ಗೀತಾ ಬಿ. ಯು.

ವಿಕಿಪೀಡಿಯ ಇಂದ
Jump to navigation Jump to search

ಗೀತಾ ಬೆಂಗಳೂರು ಉಪೇಂದ್ರ ಅವರು,ಗೀತಾ ಬಿ.ಯು [೧] ಎಂಬ ಹೆಸರಿನಿಂದ ತಮ್ಮ ಸಾಹಿತ್ಯ ಕೃಷಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹೆಸರಾಂತ ವ್ಯಕ್ತಿಯಾಗಿದ್ದಾರೆ. ಅವರು ಕಿರುತೆರೆಯಲ್ಲಿ ಹಲವಾರು ಕನ್ನಡ ಜನಪ್ರಿಯ ಧಾರಾವಾಹಿಗಳಿಗೆ ಸಂವಾದಗಳನ್ನು ಬರೆದಿದ್ದಾರೆ. ಒಳ್ಳೆಯ ಸೃಜನಶೀಲ ಬರಹಗಾರ್ತಿ. ಹಲವಾರು ಕಾದಂಬರಿಗಳನ್ನು ಬರೆದಿದ್ದಾರೆ. ಝೀ ಟಿ.ವಿ.ವಾಹಿನಿಯ 'ಸ್ಪಂದನ ಕಾರ‍್ಯಕ್ರಮ'ದ ರೂವಾರಿಯಾಗಿದ್ದರು. ತಾವು ಅಭಿನಯಿಸುವುದರ ಜೊತೆಗೆ ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತರಪೇತಿಕೊಡುವುದರಲ್ಲಿ ಬಹಳ ಮುತುವರ್ಜಿ ವಹಿಸುತ್ತಾರೆ. ಹೊಸ ಹೊಸ ಆಡುಗೆಗಳನ್ನು ಮಾಡುವುದರಲ್ಲಿ ಪ್ರವೀಣರು.

ಜನನ[ಬದಲಾಯಿಸಿ]

ಗೀತಾ, ಜನಿಸಿದ್ದು ಬೆಂಗಳೂರಿನಲ್ಲಿ. ತಂದೆ ಎಚ್.ಎಸ್.ಉಪೇಂದ್ರರಾವ್, ಕೆನರಾ ಬ್ಯಾಂಕಿನಲ್ಲಿ ಮ್ಯಾನೇಜರ್. ತಾಯಿ ಶಾಂತಾ. ಗೀತಾ ತಮ್ಮ ಪ್ರಾರಂಭಿಕ ಶಿಕ್ಷಣ ಬೆಂಗಳೂರಿನಲ್ಲಿ ಆರಂಭಿಸಿದರು. ತಂದೆಯವರು ವರ್ಗವಾದ ಊರುಗಳಲ್ಲಿ ಚಿಂತಾಮಣಿ ಹಾಗೂ ಚೆನ್ನರಾಯಪಟ್ಟಣದಲ್ಲಿ ಪ್ರೌಢಶಾಲಾ ಶಿಕ್ಷಿಣ ನಡೆಯಿತು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎ.ಪದವಿಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂವಹನದಲ್ಲಿ ಬಿ.ಎಸ್.ಪದವಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡರತ್ನ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಾಲ್ಯದಿಂದಲೂ ಕಥೆ ಕೇಳುವುದು, ಹೇಳುವುದರಲ್ಲಿ ತುಂಬಾ ಆಸಕ್ತಿ ವಹಿಸುತ್ತಿದ್ದರು. ಸಣ್ಣಕತೆಗಳು [೨] ಮತ್ತು ಕಾದಂಬರಿ ಅವರಿಗೆ ಮುದಕೊಟ್ಟ ಪ್ರಕಾರಗಳು.

ಸಾಂಸಾರಿಕ ಜೀವನ[ಬದಲಾಯಿಸಿ]

ಗೀತಾರವರು ಒಬ್ಬ ಉದ್ಯಮಿಯನ್ನು ವಿವಾಹವಾಗಿ ಮಕ್ಕಳು ಮೊಮ್ಮಕ್ಕಳನ್ನು ಪಡೆದಿದ್ದಾರೆ. ಗೀತಾರವರ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಅವರ ಮನೆಯವರೆಲ್ಲರ ಸಹಕಾರ, ಪ್ರೋತ್ಸಾಹಗಳಿವೆ. ಗೀತಾರವರ ಹಲವಾರು ಕಾದಂಬರಿಗಳು ಪ್ರಮುಖ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಿತವಾಗಿವೆ. ಕೆಲವು ಕಾದಂಬರಿಗಳು ಕೆಳಗೆ ಕಂಡಂತಿವೆ :

 1. ಸೋಲು ಗೆಲುವಿನ ಹಾದಿಯಲ್ಲಿ (ಪ್ರಜಾಮತ),
 2. ಮರೀಚಿಕೆ (ಉಷಾಪತ್ರಿಕೆ),
 3. ಹೊಂಗೆ ನೆರಳು (ಮಲ್ಲಿಗೆ)
 4. ತಮಸೋಮ ಜ್ಯೋತಿರ್ಗಮಯ (ತರಂಗ), [೩]
 5. ಸಂಕೋಲೆ (ಕರ್ಮವೀರ)
 6. ಅವರ‍್ನ ಬಿಟ್ಟು ಇವರ‍್ನ ಬಿಟ್ಟು ಇವರ‍್ಯಾರು (ಸುಧಾ),[೪]
 7. ವಾರಸುದಾರ (ತರಂಗ) ಧಾರಾವಾಹಿಯಾಗಿ ಪ್ರಕಟಗೊಂಡವು.

ಪ್ರಕಟಿತ ಕಥಾ ಸಂಕಲನಗಳು[ಬದಲಾಯಿಸಿ]

 1. ಆರದಿರಲಿ ಬೆಳಕು,
 2. ಕೈ ಹಿಡಿದು ನಡೆಸೆನ್ನನು,
 3. ಮತ್ತದೇ ಸಂಜೆ.

ಇದೀಗ ಬಿಡುಗಡೆಯಾದ ಕಾದಂಬರಿ[ಬದಲಾಯಿಸಿ]

 1. ‘ಮಿಥ್ಯ’.

ಗೀತಾರವರ ಬರವಣಿಗೆಗಳು ಓದುಗರ ಹೃದಯಕ್ಕೆ ಹತ್ತಿರವಾದ ಘಟನೆಗಳ ಪಟ್ಕಥೆಗಳಿಂದ, ಭಾವಪರವಶತೆಯನ್ನು ಹುಟ್ಟಿಹಾಕುತ್ತವೆ. ಆದುದರಿಂದಲೇ ಟಿ.ವಿ.ಯ

 • ಮನ್ವಂತರ,
 • ಮುಕ್ತಾ,
 • ಮೌನರಾಗ,
 • ಗುಪ್ತಗಾಮಿನಿ,
 • ಜಗಳಗಂಟಿಯರು

ಮುಂತಾದ ಧಾರಾವಾಹಿಗಳಿಗೆ ಕಥೆ, ಸಂಭಾಷಣೆ ಮನೆಮನೆಯನ್ನು ಮುಟ್ಟಿವೆ. ಜಿ ಟಿ.ವಿ. ವಾಹಿನಿಯ ಸ್ಪಂದನ ಕಾರ‍್ಯಕ್ರಮದ ರೂವಾರಿಯಾಗಿದ್ದರು. ಇತ್ತೀಚಿನ ಟೀಎನ್.ಸೀ ರವರ ಜನಪ್ರಿಯ ಧಾರಾವಾಹಿ, "ಮಗಳು ಜಾನಕಿ" [೫] ಯಲ್ಲಿ ಗೀತಾರವರು ನ್ಯಾಯಾಧೀಶರ ಪಾತ್ರವನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

 1. ಕಣಜ,ಗೀತಾ.ಬಿ.ಯು
 2. AIDANEYA SAHITYA CHARITRE By Sumatheendra Nadig Geetha BU
 3. ತಮಸೋಮ ಜೋತಿರ್ಗಮಯ
 4. ಬಿಟ್ಟು ಇವರ್ನ ಬಿಟ್ಟು ಇವರ‍್ಯಾರು, ಗೀತಾ.ಬಿ.ಯು
 5. rjnewskannada, ಮಗಳು ಜಾನಕಿ ಧಾರಾವಾಹಿಯಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡ ಈ ಮಹಾತಾಯಿ ನಿಜಕ್ಕೂ ಯಾರು ಗೊತ್ತಾ ? ಸೀತಾರಾಂ ಅವರಿಗೆ ಸಿಕ್ತಾರಾ ಇಂತಹವರು ? ಈಸುದ್ದಿ ನೋಡಿ