆಗಳ ಗುಣಮಟ್ಟವನ್ನು ನಿರಂತರವಾಗಿ ಹೆಚ್ಚಿಸುವುದಕ್ಕಾಗಿ ನಾವೆಲ್ಲಾ ಜವಾಬ್ದಾರರಾಗಿರುತ್ತೇವೆ.

ನಾವು ನಮ್ಮ ಗುಣಮಟ್ಟವನ್ನು ಉತ್ತಮಗೊಳಿಸುವುದು ಮತ್ತು ಅಭಿವೃದ್ಧಿಗೊಳಿಸುವುದಕ್ಕಾಗಿ; ಗ್ರಾಹಕರನ್ನು ಗುರುತಿಸುವುದು, ಅವರ ಅವಶ್ಯಕತೆ ಗ್ರಹಿಸುವುದು, ಪ್ರಭಾವಿತಗೊಳಿಸುವುದು ಮತ್ತು ಮಾರುಕಟ್ಟೆಯ ಬೇಡಿಕೆ ಇವುಗಳನ್ನು ಆಧಾರವಾಗಿಟ್ಟುಕೊಳ್ಳುವುದು.

ನಾವು ನಮ್ಮ ಗುಣಮಟ್ಟ ಸಂಬಂಧಿತ ನಿಯಮಗಳ ಬಗ್ಗೆ, ನಿಯುಕ್ತ ಅಧಿಕಾರಿಗಳೊಂದಿಗೆ ಕ್ರಿಯಾತ್ಮಕ ಚಚೆ೯ ನೆಡೆಸುವುದು.

ನಾವು ನಮ್ಮ ಎಲ್ಲಾ ಗುಣಮಟ್ಟ ಸಂಬಂಧಿತ ಬೇಡಿಕೆಗಳಿಗೆ ಮಿತವ್ಯಯ ವಿಧಾನ, ಆಗಾಧ ಅನುಭವ, ವ್ಯಾಪಾರ ಕಾಯ೯ವಿಧಾನ ಮತ್ತು ಅಗತ್ಯತೆ ಇವುಗಳೊಂದಿಗೆ ಬದ್ಧರಾಗಿರುವೆವು.

ನಾವು ನಮ್ಮ ಉತ್ಪಾದನೆಗಳ (ಆಹಾರ ಮತ್ತು ಸುರಕ್ಷಿತ ಪೋಷಣೆಯನ್ನೂ ಸೇರಿಸಿ)ಸುರಕ್ಷತೆ ಮತ್ತು ಸುರಕ್ಷಿತ ನಿವ೯ಹಣೆಯ ಬಗ್ಗೆ ಭರವಸೆ ಕೊಡುತ್ತೇವೆ.

ನಾವು ನಮ್ಮ ಗ್ರಾಹಕರಿಗೆ ನಮ್ಮ ಉತ್ಪಾದನೆಗಳ ಸುರಕ್ಷತೆಯ ಬಗ್ಗೆ ಮಾಹಿತಿ ಕೊಡುತ್ತೇವೆ ಮತ್ತು ನಮ್ಮ ಉತ್ಪಾದನೆಗಳನ್ನು ನಿಯಮ ಬಾಹಿರವಾಗಿ ಉಪಯೋಗಿಸಿದಂತೆ ಸಲಹೆ ನೀಡುತ್ತೇವೆ.

ನಾವು ನಮ್ಮ ಪ್ರಸಕ್ತ ಸಹವತಿ೯ಗಳ ನಿಕಟ ಸಹಕಾರದೊಂದಿಗೆ, ನವನವೀನ ಗುಣಮಟ್ಟ ವಿಧಾನಗಳು, ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುತ್ತೇವೆ.

ನಾವು ನಮ್ಮ ನಿವ೯ಹಣಾ ವ್ಯವಸ್ಥೆಯನ್ನು, ನಮ್ಮ ವಿಧಾನಗಳು, ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರೋತ್ಸಾಹಿಸುವುದಕ್ಕೆ ಮತ್ತು ಗುಣಮಟ್ಟವನ್ನು ಖಾತ್ರಿಗೊಳಿಸುವುದಕ್ಕೆ ಉಪಯೋಗಿಸುತ್ತೇವೆ. _______________________________________________________________________________________________

ಉಲ್ಲೇಖ